ಬಂತು ಮತ್ತೂಂದು ಗೊಮ್ಮಟಮೂರ್ತಿ!
Team Udayavani, Jan 15, 2018, 3:15 PM IST
ಹಾಸನ: ಶ್ರವಣಬೆಳಗೊಳದ ವಿಂಧ್ಯಗಿರಿಯಲ್ಲಿ ನೆಲಸಿರುವ 58.8 ಎತ್ತರದ ವಿಶ್ವ ವಿಖ್ಯಾತ ಶ್ರೀ ಬಾಹುಬಲಿಮೂರ್ತಿಗೆ ಫೆ.17ರಿಂದ ನಡೆಯುವ 82ನೇ ಮಹಾಮಸ್ತಕಾಭಿಷೇಕಕ್ಕೆ ಭರದ ಸಿದ್ಧತೆ ನಡೆಯತ್ತಿದೆ. ಈ ಸಂದರ್ಭದಲ್ಲಿಯೇ 12 ಅಡಿ ಬಾಹುಬಲಿಮೂರ್ತಿಯ ಪ್ರತಿಷ್ಠಾಪನೆಯ ಸಂಭ್ರಮವೂ ಶ್ರವಣಬೆಳಗೊಳದಲ್ಲಿ ಆರಂಭವಾಗಿದೆ. ಮಿನಿ ಬಾಹುಬಲಿಮೂರ್ತಿ ಈ ಬಾರಿಯ ಮಹಾಮಸ್ತಕಾಭಿಷೇಕದ ಪ್ರಮುಖ ಆಕರ್ಷಣೆ ಆಗಲಿದೆ.
ನಾಲ್ಕು ವರ್ಷಗಳಿಂದ ರಾಮನಗರ ಜಿಲ್ಲೆ ಬಿಡದಿ ಬಳಿ 12 ಅಡಿ ಬಾಹುಬಲಿಮೂರ್ತಿಯ ಕೆತ್ತನೆ ನಡೆಯುತ್ತಿತ್ತು. ಭಾನುವಾರ ಸಂಕ್ರಮಣದ ಶುಭ ಸಂಭ್ರಮದಲ್ಲಿ ಹೊಸ ಮೂರ್ತಿ ಶ್ರವಣಬೆಳಗೊಳದ ಪುರ ಪ್ರವೇಶ ಮಾಡಿದೆ. ಸಂಜೆ 7.30ರ ವೇಳೆಗೆ ಲಾರಿಯಲ್ಲಿ ಶ್ರವಣಬೆಳಗೊಳ ಪ್ರವೇಶ ಮಾಡಿದ ಗೊಮ್ಮಟನ ಹೊಸ ಮೂರ್ತಿಯನ್ನು ಶ್ರವಣಬೆಳಗೊಳದ ಜೈನ ಪೀಠಾಧ್ಯಕ್ಷ ಶ್ರೀ ಚಾರುಕೀರ್ತಿ ಸ್ವಾಮೀಜಿ ಧಾರ್ಮಿಕ ವಿಧಿ ವಿಧಾನ ಅನುಸರಿಸಿ ಸ್ವಾಗತಿಸಿದರು.
ಏಕೆ ಮಿನಿ ಬಾಹುಬಲಿ ಮೂರ್ತಿ?: ಕ್ರಿ.ಶ. 980ರಲ್ಲಿ ಶ್ರವಣಬೆಳಗೊಳದ ವಿಂಧ್ಯಗಿರಿಯ ತುತ್ತ ತುದಿಯಲ್ಲಿ ನಿರ್ಮಾಣವಾದ 58.8 ಅಡಿ ಎತ್ತರದ ಏಕ ಶಿಲಾ ಶ್ರೀ ಗೊಮ್ಮಟಮೂರ್ತಿ ಭೂ ಮಟ್ಟದಿಂದ ಸುಮಾರು 438 ಅಡಿ ಎತ್ತರದಲ್ಲಿದೆ. ಅಷ್ಟು ಎತ್ತರದ ಬೆಟ್ಟವನ್ನು ಮೆಟ್ಟಿಲುಗಳ ಮೂಲಕ ಹತ್ತಿಯೇ ಜಗದ್ವಿಖ್ಯಾತ ಶ್ರೀ ಗೊಮ್ಮಟೇಶ್ವರ ಮೂರ್ತಿಯ ದರ್ಶನ ಮಾಡಬೇಕು. ಆದರೆ ಅಷ್ಟು ಎತ್ತರದ ಬೆಟ್ಟ ಹತ್ತಲಾಗದ ವಯೋವೃದ್ಧರು, ರೋಗಿಗಳು ಬಾಹುಬಲಿಮೂರ್ತಿಯ ದರ್ಶನದಿಂದ ವಂಚಿತರಾಗಬಾರದೆಂದು 10.1 ಅಡಿ ಎತ್ತರದ (ಪೀಠ ಸೇರಿ 12 ಅಡಿ) ಗೊಮ್ಮಟ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. ವಿಂಧ್ಯಗಿರಿಯಲ್ಲಿ ನೆಲಸಿರುವ ಗೊಮ್ಮಟಮೂರ್ತಿ ದರ್ಶನ ಮಾಡಲು ಸಾಧ್ಯವಾಗದವರು ಮಿನಿ ಗೊಮ್ಮಟಮೂರ್ತಿ ದರ್ಶನ ಮಾಡಲಿ ಎಂಬುದು ಉದ್ದೇಶ. ಶ್ರವಣಬೆಳಗೊಳದ ವಿಂಧ್ಯಗಿರಿ ಪ್ರವೇಶದ್ವಾರದ ಸಮೀಪವೇ ಇರುವ ಜೈನ ಮಠದ ಆವರಣದಲ್ಲಿ ಹೊಸ ಗೊಮ್ಮಟಮೂರ್ತಿಯನ್ನು ಪ್ರತಿಷ್ಠಾಪಿಸಲು ಉದ್ದೇಶಿಸಲಾಗಿದೆ. ಮಹಾ ಮಸ್ತಕಾಭಿಷೇಕ ಆರಂಭ ಆಗುವುದರೊಳಗೆ ಶುಭ ಮುಹೂರ್ತದಲ್ಲಿ ಹೊಸ ಮೂರ್ತಿಯ ಪ್ರತಿಷ್ಠಾಪನೆಯಾಗಲಿದೆ.
ಯಾರ ಕೊಡುಗೆ?: ಬೆಂಗಳೂರಿನ ವ್ಯಾಪಾರೋದ್ಯಮಿ ಮಹಾವೀರ ಪ್ರಸಾದ್ ಜೈನ್ ಹಾಗೂ ನವೀನ್ ಕುಮಾರ್ ಜೈನ್ ಸಹೋದರರು 12 ಅಡಿ ಗೊಮ್ಮಟಮೂರ್ತಿಯನ್ನು ಕೊಡುಗೆ ನೀಡಿದ್ದಾರೆ. ರಾಜಸ್ಥಾನದಿಂದ ತರಿಸಿದ ಶಿಲೆಯಲ್ಲಿ
ಬಿಡದಿ ಬಳಿ ಖ್ಯಾತ ಶಿಲ್ಪಿ ಅಶೋಕ್ ಗುಡಿಗಾರ್ ಸುಂದರ ಮೂರ್ತಿಯನ್ನು ರೂಪಿಸಿದ್ದಾರೆ. ಗುಡಿಗಾರ್ ಅವರೊಂದಿಗೆ ಗೌತಮ್ ಮತ್ತು ಕುಮಾರ್ ಸತತ 4 ವರ್ಷಗಳಿಂದ ನಿರ್ಮಿಸಿದ್ದಾರೆ.
ಹೊಸ ಗೊಮ್ಮಟಮೂರ್ತಿಯೊಂದಿಗೆ ಶ್ರವಣಬೆಳಗೊಳಕ್ಕೆ ಆಗಮಿಸಿದ ಶಿಲ್ಪಿಗಳನ್ನು ಶ್ರೀ ಚಾರುಕೀರ್ತಿ ಸ್ವಾಮೀಜಿ ಸನ್ಮಾನಿಸಿದರು. ಶ್ರವಣಬೆಳಗೊಳಕ್ಕೆ ಏನಾದರೂ ಕೊಡುಗೆ (ಹರಕೆ ರೂಪದಲ್ಲಿ) ನೀಡಬೇಕೆಂದು ಪ್ರಸಾದ್ ಜೈನ್ ಕುಟುಂಬದವರು ನಿಶ್ಚಯ ಮಾಡಿದ್ದರು. ಈ ಹಿನ್ನೆಲೆಯಲ್ಲಿ 12 ಅಡಿ ಬಾಹುಬಲಿಮೂರ್ತಿಯನ್ನೇ ಕೊಡುಗೆ ನೀಡಲು ನಿರ್ಧರಿಸಿದೆವು ಎಂದು ಪ್ರಸಾದ್ ಜೈನ್ ಅವರ ಕುಟುಂಬದ ಪ್ರಸಾದ್ ಜೈನ್ ಶ್ರವಣಬೆಳಗೊಳದಲ್ಲಿ ಭಾನುವಾರ ಮಾಹಿತಿ ನೀಡಿದರು.
ಅಂತೂ ಶ್ರವಣಬೆಳಗೊಳದಲ್ಲಿ ವಿಂಧ್ಯಗಿರಿಯಲ್ಲಿ ನೆಲೆನಿಂತಿರುವ 58.8 ಎತ್ತರದ ಏಕ ಶಿಲಾ ಗೊಮ್ಮಟಮೂರ್ತಿಯ ಜೊತೆಗೆ ಇನ್ನು ಮುಂದೆ 12 ಅಡಿ ಗೊಮ್ಮಟಮೂರ್ತಿಯೂ ಮತ್ತೂಂದು ಆಕರ್ಷಣೆಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alur: ವಿದ್ಯುತ್ ಶಾರ್ಟ್ ಸರ್ಕ್ಯೂಟ್- ಆಕಸ್ಮಿಕ ಬೆಂಕಿ; ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿ
Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ
Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.