ಹಸಿರು ಭೂಮಿ ಪ್ರತಿಷ್ಠಾನದ ಕಾರ್ಯ ನಿರ್ವಹಣೆಗೆ ಮೆಚ್ಚುಗೆ
ಸ್ಥಳೀಯರಿಂದಲೇ ಅರಣ್ಯ, ಕೆರೆ, ಕಟ್ಟೆಗಳ ನಿರ್ವಹಣೆ ಸೂಕ್ತ
Team Udayavani, May 20, 2019, 11:08 AM IST
ಹಾಸನ: ಮಾಯವಾಗುತ್ತಿರುವ ಕೆರೆ, ಕಟ್ಟೆಗಳನ್ನು ಪುನಶ್ಚೇತನಗೊಳಿಸಿ ಪರಿಸರ ಸಂರಕ್ಷಣೆಯ ಕೆಲಸ ಮಾಡುತ್ತಿರುವ ಹಾಸನದ ಹಸಿರು ಭೂಮಿ ಪ್ರತಿಷ್ಠಾನದ ಕಾರ್ಯನಿರ್ವಹಣೆಯ ಬಗ್ಗೆ ಸಮಾಜ ಪರಿವರ್ತನೆ ಪ್ರತಿಷ್ಠಾನದ ಅಧ್ಯಕ್ಷ, ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಆರ್.ಸಿ.ಹಿರೇಮಠ ಮೆಚ್ಚುಗೆ ವ್ಯಕ್ತಪಡಿಸಿದರು.
ಹಸಿರು ಭೂಮಿ ಪ್ರತಿಷ್ಠಾನವು ಹಾಸನ ನಗರ ಸುತ್ತ ಮುತ್ತ ಕೈಗೊಂಡಿರುವ ಕೆರೆಗಳ ಪುನಶ್ಚೇತನ ಕೆಲಸವನ್ನು ವೀಕ್ಷಸಿ ಮಾತನಾಡಿದ ಅವರು, 1864ರಲ್ಲಿ ಅರಣ್ಯ ಇಲಾಖೆ ಅರಣ್ಯ ಕಾನೂನಡಿ ಅರಣ್ಯವನ್ನು ಉಳಿಸುವ ಕಾರ್ಯಕ್ಕೆ ಮುಂದಾ ಯಿತು. ಆದರೆ ನಮ್ಮ ಸಂಸ್ಕೃತಿಯ ವೈಶಿಷ್ಟತೆ ಎಂದರೇ ಸ್ಥಳೀಯ ಜನರೇ ಅರಣ್ಯ, ಕೆರೆ, ಕಟ್ಟೆಗಳ ನಿರ್ವ ಹಣೆಯಲ್ಲಿ ತೊಡಗಬೇಕು. ಆಗ ಮಾತ್ರ ಅವುಗಳನ್ನು ಉಳಿಸಲು ಸಾಧ್ಯ ಎಂದರು.
ವ್ಯವಸ್ಥಿತ ನಿರ್ವಹಣೆ ಅಗತ್ಯ: ಪೂರ್ವ ಜರು ಹಿಂದೆ ನಿರ್ಮಿಸಿದ ಕೆರೆ, ಕಟ್ಟೆಗಳನ್ನು ಇಂದು ಪುನರುಜ್ಜೀವನಗೊಳಿ ಸುವ ಅಗತ್ಯವಿದೆ. ಯಾವುದೇ ಸಂಪ ನ್ಮೂಲಗಳು ವ್ಯವಸ್ಥಿತವಾಗಿ ನಿರ್ವಹಣೆ ಯಾಗಬೇಕಾದರೆ ಮತ್ತು ಅವುಗಳಲ್ಲಿ ಸಮಗ್ರತೆ ಇರಬೇಕಾದರೆ ಉತ್ತಮ ನಿರ್ವಹಣೆ ಇರಬೇಕು. ಸಂಸ್ಕೃತಿ ಹಾಗೂ ಪ್ರಕೃತಿ ನಡುವೆ ಸಮನ್ವಯತೆ ಇರಬೇಕು ಎಂದರು.
ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ: ನೈಸರ್ಗಿಕ ಸಂಪನ್ಮೂಲಗಳನ್ನು ಸರ್ಕಾರದ ನಿರ್ವಹಣೆಗೆ ಕೊಟ್ಟಿದ್ದೇವೆ. ಅದನ್ನು ನಮ್ಮದನ್ನಾಗಿ ಮಾಡಿಕೊಂಡು ಸಂರಕ್ಷಣೆ ಮಾಡುತ್ತಾ ಹೋದರೆ ಭ್ರಷ್ಟಾಚಾರಕ್ಕೂ ಕಡಿವಾಣ ಹಾಕಬಹುದು ಎಂದು ಹಿರೀಮಠ ಅವರು ಅಭಿಪ್ರಾಯಪಟ್ಟರು. ಹಸಿರು ಭೂಮಿ ಪ್ರತಿಷ್ಠಾನದಿಂದ ಪುನಶ್ಚೇತನಗೊಳಿಸಿರುವ ದೊಡ್ಡಕೊಂಡ ಗುಳ ಕೆರೆ, ಜವೇನಹಳ್ಳಿ ಕೆರೆ, ಚಿಕ್ಕಕಟ್ಟೆ ಕೆರೆ, ಬಿ.ಕಾಟೀಹಳ್ಳಿ ಕೆರೆ, ಗವೇನಹಳ್ಳಿ ಕೆರೆ ಸೇರಿದಂತೆ ವಿವಿಧ ಕೆರೆಗಳ ಅಭಿವೃದ್ಧಿಯನ್ನು ಎಸ್.ಆರ್. ಹಿರೇಮs್ ದಂಪತಿ ವೀಕ್ಷಣೆ ಮಾಡಿ ವಿವರ ಪಡೆದರು.
ಹಸಿರು ಭೂಮಿ ಪ್ರತಿಷ್ಠಾನದ ಅಧ್ಯಕ್ಷ ಸುಬ್ಬಸ್ವಾಮಿ, ಗೌರವಾಧ್ಯಕ್ಷ ಆರ್.ಪಿ. ವೆಂಕಟೇಶ್‌ಮೂರ್ತಿ, ಖಜಾಂಚಿ ಡಾ. ಮಂಜುನಾಥ್, ಟ್ರಸ್ಟಿ ಮಂಜುನಾಥ್ ಶರ್ಮ, ಜವೇನಹಳ್ಳಿ ಕೆರೆ ಸಂರಕ್ಷಣಾ ಸಮಿತಿಯ ಅಧ್ಯಕ್ಷ ವಿಶ್ವನಾಥ್, ಖಜಾಂಚಿ ಭರತ್‌ಭೂಷಣ್, ಸಾಮಾಜಿಕ ಕಾರ್ಯಕರ್ತ ಪುಟ್ಟಯ್ಯ ಹಾಗೂ ಚಿತ್ರಕಲಾದ ದೇಸಾಯಿ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
MUST WATCH
ಹೊಸ ಸೇರ್ಪಡೆ
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Grant Fight: ಕರ್ನಾಟಕಕ್ಕೆ ಅನ್ಯಾಯವಾದಾಗ ಎಚ್‌ಡಿಡಿ, ಎಚ್‌ಡಿಕೆ ಮಾತಾಡಿದ್ದಾರಾ?: ಸಿಎಂ
PCB: ಒಂದು ವರ್ಷದಲ್ಲಿ ಐದು ಕೋಚ್; ಪಾಕಿಸ್ತಾನ ವೈಟ್ ಬಾಲ್ ಕೋಚ್ ಆಗಿ ಆಖಿಬ್ ಜಾವೇದ್ ಆಯ್ಕೆ
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.