ಕಾವ್ಯಾನುವಾದದಿಂದ ಪ್ರಸ್ತುತತೆ ಪ್ರಶ್ನೆಗೆ ಉತ್ತರ
Team Udayavani, Jun 26, 2018, 6:30 AM IST
ಚನ್ನರಾಯಪಟ್ಟಣ: “ಹಳಗನ್ನಡದ ಕಾವ್ಯಗಳನ್ನು ಆಧುನಿಕ ಗದ್ಯಕ್ಕೆ ತಂದು ಅವುಗಳನ್ನು ಕನ್ನಡೇತರ ಭಾಷೆಗಳಿಗೆ ಅನುವಾದಿಸಿದಾಗ ಹಳಗನ್ನಡದ ಪ್ರಸ್ತುತತೆಯ ಪ್ರಶ್ನೆ ಎತ್ತುವವರಿಗೆ ಉತ್ತರ ಸಿಗುತ್ತದೆ’ ಎಂದು ಸಾಹಿತಿ ಡಾ.ಷ.ಶೆಟ್ಟರ ತಿಳಿಸಿದರು.
ಜೈನಕಾಶಿ ಶ್ರವಣಬೆಳಗೊಳದ ಚಾವುಂಡರಾಯ ಮಂಟಪದಲ್ಲಿ ಹಮ್ಮಿಕೊಂಡಿದ್ದ ಅಖೀಲ ಭಾರತ ಪ್ರಥಮ ಹಳಗನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಳಗನ್ನಡದ ಸಾರಅರಿಯಬೇಕಾದರೆ ಆ ಕಾವ್ಯಗಳನ್ನು ಇಂದಿನ ಆಧುನಿಕ ಗದ್ಯಕ್ಕೆ ತರ್ಜುಮೆ ಮಾಡಿದ ನಂತರ ಪ್ರಪಂಚದ ಇತರೆ ಭಾಷೆಗಳಿಗೆ ಅನುವಾದ ಮಾಡಿದರೆ ಅವುಗಳಲ್ಲಿರುವ ತಿರುಳು ತಿಳಿಯುತ್ತದೆ ಎಂದರು.
ಹಳಗನ್ನಡವನ್ನು ಓದಲು ವ್ಯಾಕರಣ, ಛಂದಸ್ಸು ಅಲಂಕಾರ ತಿಳಿದಿರಲೇಬೇಕೆಂಬ ಕಡ್ಡಾಯವಿಲ್ಲ, ಆದರೆ ಕಾವ್ಯದಲ್ಲಿರುವ ತಿರುಳನ್ನು ಅಭಿರುಚಿ ಇರಬೇಕು. ಕಾವ್ಯವನ್ನು ಓದುತ್ತಾ ಹೋದಂತೆ ಅದರಲ್ಲಿರುವ ವಿಷಯದ ಅರಿವಿಗೆ ವ್ಯಾಕರಣ, ಛಂದಸ್ಸು ಅಲಂಕಾರ ಪ್ರಸ್ತುತವಾಗುತ್ತದೆ ಎಂದರು.
ಕನ್ನಡ ಪುನರುತ್ಥಾನ ಆರಂಭವಾಗಿದ್ದೇ 19 ನೇ ಶತಮಾನದಲ್ಲಿ ಅದಕ್ಕೂ ಮುಂಚೆ ಕನ್ನಡ ಸಾಹಿತ್ಯ ಬರಹ ನುಡಿ ಗೊತ್ತಿರಲಿಲ್ಲ. ಆದರೆ ಬ್ರಾಹ್ಮಿ ಅಕ್ಷರವನ್ನು ಮರತಂತೆ ಕನ್ನಡ ಅಕ್ಷರನ್ನು ಮರೆತಿರಲಿಲ್ಲ. ಪಂಪ, ರನ್ನ ಹಾಗೂ ಜನ್ನ ಗೊತ್ತಿರಲಿಲ್ಲ ಕನ್ನಡದ ಉಚ್ಛಾ†ಯ ಸ್ಥಿತಿ ಎಂದು 19 ನೇ ಶತಮಾತನದ ಅಂತ್ಯ ಹಾಗೂ 20 ನೇ ಶತಮಾನದ ಆರಂಭವನ್ನು ಗುರುತಿಸಬಹುದು ಎಂದು ಹೇಳಿದರು.
ಕಾವ್ಯಪ್ರಭೇದಕ್ಕೆ ನಿರ್ದಿಷ್ಟ ಶೈಲಿಯಿಲ್ಲ. ಸಮಾಜದ ಸಮಸ್ಯೆಗಳನ್ನು ಪ್ರಚೋದಿಸಲು ಕಾವ್ಯ ಬೇಕಾಗುತ್ತದೆ. ಕನ್ನಡದಲ್ಲಿ ಆಯಾ ಕಾಲ ಘಟ್ಟದ ಆಡು ಮಾತಿನ ಸಾಹಿತ್ಯ ಬದಲಾಗುತ್ತಾ ಬಂದಿದೆ. ಕನ್ನಡ ಯಾವಾಗ ಬರವಣಿಗೆಯ ರೂಪದಲ್ಲಿ ಬಂತು, ಲಿಪಿ ಯಾವಾಗ ಬಂತು ಎಂಬುದು ತಿಳಿಯುವುದಿಲ್ಲ. ಸಮಕಾಲೀನ ಇತರ ಭಾಷೆಗಳಿಂದ ಕನ್ನಡದ ಅಸ್ಮಿತೆ ಅರಿಯಬೇಕು ಎಂದರು.
ಹಲ್ಮಿಡಿ ಶಾಸನ ಪ್ರಶ್ನಾರ್ಹ?
ಹಲ್ಮಿಡಿ ಶಾಸನವೇ ಕನ್ನಡದ ಪ್ರಥಮ ಶಾಸನ ಎಂಬುದು ಪ್ರಶ್ನಾರ್ಹ. ಏಕೆಂದರೆ ಈ ಶಾಸನದಲ್ಲಿ ದಿನಾಂಕ
ನಮೂದಾಗಿಲ್ಲ. ಶಾಸನವನ್ನು ಕಂಡು ಹಿಡಿದವರು ಕ್ರಿ.ಶ.450 ರಲ್ಲಿ ರಚಿತವಾಗಿರಬಹುದೆಂದು ತಿಳಿಸಿದ್ದಾರೆ
ಎಂದು ಡಾ.ಷ.ಶೆಟ್ಟರ ಹೇಳಿದರು.
ಹಲ್ಮಿಡಿ ಶಾಸನದಲ್ಲಿ ಪ್ರಬುದಟಛಿ ಕನ್ನಡ ಬಳಕೆಯಾಗಿದೆ, ಅದಕ್ಕಿಂತಲೂ ಮುಂಚಿತವಾಗಿ ಬಾಲ್ಯಾವಸ್ಥೆಯ ಕನ್ನಡ
ಇದ್ದಿರಬಹುದು. ಆಗಿನ ಕಾಲದ ಸಂಶೋಧಕರನ್ನು ಅಲ್ಲಗಳೆಯುವಂತಿಲ್ಲ ಅಂದಿನ ಕಾಲದ ಸ್ಥಿತಿಗತಿ ಅಧ್ಯಯನದ
ಬೆಳವಣಿಗೆಗಳಿಂದ ನಿರ್ಧರಿಸಿರುತ್ತಾರೆ. ಅವರನ್ನು ಟೀಕೆ ಮಾಡುವುದು ತಪ್ಪಾಗುತ್ತದೆ. ಆದರೆ ಅದನ್ನೇ ಸರಿ
ಅಂದುಕೊಂಡು ಇರುವುದೂ ತಪ್ಪಾಗುತ್ತದೆ ಎಂದರು.
ಧರ್ಮ ಸಹಿಷ್ಣುತೆ, ಇನ್ನೊಬ್ಬರ ವಿಚಾರವನ್ನು ಸಹಿಸುವಂತಹ ವಿಷಯಗಳು ಕವಿರಾಜ ಮಾರ್ಗ ಓದಿದಾಗ ತಿಳಿಯುತ್ತದೆ. ಆದರೆ ಇಂದಿನ ರಾಜಕಾರಣಿಗಳು ತಮ್ಮ ವಿಚಾರವಂತಿಕೆಯನ್ನು ಹೇರಲು ಕೊಲೆ ಮಾಡುವ ಹಂತಕ್ಕೆ
ತಲುಪಿದ್ದಾರೆ.
– ಡಾ.ಷ.ಶೆಟ್ಟರ, ಸಾಹಿತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
Naxalites; ಶರಣಾಗತಿ ಪ್ಯಾಕೇಜ್ ಬೆಚ್ಚಿಬೀಳಿಸಿದೆ: ಸುನಿಲ್ ಕುಮಾರ್ ತೀವ್ರ ಆಕ್ರೋಶ
Raichur; ಜೆಸ್ಕಾಂ ಜೆ.ಇ ಹುಲಿರಾಜ ಮನೆ ಮೇಲೆ ಲೋಕಾಯುಕ್ತ ದಾಳಿ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Arrested: ಪೈಂಟ್ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ
Dharmasthala: ದೇವರ ದರ್ಶನ ಇನ್ನಷ್ಟು ಸುಲಲಿತ
ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.