ನಾಲೆಗಳೇ ಜೀವಜಲದ ರಕ್ಷಾ ಕವಚ
Team Udayavani, Apr 11, 2021, 5:01 PM IST
ಅರಕಲಗೂಡು: ತಾಲೂಕು ಅರಮಲೆನಾಡು ಪ್ರದೇಶವಾಗಿದ್ದು, ತಾಪಮಾನವೂ ಕಡಿಮೆ ಇದೆ.ತಾಲೂಕಿನ ಎಡಬಾಗದಲ್ಲಿ ಹೇಮಾವತಿ ಬಲಬಾಗದಲ್ಲಿ ಕಾವೇರಿ ನದಿಯು ಹರಿಯುತ್ತಿರುವುದರಿಂದ ಈ ನದಿಗಳಿಂದ ತಾಲೂಕಿನ ಶೇ. 53 ಭೂವಿಸ್ತೀರ್ಣ ನೀರಾವರಿ ಪ್ರದೇಶವಾಗಿದೆ. ಹೀಗಾಗಿ ಕುಡಿವ ನೀರಿನ ಹಾಗೂ ಅಂತರ್ಜಲ ಸಮಸ್ಯೆ ಕಡಿಮೆ ಎನ್ನಬಹುದು.
ತಾಲೂಕಿನ 5 ಹೋಬಳಿಗಳಲ್ಲಿಯೂ ನಾಲೆಗಳ ಮೂಲಕ ಬಹುತೇಕ ಕೆರೆಕಟ್ಟೆಗಳಿಗೆ ನೀರುತುಂಬಿಸಲಾಗುತ್ತಿದೆ. ಆದರೆ ತಾಲೂಕಿನ ಕೆಲ ಗ್ರಾಪಂವ್ಯಾಪ್ತಿಯಲ್ಲಿ ಎತ್ತರ ಪ್ರದೇಶದಲ್ಲಿರುವ 8 ರಿಂದ 10ಗ್ರಾಮಗಳಲ್ಲಿ ಸಮಸ್ಯೆ ಗೋಚರಿಸುತ್ತಿದೆ. ಆದರೆಮುಂಗಾರು ಮಳೆ ಪ್ರಾರಂಭ ನಿದಾನಗತಿಯಾದರೆ ಆಗ 30 ರಿಂದ 40 ಗ್ರಾಮಗಳು ಅಂತರ್ಜಲದ ಕೊರತೆಯನ್ನ ಎದುರಿಸಬೇಕಾಗುತ್ತದೆ.
ಪಪಂ ವ್ಯಾಪ್ತಿಯಲ್ಲಿ 17 ವಾರ್ಡಗಳಿದ್ದು, ಈ ಎಲ್ಲಾವಾರ್ಡಗಳಲ್ಲಿಯೂ ನೀರಿನ ಕೊರತೆ ಎಂದೂ ಮರುಕಳಿಸದಂತೆ ಕಳೆದ ದಶಕಗಳಿಂದ ಮುಂಜಾಗ್ರತೆ ವಹಿಸಿ ಹೇಮಾವತಿ ನೀರನ್ನು ಸಂಗ್ರಹಿಸುವ ಮೂಲಕಪಟ್ಟಣದ ಸಾರ್ವಜನಿಕರಿಗೆ ಸಮರ್ಪಕವಾಗಿ ಕುಡಿವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ. ಮಾಜಿ ಪ್ರದಾನಿ ಎಚ್.ಡಿ. ದೇವೇಗೌಡರವರು 10 ವರ್ಷಗಳ ಹಿಂದೆಯೇ 10 ಕೋಟಿ ವೆಚ್ಚದಲ್ಲಿ 2030 ರವರೆಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸದಂತೆ ಅಗತ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ.
ಜತೆಗೆ ಇಂದು ತಾಲೂಕಿನ ಜನತೆ ಕುಡಿಯುವ ನೀರಿನ ಸಮಸ್ಯೆಯಿಂದ ರಕ್ಷಿತರಾಗಿದ್ದಾರೆ ಎಂದರೆ ರಾಜ್ಯದಲ್ಲಿ ನೀರಾವರಿ ತಜ್ಞರೆಂದೇ ಹೆಸರು ಗಳಿಸಿದ ಮಾಜಿ ಸಚಿವ ಎಚ್. ಎನ್. ನಂಜೇಗೌಡ, ಕೆ.ಬಿ. ಮಲ್ಲಪ್ಪ, ಎ. ಮಂಜು ಹಾಗೂ ಶಾಸಕ ಎ.ಟಿ. ರಾಮಸ್ವಾಮಿಯವರ ಶ್ರಮವನ್ನ ತಾಲೂಕಿನ ಜನ ಮರೆಯುವಂತಿಲ್ಲ.
ಕುಡಿಯುವ ನೀರಿನ ಸಮಸ್ಯೆಯ ಗ್ರಾಮಗಳು:ತಾಲೂಕಿನ ಈ ಎರಡು ನದಿಗಳ ಮಧ್ಯದ ಎತ್ತರಪ್ರದೇಶದಲ್ಲಿರುವ ವಿಜಾಪುರ ಅರಣ್ಯ, ಕತ್ತಿಮಲ್ಲೇನಹಳ್ಳಿ,ಸಂತೆಮರೂರು, ಯಲಗತವಳ್ಳಿ, ಕೊರಟೀಕೆರೆ ಗ್ರಾಪಂವ್ಯಾಪ್ತಿಯ ಕೆಲ ಗ್ರಾಮಗಳು ಸಮಸ್ಯೆಗೆ ಈಡಾಗುತ್ತವೆ.
ಮುಂಗಾರು ವಿಳಂಬವಾದರೆ 50 ಗ್ರಾಮಗಳ ಅಂತರ್ಜಲ ಕುಸಿತ: ಬೇಸಿಗೆ ತಾಪಮಾನ ಅಧಿಕವಾದಂತೆ ಕೆರಕಟ್ಟೆಗಳಲ್ಲಿ ನೀರ ಬತ್ತಿ ಹೋದರೆ, ತಾಲೂಕಿನಲ್ಲಿ ಆಗ ಕುಡಿಯುವ ನೀರಿನ ಸಮಸ್ಯೆಉಲ್ಬಣವಾಗುತ್ತದೆ. ಈ ಸಮಸ್ಯೆ ಎದುರಾಗಬೇಕಾದರೆ ಜುಲೈವರೆಗೂ ಮಳೆ ಬೀಳದಿದ್ದಾಗ ಇಂತಹಸಮಸ್ಯೆಕಾಣಿಸಿಕೊಳ್ಳುತ್ತದೆ. 2018-19 ರಲ್ಲಿ 14ಗ್ರಾಮಗಳು ಈ ಸಮಸ್ಯೆಯನ್ನ ಎದುರಿಸಿದ್ದವು.2019-20 ನೇ ಸಾಲಿನಲ್ಲಿ ಒಂದೇ ಒಂದು ಗ್ರಾಮವು ಸಮಸ್ಯೆಗೆ ತುತ್ತಾಗಿರಲಿಲ್ಲ. ಆ ದರೆ ಈಗಿನ ಬಿಸಿಲಿನತಾಪಮಾನ ಅದಿಕವಾಗಿರುವುದರಿಂದ ತಾಲೂಕಿನ ಮೂರು ಗ್ರಾಮಗಳಲ್ಲಿ ಕೊಳವೆ ಬಾವಿಗಳುಸ್ಥಗಿತಗೊಂಡಿದೆ ಎನ್ನುವುದು ಬಿಟ್ಟರೆ ಬೇರೆ ಸಮಸ್ಯೆ ಕಂಡುಬಂದಿಲ್ಲ.
ಸಮಸ್ಯೆ ಎದುರಿಸಲು ಸನ್ನದ್ಧ: 10 ರಿಂದ 15 ಗ್ರಾಮಗಳಲ್ಲಿ ಕೇವಲ ಅಂತರ್ಜಲ ಸಮಸ್ಯೆಯಿಂದ ತೊಂದರೆ ಯಾಗುವ ಸಾಧ್ಯತೆಗಳಿವೆ. ಅಂತಹಗ್ರಾಮಗಳಿಗೆ ಈಗಾಗಲೇ ಗ್ರಾಪಂ ಅಧಿಕಾರಿಗಳಿಗೆ ಜಾಗೃತಿ ವಹಿಸಲು ಆದೇಶಿಸಲಾಗಿದೆ ಎಂದುತಾಲೂಕು ವಿಪತ್ತು ನಿರ್ವಹಣಾ ಸಮಿತಿ ತಿಳಿಸಿದೆ.
ನಾಲೆಗಳ ಮೂಲಕ ಕೆರೆಕಟ್ಟೆಗಳಿಗೆ ನೀರು: ತಾಲೂಕಿನಎರಡು ದಡದಲ್ಲಿಯೂ ಹೇಮಾವತಿ ಕಾವೇರಿ ಸಾಗುತ್ತಿರುವುದರಿಂದ ಈ ಎರಡು ನದಿಗಳಮಧ್ಯಭಾಗದ ಎತ್ತರ ಪ್ರದೇಶಗಳಲ್ಲಿ ಇರುವಗ್ರಾಮಗಳಿಗೆ ಕುಡಿವ ನೀರು ಹಾಗೂ ಅಂತರ್ಜಲಬತ್ತದಂತೆ ನಾಲೆಗಳ ಮೂಲಕ ಕೆರೆಕಟ್ಟೆಗಳಿಗೆ ನೀರುತುಂಬಿಸಲಾಗುತ್ತದೆ. ಹೇಮಾವತಿ ನದಿಯ ಆಶ್ರಯದಲ್ಲಿ ಬಲದಂಡಾ ನಾಲಾ, ಬೋರಣ್ಣ ಗೌಡನಾಲೆಗಳನ್ನ ಒಳಗೊಂಡಂತೆ, ಅಡಿಕೆ ಬೊಮ್ಮನಹಳ್ಳಿ ಏತ ನೀರಾವರಿ, ಮುದಿಗೆರೆ ಏತನೀರಾವರಿ, ಗಂಗನಾಳು ಏತ ನೀರಾವರಿ ಹಾಗೂ ಮಲ್ಲಿಪಟ್ಟಣ ಏತ ನೀರಾವರಿ ಮೂಲಕ ಮಳೆ ಆಶ್ರಯ ಕೆರೆಗಳಿಗೆ ನದಿಯ ನೀರು ಹರಿಸಲಾಗುತ್ತದೆ. ಇನ್ನೂ ಮಲ್ಲಿಪಟ್ಟಣ ಏತ ನೀರಾವರಿ ಹಾಗೂ ಗಂಗನಾಳು ಏತನೀರಾವರಿಯ ಕಾಮಗಾರಿ ಪ್ರಗತಿಯಲ್ಲಿವೆ.ರಾಮನಾಥಪುರ ಮತ್ತು ಕೊಣನೂರು ಹೋಬಳಿಗಳಿಗೆ ಹಾರಂಗಿ ಎಡದಂಡೆ ನಾಲೆಯಿಂದ ನೀರು ಆಎರಡು ಹೋಬಳಿಗಳಿಗೆ ಹರಿಯುತ್ತಿರುವುದರಿಂದ ಆ ವ್ಯಾಪ್ತಿಗೂ ನೀರಿಗೆ ತೊಂದರೆಯಾಗುತ್ತಿಲ್ಲ.
ಅರಕಗೂಡು ತಾಲೂಕಿನಲ್ಲಿ ಮಲ್ಲಿಪಟ್ಟಣಹಾಗೂ ಗಂಗನಾಳು ಏತನೀರಾವರಿಯ ಕಾಮಗಾರಿ ಪ್ರಗತಿಯಲ್ಲಿದ್ದು, ಇವುಗಳುಪೂರ್ಣಗೊಂಡರೆ ಶೇ. 85 ತಾಲೂಕು ನೀರಾವರಿಪ್ರದೇಶವಾಗುತ್ತದೆ. ಇಷ್ಟೆಲ್ಲಾನೀರಾವರಿ ಸೌಲಭ್ಯವಿರುವಕಾರಣ ಸಮಸ್ಯೆ ಎದರಾಗಿಲ್ಲ. ಅದರೂ, ಪ್ರತಿಗ್ರಾಪಂಗೆ 15ನೇಹಣಕಾಸಿನಲ್ಲಿ ಕುಡಿಯುವನೀರಿಗೆ ಅನುದಾನಬಳಸಿಕೊಳ್ಳುವಂತೆ ಆದೇಶಿಸಿರುವುದರಿಂದ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲಾಗುವುದು. ● ಎ.ಟಿ. ರಾಮಸ್ವಾಮಿ, ಶಾಸಕರು
ಎರಡು ನದಿಗಳು ತಾಲೂಕಿನಲ್ಲಿಹರಿಯುತ್ತಿರುವುದರಿಂದ ಉಪನಾಲೆಗಳುಏತ ನೀರಾವರಿ ಮೂಲಕ ಕೆರೆಕಟ್ಟೆಗಳಿಗೆ ನೀರುತುಂಬಿಸಲಾಗಿದೆ. ಆದರೆ, ಕೆಲ ಗ್ರಾಮಗಳು ಎತ್ತರಪ್ರದೇಶದಲ್ಲಿರುವ ಕಾರಣಕುಡಿವ ನೀರಿನ ಸಮಸ್ಯೆಕಾಣಸಿಗುತ್ತದೆ. ಆದಕ್ಕೆ ಪರಿಹಾರಕಲ್ಪಿಸಲಾಗುವುದು.ತಾಲೂಕಿನಲ್ಲಿ 1,066ಕೆರೆಗಳಿದ್ದು, ಇವುಗಳಲ್ಲಿ160 ಕೆರೆಗಳ ಹೂಳೆತ್ತಿಸುವ ಮೂಲಕ ನೀರು ಸಂಗ್ರಹಿಸಲಾಗಿದೆ. ● ರೇಣುಕುಮಾರ್, ತಹಶೀಲ್ದಾರ್
– ಅರಕಲಗೂಡು ಶಂಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.