ಜಳಕದ ಪುಳಕಕ್ಕಾಗಿ ಕಾದಿಹ ಮಂದಸ್ಮಿತ
Team Udayavani, Feb 17, 2018, 6:00 AM IST
ಬೆಂಗಳೂರು: ಸಾವಿರಾರು ವರ್ಷಗಳಿಂದ ತ್ಯಾಗ, ಅಹಿಂಸೆ, ಶಾಂತಿಯ ಪ್ರತೀಕವಾಗಿ ವಿಂಧ್ಯಗಿರಿಯ ತುದಿಯಲ್ಲಿ ತಲೆಯೆತ್ತಿನಿಂತಿರುವ ಭಗವಾನ್ ಬಾಹುಬಲಿಯ ಮಹಾಮಸ್ತಕಾಭಿಷೇಕಕ್ಕೆ ಕ್ಷಣಗಣನೆ. 88ನೇ ಮಹಾಮಜ್ಜನಕ್ಕಾಗಿ ಭಕ್ತರು ಕಾತರರಾಗಿದ್ದು, ಶನಿವಾರ ನಡೆಯುವ ಐತಿಹಾಸಿಕ ಘಳಿಗೆಯನ್ನು ಕಣ್ತುಂಬಿ ಕೊಳ್ಳುವ ನಿರೀಕ್ಷೆಯಿಂದ ಪುಳಕಗೊಂಡಿದ್ದಾರೆ.
21ನೇ ಶತಮಾನದ ಎರಡನೇ ಮಹಾಮಸ್ತಕಾ ಭಿಷೇಕ ಮಹೋತ್ಸವಕ್ಕೆ ಶ್ರೀ ಕ್ಷೇತ್ರ ಬೆಳಗೊಳ ಸರ್ವ ರೀತಿಯಲ್ಲಿ ಸಜ್ಜಾಗಿದ್ದು, ವಿಶೇಷ ಕಳೆಯೊಂದಿಗೆ ಕಂಗೊಳಿಸುತ್ತಿದೆ.
ಐತಿಹಾಸಿಕವೂ ಅಪೂರ್ವವೂ ಎನಿಸಿರುವ ಮಹಾಮಸ್ತಕಾಭಿಷೇಕಕ್ಕೆ ಸಾಕ್ಷಿಯಾಗುವ ದೊಡ್ಡ ಬೆಟ್ಟದ ಮೂರ್ತಿಯತ್ತ ಜಗತ್ತಿನಾದ್ಯಂತ ಲಕ್ಷಾಂತರ ಭಕ್ತರು, ಪ್ರವಾಸಿಗರ ದೃಷ್ಟಿ ನೆಟ್ಟಿದೆ. 12 ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತ ಕಾಭಿಷೇಕವನ್ನು ಸಂಪ್ರದಾಯಬದ್ಧವಾಗಿ, ಶಾಸೊOಉàಕ್ತವಾಗಿ ನಡೆಸಲು ಅಗತ್ಯ ವ್ಯವಸ್ಥೆ ಯನ್ನು ಶ್ರವಣಬೆಳಗೊಳ ಮಠ ಮಾಡಿಕೊಂಡಿದೆ. ಶನಿವಾರ ನಸುಕಿನ ಐದು ಗಂಟೆಗೆ ಆರಂಭವಾಗುವ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮಹಾಮಸ್ತಕಾ ಭಿಷೇಕ ಪ್ರಕ್ರಿಯೆಗೆ ಚಾಲನೆ ದೊರೆಯುತ್ತದೆ. ಮಧ್ಯಾಹ್ನ ಎರಡು ಗಂಟೆಗೆ ಸರಿಯಾಗಿ 108 ಕಲಶಗಳಿಂದ ಜಲಾಭಿಷೇಕದೊಂದಿಗೆ 12 ವರ್ಷಗಳ ಬಳಿಕ ಬಾಹುಬಲಿ ಮೂರ್ತಿಯ ಮಸ್ತಕಾಭಿಷೇಕ ವಿದ್ಯುಕ್ತವಾಗಿ ಆರಂಭವಾಗುತ್ತದೆ. ಮಧ್ಯಾಹ್ನ 3.30ರಿಂದ 5.30ರವರೆಗೆ ಪಂಚಾಮೃತ ಅಭಿಷೇಕ ನಡೆಯಲಿದ್ದು, ನಂತರ ಸಂಜೆ 5.30ರಿಂದ 6ರವರೆಗೆ ಅಷ್ಟದ್ರವ್ಯ ಪೂಜೆ, ಮಹಾಮಂಗಳಾರತಿಯಾಗುತ್ತಿದ್ದಂತೆ ಮೊದಲ ದಿನದ ಮಸ್ತಕಾಭಿಷೇಕಕ್ಕೆ ತೆರೆ ಬೀಳುತ್ತದೆ.
ಮಹೋತ್ಸವದ ಹಿನ್ನೆಲೆಯಲ್ಲಿ ಬೆಳಗೊಳದ ಗುಡಿ ಗೋಪುರ, ಬಸದಿಗಳು ವಿಶೇಷವಾಗಿ ಅಲಂಕೃತಗೊಂಡಿದ್ದರೆ, ದೊಡ್ಡ ಬೆಟ್ಟದ ಮೆಟ್ಟಿಲಿನ ಸಾಲು ಆಕರ್ಷಕ ವಿದ್ಯುತ್ ದೀಪಾಲಂಕಾರದಿಂದ ವಿಶೇಷ ಮೆರುಗು ಪಡೆದಿದೆ.
ಬಾಹುಬಲಿ ಮೂರ್ತಿಯ ಹಿಂಬದಿ ಅಳವಡಿಸಿರುವ ಅಟ್ಟಣಿಗೆಗೆ ಧಾರ್ಮಿಕ ಸಂಕೇತ, ಆಕರ್ಷಕ ಮೇಲು ಫಲಕಗಳು ಕಳೆ ಹೆಚ್ಚಿಸಿದೆ. ಈಗಾಗಲೇ ಕ್ಷೇತ್ರದಲ್ಲಿ ಬೀಡುಬಿಟ್ಟಿರುವ ಮುನಿಗಳು, ಆಚಾರ್ಯರು, ಭಕ್ತರು ಅಪೂರ್ವ ಕ್ಷಣವನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ಬೆಳಗೊಳದ ಸ್ಥಳೀಯರು, ಸುತ್ತಮುತ್ತಲ ಗ್ರಾಮ ಸ್ಥರು, ತಾಲೂಕು, ಜಿಲ್ಲಾ ಕೇಂದ್ರ ಮಾತ್ರವಲ್ಲದೇ ರಾಜ್ಯ ಮತ್ತು ರಾಷ್ಟ್ರದ ನಾನಾ ಭಾಗದ ಭಕ್ತರು, ಪ್ರವಾಸಿಗರು ವಿಂಧ್ಯಗಿರಿಯತ್ತ ಮುಖ ಮಾಡಿದ್ದಾರೆ.
ಸಾಕಷ್ಟು ಸಂಖ್ಯೆಯಲ್ಲಿ ಅನಿವಾಸಿ ಭಾರತೀಯರು ದೇಶದ ಐತಿಹಾಸಿಕ ಮಹೋತ್ಸವದಲ್ಲಿ ಭಾಗಿಯಾಗಲು ಈಗಾಗಲೇ ಬೆಳಗೊಳದಲ್ಲಿ ಬೀಡುಬಿಟ್ಟಿದ್ದಾರೆ. ಬಹಳಷ್ಟು ವಿದೇಶಿ ಪ್ರವಾಸಿಗರು ಈಗಾಗಲೇ ಕ್ಷೇತ್ರದಲ್ಲಿ ನೆಲೆಯೂರಿ ಜೈನ ಸಂಸ್ಕೃತಿ, ಪರಂಪರೆಯ ಅಧ್ಯಯನದಲ್ಲಿ ತೊಡಗಿದ್ದು, ಶನಿವಾರ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕಾದಿದ್ದಾರೆ.
58 ಅಡಿ ಎತ್ತರದ ಏಕಶಿಲಾ ಬಾಹುಬಲಿ ಮೂರ್ತಿಗೆ ದಿನನಿತ್ಯ ಪಾದಪೂಜೆಯಷ್ಟೇ ನೆರವೇರುತ್ತದೆ. 12 ವರ್ಷಕ್ಕೊಮ್ಮೆಯಷ್ಟೇ ಇಡೀ ಮೂರ್ತಿಗೆ ಅಭಿಷೇಕ ಹಾಗೂ ವಿಶೇಷ ಪೂಜೆ ಪುನಸ್ಕಾರಗಳು ನಡೆಯುವುದರಿಂದ ಸಹಜವಾ ಗಿಯೇ ಐತಿಹಾಸಿಕ ಮಹತ್ವ ಹೆಚ್ಚಿಸಿದೆ. ಒಟ್ಟಾರೆ ಮಹಾಮಸ್ತಕಾಭಿಷೇಕಕ್ಕೆ ಚಾಲನೆ ದೊರೆಯುತ್ತಿದ್ದಂತೆ “1008 ಗೊಮ್ಮಟೇಶ್ವರ ಬಾಹುಬಲಿ ಭಗವಾನ್‌ಕಿ ಜೈ’ ಎಂದು
ಉದ್ಘೋಷಿಸಲು ಭಕ್ತ ಸಮೂಹ ಕಾತುರವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Session: ಕಾಂಗ್ರೆಸಿಗರ ವೀಡಿಯೋಗೆ ಯಾವ ಬೆಲೆಯೂ ಇಲ್ಲ: ಎಂಎಲ್‌ಸಿ ರವಿಕುಮಾರ್
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.