Shiradi ಘಾಟ್‌ನಲ್ಲಿ ವಾಹನ ಬೆಂಕಿಗೆ ಆಹುತಿ
Team Udayavani, Sep 11, 2024, 9:22 PM IST
ಸಕಲೇಶಪುರ: ತಾಲೂಕಿನ ಶಿರಾಡಿ ಘಾಟಿ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 75 ತಾಲೂಕಿನ ಮಾರನಹಳ್ಳಿ ಗ್ರಾಮದ ಸಮೀಪ ಜೋಡಿ ತಿರುವು ಪ್ರದೇಶದಲ್ಲಿ ಬುಧವಾರ ಮಂಗಳೂರಿನಿಂದ ಬೆಂಗಳೂರು ಕಡೆಗೆ ಆಗಮಿಸುತ್ತಿದ್ದ ಕ್ಯಾಂಟರ್ ಲಾರಿಯೊಂದರಲ್ಲಿ ಅಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಚಾಲಕ ಲಾರಿಯನ್ನು ತತ್‌ಕ್ಷಣ ನಿಲ್ಲಿಸಿ ಹೊರಗೆ ಹಾರಿ ಪ್ರಾಣ ಉಳಿಸಿಕೊಂಡಿದ್ದಾನೆ.
ಹೆದ್ದಾರಿ ಬದಿಯಲ್ಲಿ ಇತರ ವಾಹನ ಸವಾರರು ನೋಡನೋಡುತ್ತಿದ್ದಂತೆ ವಾಹನ ಸಂಪೂರ್ಣ ಬೆಂಕಿಗೆ ಅಹುತಿಯಾಗಿ ಭಸ್ಮವಾಗಿದೆ. ಸಕಲೇಶಪುರ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿದರೂ, ವಾಹನ ಸಂಪೂರ್ಣ ಭಸ್ಮವಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubballi: ಚಾಕು ಇರಿದು ಯುವಕನ ಕೊಲೆ ಪ್ರಕರಣ… ಪೊಲೀಸರಿಂದ ಮೂವರು ಆರೋಪಿಗಳ ಕಾಲಿಗೆ ಗುಂಡು
IT Raid: ಬೆಳಗಾವಿಯ ಉದ್ಯಮಿ ದೊಡ್ಡಣ್ಣವರ ಸೇರಿ ನಾಲ್ವರು ಉದ್ಯಮಿಗಳಿಗೆ ಐಟಿ ಶಾಕ್
Arrested: 1 ಕೋಟಿಗೆ 5 ಕೋಟಿ ರೂ. ಕೊಡುವುದಾಗಿ 5.75 ಕೋಟಿ ರೂ. ವಂಚನೆ; ಮೂವರ ಸೆರೆ
BJP: ರಾಜ್ಯಾಧ್ಯಕ್ಷ ಚುನಾವಣೆ ಸ್ಪರ್ಧೆಗೆ ನಾನೂ ಸಿದ್ಧ: ಬಿ.ವೈ.ವಿಜಯೇಂದ್ರ ತಿರುಗೇಟು
Kotekar Robbery Case: ದರೋಡೆ ಯೋಜನೆಯ ಹಿಂದೆ ಒಬ್ಬನಲ್ಲ; ಇಬ್ಬರು ಸೂತ್ರಧಾರರು?