ತಲ್ವಾರ್ ಹಿಡಿದು ಬೈಕ್ ವ್ಹೀಲಿಂಗ್
Team Udayavani, Nov 28, 2021, 3:43 PM IST
ಚನ್ನರಾಯಪಟ್ಟಣ: ಪಟ್ಟಣದ ಅಗ್ನಿಶಾಮಕದ ಮುಂಭಾಗದಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಯುವಕರು ಬೈಕ್ ವ್ಹೀಲಿಂಗ್ ಮಾಡುವ ಜೊತೆಗೆ ಕೈಯಲ್ಲಿ ಮಾರಕಾಸ್ತ್ರವನ್ನು ಹಿಡಿದು ಪುಂಡಾಟಿಕೆ ಮೆರೆದಿರುವುದು ಸಾರ್ವಜನಿಕರಿಗೆ ಆತಂಕ ಉಂಟಾಗಿದೆ.
ಗುತ್ತಿಗೆದಾರರ ಸಂಘದ ಕಟ್ಟಡದ ಸಮೀಪದಿಂದ ರಿಲಯನ್ಸ್ ಪೆಟ್ರೋಲ್ ಬಂಕ್ ಮೂಲಕ ಪಟ್ಟಣ ಪ್ರವೇಶಿಸುವ ಮೂರು ಬೈಕ್‌ನಲ್ಲಿ ಐದು ಮಂದಿ ಪುಂಡರ ಗುಂಪಿನಲ್ಲಿ ಒಂದು ಬೈಕಿನಲ್ಲಿ ಹಿಂಬದಿ ಸವಾರನ ಕೈಯಲ್ಲಿ ತಲ್ವಾರ್ ಹಿಡಿದ ಸಂಚರಿಸುತ್ತಿದ್ದರೆ, ಪದಾಚಾರಿಗಳು ಭಯದಿಂದ ಮೌನಕ್ಕೆ ಶರಣಾಗಿದ್ದಾರೆ. ಇದರಲ್ಲಿ ಕೆಲವರು ವಿಡಿಯೋ ಮಾಡಿ, ಸಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ.
ಹಾಡಹಗಲಿನಲ್ಲಿ ಈ ರೀತಿ ತಲ್ವಾರ ಹಿಡಿದು ಸಾರ್ವಜನಿಕರ ಮುಂದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪುಂಡರು, ಬೈಕಿನಲ್ಲಿ ಸಂಚಾರ ಮಾಡುವ ದೃಶ್ಯ ನೋಡಿದ ಜನತೆ ಭಯದಲ್ಲಿದ್ದು, ಮಹಿಳೆಯರು ಹಾಗೂ ಯುವತಿಯರು ಸಂಚಾರ ಮಾಡುವುದು ಹೇಗ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಆಗಾಗ ಸಾಭೀತಾಗುತ್ತಿದ್ದರೂ ಪೊಲೀಸರು ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದಾರೆ.ವಿಡಿಯೋ ನೋಡಿದ ಮೇಲಾದರವು ಪೊಲೀಸರು ಎಚ್ಚೆತ್ತುಕೊಂಡು ಪುಂಡರ ಹೆಡೆಮುರಿ ಕಟ್ಟಲು ಮುಂದಾಗದಿದ್ದರೆ ತಾಲೂಕಿನಲ್ಲಿ ಗೌರವಯುತವಾಗಿ ಬದುಕುವುದು ಕಷ್ಟವಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Enquiry: ತನ್ನದೇ ವೀಡಿಯೋ ಕೋರ್ಟ್‌ನಲ್ಲಿ ವೀಕ್ಷಿಸಲು ಮಾಜಿ ಸಂಸದ ಪ್ರಜ್ವಲ್‌ಗೆ ಅನುಮತಿ
Discomfort: ಬಿಜೆಪಿ ತೊರೆಯುವರೇ ಹಾಸನ ಕ್ಷೇತ್ರದ ಮಾಜಿ ಶಾಸಕ ಪ್ರೀತಂ ಗೌಡ?
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
ದ್ವೇಷದ ರಾಜಕಾರಣ ಸುಡುವ ಕಾಲ ಸನ್ನಿಹಿತ: ಸೂರಜ್ ರೇವಣ್ಣ
ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ದಿಢೀರ್ ಕಾಣಿಸಿಕೊಂಡ ಬೆಂಕಿ; ತಪ್ಪಿದ ಭಾರಿ ಅನಾಹುತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.