ರೈತರ ಪಾಲಿಗೆ ಹುಳಿಯಾದ ಟೊಮೆಟೋ
Team Udayavani, Jan 1, 2020, 3:00 AM IST
ಚನ್ನರಾಯಪಟ್ಟಣ: ಕೇವಲ ಎರಡು ತಿಂಗಳ ಹಿಂದೆ ಟೊಮೆಟೋ ಬೆಳೆದ ರೈತನಿಗೆ ಚಿನ್ನದ ಬೆಲೆ ಸಿಕ್ಕಿತು. ಆದರೀಗ ಟೊಮೆಟೋ ಬೆಳೆದವರಿಗೆ ಸೂಕ್ತ ಬೆಲೆ ಸಿಗದೇ ಕಂಗಾಲಾಗಿದ್ದಾರೆ. ತಾಲೂಕಿನಲ್ಲಿ ಕೊಳವೆ ಬಾವಿ ಹೊಂದಿರುವ ನೂರಾರು ರೈತರು ಟೊಮೆಟೋ ಬೆಳೆಗೆ ಹೆಚ್ಚು ಒತ್ತು ನೀಡುತ್ತಾರೆ.
ಮಾರುಕಟ್ಟೆಯಲ್ಲಿ ಕೇಜಿ ಟೊಮೆಟೋಗೆ 60ರಿಂದ 80ರೂ. ಬೆಲೆ ಬಂದಾಗ ಸಾವಿರಾರು ರೈತರು ಟೊಮೆಟೋ ಬೆಳೆದು ಹಣ ಸಂಪಾದನೆ ಮುಂದಾಗುತ್ತಾರೆ. ಈ ರೀತಿ ಒಟ್ಟಿಗೆ ಸಾವಿರಾರು ಮಂದಿ ರೈತರು ಟೊಮೆಟೋ ಬೆಳೆಗೆ ಮಾರು ಹೋಗುವುದರಿಂದ ಟೊಮೆಟೋ ಬೆಲೆ ದಿಢೀರ್ ಕುಸಿತವಾಗಿ 10 ರೂ.ಗೆ ಎರಡರಿಂದ ಮೂರು ಕೇಜಿ ಟೊಮೆಟೋ ಗ್ರಾಹಕರಿಗೆ ದೊರೆಯುತ್ತದೆ.
ದಿಢೀರ್ ಟೊಮೆಟೋ ಬೆಲೆ ಕುಸಿತ ವಾಗುವುದರಿಂದ ಒಂದು ಚೀಲ ಟೊಮೆಟೋಗೆ 30ರಿಂದ 50 ರೂ.ಗೆ ಮಾರುವುದು ಅನಿವಾರ್ಯವಾಗುತ್ತದೆ. ಇದರಿಂದ ರೈತರು ತಮ್ಮ ಕೃಷಿ ಭೂಮಿಯಿಂದ ಆಟೋದಲ್ಲಿ ಚನ್ನರಾಯಪಟ್ಟಣ ಕೃಷಿ ಉತ್ಪನ್ನ ಮಾರುಕಟ್ಟೆಗೆ ತರುವ ಬಾಡಿಗೆ ಬೆಲೆ ದೊರೆಯದೆ ಕಂಗಾಲಾಗುತ್ತಾರೆ.
ಬರಿಗೈನಲ್ಲಿ ಮನೆ ಸೇರುವ ರೈತರು: ಒಂದೆರಡು ತಿಂಗಳ ಹಿಂದೆ ಟೊಮೆಟೋ ಬೆಲೆ ಕೇಜಿಗೆ 40ರಿಂದ 70 ರೂ. ವರೆಗೆ ತಲುಪಿತ್ತು. ಈ ವೇಳೆ ಗ್ರಾಹಕರು ಟೊಮೆಟೋ ಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಆದರೀಗ ಗ್ರಾಹಕರು 10 ರೂ.ಗೆ ಮೂರು ಕೇಜಿ ಟೊಮೆಟೋ ಖರೀದಿಸುತ್ತಿದ್ದಾರೆ. ಅನ್ನದಾತ ತನ್ನ ಕೃಷಿ ಭೂಮಿಯಿಂದ ಟೊಮೆಟೋ ತಂದು ರಸ್ತೆ ಬದಿ, ಎಲ್ಲೆಂದರಲ್ಲಿ ಸುರಿದು ಬರಿಗೈನಲ್ಲಿ ಮನೆಗೆ ಹೋಗುತ್ತಿದ್ದಾನೆ.
ರಸ್ತೆ ಬದಿಗೆ ಸುರಿಯುತ್ತಿದ್ದಾರೆ: ತಿಂಗಳ ಹಿಂದೆ ರೈತರು ಕೃಷಿ ಉತ್ಪನ್ನ ಮಾರುಕಟ್ಟೆಗೆ ಟೊಮೆಟೋ ತಂದರೆ ಕೇಜಿಗೆ 30 ರಿಂದ 50 ರೂ. ನೀಡಿ, ತರಕಾರಿ ಮಾರಾಟ ಮಾಡುವವರು ಮುಗಿಬಿದ್ದು ಕೊಳ್ಳುತ್ತಿದ್ದರು. ಆದರೆ ಈಗ ತರಕಾರಿ ಮಾರಾಟ ಮಾಡುವವರು ರೈತರಿಂದ ಕೊಳ್ಳುವ ಟೊಮೆಟೋ ಒಂದು ಕೇಜಿಗೆ ಒಂದು ರೂ. ನೀಡಲು ಹಿಂದೇಟು ಹಾಕುತ್ತಿದ್ದಾರೆ. 30 ಕೇಜಿ ತೂಕದ ಚೀಲಕ್ಕೆ 10 ರೂ. ನೀಡಲು ಮುಂದಾಗುತ್ತಾರೆ. ಇದರಿಂದ ಬೇಸತ್ತು ರೈತ ಟೊಮೆಟೋ ಹಣ್ಣನ್ನು ರಸ್ತೆ ಬದಿ ಸುರಿಯುತ್ತಿದ್ದಾನೆ.
ಎಕರೆಗೆ ಹದಿನೆಂಟು ಸಾವಿರ ರೂ. ನಷ್ಟ: ಕೃಷಿ ಭೂಮಿಯಿಂದ ಪಟ್ಟಣಕ್ಕೆ ಟೊಮೆಟೋ ತರಲು ತಗುಲುವ ವೆಚ್ಚ, ಟೊಮೆಟೋ ಗಿಡದಿಂದ ಬಿಡಿಸಿ ಚೀಲಕ್ಕೆ ತುಂಬಲು ಕೂಲಿ, ಬಿತ್ತನೆ ವೆಚ್ಚ, ಗೊಬ್ಬರ, ನೀರು, ಔಷಧಿ ಹೀಗೆ ಎಕರೆ ಪ್ರದೇಶದಲ್ಲಿ ಟೊಮೆಟೋ ಬೆಳೆಯಲು ಕನಿಷ್ಠ 20 ಸಾವಿರ ರೂ. ವೆಚ್ಚವಾಗಲಿದೆ ಆದರೆ ಈಗಿನ ಮಾರುಕಟ್ಟೆ ದರ ನೋಡಿದರೆ ಎಕರೆಗೆ 2 ಸಾವಿರ ರೂ. ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ಹೊಲದಲ್ಲಿ ಟೊಮೆಟೋ ಕೊಯ್ಯದೇ ಇರುವುದರಿಂದ ಗಿಡದಲ್ಲೇ ಕೊಳೆಯುತ್ತಿವೆ.
ಸ್ಥಳೀಯ ಮಾರುಕಟ್ಟೆ ಅವಲಂಬನೆ: ಸ್ಥಳೀಯ ಮಾರುಕಟ್ಟೆ ಅವಲಂಬನೆ ಮಾಡಿಕೊಂಡು ರೈತರು ಟೊಮೆಟೋ ಬೆಳೆಯುತ್ತಿದ್ದಾರೆ. ಇದನ್ನು ಹೊರತು ಪಡಿಸಿದರೆ ಮೈಸೂರು ಇಲ್ಲವೇ ಬೆಂಗಳೂರಿಗೆ ಕಳಹಿಸಬೇಕು. ಇಲ್ಲೇ ಈ ರೀತಿ ಬೆಲೆ ಕುಸಿತವಾಗಿರುವಾಗ ಹೊರ ಜಿಲ್ಲೆಗೆ ಕೊಂಡೊಯ್ಯಲು ವಾಹನಕ್ಕೆ ನೀಡುವ ಬಾಡಿಗೆ ದೊರೆಯದಿದ್ದರೆ ಎಂಬ ಆತಂಕದೊಂದಿಗೆ ತಾಲೂಕಿನ ರೈತರು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.
ರೈತರಿಗೆ ಮಾರಕವಾದ ಎನ್‌ಆರ್‌ಸಿ, ಸಿಎಎ ಪ್ರತಿಭಟನೆ: ಪೌರತ್ವ ಕಾನೂನು ತಿದ್ದುಪಡಿ (ಸಿಎಎ)ಹಾಗೂ ಎನ್‌ಆರ್‌ಸಿ ವಿರುದ್ಧ ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆ ನಡೆಯುತ್ತಿರುವುದರಿಂದ ಹೊರ ಜಿಲ್ಲೆ ಹಾಗೂ ರಾಜ್ಯಗಳಿಗೆ ಟೊಮೆಟೋ ಸರಬರಾಜಾಗದೇ ಇರುವುದೂ ಟೊಮೆಟೋ ಬೆಲೆ ದಿಢೀರ್ ಕುಸಿಯಲು ಕಾರಣವಾಗಿದೆ.
ಮಾರುಕಟ್ಟೆಯಲ್ಲಿ ಟೊಮೆಟೋಗೆ ಬೇಡಿಕೆ ಇದ್ದುದರಿಂದ ರೈತರು ಬ್ಯಾಂಕ್‌ಗಳಲ್ಲಿ ಕೃಷಿ ಸಾಲದೊಂದಿಗೆ ಕೈಸಾಲ ಮಾಡಿ ಟೊಮೆಟೋ ಬೆಳೆದಿದ್ದರು. ಆದರೀಗ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೇ ಸಂಕಷ್ಟ ಅನುಭವಿಸುವಂತಾಗಿದೆ.
-ಗವಿರಾಜಗೌಡ, ಟೊಮೆಟೋ ಬೆಳೆಗಾರ ರೈತ
ರೈತರೊಂದಿಗೆ ನಾವು ವಿಶ್ವಸದ ಮೇಲೆ ವ್ಯವಹಾರ ಮಾಡುತ್ತೇವೆ. ನಮ್ಮಲ್ಲಿ ಯಾವುದೂ ಕಾನೂನಿನ ಅಡಿಯಲ್ಲಿ ನಡೆಯುವುದಿಲ್ಲ. ಈಗ ಟೊಮೆಟೋ ಉತ್ಪಾದನೆ ಹೆಚ್ಚಿದ್ದು ಬೇಡಿಕೆ ಪ್ರಮಾಣ ಕಡಿಮೆ ಇದೆ. ದೇಶದಲ್ಲಿ ಎನ್‌ಆರ್‌ಸಿ, ಸಿಎಎ ಗಲಾಟೆಯಿಂದ ಹೊರ ರಾಜ್ಯಕ್ಕೆ ತರಕಾರಿ ಸರಬರಾಜಾಗುತ್ತಿಲ್ಲ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
-ಶಿವರಾಜು, ತರಕಾರಿ ವರ್ತಕ
* ಶಾಮಸುಂದರ್ ಕೆ.ಅಣ್ಣೇನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rajasthan: ಕಾಂಗ್ರೆಸ್ ಸರಕಾರ ರಚಿಸಿದ್ದ 9 ಜಿಲ್ಲೆಗಳು ರದ್ದು
Bangladesh ಮತದಾನದ ಅರ್ಹ ವಯಸ್ಸು 17ಕ್ಕಿಳಿಸಲು ಚಿಂತನೆ
Yamuna ನದಿಯಲ್ಲಿ ಡಾ| ಮನಮೋಹನ್ ಸಿಂಗ್ ಚಿತಾಭಸ್ಮ ವಿಸರ್ಜನೆ
Shri Krishna Matha; ವಿಶ್ವಮಟ್ಟದಲ್ಲಿ ಭಗವದ್ಗೀತೆ ಜಾಗೃತಿ: ಪುತ್ತಿಗೆ ಶ್ರೀ
ICC Awards 2024: ಐಸಿಸಿ ಪ್ರಶಸ್ತಿಗೆ ಅರ್ಷದೀಪ್ ಸಿಂಗ್, ಸ್ಮೃತಿ ಮಂಧನಾ ನಾಮ ನಿರ್ದೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.