ಇಂದಿನಿಂದ ಬಿತ್ತನೆ ಆಲೂಗಡ್ಡೆ ಮಾರಾಟ ಆರಂಭ
ಕ್ವಿಂಟಲ್‌ಗೆ 2,150ರಿಂದ 2,250 ರೂ. ನಿಗದಿ ಸಹಾಯಧನ ಬಗ್ಗೆ ಪ್ರತಿಕ್ರಿಯಿಸದ ಸರ್ಕಾರ
Team Udayavani, May 11, 2020, 5:19 PM IST
ಸಾಂದರ್ಭಿಕ ಚಿತ್ರ
ಹಾಸನ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಆಲೂಗಡ್ಡೆ ಬಿತ್ತನೆ ಬೀಜ ಮಾರಾಟ ಮೇ 11ರಿಂದ ಆರಂಭವಾಗಲಿದೆ. ನಗರದ ಎಪಿಎಂಸಿ ಪ್ರಾಂಗಣದಲ್ಲಿ ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಆಲೂಗಡ್ಡೆ ಮಾರಾಟಕ್ಕೆ ಸಿದ್ಧತೆ ನಡೆಸಲಾಗಿದೆ. ಕೊರೊನಾ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಸುಕರಕ್ಷತಾ ಕ್ರಮಗಳನ್ನು ಅನುಸರಿಸಲಾಗುತ್ತದೆ.
13 ಸಾವಿರ ಟನ್ ದಾಸ್ತಾನು: ಕಳೆದ ಎರಡು ತಿಂಗಳನಿಂದ ಪಂಜಾಬ್‌ನಿಂದ ಸರಬರಾಜಾಗಿರುವ ಸುಮಾರು 13ಸಾವಿರ ಟನ್ ಬಿತ್ತನೆ ಆಲೂಗಡ್ಡೆಯನ್ನು ನಗರದ ಕೈಗಾರಿಕಾ
ಪ್ರದೇಶ ಹಾಗೂ ಕೈಗಾರಿಕಾಭಿವೃದ್ಧಿ ಕೇಂದ್ರದ ವಿವಿಧ ಶೀತಲ ಗೃಹಗಳಲ್ಲಿ ದಾಸ್ತಾನು ಮಾಡಲಾಗಿದೆ. ಶೀತಲಗೃಹಗಳಿಂದ ಆಯಾ ದಿನದ ಮಾರಾಟಕ್ಕೆ ಅಗತ್ಯವಾದಷ್ಟು ಆಲೂ ಗಡ್ಡೆಯನ್ನು ಸಂಜೆ 6.30 ರ ನಂತರ ರಾತ್ರಿ 12 ಗಂಟೆವರೆಗೆ ಎಪಿಎಂಸಿ ಪ್ರಾಂಗಣಕ್ಕೆ ಆಲೂಗಡ್ಡೆಯನ್ನು ಲಾರಿಗಳಲ್ಲಿ ತಂದಿಳಿಸಲು ಸೂಚನೆ ನೀಡಿದ್ದಾರೆ. ಪೊಲೀಸರು ರೈತರ ತಂಡಗಳನ್ನು ಮಾಡಿ ಆಲೂಗಡ್ಡೆ ಮಾರುಕಟ್ಟೆಗೆ ಬಿಡಲಿದ್ದಾರೆ. ಒಂದು ತಂಡ ಆಲೂಗಡ್ಡೆ ಖರೀದಿಸಿದ ನಂತರ ಮತ್ತೂಂದು ರೈತರ ತಂಡವ ಮಾರು ಕಟ್ಟೆ ಪ್ರವೇಶಿಸುವ ವ್ಯವಸ್ಥೆ ಮಾಡಲಾಗಿದೆ. ಈ ವರ್ಷ 15 ಸಾವಿರ ಹೆಕ್ಟೇರ್‌ನಲ್ಲಿ ಆಲೂ ಗಡ್ಡೆ ಬಿತ್ತನೆ ಆಗಬಹುದು ಎಂದು ತೋಟ ಗಾರಿಕೆ ಇಲಾಖೆ ಅಂದಾಜು ಮಾಡಿದೆ.
ಇನ್ನೂ ನಿರ್ಧಾರವಾಗದ ಸಬ್ಸಿಡಿ: ಕಳೆದ ವರ್ಷ ಆಲೂಗಡ್ಡೆ ಬಿತ್ತನೆ ಬೀಜ ಹಾಗೂ ಔಷಧಿಗೆ ಶೇ.50 ರಷ್ಟು ಸಹಾಯಧನವನ್ನು ಸರ್ಕಾರ ನೀಡಿತ್ತು. 27.2 ಕೋಟಿ ರೂ. ಸಬ್ಸಿಡಿ ನೀಡಬೇಕು ಎಂದು ಹಾಸನ ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಮಾಜಿ ಸಚಿವ ಎಚ್.ಡಿ.ರೇವಣ್ಣ ಆಲೂ ಬಿತ್ತನೆ ಬೀಜಕ್ಕೆ ಸಬ್ಸಿಡಿ ನೀಡುವಂತೆ ಮುಖ್ಯಮಂತ್ರಿಯನ್ನು ಖುದ್ದು ಭೇಟಿಯಾಗಿ ಮನವಿ ಸಲ್ಲಿಸಿದರೂ ಸಬ್ಸಿಡಿ ನೀಡುವ ಬಗ್ಗೆ ಸರ್ಕಾರ ಇನ್ನೂ ನಿರ್ಧಾರ ಮಾಡಿಲ್ಲ.
2,250 ರಿಂದ 2,150 ರೂ. ನಿಗದಿ: ಜಿಲ್ಲಾಡಳಿತವು ಶಾಸಕರು ಹಾಗೂ ವರ್ತಕರ ಸಭೆ ನಡೆಸಿ ಗುಣ ಮಟ್ಟದ ಸಾಮಾನ್ಯ ಗಾತ್ರದ ಒಂದು ಕ್ವಿಂಟಲ್ ಆಲೂಗಡ್ಡೆಗೆ 2,250 ರೂ.
ದಪ್ಪ ಗಾತ್ರದ ಆಲೂಗಡ್ಡೆಗೆ 2,150 ರೂ. ದರ ನಿಗದಿಪಡಿಸಿದೆ. ರೈತರು ಖರೀದಿಸಿದ ಆಲೂಗಡ್ಡೆಗೆ ವರ್ತಕರು ರಶೀದಿ ನೀಡುವುದನ್ನು ಕಡ್ಡಾಯ ಮಾಡಲಾಗಿದೆ.
ಜಿಲ್ಲಾಡಳಿತ ರೈತರನ್ನು ಕಡೆಗಣಿಸಿದೆ:
ಆಲೂಗಡ್ಡೆ ಮಾರಾಟದ ವ್ಯವಸ್ಥೆ, ದರ ನಿಗದಿಯ ಸಭೆಗಳಿಗೆ ರೈತ ಮುಖಂಡರನ್ನು ಕರೆಯದೇ ಹಾಸನ ಜಿಲ್ಲಾಡಳಿತ ಕಡೆಗಣಿಸಿದೆ. ವರ್ತಕರ ಲಾಬಿಗೆ ಮಣಿದು ಆಲೂಗಡ್ಡೆ ದರ
ನಿಗದಿಪಡಿಸಿದೆ. ಇದರಿಂದ ರೈತರು ನಷ್ಟ ಅನುಭವಿಸುವಂತಾಗಿದೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೊಟ್ಟೂರು ಶ್ರೀನಿವಾಸ ಆಪಾದಿಸಿದ್ದಾರೆ.
ಜಿಲ್ಲಾಡಳಿತದ ನಿರ್ದೇಶನ ಪಾಲನೆ: ಬಿತ್ತನೆ ಆಲೂಗೆಡ್ಡೆ ಖರೀದಿ ಸಂದರ್ಭದಲ್ಲಿ ರೈತರಿಗೆ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ಹಾಸನ ಎಪಿಎಂಸಿ ಅಧ್ಯಕ್ಷ ಮಂಜೇಗೌಡ ತಿಳಿಸಿದ್ದಾರೆ. ಔಷಧ, ರಸ ಗೊಬ್ಬರವನ್ನು ಎಪಿಎಂಸಿಯಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ ಜಿಲ್ಲಾಡಳಿತ ನಿಗದಪಡಿಸಿದ ದರದಲ್ಲೇ ಬಿತ್ತನೆ ಆಲೂಗಡ್ಡೆ ಮಾರಾಟವಾಗಲಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
MUST WATCH
ಹೊಸ ಸೇರ್ಪಡೆ
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.