ಹಸಿರು ಶಾಲೆ ಪ್ರಶಸ್ತಿ ಪಡೆದ ಬಾಗೂರು ಸರ್ಕಾರಿ ಪ್ರೌಢಶಾಲೆ

ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪುರಸ್ಕಾರ

Team Udayavani, Jun 20, 2019, 12:55 PM IST

hasan-tdy-1..

ಚನ್ನರಾಯಪಟ್ಟಣ: ತಾಲೂಕಿನ ಬಾಗೂರು ಹೋಬಳಿ ಕೇಂದ್ರದಲ್ಲಿನ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ ಆವರಣದಲ್ಲಿ 7 ವರ್ಷದ ಹಿಂದೆ ಸುಮಾರು 312 ಗಿಡವನ್ನು ನೆಟ್ಟು ಪೋಷಣೆ ಮಾಡಿದ್ದರ ಫ‌ಲವಾಗಿ ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಹಸಿರು ಶಾಲೆ ಪ್ರಶಸ್ತಿ ನೀಡಿ ಗೌರವಿಸಿದೆ.

2012ರಲ್ಲಿ ಶಾಲೆಯ ಮುಖ್ಯ ಪಿ.ಚಲುವ ನಾರಾಯಣಸ್ವಾಮಿ ಅವರು ತಮ್ಮ ಶಾಲಾ ಆವರಣ ದಲ್ಲಿ 50 ಗಿಡವನ್ನು ನೆಡುವ ಮೂಲಕ ಪರಿಸರ ಉಳಿವಿಗೆ ಮುಂದಾದರು. ಗಿಡಗಳು ಉತ್ತಮವಾಗಿ ಬೆಳೆದವು ಇದರಿಂದ ಪ್ರೇರೇಪಣೆಗೊಂಡ‌ ಮುಖ್ಯ ಶಿಕ್ಷಣ 2013ರಲ್ಲಿ 130 ಗಿಡವನ್ನು ನೆಟ್ಟು ಶಾಲೆ ವಿದ್ಯಾರ್ಥಿಗಳ ಸಂಸದರನ್ನಾಗಿ ಮಾಡಿ ಪ್ರತಿ ತಂಡಕ್ಕೆ ಇಂತಿಷ್ಟು ಗಿಡವನ್ನು ನೀಡಿ ಅವುಗಳನ್ನು ಪೋಷಣೆ ಮಾಡುವ ಜವಾಬ್ದಾರಿ ನೀಡಿದರು.

ವಿದ್ಯಾರ್ಥಿಗಳಿಗೆ ನಗದು ಬಹುಮಾನ: 2014ರ ಜೂನ್‌ ತಿಂಗಳಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗ ವಾಗಿ 150 ಗಿಡವನ್ನು ನೆಟ್ಟು ಅವುಗಳನ್ನು ಯಾವ ವಿದ್ಯಾರ್ಥಿ ಉತ್ತಮವಾಗಿ ಪೋಷಣೆ ಮಾಡುತ್ತಾರೋ ಅವರಿಗೆ ಪ್ರಶಸ್ತಿ ನೀಡುವುದಾಗಿ ಘೋಷಣೆ ಮಾಡಿ ದರು ಮುಖ್ಯ ಶಿಕ್ಷಕರ ಮುತುವರ್ಜಿ ಹಾಗೂ ಶಾಲೆಯ ವಿದ್ಯಾರ್ಥಿಗಳಿಗೆ ಪರಿಸರ ಕಾಳಜಿ ದೃಷ್ಟಿ ಯಿಂದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ದರು. ಹೀಗೆ ಅವರು ಒಟ್ಟು 330 ಗಿಡವನ್ನು ನಾಟಿ ಮಾಡಿದರು. ಅದಲ್ಲಿ 18 ಗಿಡಗಳು ಹಾಳಾದವು. ಉಳಿದ 312 ಗಿಡಗಳು ಇಂದು ಶಾಲಾ ಆವರಣದ ಅಂದವನ್ನು ಹೆಚ್ಚಿಸಿರುವುದಲ್ಲದೇ ಶಾಲೆಗೆ ಹಸಿರು ಶಾಲೆ ಪ್ರಶಸ್ತಿಯನ್ನು ತಂದುಕೊಟ್ಟಿದೆ. ಶಾಲೆ ಮುಂಭಾಗ ಕೈ ತೋಟ ಇರಬೇಕು ಎಂದು ಸಣ್ಣ ಮಟ್ಟದಲ್ಲಿ ಪರಿಸರ ಕಾಳಜಿ ತೋರಿದ ಶಿಕ್ಷಕರಿಂದ ಇಂದು ಮಿನಿ ಉದ್ಯಾನ ವನವಾಗಿ ಮಾರ್ಪಟ್ಟಿದೆ.

ವಿವಿಧ ಜಾತಿಯ ಗಿಡಗಳು: ಸೀಬೆ, ಮಾವು, ಹಲಸು, ಹತ್ತಿ, ಸೀತಾಫ‌ಲ, ದಾಳಿಂಬೆ, ಪರಂಗಿ, ನೇರಳೆ, ಸಪೋಟ, ನಲ್ಲಿಕಾಯಿ ಹೀಗೆ ವಿವಿಧ ಹಣ್ಣಿನ ಗಿಡವನ್ನು ಬೆಳೆಸಿರುವುದಲ್ಲದೇ ತೇಗ, ಹೊನ್ನೆ, ಬೇವು, ಹೆಬ್ಬೇವು, ಅಶೋಕ, ಮಹಾಘನಿ, ಹೊಂಗೆ ಸೇರಿದಂತೆ ಅನೇಕ ಜಾತಿಯ ಮರಗಳು ಈಗ ಬೆಳೆದು ನಿಂತಿವೆ, ಇವಲ್ಲದೇ ವಿವಿಧ ಹೂವಿನ ಗಿಡಗಳೂ ಶಾಲಾ ಕೈತೋಟದಲ್ಲಿ ಕಾಣಸಿಗುತ್ತವೆ.

ಪರಿಸರ ಜಾಗೃತಿ: ಶಾಲೆಯ ಮುಂದೆ ಇರುವ ಉದ್ಯಾನವನದಲ್ಲಿ ಬಿಸಿಯೂಟದ ಕೈತೋಟವಾಗಿ ಮಾಡಿದ್ದು ಕಡಿಮೆ ನೀರಿನಲ್ಲಿ ಗಿಡಗಳನ್ನು ಬೆಳೆಸ ಲಾಗಿದೆ. ಬಗೆಬಗೆಯ ಸೊಪ್ಪು ಬೆಳೆದು ಊಟಕ್ಕೆ ಬಳಸ ಲಾಗುತ್ತದೆ. ವಿದ್ಯಾರ್ಥಿಗಳು ಪ್ರತಿ ನಿತ್ಯ ಮರ, ಗಿಡ ಗಳೊಂದಿಗೆ ಸಂಪರ್ಕ ಹೊಂದಿದರೆ ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಜಾಗೃತಿ ಮೂಡುತ್ತದೆ ಎಂಬ ಉದ್ದೇಶದಿಂದ ವಿದ್ಯಾರ್ಥಿಗಳ ಮೂಲಕವೇ ಉದ್ಯಾನವನ ನಿರ್ವಹಣೆ ಮಾಡಲಾಗುತ್ತಿದೆ.

ಶಾಲೆಯ ಅಭಿವೃದ್ಧಿ ಅಚ್ಚರಿ: ನಿರ್ಜನ ಪ್ರದೇಶದಲ್ಲಿ ಇದ್ದ ಶಾಲೆ, ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಕಾಣು ತ್ತಿದೆ. ಪಾಲಕರೂ ಇಲ್ಲಿನ ವಾತಾವರಣದ ಬಗ್ಗೆ ಹರ್ಷ ವ್ಯಕ್ತಪಡಿಸುತ್ತಾರೆ. ಇತ್ತೀಚೆಗೆ ಹೊಸದಾಗಿ ನಾಲ್ಕು ಕೊಠಡಿಯನ್ನು ನಿರ್ಮಾಣ ಮಾಡಲಾಗಿದೆ, ಇಂಗ್ಲಿಷ್‌ ಹಾಗೂ ಕನ್ನಡ ಭಾಷೆ ಎರಡರಲ್ಲೂ ಶಿಕ್ಷಣ ನೀಡ ಲಾಗುತ್ತಿದ್ದು, ಎಲ್ಲಾ ರೀತಿಯ ಸೌಕರ್ಯ ಹೊಂದಿ ರುವ ಶಾಲೆ ಇದಾಗಿದೆ. ಈ ಭಾಗದ ಮಾದರಿ ಶಾಲೆ ಎಂದರೆ ತಪ್ಪಾಗಲಾರದು. ಖಾಸಗಿ ಶಾಲೆಗೆ ಸಡ್ಡು ಹೊಡೆಯುವ ರೀತಿಯಲ್ಲಿ ಸರ್ಕಾರಿ ಶಾಲೆ ಬಳೆದು ನಿಂತಿರುವುದು ತಾಲೂಕಿನ ಮಟ್ಟಿಗೆ ಹೆಮ್ಮೆಯ ಸಂಗತಿಯಾಗಿದೆ.

ಫೇಸ್‌ಬುಕ್‌ ಪೇಜ್‌ ಹೊಂದಿರುವ ಶಾಲೆ: ಸರ್ಕಾರಿ ಶಾಲೆಗಳು ಪ್ರಚಾರದ ಕೊರತೆಯಿಂದ ಸೊರಗುತ್ತಿವೆ ಇದನ್ನು ಅರಿತ ಶಾಲೆ ಮುಖ್ಯ ಶಿಕ್ಷಣ ಪಿ.ಚಲುವನಾರಾಯಣಸ್ವಾಮಿ ಜಿಎಚ್ಎಸ್‌ ಬಾಗೂರು ಸಿಎನ್‌ಸ್‌ ಕ್ರಿಯೇಷನ್‌ ಎಂಬ ಹೆಸರಿನಲ್ಲಿ ಫೇಸ್‌ಬುಕ್‌ ಪೇಜ್‌ ತೆರೆದು ಶಾಲೆಯಲ್ಲಿ ಪ್ರತಿ ತಿಂಗಳು ನಡೆಯುವ ಪಠ್ಯೇತರ ಚಟುವಟಿಕೆಯನ್ನು ಅಪ್‌ಲೋಡ್‌ ಮಾಡುವುದನ್ನು ರೂಢಿಸಿಕೊಂಡಿದ್ದರು. ಇದರೊಂದಿಗೆ ಕೈ ತೋಟದಲ್ಲಿ ಮಕ್ಕಳು ಮಾಡುವ ಕೆಲಸವನ್ನು ಅಪ್‌ಲೋಡ್‌ ಮಾಡುವ ಮೂಲಕ ವಿದ್ಯಾರ್ಥಿಗಳ ಶ್ರಮದಾನವನ್ನು ಸಮಾಜಕ್ಕೆ ತಿಳಿಸಿದ್ದಾರೆ.

ಅಕ್ಷರ ದಾಸೋಹ ಅಧಿಕಾರಿಯಾಗಿ ವರ್ಗಾವಣೆ: ಶಾಲೆಯ ಸಾಕಷ್ಟು ಏಳಿಗೆಗೆ ಶ್ರಮಿಸಿದ ಮುಖ್ಯ ಶಿಕ್ಷಣ ಪಿ.ಚಲುವನಾರಾಯಣ ಸ್ವಾಮಿ ಅವರನ್ನು ಈಗ್ಗೆ 19 ದಿವಸದ ಹಿಂದೆ ಜೂ.1 ರಂದು ಅಕ್ಷರ ದಾಸೋಹ ಸಹಾಯ ನಿರ್ದೇಶಕರಾಗಿ ಸರ್ಕಾರ ಆದೇಶ ಹೊರಡಿಸಿ ವರ್ಗಾವಣೆ ಮಾಡಿದ್ದರಿಂದ ಅಕ್ಷರ ದಾಸೋಹ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

 

● ಶಾಮಸುಂದರ್‌ ಕೆ ಅಣ್ಣೇನಹಳ್ಳಿ

ಟಾಪ್ ನ್ಯೂಸ್

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

Shiggvi-Yatnal

Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್‌

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

Hasanmbe

Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!

ಹಾಸನಾಂಬೆ ದರ್ಶನಕ್ಕೆ ವಿಧ್ಯುಕ್ತ ತೆರೆ; 9 ದಿನದಲ್ಲಿ 19 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ

ಹಾಸನಾಂಬೆ ದರ್ಶನಕ್ಕೆ ವಿಧ್ಯುಕ್ತ ತೆರೆ; 9 ದಿನದಲ್ಲಿ 19 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ

Hasanamabe

Devi Temple: ಹಾಸನಾಂಬೆ ದೇವಿ ದರ್ಶನ ಅವ್ಯವಸ್ಥೆ, ಭಕ್ತರ ಆಕ್ರೋಶ: ವಿಶೇಷ ಪಾಸ್‌ ರದ್ದು

HD-Revanna

Hasanambe Temple: ಇಂಥ ಹಲವು ಡಿಸಿಗಳನ್ನು ನೋಡಿದ್ದೇನೆ: ಎಚ್‌.ಡಿ.ರೇವಣ್ಣ ಕಿಡಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

16

Mangaluru: ನಿಯಮ ಉಲ್ಲಂಘನೆ; ಖಾಸಗಿ ಬಸ್‌ಗೆ ದಂಡ

Shiggvi-Yatnal

Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್‌

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

4

Mangaluru: ಗಾಂಜಾ ಮಾರಾಟ; ಇಬ್ಬರು ಯುವಕರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.