ಆಲೂರು ಠಾಣೆಗೆ ಮಹಿಳಾ ಸಿಬ್ಬಂದಿ ಅಗತ್ಯ
Team Udayavani, Sep 28, 2021, 4:11 PM IST
ಆಲೂರು: ಪಟ್ಟಣದಲ್ಲಿರುವ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ತಾಲೂಕಿನಲ್ಲಿ ಸುಮಾರು 85 ಸಾವಿರ ಜನಸಂಖ್ಯೆ ಇದೆ. ತಾಲೂಕು ಕೇಂದ್ರ ಆಲೂರಿನಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ನೇತೃತ್ವದ ಪೊಲೀಸ್ ಠಾಣೆ ಇದೆ. ಕೆಂಚಮ್ಮನ ಹೊಸಕೋಟೆ ಹೋಬಳಿ ಕೇಂದ್ರದಲ್ಲಿ ಹೊರ ಪೊಲೀಸ್ ಠಾಣೆ ಇದೆ. ಎರಡು ವರ್ಷಗಳ ಹಿಂದೆ ಪೊಲೀಸ್ ಠಾಣೆಯಲ್ಲಿ ಸಾಕಷ್ಟು ಮಹಿಳಾ ಪೊಲೀಸ್ ಪೇದೆ, ಸಹಾಯಕ ಮತ್ತು ಸಬ್ ಇನ್ಸ್ ಪೆಕ್ಟರ್, ಪೇದೆಗಳಿದ್ದರು. ಅವರೆಲ್ಲ ವರ್ಗಾವಣೆಗೊಂಡ ನಂತರ ಮಹಿಳಾ ಸಿಬ್ಬಂದಿಗಳಿಲ್ಲದೆ, ಆರೋಪಕ್ಕೊಳಗಾದ ಮಹಿಳೆಯರ ವಿಚಾರಣೆ ನಡೆಸಲು ಸರಿಯಾಗಿ ಆಗುತ್ತಿಲ್ಲ ಎಂಬ ಕೂಗೂ ನಾಗರಿಕರಿಂದ ಕೇಳಿಬಂದಿದೆ.
ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಸಂಬಂಧಿಸಿದಂತೆ ಹಲವು ಪ್ರಕರಣಗಳುಠಾಣೆಯಲ್ಲಿ ದಾಖಲಾಗುತ್ತಿವೆ. ಈ ಬಗ್ಗೆ ವಿಶೇಷವಾಗಿ ತನಿಖೆ ನಡೆಸಲು ಮಹಿಳಾ ಪೊಲೀಸ್ ಸಿಬ್ಬಂದಿ ಸೂಕ್ತ ಎನ್ನಲಾಗಿದೆ.
ನೊಂದ ಮಹಿಳೆಯರು ಮಹಿಳಾ ಪೊಲೀಸ್ ಸಿಬ್ಬಂದಿಗಳ ತಾವು ದೌರ್ಜನ್ಯಕ್ಕೆ ಒಳಗಾಗಿರುವ ಅಥವಾ ಇತರೆ ಪ್ರಕರಣ ಘಟನೆಗಳ ಬಗ್ಗೆ ವಿವರ ನೀಡಲು ಸಾಧ್ಯವಾಗುತ್ತದೆ. ಪುರುಷ ಸಿಬ್ಬಂದಿಗಳೊಡನೆ ಕೆಲವು ವಿಷಯಗಳನ್ನು ಹಂಚಿಕೊಳ್ಳಲು ಸಾಧ್ಯವಾಗುವುದಿಲ್ಲಹೀಗಾಗಿ ಮಹಿಳಾ ಸಿಬ್ಬಂದಿ ಅನಿವಾರ್ಯ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಪೊಲೀಸರಿದ್ದರೆ ಠಾಣೆಗೆ ಬರಲು ಹೆದರಿಕೆ:
ಮಹಿಳೆಯರು ಮೊದಲೇ ಪೊಲೀಸ್ ಎಂದರೆ ಭಯಭೀತರಾಗುತ್ತಾರೆ. ಅದೂ ಅಲ್ಲದೆ ಠಾಣೆಗೆ ಹೋಗಲು ಮುಜುಗರಕ್ಕೆ ಒಳಗಾಗುತ್ತಾರೆ. ಠಾಣೆಗೆ ಹೋದ ನಂತರ ಪುರುಷ ಸಿಬ್ಬಂದಿ ಗಳೊಡನೆ ವಿಷಯ ಹಂಚಿಕೊಳ್ಳಲು ಬಹುತೇಕ ಹಿಂಜರಿಯುತ್ತಾರೆ. ಮಹಿಳಾ ಪೊಲೀಸ್ ಸಿಬ್ಬಂದಿಗಳಿದ್ದರೆ,
ಅವರಿಗೆ ಪ್ರಕರಣ ಕುರಿತು ನಿಸ್ಸಂದೇಹವಾಗಿ ಹಂಚಿಕೊಳ್ಳಬಹುದು. 2-3 ವರ್ಷಗಳಿಂದ ಮಹಿಳಾ ಸಿಬ್ಬಂದಿಗಳೇ ಇಲ್ಲ ಎನ್ನುವ ಮಾತುಗಳಿವೆ ಆಲೂರು ಪೊಲೀಸ್ ಠಾಣೆ ವೃತ್ತ ನಿರೀಕ್ಷಕರು ಠಾಣೆಗೆಮಹಿಳಾ ಪೊಲೀಸ್ ಸಿಬ್ಬಂದಿ ನೇಮಿಸುವಂತೆ ಗಮನ ನೀಡಬೇಕು ಎಂದು ಕರವೇ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾ ರಮೇಶ್ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೂಡಲೇ ಆಲೂರು ಠಾಣೆಗೆ ಮಹಿಳಾಪೊಲೀಸ್ ಸಿಬ್ಬಂದಿ ನೇಮಿಸುವ ಮೂಲಕ ಮಹಿಳೆಯರಿಗೆ ನೆರವಾಗಬೇಕು.●ಉಮಾ ರವಿಪ್ರಕಾಶ್, ಬಿಜೆಪಿ ಮುಖಂಡ
2-3 ವರ್ಷಗಳ ಹಿಂದೆ ಠಾಣೆ ಮುಖ್ಯಸ್ಥರ ಗಮನಕ್ಕೆ ತರಲಾಯಿತಾದರೂಇದುವರೆವಿಗೂ ಮಹಿಳಾ ಸಿಬ್ಬಂದಿಗಳ ನೇಮಕವಾಗಿಲ್ಲ. ಈ ಭಾಗದಲ್ಲಿ ಕೂಲಿಕಾರ್ಮಿಕರೇ ಹೆಚ್ಚು ಇರುವುದರಿಂದ ಸಣ್ಣಪುಟ್ಟ ಸಮಸ್ಯೆಗಳಿರುತ್ತವೆ. ಮಹಿಳೆಯರುತಮಗಾಗುವ ಸಮಸ್ಯೆಗಳ ಬಗ್ಗೆ ಪುರುಷಸಿಬ್ಬಂದಿಗಳ ಹತ್ತಿರ ಹೇಳಿಕೊಳ್ಳಲು ಸಾದ್ಯವಿಲ್ಲ. ಹೀಗಾಗಿ ಮಹಿಳಾ ಪೊಲೀಸ್ ಸಿಬ್ಬಂದಿ ನೇಮಕ ಅಗತ್ಯ●ರಘು ಪಾಳ್ಯ ಕರವೇ ಜಿಲ್ಲಾ ಕಾರ್ಯದರ್ಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.