ಕಟ್ಟಡ ಕಾರ್ಮಿಕರ ಪ್ರತಿಭಟನೆ
Team Udayavani, Dec 13, 2018, 4:05 PM IST
ಹಾಸನ: ಕಾರ್ಮಿಕರಿಗೆ ಸೌಲಭ್ಯಗಳನ್ನು ಮಂಜೂರು ಮಾಡುವಲ್ಲಿ ಆಗುತ್ತಿರುವ ವಿಳಂಬ ವಿರೋಧಿಸಿ ಎಐಟಿಯುಸಿ ನೇತೃತ್ವದಲ್ಲಿ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಅರಳೀಕಟ್ಟೆ ವೃತ್ತದ ಬಳಿ ಇರುವ ಕಾರ್ಮಿಕ ಇಲಾಖೆ ಕಚೇರಿ ಬಳಿ ಕೆಲ ಕಾಲ ಪ್ರತಿಭಟನೆ ನಡೆಸಿದ ಕಾರ್ಮಿಕರು ಸಹ್ಯಾದ್ರಿವೃತ್ತ, ಹೇಮಾವತಿ ಪ್ರತಿಮೆ ಬಳಿ ಮೂಲಕ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಆವರಣಕ್ಕೆ ತೆರಳಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ಎಐಟಿಯುಸಿ ಹಾಗೂ ಇತರ ಕಟ್ಟಡ ಕಾರ್ಮಿಕ ಸಂಘಟನೆಗಳ ಹೋರಾಟಗಳ ಪರಿಣಾಮ ವಾಗಿ ರಾಜ್ಯ ಸರ್ಕಾರ ಕ್ಷೇಮಾಭಿ ವೃದ್ಧಿ ಮಂಡಳಿಯನ್ನು ರಚಿಸಿದೆ. ರಾಜ್ಯಾದ್ಯಂತ ಲಕ್ಷಾಂತರ ಮಂದಿ ಕಟ್ಟಡ ಕಾರ್ಮಿಕರು
ಅದರ ಪ್ರಯೋಜನ ಪಡೆಯುತ್ತಿದ್ದಾರೆ. ಎಂದರು.
ಇತ್ತೀಚಿನ ದಿನಗಳಲ್ಲಿ ಮಂಡಳಿ ಹಾಗೂ ಕಾರ್ಮಿಕ ಇಲಾಖೆಯು ಕಾರ್ಮಿಕರಿಗೆ ಸವಲತ್ತುಗಳನ್ನು ಒದಗಿಸದೇ ಕಟ್ಟಡ ಕಾರ್ಮಿಕರನ್ನು ಕಡೆಗಣಿಸುತ್ತಿವೆ ಎಂದು ಆಪಾದಿಸಿದರು. ಅಪಘಾತ ಪರಿಹಾರವನ್ನು ಮಂಜೂರು ಮಾಡುವಲ್ಲಿ ವೈದ್ಯಕೀಯ ವೆಚ್ಚಗಳನ್ನು ಹಾಗೂ ವಿದ್ಯಾರ್ಥಿ ವೇತನಗಳನ್ನು ಮಂಜೂರು ಮಾಡುವಲ್ಲಿ ವರ್ಷಾನುಗಟ್ಟಲೆ ವಿಳಂಬವಾಗುತ್ತಿದ್ದು, ಫಲಾನುಭವಿಗಳು ಪರದಾಡುವಂತಾಗಿದೆ ಎಂದು ದೂರಿದರು.
ಭ್ರಷ್ಟಾಚಾರ ನಿಯಂತ್ರಿಸಿ: ಕಾರ್ಮಿಕ ಇಲಾಖೆಯ ಕೆಲವು ನೌಕರರಲ್ಲಿನ ಭ್ರಷ್ಟಾಚಾರ, ಅಸಹನೆಯ ವರ್ತನೆಗಳಿಂದ ಸವಲತ್ತುಗಳು ಕಾರ್ಮಿಕರಿಗೆ ದೊರೆಯಲು ವಿಳಂಬವಾಗುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಕಾರ್ಮಿಕ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಕಾರ್ಯ ವೈಖರಿಯನ್ನು ಬದಲಾಯಿ ಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕ ನಿಧಿ ನರೇಗಾಕ್ಕೆ ಬೇಡ: ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿ ನಿಧಿಯನ್ನು ನರೇಗಾ ಕಾರ್ಮಿಕರಿಗೆ ಬಳಸಕೂಡದು. ಹೃದ್ರೋಗ, ಕಿಡ್ನಿ ಕಸಿ, ಮೂಳೆ ಶಸ್ತ್ರಚಿಕಿತ್ಸೆ,
ಪಿತ್ತಕೋಶದಲ್ಲಿ ಕಲ್ಲು ತೆಗೆಯುವುದು ಮತ್ತಿತತರ ರೋಗಳಿಗೆ ಮಂಡಳಿಯು ನೇರವಾಗಿ ಚಿಕಿತ್ಸಾ ವೆಚ್ಚವನ್ನು ದಾಖಲಾದ ಆಸತ್ರೆಗೆ ಭರಿಸಿಕೊಡಬೇಕು. ಭಾಗ್ಯಲಕ್ಷ್ಮೀ ಬಾಂಡ್ ಕೊಡುವುದನ್ನು ನಿಲ್ಲಿಸಿ, ಮದುವೆ ನಿಮಿತ್ತದ ಸಹಾಯಧನವನ್ನು ಫಲಾನುಭಗಳಿಗೆ ನೇರವಾಗಿ ನೀಡಬೇಕು ಎಂದು ಮನವಿ ಮಾಡಿದರು.
ಅರ್ಜಿಗೆ ಹಿಂಬರಹ ನೀಡಿ: ಕಟ್ಟಡ ಕಾರ್ಮಿಕರ ಸೌಲಭ್ಯಗಳನ್ನು ಕೇಳಿ ಸಲ್ಲಿಸಿದ ಅರ್ಜಿಗಳನ್ನು ಹಿಂಬರಹ ನೀಡದೆ ತಿರಸ್ಕೃತಗೊಳಿಸುತ್ತಿದ್ದು ಅರ್ಜಿದಾರರಿಗೆ ಸೂಕ್ತ
ಮಾಹಿತಿಯನ್ನು ಹಿಂಬರಹದ ಮೂಲಕ ನೀಡಬೇಕು. ಅಲ್ಲದೆ ಆಯಾಯ ತಾಲೂಕು ಕಚೇರಿಗಳಲ್ಲಿ ಅವುಗಳಲ್ಲಿ ಸರಿಪಡಿಸಿ ನಂತರ ಪೂರ್ಣಗೊಂಡ ಅರ್ಜಿಗಳನ್ನು ಮುಂದಕ್ಕೆ ರವಾನಿಸಬೇಕು. ನೋಂದಣಿ ಹಾಗೂ ನವೀಕರಣಕ್ಕೆ ಹಲವು ಕಾರ್ಮಿಕರ ವಂತಿಗೆಯನ್ನು ಒಂದೆ ಚಲನ್‌ನಲ್ಲಿ ತುಂಬಲು ಸಂಘಟನೆಗಳಿಗೆ ಅವಕಾಶ ನೀಡಬೇಕು.
ಏಕೆಂದರೆ ಬ್ಯಾಂಕ್‌ಗಳಲ್ಲಿ ಬಿಡಿ ಬಿಡಿಯಾಗಿ ಚಲನ್‌ಗಳನ್ನು ಕಟ್ಟಿಸಿಕೊಳ್ಳದೆ ಸತಾಯಿಸಲಾಗುತ್ತಿದೆ. ಫಲಾನುಭಗಳಿಗೆ ಸಕಾಲ ಯೋಜನೆಯಡಿ ನಿಗದಿತ ಸಮಯ ದೊಳಗೆ ಕಾರ್ಡ್‌ಗಳನ್ನು ವಿತರಿಸಬೇಕೆಂದು ಒತ್ತಾಯಿಸಿದರು. ಎಐಟಿಯುಸಿ ಮುಖಂಡ ಎಂ.ಸಿ. ಡೋಂಗ್ರೆ, ಮಲೆನಾಡು ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಎಚ್.ಸ್ವಾಮಿ, ರಾಜ್ಯ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಮಂಜೇಗೌಡ, ಜೈಮಾರುತಿ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಸಂಘದ ರಾಜಣ್ಣ, ಹಾಸನಾಂಬಾ ಸಂಘದ ಶಶಿಧರ, ಕಾಳಿಕಾಂಬ ಕಾರ್ಮಿಕರ ಸಂಘದ ಅಧ್ಯಕ್ಷ ಗಣೇಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕಾರ್ಮಿಕರಿಗೆ ಗುರುತಿನ ಚೀಟಿ ನೀಡಿ
ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗೆ ಸರ್ಕಾರದ ಯೋಜನೆಗಳ ಅಡಿಯಲ್ಲಿ ನಿವೇಶನ ಮತ್ತು ವಾಸಿಸಲು – ಮನೆಗಳನ್ನು ಮಂಜೂರು ಮಾಡಬೇಕು. ನೋಂದಣಿಯಾದ ಕಟ್ಟಡ ಕಾರ್ಮಿಕರಿಗೆ ಗುರುತಿನ ಕೊಡದೇ ವಿಳಂಬ ನೀತಿಯನ್ನು ಅನುಸರಿಸಲಾಗುತ್ತಿದೆ. ಮಹಿಳಾ ಕಟ್ಟಡ ಕಾರ್ಮಿಕರಿಗೆ ನೋಂದಣಿಯಾಗಿ ಮೂರು ವರ್ಷ ಕಳೆದರೂ ಹೆರಿಗೆ ಧನ ಸಹಾಯ ಮಂಜೂರಾಗಿಲ್ಲ. ಇದನ್ನು ಪರಿಶೀಲಿಸಿ ತಕ್ಷಣ ಮಂಜೂರು ಮಾಡಬೇಕು. ಕಾರ್ಮಿಕರು ನೋಂದಣಿಯಾಗಿ 11 ವರ್ಷ ಕಳೆದರೂ ಸಹ ಅವರಿಗೆ ಕೆಲಸದ ಸಾಮಗ್ರಿಗಳನ್ನು ತೆಗೆದುಕೊಳ್ಳಲು ಸಹಾಯಧನ ನೀಡಿಲ್ಲ ಎಂದು ದೂರಿದರು. ಈ ಮೊದಲು ಜಿಲ್ಲಾ ಕೇಂದ್ರದಲ್ಲಿ ನೋಂದಣಿಯಾಗಿರುವ ಫಲಾನುಭವಿಗಳ ಮೂಲ ದಾಖಲೆಗಳನ್ನು ಆಯಾಯ ತಾಲೂಕು ವೃತ್ತಗಳಿಗೆ ವರ್ಗಾಯಿಸಬೇಕು. ತಾಲೂಕು ವೃತ್ತಗಳಲ್ಲಿ ಖಾಲಿ ಇರುವ ಕಾರ್ಮಿಕ ನಿರೀಕ್ಷಕ ಹುದ್ದೆಗಳನ್ನು ಭರ್ತಿ ಮಾಡಿ ಕಾಯಂ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
ದ್ವೇಷದ ರಾಜಕಾರಣ ಸುಡುವ ಕಾಲ ಸನ್ನಿಹಿತ: ಸೂರಜ್ ರೇವಣ್ಣ
ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ದಿಢೀರ್ ಕಾಣಿಸಿಕೊಂಡ ಬೆಂಕಿ; ತಪ್ಪಿದ ಭಾರಿ ಅನಾಹುತ
Hasana: ಕರೆಯನ್ನು ಸ್ವೀಕರಿಸದ ಪ್ರಿಯಕರಗೆ ಚಾಕು ಇರಿದು ಪ್ರಿಯತಮೆ ಪರಾರಿ
Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.