![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Sep 1, 2020, 3:17 PM IST
ಹಾಸನ: ಕೋವಿಡ್ ದಿಂದ ಸೀಲ್‌ಡೌನ್ ಆಗಿದ್ದ ಮನೆಯಲ್ಲಿ ನಗದು, ಚಿನ್ನಾಭರಣಗಳನ್ನು ಕಳವು ಮಾಡಿದ್ದ ಆರೋಪಿ ಮನೆ ಕೆಲಸದವನನ್ನು ಬಂಧಿಸಿರುವ ಅರಕಲಗೂಡು ತಾಲೂಕು ಕೊಣನೂರು ಪೊಲೀಸರು ಆತಬಿಂದ 20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 20 ಸಾವಿರ ರೂ. ನಗದು ವಶಪಡಿಸಿ ಕೊಂಡಿದ್ದಾರೆ.
ಅರಕಲಗೂಡು ತಾಲೂಕು, ದೊಡ್ಡ ಮಗ್ಗೆ ಹೋಬಳಿ ಹಾನಗಲ್ ಗ್ರಾಮದ ಕುಶಕುಮಾರ್ ಅವರ ಸಹೋದರ ಲವಕುಮಾರ್ ಕೋವಿಡ್ ದಿಂದ ಸಾವನ್ನಪ್ಪಿದ್ದರಿಂದ ಕುಶಕುಮಾರ್ ಮನೆಯನ್ನು 14 ದಿನ ಸೀಲ್‌ಡೌನ್ ಮಾಡಲಾಗಿತ್ತು. ಈ ಪರಿಣಾಮ ಕುಶಕುಮಾರ್ ಕುಟುಂಬದವರು ತಾತ್ಕಾಲಿಕವಾಗಿ ಅವರ ಹಿರಿಯ ಸಹೋದರ ನಾಗೇಂದ್ರ ಅವರ ಮನೆಯಲ್ಲಿ ವಾಸವಾಗಿದ್ದರು. ಆದರೆ ಆ.23ರ ರಾತ್ರಿ ಕುಶಕುಮಾರ್ ಅವರ ಮನೆಯ ಹಿಂಬಾಗಿಲ ಮುರಿದು 533 ಗ್ರಾಂ ಚಿನ್ನಾಭರಣ, ಒಂದು ಲಕ್ಷ ರೂ. ಬೆಳ್ಳಿ ಆಭರಣ, 60 ಸಾವಿರ ರೂ. ನಗದು ಕಳವು ಮಾಡಲಾಗಿತ್ತು.
ಈ ಪ್ರಕರಣದ ತನಿಖೆಗಾಗಿ ನೇಮಕವಾಗಿದ್ದ ಅರಕಲಗೂಡು ಠಾಣೆ ಇನ್‌ಸ್ಪೆಕ್ಟರ್ ದೀಪಕ್ ಮತ್ತು ಕೊಣನೂರು ಠಾಣೆ ಪಿಎಸ್‌ಐ ಸಾಗರ್ ನೇತೃತ್ವದ ವಿಶೇಷ ಪೊಲೀಸ್ ತಂಡ ಮಾಹಿತಿ ಸಂಗ್ರಹಿಸಿ ಹಾನಗಲ್ ಗ್ರಾಮದ ಎಚ್.ಆರ್.ವೆಂಕಟೇಶ್ (39) ಎಂಬಾತನನ್ನು ಬಂಧಿಸಿ ಆತ ಕುಶಕುಮಾರ್ ಅವರ ಮನೆಯಲ್ಲಿ ಕಳವು ಮಾಡಿದ್ದ ಆಭರಣಗಳ ಪೈಕಿ 410 ಗ್ರಾಂ ಚಿನ್ನಾಭರಣ, 3 ಕೆ.ಜಿ. ಬೆಳ್ಳಿ ಆಭರಣ ಹಾಗೂ 20 ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ ಎಂದು ಎಸ್ಪಿ ಶ್ರೀನಿವಾಸಗೌಡ ಮಾಹಿತಿ ನೀಡಿದರು.
ಆರೋಪಿ ವೆಂಕಟೇಶ್ ಕುಶಕುಮಾರ್ ಅವರ ಮನೆಯಲ್ಲಿಯೇ ಕೆಲಸ ಮಾಡಿಕೊಂಡಿದ್ದ. ಮನೆ ಸೀಲ್‌ಡೌನ್ ಆಗಿದ್ದ ಸಮಯವನ್ನು ನೋಡಿ ಕೊಂಡು ಕಳ್ಳತನ ಮಾಡಿದ್ದ. ಈ ಪ್ರಕರಣದಲ್ಲಿ ಆರೋಪಿ ಬಂಧಿಸಲು ಶ್ರಮಿಸಿದ ಇನ್‌ಸ್ಪೆಕ್ಟರ್ ದೀಪಕ್, ಪಿಎಸ್‌ಐ ಸಾಗರ್, ಸಿಬ್ಬಂದಿ ರಾಜಶೆಟ್ಟಿ, ಪ್ರಕಾಶ, ಶಿವಕುಮಾರ್, ನಂದೀಶ, ಮಹೇಶ, ಶ್ರೀನಿವಾಸ, ಪುರುಷೋತ್ತಮ, ಸುರೇಶ್, ಸಣ್ಣೇಗೌಡ, ಎಸ್ಪಿ ಕಚೇರಿಯ ತಾಂತ್ರಿಕ ವಿಭಾಗದ ಪಿರ್‌ಸಾಬ್ ಅವರಿಗೆ ಬಹುಮಾನ ಘೋಷಿಸಲಾಗಿದೆ ಎಂದು ತಿಳಿಸಿದರು.
R. Ashok: ನವೆಂಬರ್ ಬಳಿಕ ಕಾಂಗ್ರೆಸ್‌ನಲ್ಲಿ ಜ್ವಾಲಾಮುಖಿ ಸ್ಫೋ*ಟ: ಅಶೋಕ್
R. Ashok: ಮೈಸೂರು ಕೇಸ್‌ನಲ್ಲಿ ಪೊಲೀಸರೇ ಅಪರಾಧಿಗಳಾಗ್ತಾರೆ; ಆರ್.ಅಶೋಕ್
ಇಂದು ಎತ್ತಿನಹೊಳೆ ವೈಮಾನಿಕ ಪರಿವೀಕ್ಷಣೆ ನಡೆಸುವ ಡಿಸಿಎಂ
Arsikere: ಮದುವೆಗೆ ಪ್ರಿಯತಮೆ ನಿರಾಕರಣೆ; ಯುವಕ ಸಾವು
ಕಾಂಗ್ರೆಸ್‌ಗೆ 136 ಸ್ಥಾನವಿದ್ದರೂ ಜೆಡಿಎಸ್ ಶಾಸಕರ ಸೆಳೆಯೋ ದುಸ್ಥಿತಿ: ಎಚ್.ಡಿ.ರೇವಣ್ಣ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.