ಅರಕಲಗೂಡು ಜೆಡಿಎಸ್ ಅಭ್ಯರ್ಥಿ ಎ.ಮಂಜು
Team Udayavani, Feb 5, 2023, 4:45 PM IST
ಅರಕಲಗೂಡು: ಮಾಜಿ ಸಚಿವ ಎ.ಮಂಜು ಹೆಸರನ್ನು ಅರಕಲಗೂಡು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಘೋಷಣೆ ಮಾಡಿದ ಹಿನ್ನೆಲೆ ಶಾಸಕ ಎ.ಟಿ.ರಾಮಸ್ವಾಮಿ ಅವರು ಮುಂದಿನ ರಾಜಕೀಯ ನಡೆ ಕುರಿತು ನನ್ನ ಕಾರ್ಯಕರ್ತರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವೆ ಎಂದು ತಿಳಿಸುವ ಮೂಲಕ ಕ್ಷೇತ್ರದಲ್ಲಿ ನಡೆಯುತ್ತಿದ್ದ ಜೆಡಿಎಸ್ ಬಿಡುವ ಚರ್ಚೆಗಳಿಗೆ ತೆರೆ ಎಳೆದಿದ್ದಾರೆ.
ಪಟ್ಟಣದ ಕ್ರೀಡಾಂಗಣದಲ್ಲಿ ಮಾಧ್ಯಮದ ವರೊಂದಿಗೆ ಮಾತನಾಡುತ್ತ, ರಾಜಕಾರಣ ಕಲುಷಿತವಾಗಿದೆ. ಹಣವಂತರಿಗೆ ಪಕ್ಷಗಳು ಮಣೆ ಹಾಕುವ ಮೂಲಕ ಬಂಡವಾಳ ಶಾಹಿಗಳ ಕಪಿಮುಷ್ಠಿಗೆ ರಾಜಕಾರಣವನ್ನು ತಳ್ಳಿ ಪ್ರಜಾ ಪ್ರಭುತ್ವ ಆಶಯಗಳು ನೆಲಕಚ್ಚುವಂತೆ ಮಾಡಿವೆ. ಇದರ ವಿರುದ್ಧ ಸಾರ್ವಜನಿಕರು ಧ್ವನಿಎತ್ತುವ ಅನಿವಾರ್ಯತೆ ಇದೆ ಎಂದು ಹೇಳಿದರು.
ಸತ್ಯ ಪ್ರಾಮಾಣಿಕತೆಗೆ ಬೆಲೆ ಇಲ್ಲದಂತಾಗಿದೆ. ಇದನ್ನು ಮನಗಂಡು ಮತದಾರರು ಈ ವ್ಯವಸ್ಥೆಯನ್ನು ತೊಲಗಿಸುವ ಮೂಲಕ ಪ್ರಜಾ ಪ್ರಭುತ್ವವನ್ನು ಉಳಿಸುವಂತೆ ಅವರು ಮನವಿ ಮಾಡಿ, ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಲಾಬಿ ಮಾಡುತ್ತಿರುವ ಮಾಜಿ ಸಚಿವ ಎ.ಮಂಜು, ಕಾಂಗ್ರೆಸ್ ಮುಖಂಡ ಕೃಷ್ಣೇಗೌಡರ ಅವರ ಹೆಸರು ಹೇಳದೆ ಮಾರ್ಮಿಕವಾಗಿ ಕುಟುಕಿದರು. ಜೆಡಿಎಸ್ ಪಕ್ಷ ಬಿಡುವ ನಿರ್ಧಾರವನ್ನು ಎಂದೂ ಮಾಡಿರಲಿಲ್ಲ. ನಾನು ಪಕ್ಷದ ಆಂತರಿಕ ಭಿನ್ನಾಭಿಪ್ರಾಯ ಇದ್ದರೂ ಇದನ್ನು ಸರಿದೂಗಿಸಿಕೊಳ್ಳುವ ಉದ್ದೇಶದಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೊಂದಿಗೆ ಚರ್ಚಿಸುವ ನಿರ್ಣಯವನ್ನು ಕೈಗೊಂಡು ಪಕ್ಷದಲ್ಲೇ ಉಳಿಯುವ ನಿರ್ಧಾರವನ್ನು ಮಾಡಿದ್ದೆ. ಆದರೆ, ಮಾಜಿ ಸಚಿವ ಎಚ್.ಡಿ. ರೇವಣ್ಣನವರು ಎರಡು ಬಾರಿ ನಮ್ಮ ಮನೆಗೆ ಬಂದು ನನ್ನೊಂದಿಗೆ ಸಮಾಲೋಚನೆ ನಡೆಸಿದಾಗಲೂ ಕೆಲ ಸಮಸ್ಯೆಗಳಿವೆ, ದೊಡ್ಡವ ರೊಂದಿಗೆ ಚರ್ಚಿಸುವುದಾಗಿ ತಿಳಿಸಿದ್ದೇನೆಯೇ ವಿನಃ, ಪಕ್ಷ ಬಿಡುವ ಮಾತನಾಡಿರಲಿಲ್ಲ. ಇದನ್ನೇ ಮಾಧ್ಯಮದವರ ಪ್ರಶ್ನೆಗೂ ಉತ್ತರಿ ಸುವ ಮೂಲಕ ನಾನು ಇರುವ ಪಕ್ಷದಲ್ಲೇ ಸ್ಪರ್ಧಿಸುವುದಾಗಿ ತಿಳಿಸಿದ್ದೆ ಎಂದು ಹೇಳಿದರು.
ಕಾರ್ಯಕರ್ತರ ಜೊತೆ ಚರ್ಚೆ: ಆದರೆ, ಜ.22ರಂದು ಪಟ್ಟಣದಲ್ಲಿ ನಡೆದ ಕಾರ್ಯ ಕ್ರಮದ ಹಿಂದಿನ ದಿನ ಎಚ್.ಡಿ.ರೇವಣ್ಣನವರ ಮನೆಯ ಮುಂದೆ ನಡೆದ ಪ್ರತಿಭಟನೆಯಿಂದ ಮಾನಸಿಕವಾಗಿ ನೋವಾಯಿತು. ಪ್ರಾಮಾಣಿಕರಿಗೆ ಕಾಲವಲ್ಲ ಎಂದು ತಿಳಿದು, ಅಂದಿನಿಂದ ನನ್ನ ಕಾರ್ಯಕರ್ತರೊಂದಿಗೆ ಸಭೆ ನಡೆಸಿ, ನನ್ನ ರಾಜಕೀಯ ಮುಂದಿನ ನಿರ್ಧಾರದ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದೇನೆ ಎಂದು ತಿಳಿಸಿದರು.
ಉತ್ತಮ ಶಾಸಕನೆಂಬ ಹೆಗ್ಗಳಿಕೆ ಇದೆ: ನಾನು ಪ್ರಾಮಾಣಿಕನಾಗಿ ನನ್ನ ಕ್ಷೇತ್ರದ ಗೌರವವನ್ನು ಉಳಿಸಿಕೊಂಡು ರಾಜ್ಯದಲ್ಲೇ ಉತ್ತಮ ಶಾಸಕನೆಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದೇನೆ ಎಂದು ನನಗೆ ತೃಪ್ತಿ ಇದೆ. ಆದರೆ, ಕೆಲ ನನ್ನ ರಾಜಕೀಯ ಹಿತಶತ್ರುಗಳು ಕಳೆದ ಜನವರಿ 22ರಂದು ಎಚ್.ಡಿ.ರೇವಣ್ಣರವರ ಮನೆ ಮುಂದೆ ಧರಣಿ ನಡೆಸುವ ಮೂಲಕ ನನ್ನನ್ನು ಅಪ್ರಾಮಾಣಿಕ, ಪಕ್ಷ ವಿರೋಧಿ ಎಂದು ಆರೋಪಿಸುವ ಮೂಲಕ ನನಗೆ ಟಿಕೆಟ್ ನೀಡದಂತೆ ಧರಣಿ ನಡೆಸಿದರು ಎಂದು ವಿವರಿಸಿದರು. ಅಂತಹ ಒಳ್ಳೆಯವರೊಂದಿಗೆ ನಾನು ಈಗಲೂ ಮುಂದುವರಿಯುವುದು ಅಸಾಧ್ಯ. ಬಹುತೇಕ
ಪಕ್ಷದಿಂದ ದೂರ ಉಳಿಯುವ ನಿರ್ಧಾರವನ್ನು ಕೈಗೊಂಡಿದ್ದೇನೆ. ಮುಂದಿನ ನಿರ್ಣಯವನ್ನು ನನ್ನ ಕಾರ್ಯಕರ್ತರೊಂದಿಗೆ ಚರ್ಚಿಸುವೆ ಎಂದು ತಿಳಿಸುವ ಮೂಲಕ ಭಾವುಕರಾಗಿ ನುಡಿದರು.
ನಾನು ಎಚ್ಡಿಕೆ ಹೇಳಿಕೆ ಸ್ವೀಕರಿಸುತ್ತೇನೆ : ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಜೆಡಿಎಸ್ ಶಾಸಕರಿರುವಾಗಲೇ ತಮ್ಮನ್ನು ಪಕ್ಷಕ್ಕೆ ಬರಮಾಡಿಕೊಂಡ ವಿಚಾರವನ್ನು ಮಾಜಿ ಮುಖ್ಯಮಂತ್ರಿ ಎಚ್ .ಡಿ.ಕುಮಾರಸ್ವಾಮಿ ಅವರನ್ನೇ ಕೇಳಬೇಕು ಮಾಜಿ ಸಚಿವ ಎ.ಮಂಜು ಹೇಳಿದರು. ತಾಲೂಕಿನ ಗಡಿಭಾಗ ಕಳ್ಳಿಮುದ್ದನಹಳ್ಳಿ ಗ್ರಾಮದ ಬಳಿ ಸುದ್ದಿಗಾರರಿಗೆ ಮಾತನಾಡಿದ ಅವರು, ನಾನು ಜೆಡಿಎಸ್ ಅಧ್ಯಕ್ಷನಲ್ಲ. ಅರಕಲಗೂಡು ತಾಲೂಕಿನಲ್ಲಿ ಕಾಂಗ್ರೆಸ್ ಕಟ್ಟಿದವನು ಎ.ಮಂಜು. ರಾಜಕಾರಣದಲ್ಲಿ ಯಾರ್ಯಾರು ಏನೇನ್ ಆಗ್ತಾರೋ ಎಂಬುದನ್ನು ಹೇಳಲು ಅಸಾಧ್ಯ. ಯಾವತ್ತೂ ದ್ವೇಷದ ರಾಜಕಾರಣ ಮಾಡಬಾರದು. ನಾನು ಕುಮಾರಸ್ವಾಮಿ ಅವರನ್ನು ಭೇಟಿ ಆಗಿದ್ದು ನಿಜ, ಮಾತನಾಡಿದ್ದು ನಿಜ, ನನ್ನ ಆಧ್ಯತೆ ಕಾಂಗ್ರೆಸ್‌ಗೆ ಕೊಟ್ಟಿದ್ದು ಕೂಡ ನಿಜ. ಕುಮಾರಸ್ವಾಮಿ ಅವರು ನನಗೆ ಆಫರ್ ಮಾಡಿಕೊಟ್ಟಿರುವುದಕ್ಕೆ ಕುಮಾರಸ್ವಾಮಿ, ದೇವೇಗೌಡರು, ರೇವಣ್ಣ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ನನ್ನ ಮಗನಿಗೆ ಹೇಳ್ಳೋದು ಇಷ್ಟೇ ನನ್ನ ತತ್ವ ಸಿದ್ಧಾಂತದಲ್ಲಿ ಬದಲಾವಣೆ ಇಲ್ಲ. ಅವನಿಗೆ ಒಳ್ಳೆಯದಾಗಲಿ, ಅಂತ ಹಾರೈಸುತ್ತೇನೆ. ನನ್ನ ಫಾಲೋ ಮಾಡಿದ್ರೆ ಅವನಿಗೆ ಒಳ್ಳೆಯದು ಅಂತ ನನ್ನ ಭಾವನೆ. 1994ನೇ ಇಸವಿಯಲ್ಲಿ ದೇವೇಗೌಡರಿಗೆ ಸಹಾಯ ಮಾಡಿದ್ದೆ. ಮೂರು ಸಾವಿರ ಓಟಿನಲ್ಲಿ ಗೆದ್ದಾಗ ನಾನು ಸಹಾಯ ಮಾಡಿದ್ದೇನೆ. ನನಗೆ ರಾಜಕೀಯದಲ್ಲಿ ಶತ್ರುನೂ ಇಲ್ಲ, ಮಿತ್ರನೂ ಇಲ್ಲ. ನಾನು ಕುಮಾರಸ್ವಾಮಿ ಹೇಳಿರುವುದನ್ನು ಸ್ವೀಕರಿಸುತ್ತೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.