ವಿಮಾನ ನಿಲ್ದಾಣ: ಸಮಸ್ಯೆಗಳ ಶೀಘ್ರ ನಿವಾರಣೆ
Team Udayavani, Dec 9, 2020, 5:45 PM IST
ಹಾಸನ: ನಗರದ ಹೊರವಲಯದ ಬೂವನಹಳ್ಳಿ ಬಳಿ ನಿರ್ಮಿಸಲು ಉದ್ದೇಶಿಸಿರುವ ವಿಮಾನ ನಿಲ್ದಾಣದ ಕಾಮಗಾರಿಗೆ ಇರುವ ತೊಡಕುಗಳನ್ನು ತ್ವರಿತವಾಗಿ ಪರಿಹರಿಸುವಂತೆ ಜಿಲ್ಲಾಧಿಕಾರಿ ಆರ್.ಗಿರೀಶ್‌ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿಮಾನ ನಿಲ್ದಾಣದ ನಿರ್ಮಾಣದ ಪೂರ್ವ ಸಿದ್ಧತೆ ಸಂಬಂಧ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಮಾಹಿತಿ ನೀಡಿದ ಕರ್ನಾಟಕ ರಾಜ್ಯ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ(ಕೆಎಸ್‌ಐಐಡಿಸಿ.) ಪ್ರತಿನಿಧಿ ಕ್ಯಾ.ಶಮಂತ್ ಅವರುವಿಮಾನ ನಿಲ್ದಾಣನಿರ್ಮಾಣದ ಮೊದಲಹಂತ ಮತ್ತು ಎರಡನೇ ಹಂತದ ಯೋಜನೆ ಬಗ್ಗೆ ವಿವರಿಸಿದರು.
ಹಂತವಾಗಿ ಅಭಿವೃದ್ಧಿ ಕಾರ್ಯ: ವಿಮಾನ ಹಾರಾಟಕ್ಕೆ ಹಾಗೂ ವಿಮಾನ ಇಳಿಯಲು ಯಾವುದೇ ತೊಂದರೆ ಆಗದಂತೆ ಉದ್ದೇಶಿತ ನಿಲ್ದಾಣದ 3 ಕಿ.ಮೀ. ದೂರದಲ್ಲಿರುವ ಹೈಟೆನ್ಷನ್ ವಿದ್ಯುತ್ ಲೈನ್‌ಗಳನ್ನು ಸ್ಥಳಾಂತರಿಸುವ ಅಗತ್ಯವಿದೆ. 2033ರ ದೂರದೃಷ್ಟಿಯನ್ನು ಇಟ್ಟು ಕೊಂಡು ಈಗಲೇ ಯೋಜನೆ ರೂಪಿಸಿದ್ದು, ಹಂತವಾಗಿ ಅಭಿವೃದ್ಧಿ ಕಾರ್ಯ ಮಾಡಬೇಕಾಗಿದೆ. ಮೊದಲಹಂತದಲ್ಲಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿವಿಮಾನ ಹಾರಾಟಕ್ಕೆ ಬೇಕಿರುವ ರನ್‌ವೇ ನಿರ್ಮಾಣ ಹಾಗೂ ಲೈನ್ ಕ್ಲಿಯರಿಂಗ್ ಚಟುವಟಿಕೆಗಳನ್ನುಪೂರ್ಣ ಗೊಳಿಸಿ ಸೇವಾ ಸೌಲಭ್ಯಗಳಿಗೆ ಚಾಲನೆ ನೀಡಬಹುದಾಗಿದೆ ಎಂದು ಹೇಳಿದರು.
ತ್ವರಿತವಾಗಿ ಸ್ಥಳಾಂತರ: ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು, ಪವರ್ ಗ್ರೀಡ್ ಕಾರ್ಪೊರೇಷನ್, ಕೆಪಿಟಿಸಿ ಎಲ್, ಸೆಸ್ಕ್, ಹೆಸ್ಕಾಂ ಅಧಿಕಾರಿಗಳೊಂದಿಗೆ ಚರ್ಚಿಸಿ ಅವರಹಾಗೂ ಮುಂದಿನಯೋಜನೆಗಳು, ನಕಾಶೆಯ ಬಗ್ಗೆ ಪರಿಶೀಲಿಸಿದರು. ವಿಮಾನ ನಿಲ್ದಾಣ ನಿರ್ಮಾಣಕ್ಕೆಅಡ್ಡಿಯಾಗಿರುವ ಹೈಟೆನÒನ್ ವಿದ್ಯುತ್ ಮಾರ್ಗಗಳನ್ನು ಆದಷ್ಟೂ ತ್ವರಿತವಾಗಿ ಸ್ಥಳಾಂತರಿಸುವಂತೆ ಸೂಚಿಸಿದರು. ವಿದ್ಯುತ್ ನಿಗಮದ ಅಧಿಕಾರಿಗಳು ಮಾತನಾಡಿ, ಈಗಾಗಲೇ ಸಂಸ್ಥೆ ವತಿಯಿಂದ ಕಾರ್ಯ ಪ್ರವೃತ್ತವಾಗಿದ್ದು, ಉದ್ದೇಶಿತ ವಿಮಾನ ನಿಲ್ದಾಣದ ಸಮೀಪ ಇದ್ದ 9 ಕಿ.ಮೀ.ಉದ್ದದ ಹೈಟೆನ್ಷನ್ ವಿದ್ಯುತ್ ಮಾರ್ಗವನ್ನು ಸ್ಥಳಾಂತರಿಸುವ17ಕಿ.ಮೀ. ಉದ್ದದಬದಲಿಮಾರ್ಗಕ್ಕೆಪರಿವರ್ತಿಸಲಾಗಿದೆ.68ಟವರ್‌ಗಳ ಪೈಕಿ66 ನಿರ್ಮಿಸಲಾಗಿದೆ. ಆದರೆ, ರೈತರಿಗೆ ಬೆಳೆ ಪರಿಹಾರ ವಿತರಣೆಗೆ 7.5 ಕೋಟಿ ರೂ.ಅನುದಾನ ಅಗತ್ಯವಿದ್ದು, ಹಣ ಬಿಡುಗಡೆಗೆ ವ್ಯವಸ್ಥೆ ಮಾಡಬೇಕೆಂದುಕೋರಿದರು.
ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಉಪ ವಿಭಾಗಧಿಕಾರಿ ಬಿ.ಎ ಜಗದೀಶ್, ತಹಶೀಲ್ದಾರ್ ಶಿವಶಂಕರಪ್ಪ, ಪವರ್ ಗ್ರೀಡ್‌ನ ಜಯರಾಂ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.