ಸ್ಮಾರಕ ಬದಲು ವನ ನಿರ್ಮಿಸಿ
Team Udayavani, Feb 28, 2019, 10:52 AM IST
ಚನ್ನರಾಯಪಟ್ಟಣ: ಹುತಾತ್ಮರಾದ ವೀರ ಯೋಧರ ಸ್ಮಾರಕ ನಿರ್ಮಾಣ ಮಾಡುವ ಬದಲಾಗಿ ಯೋಧರ ಹೆಸರಿನಲ್ಲಿ ವನ ನಿರ್ಮಾಣ ಮಾಡಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮುಂದಾಗಬೇಕು ಎಂದು ರಾಷ್ಟ್ರೀಯ ಪರಿಸರ ಪ್ರಶಸ್ತಿ ಪುರಸ್ಕೃತ ಸಿ.ಎನ್.ಅಶೋಕ್ ಮನವಿ ಮಾಡಿದರು.
ಪಟ್ಟಣದ ಹೊರವಲಯದಲ್ಲಿನ ಮೊರಾರ್ಜಿ ವಸತಿ ಶಾಲೆಯಲ್ಲಿ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್, ತಾಲೂಕು ಆಡಳಿತದಿಂದ ಪುಲ್ವಾಮಾ ದುರಂತದಲ್ಲಿ ವೀರ ಮರಣ ಹೊಂದಿದ 49 ಯೋಧರ ಸ್ಮರಣಾರ್ಥ 49 ಗಿಡ ನೆಡುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯೋಧರ ಗ್ರಾಮಗಳಲ್ಲಿ ಸರ್ಕಾರಿ ಗೋಮಾಳ, ಗುಂಡು ತೋಪುಗಳಲ್ಲಿ ತಾಲೂಕು ಆಡಳಿತದಿಂದ ವನ ನಿರ್ಮಾಣ ಮಾಡಿ ಹುತಾತ್ಮ ಯೋಧರ ಹೆಸರು ಇಡಬೇಕು ಎಂದರು.
ದೇಶಾದ್ಯಂತ ಶ್ರದ್ಧಾಂಜಲಿ: ದೇಶಾದ್ಯಂತ ಹುತಾತ್ಮ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ಮೌನ ಆಚರಣೆ ಮೂಲಕ ಶ್ರದ್ಧಾಂಜಲಿ ಮಾಡುವುದರಿಂದ ಕೇಲವ ಒಂದು ದಿವಸಕ್ಕೆ ಸೀಮಿತವಾಗುತ್ತದೆ ಅವರ ಹೆಸರಿನಲ್ಲಿ ಗಿಡ ನೆಟ್ಟು ಪೋಷಣೆ ಮಾಡುವುದರಿಂದ ಹುತಾತ್ಮರ ಹೆಸರು
ಅಜರಾಮರವಾಗಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಅರಣ್ಯ ಇಲಾಕೆ ಮೂಲಕ ಮಾಡಿಸಲು ಮುಂದಾದರೆ ಸಾರ್ವಜನಿಕರು ಕೈ ಜೋಡಿಸಲಿದ್ದಾರೆ ಎಂದು ತಿಳಿಸಿದರು.
ಯೋದರ ಹೆಸರಲ್ಲಿ ಗಿಡ ನೆಡಿ: ತಹಶೀಲ್ದಾರ್ ಜೆ.ಬಿ.ಮಾರುತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು, ದೇಶಕ್ಕಾಗಿ ಬಲಿದಾನ ಆದವರ ಹೆಸರು ಬಹುಕಾಲ ಸಮಾಜದಲ್ಲಿ ಉಳಿಯುಬೇಕೆಂದರೆ ಅವರ ಹೆಸರಿನಲ್ಲಿ ನಾವುಗಳು ಗಿಡ ನೆಟ್ಟು ಪೋಷಣೆ ಮಾಡಬೇಕು. ಸೈನಿಕರು ಬದುಕಿದ್ದಾಗ ನಮಗೆ
ನೆರಳಾಗಿದ್ದರು ಅವರು ಹುತಾತ್ಮರಾದ ಮೇಲೆ ಅವರ ಹೆಸರಿನ ಮರಗಳು ಪ್ರಾಣಿ ಪಕ್ಷಿಗಳಿಗೆ ನೆರಳಾಗುವಂತೆ ಮಾಡುವುದು ನಮ್ಮಗಳ ಆಧ್ಯ ಕರ್ತವ್ಯವಾಗಿದೆ ಎಂದರು.
ಉತ್ತಮವಾಗಿ ವ್ಯಾಸಂಗ ಮಾಡಿ: ಬಡವರ ಮಕ್ಕಳು ಉನ್ನತ ಹುದ್ದೆ ಅಲಂಕರಿಸಿದೆ ಬಡವರ, ರೈತರ ಹಾಗೂ ಕೂಲಿ ಕಾರ್ಮಿಕರ ಸೇವೆ ಮಾಡುತ್ತಾರೆ. ಹಣವಂತ ಮಕ್ಕಳಿಗೆ ಅಧಿಕಾರ ದೊರೆತರೆ ಬಡವರ ಕಲ್ಯಾಣ ಆಗುವುದಿಲ್ಲ ಅವರ ಹಿಂಬಾಲಕರಿಗೆ ಹೊಗಳುಭಟ್ಟರಿಗೆ ಮಾತ್ರ ಸಹಕಾರ ಆಗಲಿದೆ. ಇದನ್ನು ಮನದಲ್ಲಿ ಇಟ್ಟುಕೊಂಡು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಾದ ತಾವು ಉತ್ತಮ ವ್ಯಾಸಂಗ ಮಾಡಿ ಉನ್ನತ ಹುದ್ದೆ ಅಲಂಕರಿಸ ಬೇಕು ಎಂದು ಹೇಳಿದರು.
ಅಂಕ ಗಳಿಕೆಗೆ ಸೀಮಿತರಾಗದಿರಿ: ಕೇವಲ ಅಂಕ ಗಳಿಕೆಗೆ ವ್ಯಾಸಂಗ ಮಾಡದೇ ಇಂದಿನ ಓದು ಮುಂದಿನ ಸಮಾಜದ ದಾರಿ ದೀಪವಾಗಬೇಕು. ಪರೀಕ್ಷೆ ವೇಳೆ ಹೆಚ್ಚು ಓದುವ ಬದಲಾಗಿ ನಿತ್ಯವೂ ಸಮಯ ಪ್ರಜ್ಞೆಯಿಂದ ವ್ಯಾಸಂಗ ಮಾಡಬೇಕು, ಪರಿಸರವನ್ನು ಪ್ರೀತಿಸಿದರೆ ಸಾಲದು ಉಳಿಸಿ
ಬೆಳೆಸಲು ಮುಂದಾಗಬೇಕು ಎಂದು ಕಿವಿ ಮಾತು ಹೇಳಿದರು.
ತಾಲೂಕು ಪಂಚಾಯಿತಿ ಇಒ ಚಂದ್ರಶೇಖರ್, ಬಿಸಿಎಂ ಅಧಿಕಾರಿ ಮಂಜುನಾಥ್, ಮಕ್ಕಳ ಸಾಹಿತ್ಯ ಪರಿಷತ್ ಪದಾಧಿಕಾರಿಗಳಾದ ಸಚ್ಚಿನ್, ನೀಲಾ, ಮಹದೇವ್, ಜಯರಾಂ, ನುಗ್ಗೇಹಳ್ಳಿ ಮೊರಾರ್ಜಿ ವಸತಿ ಶಾಲೆ ಪ್ರಾಂಶುಪಾಲ ಸಂತೋಷ, ಗೂರಮಾರನಹಳ್ಳಿ ಶಾಲೆ ಪ್ರಾಂಶುಪಾಲೆ ಕಲ್ಪನಾ
ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.