ಆಮ್ಲಜನಕ ಸಮಸ್ಯೆ ಆಗದಂತೆ ಕ್ರಮ
Team Udayavani, May 6, 2021, 4:51 PM IST
ಬೇಲೂರು: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್‌ರೋಗಿಗಳಿಗೆ ಆಮ್ಲಜನಕದ ಕೊರತೆ ಆಗದಂತೆ ಕ್ರಮಕೈಗೊಳ್ಳಲಾಗಿದೆ ಎಂದು ಶಾಸಕ ಕೆ.ಎಸ್.ಲಿಂಗೇಶ್ ತಿಳಿಸಿದ್ದಾರೆ.ತಾಪಂ ಸಭಾಂಗಣದಲ್ಲಿ ಕೋವಿಡ್ ಟಾಸ್ಕ್ಫೊಸ್‌ಸಭೆಯಲ್ಲಿ ಮಾತನಾಡಿ, ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಪೀಡಿತರಿಗಾಗಿ 30 ಹಾಸಿಗೆಯ ಸುಸಜ್ಜಿತ ಕೊಠಡಿಗಳಲ್ಲಿ 24 ಜಂಬು ಸಿಲಿಂಡರ್ ಹಾಗೂ 3 ಚಿಕ್ಕ ಸಿಲಿಂಡರ್‌ಗಳ ಅಮ್ಲಜನಕ ದಾಸ್ತಾನು ಮಾಡಲಾಗಿದೆ.
ಪ್ರತಿ ದಿನ 3 ಸಿಲಿಂಡರ್ ಅವಶ್ಯಕತೆ ಇದೆ ಎಂದರು.ಕೋವಿಡ್ ರೋಗಿಗಳಿಗೆ ಅವಶ್ಯಕತೆ ಇರುವ 5ವೆಂಟಿಲೇಟರ್, ರೆಮ್‌ಡೆಸಿವಿಯರ್, ಲಸಿಕೆ,ಜನರೇಟರ್‌ಗಳನ್ನು ದಿನದ 24ಗಂಟೆಗಳಲ್ಲೂ ಸಿದ್ಧವಿರುವಂತೆ ತಯಾರು ಮಾಡಿಕೊಳ್ಳಲಾಗಿದೆ. ತಾಲೂಕಿನಾದ್ಯಂತ ಸುಮಾರು 19ಸಾವಿರ ಕೋವ್ಯಾಕ್ಸಿನ್‌ಲಸಿಕೆ ನೀಡಲಾಗಿದೆ ಎಂದರು.
ತಾಲೂಕಿನ ಅರೇಹಳ್ಳಿ,ಹಳೇಬೀಡು, ಚಿಕ್ಕಮಗಳೂರು, ಭಾಗಗಳಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿದ್ದು ಅಗತ್ಯ ಸೇವೆ ವಾಹನ ಹೊರತುಪಡಿಸಿ ಪ್ರಯಾಣಿಕರ ವಾಹನಗಳನ್ನು ಸೀಜ್‌ಮಾಡಲಾಗುತ್ತಿದೆ ಎಂದು ತಿಳಿಸಿದರು.ತಹಶೀಲ್ದಾರ್ ನಟೇಶ್ ಮಾತನಾಡಿ, ಅಗತ್ಯವಸ್ತುಗಳ ಅಂಗಡಿ ಹೊರತು ಪಡಿಸಿ ಇತರೆ ವಾಣಿಜ್ಯ ಚಟುವಟಿಕೆ ತೆರೆಯದಂತೆ ಪೋಲೀಸರು ಕ್ರಮಕೈಗೊಳ್ಳಬೇಕೆಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್,ತಾಪಂ ಇಒ ರವಿಕುಮಾರ್, ವೃತ್ತ ನಿರೀಕ್ಷಕ ಶ್ರೀಕಾಂತ್,ಪಿಎಸ್‌ಐ ಪಾಟೀಲ್, ಪುರಸಭೆ ಮುಖ್ಯಾಧಿಕಾರಿಸುಜಯ್ ಕುಮಾರ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
ಹಾಸನಾಂಬೆ ದರ್ಶನಕ್ಕೆ ವಿಧ್ಯುಕ್ತ ತೆರೆ; 9 ದಿನದಲ್ಲಿ 19 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ
Devi Temple: ಹಾಸನಾಂಬೆ ದೇವಿ ದರ್ಶನ ಅವ್ಯವಸ್ಥೆ, ಭಕ್ತರ ಆಕ್ರೋಶ: ವಿಶೇಷ ಪಾಸ್ ರದ್ದು
Hasanambe Temple: ಇಂಥ ಹಲವು ಡಿಸಿಗಳನ್ನು ನೋಡಿದ್ದೇನೆ: ಎಚ್.ಡಿ.ರೇವಣ್ಣ ಕಿಡಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.