ಈಗ ಸೋಲು ಗೆಲುವಿನದ್ದೇ ಚರ್ಚೆ
ಗ್ರಾಮದಲ್ಲಿನ ಟೀ ಅಂಗಡಿ, ಅರಳಿಕಟ್ಟೆಗೆ ಶಿಫ್ಟ್ ಆದ ರಾಜಕೀಯ ಚರ್ಚೆ
Team Udayavani, Dec 27, 2020, 8:12 PM IST
ಚನ್ನರಾಯಪಟ್ಟಣ: ತಾಲೂಕು ಗ್ರಾಮ ಪಂಚಾಯಿತಿ ಚುನಾವಣೆ ಡಿ.22ಕ್ಕೆ ಶಾಂತಿಯುತವಾಗಿ ಮುಗಿದಿದೆ. ಬಿರುಸಿನ ಪ್ರಚಾರ ನಡೆಸಿ, ಸುಸ್ತಾಗಿದ್ದ ಸ್ಪರ್ಧಾಳುಗಳು, ಧಣಿವಾರಿಸಿಕೊಂಡು ಈಗ ಕೃಷಿ ಚಟುವಟಿಕೆ, ಇತರೆ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಆದರೆ, ಅಭ್ಯರ್ಥಿಗಳ ಬೆಂಬಲಿಗರು, ರಾಜಕೀಯವಾಗಿ ಗುರುತಿಸಿಕೊಂಡವರು ಸೋಲು ಗೆಲುವಿನ ಚರ್ಚೆಯಲ್ಲಿ ತೊಡಗಿಕೊಂಡಿದ್ದಾರೆ.
ಮದುವೆ, ಜಾತ್ರೆ, ಉತ್ಸವ, ಹೊಲಗದ್ದೆಗಳಲ್ಲಿ ಕೂಲಿ ಮಾಡುವವರು, ಟೀ ಅಂಗಡಿ, ಹೋಟೆಲ್, ಅರಳಿಕಟ್ಟೆ, ಎಲ್ಲಿ ನೋಡಿದರೂ ಸೋಲು ಗೆಲುವಿನ ಲೆಕ್ಕಾಚಾರ ನಡೆಯುತ್ತಿದೆ. ಸ್ಥಳೀಯವಾಗಿ ರಾಜಕೀಯ ವಿಶ್ಲೇಷಕರು ಎನಿಸಿಕೊಂಡರಿಗೆ ಈ ಬಾರಿ ಬೇಡಿಕೆ. ಅವರ ಮಾತು ಕೇಳಲು ಎಲೆ ಅಡಿಕೆ, ಟೀ, ಕಾಫಿ ಯಾರಿಗೆ ಎಷ್ಟು ಮತ ಬಂದಿವೆ, ಯಾರೂ ಗೆಲ್ಲಬಹುದು, ಚುನಾವಣೆ ಯಲ್ಲಿ ಎಷ್ಟು ಖರ್ಚು ಮಾಡಿದ್ದಾರೆ ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ.
ಗ್ರಾಮ ಪಂಚಾಯಿತಿ ಚುನಾವಣೆ ರಾಜಕೀಯಪಕ್ಷಗಳಿಂದ ಹೊರತಾದದ್ದು. ಆದರೂ, ಪಕ್ಷಗಳ ಬೆಂಬಲ ದೊಂದಿಗೆ ಕೆಲವರು ಚುನಾವಣೆಯಲ್ಲಿ ಸ್ಪರ್ಧಿಸುವು ದರಿಂದ ಹಳ್ಳಿ ಕದನ ಜಿದ್ದಾಜಿದ್ದಿನಿಂದ ಕೂಡಿದೆ.
ಸಮೀಕ್ಷೆ ಮೊದಲು ಪ್ರಾರಂಭ: ಪ್ರಸ್ತುತ ರಾಜಕಾರಣದ ಬಗ್ಗೆ ಬಹಿರಂಗವಾಗಿ ಮಾತನಾಡಲು ಇಷ್ಟ ಪಡದವರು ತಮ್ಮ ವಾಟ್ಸ್‌ಆ್ಯಪ್‌ನಲ್ಲಿ ಮಾಹಿತಿ ತಿಳಿಸುತ್ತಿದ್ದಾರೆ, ಇನ್ನು ಕೆಲವರು ಗ್ರಾಮ ದೇವತೆ ಮೇಲೆ ಆಣೆಪ್ರಮಾಣ ಮಾಡಿ ತಮಗೇಮತಹಾಕಿದ್ದೇನೆ ಎಂದು ಹೇಳುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಸೋಲು ಗೆಲುವಿನ ಬಗ್ಗೆ ಸಮೀಕ್ಷೆಗಳು ಪ್ರಾರಂಭವಾಗಿವೆ.
ಸಾಮಾಜಿಕ ಮಾಧ್ಯಮಗಳ ಬಳಕೆ: ಗ್ರಾಪಂ ಚುನಾವಣೆ ಪ್ರಚಾರಕ್ಕೆ ಈ ಬಾರಿ ಸಾಮಾಜಿಕ ಜಾಲತಾಣ ಅತಿಹೆಚ್ಚಾಗಿ ಬಳಸಿ ಕೊಳ್ಳಲಾಗಿದೆ.ಕೆಲವರು ಮೊಬೈಲ್ ನಂಬರ್‌ಗೆ ಕರೆ ಮಾಡಿ, ಮತಯಾಚಿಸಿದರೆ, ಕೆಲವರು ವಾಟ್ಸ್ ಆ್ಯಪ್ ಗ್ರೂಪ್‌ಗ್ಳಲ್ಲಿ, ಫೇಸ್‌ಬುಕ್, ಇನ್ಸ್ಟಾಗ್ರಾಂ ಸೇರಿಇತರೆ ಜಾಲ ತಾಣಗಳನ್ನು ಬಳಸಿಕೊಂಡರು. ರಾಜಕೀಯ ಪಕ್ಷದವರು ತಮ್ಮ ಬೆಂಬಲಿತ ಅಭ್ಯರ್ಥಿಗೆ ಮತ ಹಾಕುವಂತೆ ಮನವಿ ಮಾಡಿದರು, ಇನ್ನು ಕೆಲವರು ಮತಯಾಚನೆಗೆ ತಮ್ಮ ಪಕ್ಷದ ಹೆಸರಲ್ಲಿ ತೆರೆದಿರುವ ಫೇಸ್‌ಬುಕ್ ಖಾತೆಗಳನ್ನು ಬಳಕೆ ಮಾಡಿದರು.
ಟೀ ಅಂಗಡಿ ರಾಜಕೀಯ ಚರ್ಚಾ ಕೇಂದ್ರ: ಸಾಮಾಜಿಕ ಜಾಲತಾಣಗಳಲ್ಲಿನ ಚುನಾವಣೆ ಕುರಿತ ಚರ್ಚೆ ತಣ್ಣಗಾಗಿದೆ. ಆದರೆ, ನಗರ ಹಾಗೂಗ್ರಾಮೀಣ ಭಾಗದ ಟೀ ಅಂಗಡಿ, ಹೋಟೆಲ್‌ಗಳಲ್ಲಿಬೆಳಗ್ಗೆ 6 ಗಂಟೆಗೆ ಪ್ರಾರಂಭ ಆಗುವ ಚರ್ಚೆಗಳುರಾತ್ರಿ ಬಾಗಿಲು ಹಾಕುವ ತನಕ ನಡೆಯುತ್ತವೆ. 10 ರೂ. ಕೊಟ್ಟು ಟೀ, ಕಾಫಿ ಕುಡಿಯುವ ಮಂದಿ ಕನಿಷ್ಠ ಎರಡ್ಮೂರು ತಾಸು ಚರ್ಚೆಯಲ್ಲಿ ತೊಡಗುವ ಮೂಲಕ ಫಲಿತಾಂಶದ ದಿನ ಬೇಗ ಬರಲೆಂದು ಚರ್ಚಿಸುತ್ತಿದ್ದಾರೆ. ಯಾರು ಏನೇ ಲೆಕ್ಕಾಚಾರ ಮಾಡಿ ದರೂ ಡಿ.30ರಂದು ಪ್ರಕಟವಾಗುವ ಫಲಿತಾಂಶದವರೆಗೂ ಕಾಯಲೇಬೇಕು. ಆಗ ಯಾರು ಗೆದ್ದಿದ್ದಾರೆ, ಸೋತಿದ್ದಾರೆ ಎಂಬುದು ತಿಳಿಯುತ್ತದೆ.
ಚುನಾವಣೆ ನಡೆದ ಮೇಲೆ ಸೋಲು ಗೆಲುವಿನ ಲೆಕ್ಕಾಚಾರ ಮಾಡುವುದು ಮಾಮೂಲು, ಲೋಕಸಭೆ,ವಿಧಾನಸಭೆಗೆ ಹೋಲಿಸಿದರೆ ಗ್ರಾಮ ಪಂಚಾಯಿತಿ ಸ್ವಲ್ಪ ವಿಭಿನ್ನವಾಗಿರುತ್ತದೆ. ಅಭ್ಯರ್ಥಿಗಳು ನಮ್ಮ ಕೈಗೆ ಸಿಗುತ್ತಾರೆ. ಹಾಗಾಗಿ ಯಾರು ಗೆದ್ದರೆ ಒಳೆಯದು, ಯಾರಿಗೆ ಎಷ್ಟು ಮತ ಬಂದಿರಬಹುದು ಎಂದು ಚರ್ಚೆಗಳು ನಡೆಯುತ್ತಿವೆ. -ರಾಜಕುಮಾರ್, ಹರಳಹಳ್ಳಿ ಗ್ರಾಮದ ಮುಖಂಡ.
–ಶಾಮಸುಂದರ್ ಕೆ.ಅಣ್ಣೇನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.