11 ಲಕ್ಷ  ರೂ. ದೋಚಿದ್ದ ಖದೀಮರಿಬ್ಬರ ಬಂಧನ

Team Udayavani, Feb 6, 2022, 1:07 PM IST

11 ಲಕ್ಷ  ರೂ. ದೋಚಿದ್ದ ಖದೀಮರಿಬ್ಬರ ಬಂಧನ

ಹಾಸನ: ಮದ್ಯ ಸೇವಿಸಿ ಪೆಟ್ರೋಲ್‌ ಬಂಕ್‌ನಲ್ಲಿ ಮಲಗಿದ್ದ ನೌಕರನೊಬ್ಬನಿಂದ 11 ಲಕ್ಷ ರೂ. ದೋಚಿದ್ದ ಇಬ್ಬರು ಯುವಕರನ್ನು ಹಾಸನದ ಕೆ.ಆರ್‌ .ಪುರಂ ಪೊಲೀಸರು ಬಂಧಿಸಿ, 9.12 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ.

ಪ್ರಕರಣದ ವಿವರ: ಹಾಸನ ತಾಲೂಕು ಜೋಡಿ ಕೃಷ್ಣಾಪುರ ಗ್ರಾಮದ ನಿವಾಸಿ ಸೆಸ್ಕ್ ನೌಕರ ಸಂತೋಷ್‌ಅವರು ಮನೆ ನಿರ್ಮಾಣಕ್ಕೆ ಮಂಜೂರಾಗಿದ್ದ ಮೊತ್ತದಲ್ಲಿ ಹಾಸನದ ರಿಂಗ್‌ ರಸ್ತೆಯ ಎಸ್‌ಬಿಐ ಬ್ಯಾಂಕ್‌ ಶಾಖೆಯಲ್ಲಿ ಕಳೆದ ಜ.27ರಂದು ಡ್ರಾ ಮಾಡಿಕೊಂಡು ಮನೆಗೆ ಹೊರಟಿದ್ದರು. ಮನೆಗೆಹೋಗುವ ಮುನ್ನ ಬಾರ್‌ವೊಂದರಲ್ಲಿ ಕುಡಿಯುತ್ತಿ ದ್ದಾಗ ಅದೇ ಗ್ರಾಮದ ಪ್ರಸನ್ನ ಎಂಬಾತನೂ ಕುಡಿಯುತ್ತಿದ್ದಾಗ ಸಂತೋಷ್‌ ಬಳಿ ದೊಡ್ಡ ಮೊತ್ತ ಇರುವುದನ್ನು ಗಮನಿಸಿದ್ದ. ಅಲ್ಲಿಗೆ ತನ್ನ ಸ್ನೇಹಿತ ಕ್ಯಾತನಹಳ್ಳಿ ಗ್ರಾಮದ ಮಂಜುನಾಥ ಎಂಬಾತನನ್ನೂ ಪ್ರಸನ್ನ ಕರೆಸಿಕೊಂಡು ಸಂತೋಷನ ಬಳಿ ಇರುವ ಹಣ ದೋಚುವ ಸಂಚು ರೂಪಿಸಿದ.

ಸಂಜೆವರೆಗೂ ಕಂಠಪೂರ್ತಿ ಕುಡಿದು ತೂರಾಡುತ್ತಾ ಜೋಡಿ ಕೃಷ್ಣಾಪುರಕ್ಕೆ ಬೈಕ್‌ನಲ್ಲಿ ಸಂತೋಷ್‌ ಹೊರಡುತ್ತಿದ್ದಂತೆ ಪ್ರಸನ್ನ ಮತ್ತು ಮಂಜುನಾಥ್‌ ಕೂಡ ತಮ್ಮ ಬೈಕ್‌ನಲ್ಲಿ ಸಂತೋಷ್‌ ಬೈಕ್‌ನ್ನು ಹಿಂಬಾಲಿಸಿದರು. ಮಾರ್ಗ ಮಧ್ಯೆ ಹಾಸನದ ಹೊರ ವಲಯ, ಅರಸೀಕೆರೆರಸ್ತೆಯಲ್ಲಿರುವ ಕೇಂದ್ರೀಯ ವಿದ್ಯಾಲಯದಸಮೀಪದ ಪೆಟ್ರೋಲ್‌ ಬಂಕ್‌ನಲ್ಲಿ ಬೈಕ್‌ಗೆ ಪೆಟ್ರೋಲ್‌ತುಂಬಿಸಲು ಹೋದ ಸಂತೋಷ್‌, ಪೆಟ್ರೋಲ್‌ಹಾಕಿಸಿಕೊಂಡು ಹೊರಡುವಷ್ಟರಲ್ಲಿ ಮದ್ಯದಅಮಲು ಏರಿದ್ದರಿಂದ ಹೋಗಲು ಸಾಧ್ಯವಾಗದೆ ಪೆಟ್ರೋಲ್‌ ಬಂಕ್‌ನಲ್ಲಿಯೇ ಮಲಗಿದ. ಅಲ್ಲಿಯ ವರೆಗೂ ಸಂತೋಷ್‌ನನ್ನು ಹಿಂಬಾಲಿಸಿಕೊಂಡು ಹೋಗಿದ್ದ ಪ್ರಸನ್ನ ಮತ್ತು ಮಂಜುನಾಥ್‌ ಪೆಟ್ರೋಲ್‌ ಬಂಕ್‌ ಹೊರಗಡೆಯೇ ಬೈಕ್‌ ನಿಲ್ಲಿಸಿಕೊಂಡು ನೋಡುತ್ತಿದ್ದರು.

ಮಾತನಾಡಲು ಸಾಧ್ಯವಾಗದ ಪ್ರಮಾಣದಲ್ಲಿ ಕುಡಿದಿದ್ದ ಸಂತೋಷ್‌ನ ಬಳಿ ಕವರ್‌ನಲ್ಲಿ ಹಣ ಇದ್ದುದನ್ನು ನೋಡಿದ್ದ ಬಂಕ್‌ನಲ್ಲಿ ಕೆಲಸ ಮಾಡುವ ಹುಡುಗ ಪೆಟ್ರೋಲ್‌ ಬಂಕ್‌ ಮಾಲೀಕನಿಗೆ ಫೋನ್‌ ಮಾಡಿ ತಿಳಿಸಿದ್ದ. ಹಣದ ಕವರನ್ನು ಜೋಪಾನವಾಗಿಡು. ಮಲಗಿರುವ ಯುವಕನ ಬಳಿ ಮೊಬೈಲ್‌ ಇದ್ದರೆ ಆ ಮೊಬೈಲ್‌ನ ಕರೆಗಳನ್ನು ಆಧರಿಸಿ ಮನೆಯವರಿಗೆ ಫೋನ್‌ ಮಾಡಿ ತಿಳಿಸು ಎಂದು ಮಾಲೀಕರು ಸೂಚಿಸಿದ್ದಾರೆ.

ಆದರೆ, ಸಂತೋಷ್‌ನ ಮೊಬೈಲ್‌ ನಂಬರ್‌ ಲಾಕ್‌ ಆಗಿದ್ದರಿಂದ ಪೆಟ್ರೋಲ್‌ ಬಂಕ್‌ನ ಹುಡುಗ ಸಂತೋಷ್‌ ಕಡೆಯವರಿಗೆ ಫೋನ್‌ ಮಾಡಲು ಸಾಧ್ಯವಾಗಲಿಲ್ಲ. ಬಂಕ್‌ನ ಕೊಠಡಿಯಲ್ಲಿ ಚಾರ್ಜ್‌ಗೆ ಹಾಕಿದ್ದ ತನ್ನ ಮೊಬೈಲ್‌ನ್ನು ತರಲು ಪೆಟ್ರೋಲ್‌ ಬಂಕ್‌ ಹುಡುಗ ಕೊಠಡಿಗೆ ಹೋದಾಗ, ಪೆಟ್ರೋಲ್‌ ಬಂಕ್‌ ಹೊರಗೆ ಕಾಯುತ್ತಾ ನಿಂತಿದ್ದ ಪ್ರಸನ್ನ ಮತ್ತು ಮಂಜುನಾಥ ತಕ್ಷಣವೇ ಸಂತೋಷ್‌ನಬಳಿ ಹೋಗಿ ಹಣದ ಕವರ್‌ ತೆಗೆದುಕೊಂಡು ಪರಾರಿಯಾಗಿದ್ದಾರೆ. ಅದನ್ನು ಗಮನಿಸಿದ ಬಂಕ್‌ನ ಹುಡುಗ ತಕ್ಷಣವೇ ತನ್ನ ಮೊಬೈಲ್‌ನಿಂದ ಪೊಲೀಸರಿಗೆ ಕರೆ ಮಾಡಿ, ಪೆಟ್ರೋಲ್‌ ಬಂಕ್‌ನಲ್ಲಿ ನಡೆದ ಪ್ರಕರಣದ ವಿವರ ನೀಡಿದ್ದಾನೆ.

ಸ್ಥಳಕ್ಕಾಗಿಮಿಸಿದ ಕೆ.ಆರ್‌.ಪುರಂ ಬಡಾವಣೆ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಕೃಷ್ಣರಾಜು ಮತ್ತು ಸಿಬ್ಬಂದಿ ಪೆಟ್ರೋಲ್‌ ಬಂಕ್‌ ಹುಡುಗನ ಹೇಳಿಕೆ ಪಡೆದು ಪಾನ ಮತ್ತನಾಗಿ ಮಲಗಿದ್ದ ಸಂತೋಷ್‌ ಮತ್ತು ಪೆಟ್ರೋಲ್‌ಬಂಕ್‌ನ ಸಿಸಿ ಕ್ಯಾಮೆರಾದ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಸಂತೋಷ್‌ನಿಂದ 11 ಲಕ್ಷ ರೂ. ನಗದು ಎಗರಿಸಿದ್ದ ಪ್ರಸನ್ನ ಮತ್ತು ಮಂಜುನಾಥ್‌ ಸಿಕ್ಕಿ ಬಿದ್ದಿದ್ದಾರೆ. ಆರೋಪಿಗಳಿಬ್ಬರನ್ನೂ ಬಂಧಿಸಿರುವ ಪೊಲೀಸರು 9.12 ಲಕ್ಷ ರೂ. ನಗದು, ಎರಡು ಮೊಬೈಲ್‌ ಫೋನ್‌ಗಳು, ಒಂದು ಬೈಕ್‌ನ್ನು ಆರೋಪಿ ಗಳಿಂದ ವಶಪಡಿಸಿಕೊಂಡಿದ್ದಾರೆ.

ಟಾಪ್ ನ್ಯೂಸ್

CM-Meeting

Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ

Naxal–Cm

ನಕ್ಸಲರನ್ನು ಅಮಿತ್‌ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು

Naxal-encounter-Vikram-1

Naxal Package: “ಮೊದಲೇ ಪ್ಯಾಕೇಜ್‌ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ

Birth-Certi

Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

ದ್ವೇಷದ ರಾಜಕಾರಣ ಸುಡುವ ಕಾಲ ಸನ್ನಿಹಿತ: ಸೂರಜ್‌ ರೇವಣ್ಣ

ದ್ವೇಷದ ರಾಜಕಾರಣ ಸುಡುವ ಕಾಲ ಸನ್ನಿಹಿತ: ಸೂರಜ್‌ ರೇವಣ್ಣ

9-

ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ದಿಢೀರ್‌ ಕಾಣಿಸಿಕೊಂಡ ಬೆಂಕಿ; ತಪ್ಪಿದ ಭಾರಿ ಅನಾಹುತ

Hasana: ಕರೆಯನ್ನು ಸ್ವೀಕರಿಸದ ಪ್ರಿಯಕರಗೆ ಚಾಕು ಇರಿದು ಪ್ರಿಯತಮೆ ಪರಾರಿ

Hasana: ಕರೆಯನ್ನು ಸ್ವೀಕರಿಸದ ಪ್ರಿಯಕರಗೆ ಚಾಕು ಇರಿದು ಪ್ರಿಯತಮೆ ಪರಾರಿ

Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ

Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

CM-Meeting

Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ

Naxal–Cm

ನಕ್ಸಲರನ್ನು ಅಮಿತ್‌ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು

Naxal-encounter-Vikram-1

Naxal Package: “ಮೊದಲೇ ಪ್ಯಾಕೇಜ್‌ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ

Birth-Certi

Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.