ಸವಾರರಿಗೆ ಮಾರಕವಾದ ಹೊಳೆ ಬೆಳ್ಳೂರು ರಸ್ತೆ
Team Udayavani, Sep 29, 2021, 2:59 PM IST
ಆಲೂರು: ಮೂರ್ನಾಲ್ಕು ವರ್ಷಗಳಿಂದ ತಾಲೂಕಿನ ಹೊಳೆ ಬೆಳ್ಳೂರು ರಸ್ತೆಯಲ್ಲಿ ಅಪಾರ ಪ್ರಮಾಣದ ಗುಂಡಿ ಬಿದ್ದು ಜನಸಾಮಾನ್ಯರು ಓಡಾಡಲು ತುಂಬಾತೊಂದರೆ ಅನುಭವಿಸುತ್ತಿದ್ದಾರೆ. ಆದರೂ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಇತ್ತ ಗಮನ ಹರಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸಂಬಂಧ ಇಲಾಖೆ ಗಮನಹರಿಸಲಿ: ಆಲೂರು ಪಟ್ಟಣಕ್ಕೆ 5 ಕಿ.ಮೀ.ದೂರದಲ್ಲಿರುವ ಹೊಳೆ ಬೆಳ್ಳೂರುರಸ್ತೆ ಈ ಹಿಂದೆ ಸಂಪೂರ್ಣವಾಗಿ ಗುಂಡಿ ಬಿದ್ದ ಹಿನ್ನೆಲೆ 3-4 ವರ್ಷಗಳ ಹಿಂದೆ ಬಂಡಿ ತಿಮ್ಮನಹಳ್ಳಿ, ಚಿಕ್ಕಣಗಾಲು ಹೊಸಳ್ಳಿ, ಕುಂಬಾರಹಳ್ಳಿ, ಕುಂಬಾರಹಳ್ಳಿಕೊಪ್ಪಲು, ನಾಕಲಗೋಡು ಕೊಪ್ಪಲು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಅಲ್ಲದೇ, ಪಕ್ಕದಲ್ಲಿಎತ್ತಿನಹೊಳೆ ಕಾಲುವೆ ಹಾದು ಹೋಗಿರುವುದರಿಂದರಸ್ತೆಯಲ್ಲಿ ಎತ್ತಿನ ಹೊಳೆ ಇಲಾಖೆಗೆ ಸೇರಿದ ವಾಹನಗಳು ಓಡಾಡುವುದರಿಂದ ರಸ್ತೆ ಸಂಪೂರ್ಣವಾಗಿ ಹಾಳಾಗಿ ಹೋಗಿದ್ದು ಸಂಬಂಧಪಟ್ಟ ಇಲಾಖೆ ರಸ್ತೆ ಅಭಿವೃದ್ಧಿ ಪಡಿಸಬೇಕೆಂದು ಒತ್ತಾಯಿಸಿದ್ದರು. ಈ ಹಿನ್ನೆಲೆ 3-4 ವರ್ಷಗಳ ಹಿಂದೆಎತ್ತಿನಹೊಳೆ ಯೋಜನೆ ಇಲಾಖೆ 3 ಕೋಟಿ ರೂ.ವೆಚ್ಚದಲ್ಲಿ ಗೇಕರವಳ್ಳಿ ಕೆರೆ ಏರಿಗೆ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲಾಗಿದೆ.
ರಸ್ತೆ ಸಮಸ್ಯೆಯಿಂದ 3 ವರ್ಷಗಳಿಂದ ಬಸ್ ಬರುತ್ತಿಲ್ಲ :
ಕೆರೆಯ ಎಡ ಭಾಗದಲ್ಲಿ ಆಳವಾದ ಕೆರೆ ಬಲ ಭಾಗದಲ್ಲಿ ಆಳವಾದ ಗದ್ದೆ ಹಳ್ಳ ಇರುವುದರಿಂದ ಜನಸಾಮಾನ್ಯರು ಕೆರೆ ಏರಿ ಮೇಲೆ ಓಡಾಡಲು ಭಯ ಪಡುವಂತಾಗಿದೆ. ಹೀಗಾಗಿ ಹೊಳೆ ಬೆಳ್ಳೂರಿಗೆ ಬರುತ್ತಿದ್ದ ಬಸ್ 3 ವರ್ಷಗಳಿಂದಲೂ ನಿಂತು ಹೋಗಿದ್ದು ಜನ ಸಾಮಾನ್ಯರು ಸುತ್ತಿ ಬಳಸಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ರಸ್ತೆಯಲ್ಲಿ ಯಾವುದೇ ವಾಹನ ಸವಾರರು ಬರುತ್ತಿಲ್ಲ. ಒಂದು ವೇಳೆ ಬಂದರೂ ರಸ್ತೆ ಗುಂಡಿಯೊಳಗೆ ಬಿದ್ದು ಎಷ್ಟೋ ವಾಹನ ಸವಾರರು ಕೈ ಕಾಲು ಕಳೆದುಕೊಂಡಿದ್ದಾರೆ. ಇನ್ನೂ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆಂದು ಸ್ಥಳೀಯರೇ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನುಳಿದ ಕಾಮಗಾರಿ ಮುಗಿಸಲಿ:
ತಾಲೂಕಿನ ಹೊಳೆಬೆಳ್ಳೂರು ರಸ್ತೆ ಸಂಪೂರ್ಣವಾಗಿ ಹಾಳಾದ ಹಿನ್ನೆಲೆ ಜನಸಾಮಾನ್ಯರು ರಸ್ತೆಯಲ್ಲಿ ಓಡಾಡಲು ತುಂಬಾ ತೊಂದರೆಯಾಗಿದೆ. ಈ ಭಾಗದ ಜನಸಾಮಾನ್ಯರ ಹೋರಾಟದ ಫಲವಾಗಿ ಎತ್ತಿನಹೊಳೆ ಇಲಾಖೆ ವತಿಯಿಂದ ಗೇಕರವಳ್ಳಿ ಕೆರೆ ಏರಿ ಮೇಲೆ ಕಾಂಕ್ರೀಟೀಕರಣ ಮಾಡಲಾಗಿದೆ.ಇನ್ನುಳಿದ ಕಾಮಗಾರಿ ಆದಷ್ಟು ಬೇಗ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ತಾಪಂ ಮಾಜಿ ಸದಸ್ಯ ನಟರಾಜ್ ನಾಕಲಗೊಡು ಒತ್ತಾಯಿಸಿದ್ದಾರೆ.
ಬಿಕ್ಕೋಡು ರಸ್ತೆಯಿಂದ ಹೊಳಬೆಳ್ಳೂರು ಗ್ರಾಮದವರೆಗೆ ರಸ್ತೆ ಸಂಪೂರ್ಣವಾಗಿ ಗುಂಡಿ ಬಿದ್ದು ಓಡಾಡದಂತಹ ಸ್ಥಿತಿನಿರ್ಮಾಣವಾಗಿದೆ. ಈ ಭಾಗದ ಜನಸಾಮಾನ್ಯರ ಹೋರಾಟದಫಲವಾಗಿ ಗೇಕರವಳ್ಳಿ ಕೆರೆ ಏರಿ ಮೇಲೆ ಕೇವಲ 750 ಮೀ.ಮಾತ್ರ ಕಾಂಕ್ರಿಟ್ ರಸ್ತೆ ನಿರ್ಮಾಣವಾಗಿದೆ. ಆದರೆ ಕೆರೆ ಏರಿ ರಸ್ತೆಯ ಇಕ್ಕೆಲಗಳಲ್ಲಿ ತಡೆಗೊಡೆ ನಿರ್ಮಾಣವಾಗಬೇಕಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು. – ವೀಣಾ, ಹುಣಸವಳ್ಳಿ ಗ್ರಾಪಂ ಸದಸ್ಯೆ
– ಟಿ.ಕೆ.ಕುಮಾರಸ್ವಾಮಿ ಟಿ.ತಿಮ್ಮನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.