ದೇಶದ ಐಕ್ಯತೆಗೆ ಜಾತಿಯತೆ ಜಾಗೃತಿ ಮಾರಕ
ಸಿಡಿದೇಳುವ ಮನೋಭಾವ ಬ್ರಾಹ್ಮಣರಿಗೆ ಇಲ್ಲ, ಹಾಗಾಗಿ ಅವರ ಮೇಲೆ ಷಡ್ಯಂತ್ರಗಳು ನಡೆಯುತ್ತಿವೆ
Team Udayavani, Jul 11, 2022, 6:29 PM IST
ಚನ್ನರಾಯಪಟ್ಟಣ: ದೇಶದಲ್ಲಿ ಜಾತಿಯತೆ ತಾಂಡವಾಡುತ್ತಿದ್ದು ಜಾತಿಯ ಮೇಲೆ ಒಡೆದು ಆಳುವವರ ಸಂಖ್ಯೆ ಹೆಚ್ಚುತ್ತಿದ್ದು, ಸಮಾಜದ ಸ್ವಾಥ್ಯವನ್ನು ಕದಡುತ್ತಿದ್ದಾರೆ ಎಂದು ರಂಗಭೂಮಿ ತಜ್ಞ ಶ್ರೀನಿವಾಸ ಪ್ರಭು ಆತಂಕ ವ್ಯಕ್ತ ಪಡಿಸಿದರು.
ಪಟ್ಟಣದ ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ವಿಪ್ರ ನೌಕರ ಸಂಘದಿಂದ ಹಮ್ಮಿಕೊಂಡಿದ್ದ ಉಪ ನ್ಯಾಸ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು, ದೇಶದಲ್ಲಿ ಇರುವ ಪ್ರತಿ-ಜಾತಿಯನ್ನು ಎಲ್ಲರೂ ಗೌರವಿಸಬೇಕು. ಹಾಗೆಂದ ಮಾತ್ರಕ್ಕೆ ಎಂದಿಗೂ ಜಾತಿ ವಾದಿಗಳಾಗಬಾರದು. ಕೆಲವರು ತಮ್ಮ ಜಾತಿಯ ಅಫೀಮಿನಲ್ಲಿ ಇರುತ್ತಾರೆ. ಇದು ಸಮಾಜಕ್ಕೆ ಮಾರಕ ವಾಗಿದೆ ಎಂದು ತಿಳಿ ಹೇಳಿದರು.
ಜಾತಿ ಆಧಾರದ ಮೇಲೆ ಮತ ವಿಭಜನೆ: ಹಿಂದೂಗಳಲ್ಲಿ ಜಾತಿ ವಿಷಬೀಜ ವಿಪರೀತವಾಗುತ್ತಿದೆ. ಜಾತಿಯ ನಡುವೆ ಪಂಗಡಗಳು ಒಳ ಪಂಗಡಗಳ ಮೂಲಕ ಗುರುತಿಸುವ ಕೆಲಸ ಮಾಡಲಾಗುತ್ತಿದೆ. ಇದರಿಂಸ ಸಮಾಜದಲ್ಲಿ ಸಹಿಷ್ಣತೆ ಕಡಿಮೆಯಾಗುತ್ತಿದೆ. ಅಧಿಕಾರದ ದಾಹಕ್ಕಾಗಿ ಜಾತಿ ವಿಷ ಬೀಜವನ್ನು ಬಿತುತ್ತಿದ್ದಾರೆ.
ಮಕ್ಕಳು ಜಾತಿಯಿಂದ ಎಂದಿಗೂ ಗುರುತಿಸಿಕೊ ಳ್ಳುವುದಿಲ್ಲ. ಆದರೆ, ಮತದಾರರಾದ ಮೇಲೆ ಜಾತಿಯ ಹಣೆ ಪಟ್ಟಿಯನ್ನು ಕಟ್ಟುವ ಕೆಲಸ ಆಗುತ್ತಿದೆ ಎಂದರು.
ಆಸ್ತಿಗಾಗಿ ಶೋಷಣೆ: ಬ್ರಾಹ್ಮಣ ವಿರೋಧಿ ಅಲೆಯನ್ನು ಸಮಾಜದಲ್ಲಿ ಸೃಷ್ಟಿಸಲಾಗುತ್ತಿದೆ. ಅಸ್ಪೃಶ್ಯತೆಗೆ ಬ್ರಾಹ್ಮಣರು ಕಾರಣ ಎಂದು ಹೇಳಲಾಗುತ್ತಿದೆ. ಆದರೆ, ಸಾಕಷ್ಟು ಮಂದಿ ಕೆಳವರ್ಗದವರನ್ನು ಮೇಲೆತ್ತಿದ್ದು ಬ್ರಾಹ್ಮಣ ಎಂಬುದನ್ನು ಮರೆತಿದ್ದಾರೆ. ಶೋಷಕರಿಂದ ಶೋಷಿತರ ಸಂಖ್ಯೆ ಹೆಚ್ಚುತ್ತಿದೆ ಹೊರತು ಬ್ರಾಹ್ಮಣರಿಂದಲ್ಲ, ಪ್ರತಿ ಜಾತಿಯಲ್ಲಿಯೂ ಶೋಷಕರಿದ್ದಾರೆ. ಹಣ ಹಾಗೂ ಅಂತಸ್ತಿಗಾಗಿ ಶೋಷಣೆ ನಡೆಯುತ್ತಿದೆ. ಇದನ್ನು ಹೋಗಲಾಡಿಸಬೇಕು ಎಂದರು.
ಅಸಹಿಷ್ಣತೆ ಹೆಚ್ಚಿದೆ: ಆರೋಗ್ಯವಂತ ಸಮಾಜದಲ್ಲಿ ಅಸ್ಪೃಶ್ಯತೆ ಇರಬಾರದು. ಆದರೆ ಇಂದಿಗೂ ಅಸ್ಪೃಶ್ಯತೆ ನಿರ್ಮೂ ಲನಕ್ಕಾಗಿ ಸರ್ಕಾರಗಳು ಹಣ ವ್ಯಯಿಸುತ್ತಿವೆ. ಅಧಿಕಾರ ಹಾಗೂ ಪ್ರಭಾವಿಗಳು ಇರುವೆಡೆ ಅಸ್ಪೃಶ್ಯತೆ ಇದೆ ಹೊರತು ಅಲ್ಪಸಂಖ್ಯಾತರು ಇರುವ ಕಡೆ ಎಂದಿಗೂ ಶೋಷಣೆಗಳು ನಡೆಯುತ್ತಿಲ್ಲ. ಎಲ್ಲ ಮೇಲ್ಜಾತಿ ಜನರು ಶೋಷಣೆ ಮಾಡುತ್ತಿದ್ದಾರೆ, ಅಸಹಿಷ್ಣತೆ ಹುಟ್ಟು ಹಾಕುತ್ತಿದ್ದಾರೆ ಎಂದರು.
ಶೋಷಿತರ ದನಿಯಾಗಿರುವ ಬ್ರಾಹ್ಮಣರು: ವ್ಯಾಸರು ಕನಕರನ್ನು ಸಮಾಜಕ್ಕೆ ನೀಡಿದ್ದಾರೆ. ಬ್ರಾಹ್ಮಣರು ಜ್ಞಾನಿಗಳನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆ ನೀಡಿರುವ ಸಾಕಷ್ಟು ಇತಿಹಾಸವಿದೆ. ಇದನ್ನು ಯಾರು ಹೇಳುತ್ತಿಲ್ಲ. ಸಿಡಿದೇಳುವ ಮನೋಭಾವ ಬ್ರಾಹ್ಮಣರಿಗೆ ಇಲ್ಲ, ಹಾಗಾಗಿ ಅವರ ಮೇಲೆ ಷಡ್ಯಂತ್ರಗಳು ನಡೆಯುತ್ತಿವೆ ಎಂದು ತಿಳಿಸಿದರು.
ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಿಪ್ರ ನೌಕರ ಸಂಘದ ಅಧ್ಯಕ್ಷ ನಂಜುಂಡಪ್ರಸಾದ್, ಬ್ರಾಹ್ಮಣ ಮಹಾ ಸಭಾ ತಾಲೂಕು ಘಟಕದ ಅಧ್ಯಕ್ಷ ಪುಟ್ಟಸ್ವಾಮಿ ಜೋಯಿಸ್, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷೆ ಬನಶಂಕರಿ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.