ಬಾಲ್ಯ ವಿವಾಹ ಜೀವಂತವಾಗಿರೋದು ದುರಂತ
Team Udayavani, Mar 10, 2022, 2:46 PM IST
ಸಕಲೇಶಪುರ: ಸ್ವಾತಂತ್ರ್ಯ ಬಂದು ಹಲವು ವರ್ಷಗಳಾಗುತ್ತ ಬಂದಿದ್ದರು ಸಹ ದೇಶದಲ್ಲಿ ಬಾಲ್ಯವಿವಾಹಪಿಡುಗು ಜೀವಂತವಾಗಿರುವುದು ದುರಂತವಾಗಿದೆಎಂದು ತಹಶೀಲ್ದಾರ್ ಎಚ್.ಬಿ ಜಯ್‌ಕುಮಾರ್ ಹೇಳಿದರು.
ಪಟ್ಟಣದ ಮಿನಿವಿಧಾನಸೌದದಲ್ಲಿ ಮಹಿಳಾ ಮತ್ತುಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಬಾಲ್ಯವಿವಾಹ ದುಷ್ಪರಿಣಾಮ ಕುರಿತು ಜನಸಾಮಾನ್ಯರಿಗೆ ಅರಿವು ಮೂಡಿಸುವ ಕಾರ್ಯಕ್ರಮಹಿನ್ನೆಲೆ ಆಯೋಜಿಸಲಾಗಿದ್ದ ಸಭೆ ಉದ್ದೇಶಿಸಿ ಮಾತನಾಡಿದರು.
ಬಾಲ್ಯ ವಿವಾಹ ನಿಷೇಧ ಅಭಿಯಾನಕ್ಕೆ ಚಾಲನೆನೀಡಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಲಾಯಿತು. ಈ ನಿಟ್ಟಿನಲ್ಲಿ ತಾಲೂಕಿಗೆ ವಾರ್ತಾ ಇಲಾಖೆವತಿಯಿಂದ ವಿಡಿಯೋ ಆನ್ ವ್ಹೀಲ್ಸ್ ಬರಲು 26, 27,28ರಂದು ನಿಗದಿಯಾಗಿತ್ತು. ಆದರೆ ದಿನಾಂಕ 18,19,20ರಂದು ತಾಲೂಕಿನ ಜನ ಪ್ರಸಿದ್ಧ ಜಾತ್ರೆ ಇರುವುದರಿಂದಹೆಚ್ಚಿನ ಜನರಿಗೆ ಅರಿವು ಮೂಡಿಸಬಹುದೆಂಬ ನಿಟ್ಟಿನಲ್ಲಿದಿನಾಂಕವನ್ನು ಬದಲಾಯಿಸಿಕೊಳ್ಳಲು ಮನವಿ ಮಾಡಲಾಗಿದೆ. ಸಿಡಿಪಿಒ ಅವರು ದಿನಾಂಕ ಬದಲಾಯಿಸಿ ಕೊಳ್ಳುವ ಭರವಸೆ ನೀಡಿದ್ದಾರೆ.
ಜಾತ್ರೆಯಲ್ಲಿ ವ್ಯಾಪಕ ಪ್ರಚಾರ ಸಾಧ್ಯ: ಜನರಿಗೆ ಬಾಲ್ಯವಿವಾಹದ ಕುರಿತು ಧ್ವನಿಮುದ್ರಣ ಹಾಗೂ ಕರಪತ್ರ ಮೂಲಕ ಅರಿವು ಮೂಡಿಸಲು ಯೋಜಿಸ ಲಾಗಿದೆ.ಜಾತ್ರೆ ನಡೆಯುವ ಸ್ಥಳದಲ್ಲಿ ಸ್ಟಾಲ್ ಹಾಕಿ ವ್ಯಾಪಕಪ್ರಚಾರ ಮಾಡಲು ಸಹ ಯೋಜಿಸಲಾಗಿದೆ. ಗುರುವಾರ ಸಂತೆ ದಿನವಾಗಿದ್ದು ಅಂದು ಬಾಲ್ಯವಿವಾವ ಬೀದಿನಾಟಕ ಮಾಡುವ ಮುಖಾಂತರ ಅರಿವು ಮೂಡಿಸುವಕಾರ್ಯಕ್ರಮ ಆಯೋಜಿ ಸಲಾಗಿದೆ.
ಹೊರ ರಾಜ್ಯದವರ ಬಗ್ಗೆ ನಿಗಾವಿಡಿ: ಅಸ್ಸಾಂ ಹಾಗೂಹೊರ ರಾಜ್ಯಗಳಿಂದ ಸಾಕಷ್ಟು ಕೂಲಿ ಕಾರ್ಮಿಕರು ತಾಲೂಕಿಗೆ ವಲಸೆ ಬರುತ್ತಿದ್ದಾರೆ. ಅವರುಗಳ ಮಾಹಿತಿಸರಿಯಾಗಿ ಇರುವುದಿಲ್ಲ. ಈ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆಗೆ ಮಾಹಿತಿ ಪಡೆಯಲು ಆದೇಶಿಸಲಾಗಿದೆ.
ಬಾಲ್ಯ ವಿವಾಹದ ಬಗ್ಗೆ ಅರಿವು: ಹಾಸನ ಜಿಲ್ಲಾ ಬೆಳೆಗಾ ರರ ಸಂಘ ತಾಲೂಕಿನಲ್ಲಿ ಹೆಚ್ಚು ಸಕ್ರಿಯವಾಗಿದ್ದು, ಪ್ರತಿ ಮಂಗಳವಾರ ಸಂಘ ಸಭೆ ನಡೆಸುವುದರಿಂದ ಅವರಿಗೂಸಹ ಕೂಲಿ ಕಾರ್ಮಿಕರ ಕುರಿತು ಮಾಹಿತಿ ನೀಡಲುಹೇಳಲಾಗುವುದು. ಮಲೆನಾಡಿನಲ್ಲಿ ಕೂಲಿ ಕಾರ್ಮಿಕರಸಂಖ್ಯೆ ಹೆಚ್ಚಾಗಿರುವುದರಿಂದ ಬಾಲ್ಯ ವಿವಾಹದಪ್ರಮಾಣ ಸಹ ಹೆಚ್ಚಿದೆ. ಈ ನಿಟ್ಟಿನಲ್ಲಿ ಬಾಲ್ಯವಿವಾಹದ
ದುಷ್ಪರಿಣಾಮದ ಕುರಿತು ಮಹಿಳೆಯರಿಗೆ ಹೆಚ್ಚಿನಮಾಹಿತಿ ನೀಡಿದರೆ ಅವರು ಸಹ ವಿರೋಧಿಸುವುದರಿಂದ ಬಾಲ್ಯ ವಿವಾಹ ತಡೆಗಟ್ಟಲು ಸಹಾಯಕಾರಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಮಾ ಹಾಗೂ ಕಸ್ತೂರಿ,ಮಹಿಳಾ ಮತ್ತು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಶಿವಣ್ಣ, ತಾ.ಪಂ ಉದ್ಯೋಗ ಖಾತರಿ ಯೋಜನೆಯಸಹಾಯಕ ನಿರ್ದೇಶಕ ಆದಿತ್ಯ, ತಾಲೂಕು ನೋಂದಣಾಧಿಕಾರಿ ಅನುಪಮ, ಸರ್ಕಲ್ ಇನ್ಸ್‌ಪೆಕ್ಟರ್ ಚೈತನ್ಯ,ಕಾರ್ಮಿಕ ಇಲಾಖೆಯ ಹಿರಿಯ ಅಧೀಕ್ಷಕಿ ಮಂಗಳಗೌರಿ, ಮುಂತಾದವರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.