ಶಾಸಕರಿಂದ ಶಾಲೆಗಳ ದತ್ತು: ಅಂದಾಜು ಪಟ್ಟಿ ಸಿದ್ಧ
ಜಿಲ್ಲೆಯ 5 ಕ್ಷೇತ್ರಗಳ 15 ಶಾಲೆಗಳ ಅಭಿವೃದ್ಧಿಗೆ 2.23 ಕೋಟಿರೂ. ಅಂದಾಜು
Team Udayavani, Dec 8, 2020, 3:31 PM IST
ಹಾಸನ: ರಾಜ್ಯ ಶಿಕ್ಷಣ ಕಾರ್ಯಪಡೆಯ ಶಿಫಾರಸಿನಂತೆ ಶಾಸಕರು ಸ್ವಕ್ಷೇತ್ರದ ಕನಿಷ್ಠ ಮೂರು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ಕಾರ್ಯಕ್ರಮ 2020 -21ರಿಂದ ಜಾರಿಯಾಗುತ್ತಿದೆ. ಶಾಲಾ ದತ್ತು ಕಾರ್ಯಕ್ರಮದಡಿ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ ಇದುವರೆಗೆ ಐವರು ಶಾಸಕರು ಮಾತ್ರ ತಮ್ಮ ಕ್ಷೇತ್ರಗಳಲ್ಲಿ ದತ್ತು ಸ್ವೀಕರಿಸುವ ಶಾಲೆಗಳ ಪಟ್ಟಿಯನ್ನು ನೀಡಿದ್ದಾರೆ. ಆ ಪೈಕಿ ಜಿಲ್ಲೆಯ 15 ಶಾಲೆಗಳ ಅಭಿ ವೃದ್ಧಿಗೆ23ಕೋಟಿ ರೂ. ಅಂದಾಜು ಸಿದ್ಧವಾಗಿದೆ. ಹೊಳೆನರಸೀಪುರ ವಿಧಾನ ಸಭಾ ಕ್ಷೇತ್ರದ ಸದಸ್ಯ ಎಚ್.ಡಿ.ರೇವಣ್ಣ, ಹಾಸನ ವಿಧಾನಸಭಾ ಕ್ಷೇತ್ರದ ಸದಸ್ಯ ಪ್ರೀತಂ ಜೆ.ಗೌಡ ದತ್ತು ಸ್ವೀಕರಿಸುವ ಶಾಲೆಗಳಪಟ್ಟಿಯನ್ನು ಇನ್ನೂ ನೀಡಿಲ್ಲ. ಹಾಗಾಗಿ ಈ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಶಾಲಾ ದತ್ತು ಸ್ವೀಕಾರದ ಪ್ರಕ್ರಿಯೆ ಆರಂಭವಾಗಿಲ್ಲ.
ಐವರು ಶಾಸಕರು ಸಲ್ಲಿಸಿರುವ15 ಶಾಲೆಗಳ ದತ್ತು ಸ್ವೀಕಾರದ ಪಟ್ಟಿಗೆ ಅನುಮೋದನೆ ಸಿಕ್ಕಿದೆ. ಯಾವ ಶಾಲೆಗಳಲ್ಲಿ ಏನೇನು ಅಭಿವೃದ್ಧಿಯಾಗಬೇಕು ಎಂಬ ಬಗ್ಗೆ ಅಂದಾಜು ಸಿದ್ಧವಾಗಿದ್ದು, ಆಯಾಯ ತಾಲೂಕುಗಳ ಕೇತ್ರ ಶಿಕ್ಷಣಾಧಿಕಾರಿಗಳು ಕ್ರಿಯಾ ಯೋಜನೆ ಸಿದ್ಧಪಡಿಸಿ, ಶಾಲಾಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕಾಗಿದೆ.
ಇದುವರೆಗೆ ಅನುಮೋದನೆ ಆಗಿರುವ ಶಾಲೆಗಳ ವಿವರ ಹಾಗೂ ಆ ಶಾಲೆಗಳಲ್ಲಿ ಕೈಗೆತ್ತಿಕೊಳ್ಳಬೇಕಾದ ಕಾಮಗಾರಿಮತ್ತುಅಂದಾಜುಮೊತ ¤ದ ವಿವರಹೀಗಿದೆ:
ಆಲೂರು – ಸಕಲೇಶಪುರ ಕ್ಷೇತ್ರ: ಈ ಕ್ಷೇತ್ರದ ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರು ಸಕಲೇಶಪುರ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಆಲೂರು ಪಟ್ಟಣದ ಸರ್ಕಾರಿ ನೂತನ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಹಾಸನ ತಾಲೂಕು ಕಟ್ಟಾಯ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಸ್ವೀಕರಿಸಿ ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ.
ಶಾಸಕರು ದತ್ತು ಸ್ವೀಕರಿಸಿರುವ ಸಕಲೇಶಪುರದಶಾಲೆಯಲ್ಲಿ 1 ರಿಂದ 8ನೇ ತರಗತಿಯವರೆಗಿನ 186ವಿದ್ಯಾರ್ಥಿಗಳಿದ್ದಾರೆ. ಈ ಶಾಲೆಯಲ್ಲಿ 4 ಕೊಠಡಿಗಳ ದುರಸ್ತಿ, ಶೌಚಾಲಯ ಮತ್ತಿತರಕಾಮಗಾರಿಗಳಿಗೆ25ಲಕ್ಷ ರೂ. ಅಂದಾಜು ಮಾಡಲಾಗಿದೆ.
ಅಲೂರಿನ ಶಾಲೆಯಲ್ಲಿ 1 ರಿಂದ 8ನೇ ತರಗತಿ ವರೆಗೆ ಒಟ್ಟು 216 ವಿದ್ಯಾರ್ಥಿಗಳಿದ್ದಾರೆ. ಈಶಾಲೆಯಲ್ಲಿ ಅಗತ್ಯ ಪಾಠೊಪಕರಣಗಳು ಮತ್ತು ಪೀಠೊಪಕರಣ ಗಳಿಗೆ 10 ಲಕ್ಷ ರೂ. ವೆಚ್ಚದಅಂದಾಜುಮಾಡಿದ್ದರೆ,ಕಟ್ಟಾಯ ಗ್ರಾಮದ ಶಾಲೆಯ1 ರಿಂದ 8ನೇ ತರಗತಿ ಯವರೆಗೆ 68 ವಿದ್ಯಾರ್ಥಿಗಳಿದ್ದು, ಶಾಲೆಗೆ 10 ಲಕ್ಷ ರೂ. ವೆಚ್ಚದ ಅಂದಾಜು ಮಾಡಲಾಗಿದೆ.
ಅರಸೀಕೆರೆಕ್ಷೇತ್ರ: ಈ ಕ್ಷೇತ್ರದ ಶಾಸಕಕೆ.ಎಂ. ಶಿವಲಿಂಗೇಗೌಡ ಅವರು ಗಂಡಸಿ ಹೋಬಳಿಯ ಚಿಂದೇನಹಳ್ಳಿ ಗಡಿ ಯಲ್ಲಿರುವ ಕೆಪಿಎಸ್ ಶಾಲೆ, ಚಗಚಗೆರೆ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ ಮತ್ತುಬಾಣಾವರದ ಸರ್ಕಾರಿಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಪಡೆದುಕೊಂಡಿದ್ದಾರೆ.ಚಿಂದೇನಹಶಾಲೆ ಗಡಿ ಕೆಪಿಎಸ್‌ಶಾಲೆಯಲ್ಲಿ 1 ರಿಂದ 12ನೇ ತರಗತಿಯವರೆಗೆ ಒಟ್ಟು 65 ವಿದ್ಯಾರ್ಥಿ ಗಳಿದ್ದಾರೆ. ಆ ಶಾಲೆಯಲ್ಲಿ 4 ಕೊಠಡಿಗಳ ದುರಸ್ತಿ ಮತ್ತು ಶೌಚಾಲ ಯದ ಕಾಮಗಾರಿಗೆ 12 ಲಕ್ಷ ರೂ. ವೆಚ್ಚದ ಅಂದಾಜುಮಾಡಲಾಗಿದೆ. ಚಗಚಗೆರೆ ಗ್ರಾಮದ ಶಾಲೆಯಲ್ಲಿ 1 ರಿಂದ 8ನೇ ತರಗತಿವರೆಗೆ ಒಟ್ಟು 28 ವಿದ್ಯಾರ್ಥಿಗಳಿದ್ದು, ಆ ಶಾಲೆಯಲ್ಲಿ 4 ಕೊಠಡಿಗಳ ಚಾವಣಿ ದುರಸ್ತಿಗಾಗಿ 8 ಲಕ್ಷ ರೂ. ಅಂದಾಜು ಮಾಡಲಾಗಿದೆ.
ಬಾಣಾವರದ ಶಾಲೆಯಲ್ಲಿ 1 ರಿಂದ 8ನೇ ತರಗತಿಯಲ್ಲಿ ಒಟ್ಟು 496 ವಿದ್ಯಾರ್ಥಿಗಳಿದ್ದು, ಆ ಶಾಲೆಯಲ್ಲಿ 6 ಕೊಠಡಿಗಳ ಚಾವಣಿ ದುರಸ್ತಿ ಮತ್ತು ಕಾಂಪೌಂಡ್ ನಿರ್ಮಾಣಕ್ಕೆ ಒಟ್ಟು 39 ಲಕ್ಷ ರೂ. ಅಂದಾಜು ಮಾಡಲಾಗಿದೆ.
ಬೇಲೂರು ಕ್ಷೇತ್ರ: ಈ ಕ್ಷೇತ್ರದ ಸದಸ್ಯ ಕೆ.ಎಸ್.ಲಿಂಗೇಶ್ ಅವರು ಜಾವಗಲ್‌ನ ಹಿರಿಯ ಪ್ರಾಥಮಿಕ ಶಾಲೆ, ಬೇಲೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗ, ಹಳೇಬೀಡು ಗ್ರಾಮದ ಕೆಪಿಎಸ್ ಶಾಲೆಯನ್ನು ಅಭಿವೃದ್ಧಿ ಪಡಿಸಲು ದತ್ತು ಪಡೆದುಕೊಂಡಿದ್ದಾರೆ. ಜಾವಗಲ್ ಶಾಲೆಯಲ್ಲಿ 1 ರಿಂದ 8ನೇ ತರಗತಿವರೆಗೆ ಒಟ್ಟು 170 ವಿದ್ಯಾರ್ಥಿಗಳಿದ್ದು, ಆ ಶಾಲೆಯಲ್ಲಿ 4 ಕೊಠಡಿಗಳ ದುರಸ್ತಿ, ಶೌಚಾಲಯ ಹಾಗೂ ಇತರೆ ಕಾಮಗಾರಿಗಳಿಗೆ ಒಟ್ಟು 44 ಲಕ್ಷ ರೂ. ಅಂದಾಜು ಮಾಡಲಾಗಿದೆ.
ಬೇಲೂರು ಪಟ್ಟಣದ ಪ್ರೌಢಶಾಲೆಯಲ್ಲಿ 8 ರಿಂದ 12ನೇ ತರಗತಿವರೆಗೆಒಟ್ಟು318ವಿದ್ಯಾರ್ಥಿಗಳಿದ್ದು, ಅಲ್ಲಿನ 5 ಕೊಠಡಿಗಳ ದುರಸ್ತಿ, ಶೌಚಾಲಯಮತ್ತು ಇತರೆ ಕಾಮಗಾರಿಗಳಿಗೆ 5 ಲಕ್ಷ ರೂ. ಅಂದಾಜು ಮಾಡಿದ್ದರೆ. ಹಳೇಬೀಡು ಕೆಪಿಎಸ್ ನಲ್ಲಿ 1 ರಿಂದ 12ನೇ ತರಗತಿವರೆಗೆ ಒಟ್ಟು 1020 ವಿದ್ಯಾರ್ಥಿ ಗಳಿದ್ದಾರೆ. ಆ ಶಾಲೆಯಲ್ಲಿ ವಿವಿಧ ದುರಸ್ತಿ ಕಾಮಗಾರಿ ಗಳಿಗಾಗಿ 5 ಲಕ್ಷ ರೂ. ಅಂದಾಜು ಮಾಡಲಾಗಿದೆ.
ಶ್ರವಣಬೆಳಗೊಳ (ಚನ್ನರಾಯಪಟ್ಟಣ) ಕ್ಷೇತ್ರ: ಈ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ಅವರು ನುಗ್ಗೆಹಳ್ಳಿ ಗ್ರಾಮದ ಕೆಪಿಎಸ್ ಶಾಲೆ, ಚನ್ನರಾಯ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗುಲಸಿಂದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಸ್ವೀಕಾರ ಮಾಡಿದ್ದಾರೆ. ನುಗ್ಗೇಹಳ್ಳಿ ಕೆಪಿಎಸ್‌ನಲ್ಲಿ 1 ರಿಂದ 12ನೇ ತರಗತಿವರೆಗೆ ಒಟ್ಟು 78 ವಿದ್ಯಾರ್ಥಿಗಳಿದ್ದು, ಅಲ್ಲಿಪ್ರಯೋಗಾಲಯ ಮತ್ತು ಗ್ರಂಥಾಲಯದ ವ್ಯವಸ್ಥೆಗೆ 5 ಲಕ್ಷ ರೂ., ಚನ್ನರಾಯಪಟ್ಟಣದ ಶಾಲೆಯಲ್ಲಿ 1 ರಿಂದ 8ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ 226 ವಿದ್ಯಾರ್ಥಿಗಳಿದ್ದು, ಶಾಲೆಯ ಪಾಠೊಪಕರಣ ಮತ್ತು ಪೀಠೊಪಕರಣಗಳಿಗಾಗಿ 5 ಲಕ್ಷ ರೂ., ಅಂದಾಜು ಮಾಡಿದ್ದರೆ, ಗುಲಸಿಂದ ಗ್ರಾಮದಶಾಲೆಯಲ್ಲಿ 1 ರಿಂದ 8 ನೇ ತರಗತಿವರೆಗೆ ಒಟ್ಟು 144 ವಿದ್ಯಾರ್ಥಿಗಳಿದ್ದಾರೆ. ಈಶಾಲೆಗೆ 5 ಲಕ್ಷ ರೂ. ಅಂದಾಜು ಮಾಡಲಾಗಿದೆ.
ಅರಕಲಗೂಡು ಕ್ಷೇತ್ರ: ಈ ಕ್ಷೇತ್ರದ ಶಾಸಕ ಎ.ಟಿ.ರಾಮಸ್ವಾಮಿ ಅವರುಅರಕಲಗೂಡು ಪಟ್ಟಣ ಸಮೀಪದ ಮೋಕಲಿ, ಕಾಳೇನಹಳ್ಳಿ ಸರ್ಕಾರಿ ಪ್ರೌಢ ಶಾಲೆಮತ್ತು ಹೊಳೆನರಸೀಪುರ ತಾಲೂಕು ಹಳ್ಳಿಮೈಸೂರು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು(ಪ್ರೌಢಶಾಲೆ ವಿಭಾಗ) ಅನ್ನು ದತ್ತು ಪಡೆದಿದ್ದಾರೆ. ಮೋಕಲಿ ಶಾಲೆಯಲ್ಲಿ8 ರಿಂದ10ನೇ ತರಗತಿವರೆಗೆ ಒಟ್ಟು 150 ವಿದ್ಯಾರ್ಥಿಗಳಿದ್ದು, ಶಾಲೆಗೆ4ಕೊಠಡಿಗಳ ನಿರ್ಮಾಣ, ಅಗತ್ಯ ಪಾಠೊಪಕರಣ ಮತ್ತು ಪೀಠೊಪಕರಣಗಳಿಗೆ ಒಟ್ಟು30 ಲಕ್ಷ ರೂ. ಅಂದಾಜುಸಿದ್ಧವಾಗಿದೆ. ಕಾಳೇನಹಳ್ಳಿ ಶಾಲೆಯಲ್ಲಿ 8 ರಿಂದ 10ನೇ ತರಗತಿವರೆಗಿನ243ವಿದ್ಯಾರ್ಥಿಗಳಿದ್ದು,ಆಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಸಭಾಂಗಣ, ಸೈಕಲ್ ಸ್ಟಾಂಡ್, ಇನ್ನಿತರೆ ಮೂಲ ಸೌಕರ್ಯಗಳಿಗಾಗಿ ಒಟ್ಟು 10 ಲಕ್ಷ ರೂ. ಅಂದಾಜು ಮಾಡಲಾಗಿದೆ.
ಹಳ್ಳಿಮೈಸೂರು ಶಾಲೆಯಲ್ಲಿ8 ರಿಂದ 10ನೇ ತರಗತಿ ವರೆಗೆ ಒಟ್ಟು278 ವಿದ್ಯಾರ್ಥಿಗಳಿದ್ದು, ಆ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಸಭಾಂಗಣ, ಸೈಕಲ್ ಸ್ಟಾಂಡ್, ಇನ್ನಿತರೆ ಮೂಲ ಸೌಕರ್ಯಗಳನ್ನು ಕಲ್ಪಿಸಲು10 ಲಕ್ಷ ರೂ. ಅಂದಾಜು ರೂಪಿಸಲಾಗಿದೆ.
ಅನುದಾನವೇ ಇಲ್ಲ, ಅಭಿವೃದ್ಧಿ ಹೇಗೆ? :
ಶಾಸಕರು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸುವ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಿದೆ. ಆದರೆ, ಇದೇ ಸರ್ಕಾರ ಕೋವಿಡ್ ಕಾರಣದಿಂದಾಗಿ ಶಾಸಕರಕ್ಷೇತ್ರಾಭಿವೃದ್ಧಿ ಅನುದಾನವನ್ನು ಈ ವರ್ಷ ತಡೆಹಿಡಿದಿದೆ. ಶಾಸಕರಕ್ಷೇತ್ರಾಭಿವೃದ್ಧಿಗೆ ಅನುದಾನವೇ ಇಲ್ಲದೆ ಶಾಲೆಗಳ ಅಭಿವೃದ್ಧಿಗೆ ಹೇಗೆ ಅನುದಾನವನ್ನುಕೊಡೋಣ ಎಂಬುದು ಶಾಸಕರು ಪ್ರಶ್ನೆ. ಈ ಕಾರಣಕ್ಕಾಗಿಯೇ ಹೊಳೆನರಸೀಪುರ ಮತ್ತು ಹಾಸನ ವಿಧಾನಸಭಾಕ್ಷೇತ್ರದ ಶಾಸಕರು ದತ್ತು ಸ್ವೀಕಾರದ ಶಾಲೆಗಳ ಪಟ್ಟಿಯನ್ನು ಕೊಟ್ಟಿಲ್ಲ ಎಂದು ತಿಳಿದು ಬಂದಿದೆ.
ಸದ್ಯಕ್ಕೆ ಕಾಮಗಾರಿ ಆರಂಭವಾಗಲ್ಲ : ಕೋವಿಡ್ ಕಾರಣದಿಂದಾಗಿ ಶಾಲೆಗಳು ಈ ವರ್ಷ ಇದುವರೆಗೂ ಪ್ರಾರಂಭವಾಗಿಲ್ಲ. ಶಿಕ್ಷಕರು ಮಾತ್ರ ಶಾಲೆಗಳಿಗೆ ಹಾಜರಾಗಿ ಆನ್‌ಲೈನ್‌ನಲ್ಲಿ ಪಾಠ ಮಾಡುತ್ತಿದ್ದಾರೆ. ಶಾಸಕರ ದತ್ತು ಸ್ವೀಕಾರಕಾರ್ಯಕ್ರಮದಲ್ಲಿ ಅಭಿವೃದ್ಧಿಪಡಿಸಬೇಕಾದ ಶಾಲೆಗಳ ಪಟ್ಟಿಯನ್ನು ಪಡೆದುಕೊಂಡು ಅಲ್ಲಿ ಕೈಗೆತ್ತಿಕೊಳ್ಳಬೇಕಾದ ಕಾಮಗಾರಿಗಳ ಅಂದಾಜು ಮಾಡಲಾಗಿದೆ. ಇನ್ನು ಮುಂದೆ ಅಯಾಯ ತಾಲೂಕಿನಕ್ಷೇತ್ರ ಶಿಕ್ಷಣಾಧಿಕಾರಿಯವರು ಶಾಸಕರ ದತ್ತು ಶಾಲೆಗಳ ಅಭಿವೃದ್ಧಿಯ ಕ್ರಿಯಾ ಯೋಜನೆ ರೂಪಿಸಿ ಆನಂತರ ಶಾಸಕರ ಕ್ಷೇತ್ರಾಭಿವೃದ್ಧಿ ಯೋಜನೆಯಡಿ ಅನುದಾನ ಮಂಜೂರಾತಿ ಪಡೆದು ಕೊಳ್ಳಲು ಕ್ರಮ ಕೈಗೊಳ್ಳಲಿದ್ದಾರೆ. ಈ ಎಲ್ಲಾ ಪ್ರಕ್ರಿಯೆಗೆ ಸಮಯ ಬೇಕಾಗುತ್ತದೆ ಎಂದು ಹಾಸನ ಜಿಲ್ಲೆಯ ಡಿಡಿಪಿಐ ಕೆ.ಎಸ್.ಪ್ರಕಾಶ್ ಹೇಳುತ್ತಾರೆ.
-ನಂಜುಂಡೇಗೌಡ.ಎನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.