Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Team Udayavani, Dec 14, 2024, 6:34 PM IST
ಅರಸೀಕೆರೆ: ಹೊಯ್ಸಳರ ನಾಡು, ಕಲ್ಪತರು ಬೀಡು ಎಂದೇ ಪ್ರಸಿದ್ಧಿಯಾಗಿರುವ ಅರಸೀಕೆರೆ ನಗರಕ್ಕೆ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಎನ್ನುವ ಕನಸು ನನಸಾಗಬೇಕಾಗಿದೆ. ಪ್ರತಿನಿತ್ಯ ರಾಜ್ಯದ ವಿವಿಧ ಕಡೆಗಳಿಂದ ನೂರಾರು ಬಸ್‌ಗಳು ನಿಲ್ದಾಣಕ್ಕೆ ಬಂದು ಹೋಗುತ್ತಿದ್ದು, ಪ್ರಯಾಣಿಕರಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕಾಗಿದೆ.
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಸಾರಿಗೆ ಸಚಿವರಾದ ರಾಮಲಿಂಗರೆಡ್ಡಿಯವರು ಸುಮಾರು 5 ಕೋಟಿ ರೂ., ವೆಚ್ಚದಲ್ಲಿ ನಗರದಲ್ಲಿ ಹೈಟೆಕ್ ಬಸ್ ನಿಲ್ದಾಣವನ್ನು ಬಜೆಟ್ ನಂತರ ಪ್ರಾರಂಭಿಸಲಾ ಗು ವುದು ಎಂಬ ಭರ ವಸೆಯ ಮಾತ್ರ ಕಾರ್ಯಗತವಾಗದೆ, ಯಾವು ದೇ ಕಾಮಗಾರಿಗೆ ಅನುಮೋದನೆ ಇಲ್ಲವಾಗಿದೆ.
ಅಲ್ಲದೆ, ಬಸ್ ನಿಲ್ದಾಣ ಅತ್ಯಂತ ಕಿರಿದಾಗಿದ್ದು, ಪಕ್ಕದಲ್ಲಿನ ಪಶು ಸಂಗೋಪನೆ ಇಲಾಖೆಗೆ ಸೇರಿದ ಜಾಗವನ್ನು ಶಾಸಕ ಕೆ.ಎಂ.ಶಿವಲಿಂಗೇಗೌಡ, ಕೆಎಸ್ ಆರ್‌ಟಿಸಿಗೆ ಹೋರಾಟ ಮಾಡಿ ಸೇರಿಸಿದ್ದು, ಅಲ್ಲಿದ್ದ ಇಲಾಖೆಯನ್ನು ಬೇರೆಡೆಗೆ ವರ್ಗಾಹಿಸಲಾಗಿದೆ. ಆದರೆ, ಅದನ್ನು ಬಸ್ ನಿಲ್ದಾಣಕ್ಕೆ ಸೇರಿಸಿಕೊಳ್ಳದಿರುವುದರಿಂದ ಆ ಜಾಗ ಇಂದು ಅನೈತಿಕ ತಾಣವಾಗಿ ಮಾರ್ಪಡುತ್ತಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸದಿರುವುದು ನಾಚಿಗೇಡಿನ ಸಂಗತಿಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಪ್ರಯಾಣಿಕರ ಪರದಾಟ: ರಾಜ್ಯ ಸೇರಿದಂತೆ ಅಂತಾರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಇಲ್ಲಿನ ಬಸ್ ನಿಲ್ದಾಣದಲ್ಲಿ ಪ್ರತಿನಿತ್ಯ ಬೆಂಗಳೂರು, ಮೈಸೂರು, ಶಿವಮೊಗ್ಗ, ಹುಬ್ಬಳಿ ಸೇರಿದಂತೆ ನೂರಾರು ಬಸ್‌ಗಳು ಬೇರೆ ಬೇರೆ ಕಡೆಗಳಿಂದ ಆಗಮಿಸುತ್ತವೆ. ಅಲ್ಲದೆ, ಗೋವಾ, ಮುಂಬೈ, ತಿರುಪತಿ, ತಿರುವಣಾಮಲೈಗೆ ಹೋಗುವ ಬಸ್ ಗಳು ಸೇರಿವೆ. ಆದರೆ, ಇಲ್ಲಿ ನಿಲ್ದಾಣಕ್ಕೆ ಸ್ಥಳದ ಕೊರತೆ ಇದೆ. ಬಸ್‌ಗಳ ಸಂಖ್ಯೆ ಹೆಚ್ಚಿದ್ದು, ಕೆಲವು ಸಂದರ್ಭದಲ್ಲಿ ನಿಲ್ದಾಣದ ಒಳಗೆ ಬರುವ ಬಸ್ ಗಳು ಪ್ಲಾಟ್ ಫಾರಂಗಳಲ್ಲಿ ನಿಲ್ಲಲು ಸ್ಥಳ ಅವಕಾಶವಿಲ್ಲದೆ, ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮೂಲಸೌಲಭ್ಯದ ಕೊರತೆ: ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಪ್ರಯಾಣಿಸುವ ಅರಸೀಕೆರೆ ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ಕೊರತೆ ಎದ್ದು ಕಾಣುತ್ತಿದೆ. ಲಗೇಜ್ ರೂಂ, ರೆಸ್ಟ್ ರೂಂ ಕೊರತೆ ಕಾಡುತ್ತಿದೆ. ಸಿಸಿ ಕ್ಯಾಮರಾ ವ್ಯವಸ್ಥೆ ಇದ್ದರೂ ಸಣ್ಣಪುಟ್ಟ ಜೇಬು ಕಳ್ಳತನ ಇತ್ಯಾದಿ ಘಟನೆಗಳ ನಡೆಯುತ್ತಿದ್ದು, ಹಲವು ಬಾರಿ ಈ ಬಗ್ಗೆ ಇಲಾಖೆ ಅಧಿಕಾರಿಗಳ ಗಮನಕ್ಕೆ ಸಂಘ- ಸಂಸ್ಥೆಗಳ ಪದಾಧಿಕಾರಿಗಳು ತಂದರೂ ಸಹ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಪ್ರತಿನಿತ್ಯ ಗ್ರಾಮೀಣ ಜನರು ಕುಡಿಯುವ ನೀರಿಗಾಗಿ ಬಾಟಲ್ ನೀರಿನ ಮೊರೆ ಹೋಗುಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚಾದರೇ ಪ್ರಯಾಣಿಕರಿಗೆ ನೀರಿನ ಅವಶ್ಯಕತೆ ಹೆಚ್ಚಾಗಿ ಕಾಡುವಂತಾಗಿದೆ.
ಕೆರೆಯಾದ ಬಸ್ ನಿಲ್ದಾಣ: ಅರಸೀಕೆರೆ ಬಸ್ ನಿಲ್ದಾಣದ ಆವರ ಣ ವನ್ನು ಅವೈಜ್ಞಾನಿಕವಾಗಿ ನಿರ್ಮಿಸಿ ರುವ ಕಾರಣ, ಮಳೆ ಬಂದರೆ ಸಾಕು, ಬಸ್ ನಿಲ್ದಾಣದಲ್ಲಿ ಮಳೆಯ ನೀರು ನಿಂತು ಕೆರೆ ಯಂತ್ತಾಗುತ್ತದೆ. ಮಳೆ ನೀರು ಹೊರ ಹೋಗಲು ಸರಿಯಾದ ವ್ಯವಸ್ಥೆಯನ್ನೂ ಮಾಡಿಕೊಂಡಿಲ್ಲ. ಅಲ್ಲದೆ, ಮಳೆ ಬಂದರೆ ಬಸ್ ನಿಲ್ದಾಣದ ಕೆಲವೆಡೆ ಸೋರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಶೌಚಾಲಯ ಸಮರ್ಪಕವಾಗಿಲ್ಲ: ಬಸ್ ನಿಲ್ದಾಣದಲ್ಲಿ ಶೌಚಾಲ ಯವಿದ್ದರೂ ಕೆಲವು ಸಂದರ್ಭದಲ್ಲಿ ಉಂಟಾಗುವ ನೀರಿನ ತೊಂದರೆ ಹಾಗೂ ಒಳಚರಂಡಿ ಅವ್ಯವಸ್ಥೆಯನ್ನು ಸರಿ ಮಾಡಿಕೊಳ್ಳದ ಕಾರಣ, ಶೌಚಾಲಯವನ್ನು ಆಗಾಗ ಬಂದ್ ಮಾಡುವುದರಿಂದ ಶೌಚಾಲಯದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಿಲ್ಲ ಎಂಬ ದೂರುಗಳು ಪ್ರಯಾಣಿಕರಲ್ಲಿ ಕೇಳಿಬರುತ್ತಿವೆ.
ಪಾರ್ಕಿಂಗ್ ವ್ಯವಸ್ಥೆ ಇಲ್ಲ: ತಾಲೂಕಿನಿಂದ ಬೇರೆಡೆಗೆ ಹೋಗುವ ಪ್ರಯಾಣಿಕರಿಗೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಇದ ರಿಂದ ಪ್ರಯಾಣಿಕರು ತಮ್ಮ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿ ಸು ತ್ತಿರುವುದರಿಂದ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಅಲ್ಲದೆ, ಇಲ್ಲಿನ ಸಿಬ್ಬಂದಿಗಳು ಬಸ್ ನಿಲ್ದಾಣದ ಒಳಗೆ ಪಾರ್ಕಿಂಗ್ ಮಾಡುತ್ತಿರುವುದರಿಂದ ಅನಾನುಕೂಲ ವಾಗುತ್ತಿವೆ.
ಹೈಟೆಕ್ ಬಸ್ ನಿಲ್ದಾಣಕ್ಕಾಗಿ ಸತತ ಪ್ರಯತ್ನ: ಶಿವಲಿಂಗೇಗೌಡ: ತಾವು ಶಾಸಕರಾಗಿ ಅಧಿಕಾರಕ್ಕೆ ಬಂದ ಮೇಲೆ ನಗರದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಲು ಸತತ ಪ್ರಯತ್ನ ಮಾಡುತ್ತಿದ್ದೇನೆ. ಆದರೆ, ಪದೇ ಪದೆ ಸರ್ಕಾರಗಳು ಬದಲಾಗುತ್ತಿದ್ದು, ಸಚಿವರು ಬದಲಾಗುತ್ತಿದ್ದ ಕಾರಣ ಯೋಜನೆಗೆ ಮಂಜೂರಾತಿ ವಿಳಂಬವಾಗಿದೆ. ಪ್ರಸ್ತುತ ರಾಜ್ಯದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿರುವ ಕಾರಣ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಲು ಸರ್ಕಾರ 30 ಕೋಟಿ ರೂ. ಅನುದಾನ ನೀಡಿದ್ದು, ಪಶು ಆಸ್ಪತ್ರೆ ಸ್ಥಳಾಂತರ ಮಾಡಲಾಗಿದೆ. ಮುಂದಿನ ತಿಂಗಳಿಂದ ಮೂಲ ಸೌಲಭ್ಯ ಒಳಗೊಂಡ ಹೈಟೆಕ್ ಬಸ್ ನಿಲ್ದಾಣದ ಕಾಮಗಾರಿ ಕೈಗೊಳ್ಳಲು ಚಾಲನೆ ನೀಡಲಾಗುವುದು ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ತಿಳಿಸಿದ್ದಾರೆ.
ನಗರದ ಬಸ್ ನಿಲ್ದಾಣಕ್ಕೆ ನಿತ್ಯ ಸುಮಾರು 800 ಬಸ್‌ಗಳು ಬಂದು ಹೋಗುತ್ತವೆ. ಇಲ್ಲಿನ ಪ್ರಯಾಣಿಕರಿಗೆ ಶುದ್ಧ ನೀರಿನ ಸಮಸ್ಯೆ ಇದ್ದು, ಅದನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಸ್ತುತ ನಗರದ ಬಸ್ ನಿಲ್ದಾಣವನ್ನು ವಿಸ್ತರಣೆ ಮಾಡಿ, ನಿರ್ಮಿಸುವ ನೂತನ ಯೋಜನೆ ಅನುಷ್ಠಾನದ ಸಂದರ್ಭದಲ್ಲಿ ಕುಡಿಯುವ ನೀರು, ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು, ಶೌಚಾಲಯ ಹಾಗೂ ನಿಲ್ದಾಣದ ಸ್ವಚ್ಚತೆಗೆ ಆದ್ಯತೆ ನೀಡುವಂತೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. –ಕೃಷ್ಣಪ್ಪ, ಘಟಕದ ವ್ಯವಸ್ಥಾಪಕ
ನಗರದ ಬಸ್ ನಿಲ್ದಾಣವು ರೈಲ್ವೆ ನಿಲ್ದಾಣದ ಸಮೀಪದಲ್ಲಿರುವ ಕಾರಣ ಸಾವಿರಾರು ಪ್ರಯಾಣಿಕರು ಬಂದು ಹೋಗುತ್ತಿದ್ದಾರೆ. ಶುದ್ಧ ನೀರು, ಪಾರ್ಕಿಂಗ್ ಅಗತ್ಯವಾಗಿದ್ದು, ಪೊಲೀಸ್ ಚೌಕಿ ನಿರ್ಮಾಣಕ್ಕೆ ಆದ್ಯತೆ ನೀಡಿದರೆ, ಪ್ರಯಾಣಿಕರಿಗೆ ಸುರಕ್ಷತೆ ನೀಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸೌಲಭ್ಯಗಳನ್ನು ನೂತನ ಬಸ್ ನಿಲ್ದಾಣದಲ್ಲಿ ಕಲ್ಪಿಸಲು ಶಾಸಕರು ಮುಂದಾಗಬೇಕಿದೆ. –ಪ್ರಸನ್ನಕುಮಾರ್, ಸಂಚಾಲಕ, ರಾಜ್ಯ ರೈತಸಂಘ
ಬಸ್ ನಿಲ್ದಾಣದಲ್ಲಿ ಬೇರೆ ಬೇರೆ ಕಡೆಗಳಿಂದ ನಿತ್ಯ ಬಂದು ಹೋಗುವ ಬಸ್‌ಗಳು ಯಾವ ಸಮಯಕ್ಕೆ ಬಂದು ಹೋಗುತ್ತವೆ ಎಂಬ ಬಗ್ಗೆ ಇಲ್ಲಿನ ಕೆಲ ಅಧಿಕಾರಿಗಳು ಪ್ರಯಾಣಿಕರಿಗೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಆದ್ದರಿಂದ ಈ ಬಗ್ಗೆ ನಾಮಫಲಕವನ್ನು ಬಸ್ ನಿಲ್ದಾಣದ ಆವರಣದಲ್ಲಿ ಅಳವಡಿಸುವುದು ಅನಿವಾರ್ಯವಾಗಿದೆ.
–ಸುರೇಶ್, ಪ್ರಯಾಣಿಕ ರಾಮಚಂದ್ರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
Shravanabelagola;ಅಹಿಂಸಾ ಮಾರ್ಗದಿಂದಷ್ಟೇ ಜಗದ ಶಾಂತಿ: ಪೇಜಾವರ ಶ್ರೀ
Shravanabelagola: ಚಾರುಶ್ರೀ ಪಾದುಕೆ ಪ್ರತಿಷ್ಠೆ
Congress: ಹಾಸನದಲ್ಲಿ ಬೃಹತ್ ಸಮಾವೇಶ: ಗೌಡರ ತವರಲ್ಲಿ ಇಂದು ಕಾಂಗ್ರೆಸ್ ಶಕ್ತಿಪ್ರದರ್ಶನ
MUST WATCH
ಹೊಸ ಸೇರ್ಪಡೆ
Yakshagana; ಪ್ರಥಮ ವೃತ್ತಿಪರ ಯಕ್ಷಗಾನ ಭಾಗವತ ಖ್ಯಾತಿಯ ಲೀಲಾವತಿ ಬೈಪಡಿತ್ತಾಯ ಇನ್ನಿಲ್ಲ
Yedapadavu: ವಿಳಾಸದ ಕೇಳುವ ನೆಪದಲ್ಲಿ ಮಹಿಳೆಯ 2 ಪವನ್ ಚೈನ್ ಕಸಿದು ಪರಾರಿ
Bengaluru: ಪೊಲೀಸ್ ಆತ್ಮಹ*ತ್ಯೆ; ಡೆ*ತ್ ನೋಟ್‌ನಲ್ಲಿ ಪತ್ನಿ ಮತ್ತು ಮಾವನ ದೂಷಣೆ
Constitution ಮೇಲಿನ ದಾಳಿಕೋರರು ಚಾಂಪಿಯನ್ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ: ತೇಜಸ್ವಿ
Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.