ಪುರಸಭೆ ಬಜೆಟ್: ಮೂಲ ಸೌಕರ್ಯಕ್ಕೆ ಆದ್ಯತೆ
Team Udayavani, Mar 4, 2019, 9:05 AM IST
ಬೇಲೂರು: ಬೇಲೂರು ಪುರಸಭೆ 2019-20ನೇ ಸಾಲಿನಲ್ಲಿ 5ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆಯನ್ನು ಪುರಸಭೆ ಅಧ್ಯಕ್ಷೆ ಭಾರತಿ ಮಂಡಿಸಿದರು.
ಪುರಸಭಾ ಹೊಯ್ಸಳ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಬಜೆಟ್ ಮಂಡಿಸಿ ಮಾತನಾಡಿದ ಅವರು, ಸರ್ಕಾರದ ನಿಧಿಗಳು ಸೇರಿದಂತೆ ವಿವಿಧ ಮೂಲಗಳಿಂದ 22. 34ಕೋಟಿ ರೂ. ಆದಾಯ ನಿರೀಕ್ಷೆ ಮಾಡಿದ್ದು ಪಟ್ಟಣದ 23 ವಾರ್ಡ್‌ಗಳ ಅಭಿವೃದ್ಧಿ ಕಾಮಗಾರಿಗಳಾಗಿ 22. 29ಕೋಟಿ ರೂ. ಲಕ್ಷ ವೆಚ್ಚ ಮಾಡಲಾಗುತ್ತದೆ. 5.7ಲಕ್ಷ ರೂ.ಗಳ ಉಳಿತಾಯ ನಿರೀಕ್ಷಿಸಲಾಗಿದೆ ಎಂದರು.
ವಿವಿಧ ಆದಾಯದ ಮೂಲಗಳು: ಕಟ್ಟಡ ಆಸ್ತಿ ತೆರಿಗೆ 1.25ಕೋಟಿ ರೂ., ಉದ್ದಿಮೆ ಪರವಾನಗಿ ಶುಲ್ಕದಿಂದ 4.50ಲಕ್ಷ ರೂ., ವಾಣಿಜ್ಯ ಮಳಿಗಗಳ ಬಾಡಿಗೆ 1.50 ಕೋಟಿ ರೂ., ನಿವೇಶನ ಅಭಿವೃದ್ಧಿ ಶುಲ್ಕದಿಂದ 6ಲಕ್ಷ, ಮಾರುಕಟ್ಟೆ ಶುಲ್ಕ 2.50ಲಕ್ಷ ಶುಲ್ಕ, ಖಾತಾ ನಕಲು ಹಾಗೂ ಇತರೆ ಪ್ರಮಾಣ ಪತ್ರಗಳಿಂದ 4ಲಕ್ಷ, ಸರ್ಕಾರದಿಂದ ಬರುವ ಅನುದಾನ 2.17ಕೋಟಿ ರೂ., ಎಸ್‌ಎಫ್ಸಿ ಮುಕ್ತನಿಧಿ ಅನುದಾನ 85ಲಕ್ಷ ರೂ., 14ನೇ ಹಣಕಾಸು ಯೋಜನೆಯ ಅನುದಾನ 1.48ಲಕ್ಷ ರೂ., ನಗರೋತ್ಥಾನ ಯೋಜನೆಯಿಂದ 4 ಕೋಟಿ ರೂ., ಕುಡಿಯುವ ನೀರಿನ ಅನುದಾನ, 20ಲಕ್ಷ ರೂ., ವಿದ್ಯುತ್, 1.70ಲಕ್ಷ ರೂ., ಮನೆ ಕಸ ಸಂಗ್ರಹಣೆಯಿಂದ 15ಲಕ್ಷ ರೂ., ಜಾಹೀರಾತು
ಫಲಕದಿಂದ 75ಸಾವಿರ ರೂ., ನಿವೇಶನ ಖರೀದಿಗೆ 60ಲಕ್ಷ ರೂ., ಇತರೆ ಅನುದಾನಗಳು ಸೇರಿಂದತೆ 22.29 ಕೋಟಿ ರೂ. ಆದಾಯ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದರು.
ಅಭಿವೃದ್ಧಿಗೆ ಹಣ ಮೀಸಲು: ಪಟ್ಟಣದ ಅಭಿವೃದ್ಧಿಗಾಗಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕಾಗಿ 3. 40 ಕೋಟಿ ರೂ., ಕಚೇರಿ ಗಣಕ ಯಂತ್ರ ಉಪಕರಣಗಳ ಖರೀದಿಗಾಗಿ 10 ಲಕ್ಷ ರೂ., ಹೈಮಾಸ್ಟ್ ಸೋಲಾರ್ ಬೀದಿ ದೀಪ ಖರೀದಿಗೆ 25 ಲಕ್ಷ ರೂ., ಹೊಸ ವಿದ್ಯುತ್ ಕಂಬಗಳಿಗೆ 15ಲಕ್ಷ ರೂ., ಶೌಚಾಲಯ ನಿರ್ಮಾಣಕ್ಕೆ 2.5ಲಕ್ಷ ರೂ.,
ಕಟ್ಟಡ ದುರಸ್ತಿಗೆ 10ಲಕ್ಷ ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ 1.25ಲಕ್ಷ ರೂ., ಅಲ್ಲದೇ ಸ್ವಾಗತ ಕಮಾನು ಮಾರ್ಗ ಸೂಚಿ ಫಲಕ, ಪಾದಚಾರಿ ರಸ್ತೆ, ಹೊರ ಗುತ್ತಿಗೆ ನಿರ್ವಾಹಣೆ ವೆಚ್ಚ ವಾಹನ ದುರಸ್ತಿ ಕೋಳವೆ ಬಾವಿ, ನೀರಿನ ವ್ಯವಸ್ಥೆ ಸ್ಮಾಶಾನ ಅಭಿವೃದ್ಧಿ ಒಳಚರಂಡಿ, ಕಸಾಯಿ ಖಾನೆ, ಇನ್ನಿತರೆ ಅಭಿವೃದ್ಧಿ ಕಾರ್ಯಗಳಿಗೆ 22.29 ಕೋಟಿ ರೂ. ವೆಚ್ಚ ಮಾಡಲಾಗುವುದು ಎಂದು ತಿಳಿಸಿದರು. ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಸದಸ್ಯ ಶಾಂತಕುಮಾರ್ ಸದಸ್ಯರ ಸಲಹೆ ಪಡೆಯದೇ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಸದಸ್ಯ ಎಂ.ಆರ್.ವೆಂಕಟೇಶ್ ಮಾತನಾಡಿ, ಯೋಜನೆಗಳಿಗೆ ಬಜೆಟ್‌ನಲ್ಲಿ ಹಣ ಮೀಸಲಿಟ್ಟೆದರೆ ಸಾಲದು ಪ್ರತಿವಾರ್ಡ್‌ಗಳಿಗೂ ಅಧಿಕಾರಿಗಳು ಭೇಟಿ ನೀಡಿ ಪುರಸಭೆಯ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸಬೇಕು ಎಂದರು. ಸಭೆಯಲ್ಲಿ ಉಪಾಧ್ಯಕ್ಷ ಅರುಣಕುಮಾರ್, ಮುಖ್ಯಾಧಿಕಾರಿ ಮಂಜುನಾಥ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
ಹಾಸನಾಂಬೆ ದರ್ಶನಕ್ಕೆ ವಿಧ್ಯುಕ್ತ ತೆರೆ; 9 ದಿನದಲ್ಲಿ 19 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.