ಜಾತ್ರೆಯ ಆಕರ್ಷಣೆಯಾದ ಹಳ್ಳಿಕಾರ್ ತಳ್ಳಿ
Team Udayavani, Jan 14, 2023, 4:02 PM IST
ಚನ್ನರಾಯಪಟ್ಟಣ: ತಾಲೂಕಿನ ಇತಿಹಾಸ ಪ್ರಸಿದ್ಧ ಬೂಕನ ಬೆಟ್ಟದ ರಂಗನಾಥಸ್ವಾಮಿ ರಾಸುಗಳ ಜಾತ್ರೆ ಜಿಲ್ಲಾಡಳಿತದ ವಿರೋಧದ ನಡುವೆ ರೈತರು ನಡೆಸುತ್ತಿದ್ದು ನೂರಾರು ಜೋಡಿ ರಾಸುಗಳು ಕಣ್ಮನ ಸೆಳೆಯುತ್ತಿವೆ.
ಹಳ್ಳಿಕಾರ್ ತಳಿ ಜಾತ್ರೆಯ ಆಕರ್ಷಣೆ ಜೋಡಿಯಾಗಿವೆ. ರಾಸುಗಳನ್ನು ಖರೀದಿಸಲು ರೈತರು ಬೂಕನ ಬೆಟ್ಟಕ್ಕೆ ಲಗ್ಗೆ ಹಾಕುತ್ತಿದ್ದರೇ, ಅಕ್ಕ ಪಕ್ಕದ ಜಿಲ್ಲೆಗಳಲ್ಲದೆ ಉತ್ತರ ಕರ್ನಾಟಕದ ಹುಬ್ಬಳಿ-ಧಾರವಾಡ, ಬಾಗಲಕೋಟೆ, ಬಳ್ಳಾರಿ, ದಾವರಣಗೆರೆ, ಹಾವೇರಿ, ಗಂಗಾವತಿ ಜಿಲ್ಲೆ ಸೇರಿದಂತೆ ಕೃಷಿ ಪ್ರಧಾನ ಜಿಲ್ಲೆಯಿಂದ ರಾಸುಗಳನ್ನು ಕೊಳ್ಳಲು ರೈತರು ತಾಲೂಕಿಗೆ ಆಗಮಿಸುತ್ತಿದ್ದು ನೂರಾರು ಜೋಡಿ ರಾಸು ಗಳು ಖರೀದಿ ಭರಾಟೆ ಜೋರಾಗಿ ನಡೆಯುತ್ತಿದೆ.
ಹೆಚ್ಚಿದ ಬಿಸಿಲ ಝಳ: ಬೆಳಗ್ಗೆ 10 ಗಂಟೆಯಾದರು ಚಳಿ ಇಬ್ಬನಿ ಬೀಳುತ್ತಿರುತ್ತದೆ. ನಂತರ ಬಿಸಿಲ ಝಳ ಹೆಚ್ಚುತ್ತಿದ್ದು ರೈತರು ಬೀಡಾರದ ನೆರಳು ಅವಲಂಭಿಸುವಂತಾಗಿದೆ. ಬಿಸಿಲ ಬೇಗೆಗೆ ಬೇಯುತ್ತಿದೆ. ಕೃಷಿ ಭೂಮಿ ಯಲ್ಲಿನಡೆಯುತ್ತಿರುವ ಜಾತ್ರೆಯಲ್ಲಿ ರೈತರು ಜಾತ್ರೆಯಲ್ಲಿ ಎಳನೀರು, ಕಲ್ಲಂಗಡಿ, ಶರಬತ್ತು ಹಾಗೂ ಕಬ್ಬಿನ ಹಾಲಿನ ಮೊರೆ ಹೋಗುತ್ತಿದ್ದಾರೆ.
ಕಾರಿಗಿಂತ ದುಬಾರಿ: ಎರಡ್ಮೂರು ಲಕ್ಷ ರೂ. ನೀಡಿದರೆ ನೂತನ ಕಾರುಗಳು ನಮ್ಮ ಕೈ ಸೇರುತ್ತವೆ ಆದರೆ ಈ ಜಾತ್ರೆಯಲ್ಲಿ ಜೋಡಿ ರಾಸುಗಳು ಬೆಲೆ ದುಬಾರಿಯಾಗಿದ್ದು 35 ಸಾವಿರ ರೂ. ನಿಂದ 4.50 ಲಕ್ಷ ರೂ. ವರೆಗೆ ಬೆಲೆಬಾಳುವ ರಾಸುಗಳನ್ನು ಜಾತ್ರೆ ಪಾಳಯದಲ್ಲಿ ಕಟ್ಟಲಾಗಿದೆ. ಅನೇಕ ಮಂದಿ ಲಕ್ಷಾಂತರ ಬೆಲೆ ಬಾಳುವ ರಾಸುಗಳನ್ನು ಕೊಳ್ಳುವ ಹವ್ಯಾಸ ರೂಢಿಸಿಕೊಂಡಿದ್ದು ಅವುಗಳನ್ನು ಬೇರೆ ಜಾತ್ರೆಗಳಲ್ಲಿ ಪದರ್ಶನ ಮಾಡಲು ಮುಂದಾಗಲಿದ್ದಾರೆ. ರಾಸುಗಳ ಜಾತ್ರೆಗೆ ಈಗಾಗಲೆ ವಿವಿಧ ಜಿಲ್ಲೆಯಿಂದ ರಾಸುಗಳು ಆಗಮಿಸಿವೆ. ಇವುಗಳಲ್ಲಿ ಹಳ್ಳಿಕಾರ್ ಜೋಡೆತ್ತು ಗಳಿಗೆ ಬೆಡಿಕೆ ಹೆಚ್ಚಿದೆ. ಹೆಚ್ಚಾಗಿ ಭತ್ತ ಬೆಳೆಯುವ ಜಿಲ್ಲೆಯ ರೈತರು ಇವುಗಳನ್ನು ಕೊಳ್ಳಲು ಮುಂದಾಗುತ್ತಿದ್ದಾರೆ. ರಾಸುಗಳನ್ನು ಲಾರಿ ಹಾಗೂ ಆಟೋಗಳಲ್ಲಿ ಸಾಗಾಣೆ ಮಾಡುತ್ತಿದ್ದು, ಇದಕ್ಕೆ ಬೇಕಿರುವ ರ್‍ಯಾಂಪ್ ವ್ಯವಸ್ಥೆ ಜಾತ್ರೆಯಲ್ಲಿ ಇಲ್ಲದೆ ಇರುವುದು ಸಾಕಷ್ಟು ಹರ ಸಾ ಹಸ ಪಟ್ಟು ರಾಸುಗಳನ್ನು ವಾಹನದಲ್ಲಿ ಸಾಗಿಸಬೇಕಾಗಿದೆ.
ದುಬಾರಿ ಬೆಲೆ: ಕಳೆದ ಸಾಲಿಗೆ ಹೋಲಿಸಿದರೆ ಪ್ರಸಕ್ತ ವರ್ಷ ಕೃಷಿ ಬಳಕೆ ರಾಸುಗಳ ಬೆಲೆ ಕೊಂಚ ದುಬಾರಿ ಯಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಉತ್ತಮವಾಗಿ ಮಳೆಯಾಗಿದ್ದು ಕೃಷಿ ಚಟುವಟಿಕೆ ಉತ್ತಮವಾಗಿ ನಡೆಯುತ್ತಿದೆ. ಹಾಗಾಗಿ ರಾಸುಗಳನ್ನು ಕೊಳ್ಳುವವರು ಹಾಗೂ ಮಾರಾಟ ಮಾಡುವ ರೈತರು ಬಹಳ ಉತ್ಸುಕರಾಗಿದ್ದಾರೆ. ಇದರಿಂದ ಸ್ವಲ್ಪ ಬೆಲೆ ಹೆಚ್ಚಾಗಿದೆ ಎಂದು ರೈತರು ಮಾತನಾಡಿಕೊಳ್ಳುತ್ತಿದ್ದಾರೆ.
ಶಾಮಿಯಾನದಡಿ ಜೋಡೆತ್ತು: ಎರಡು ಲಕ್ಷ ರೂ. ಮೆಲ್ಪಟ್ಟಿರುವ ಜೋಡೆತ್ತುಗಳನ್ನು ಕಟ್ಟಿರುವ ರೈತರು ತಮ್ಮ ರಾಸುಗಳಿಗೆ ಅಗತ್ಯ ಸೌಲಭ್ಯ ಕಲ್ಪಿ ಸಿದ್ದಾರೆ. ಬಿಸಿಲು ಬೀಳದಂತೆ ಶಾಮಿಯಾದನ ವ್ಯವಸ್ಥೆ ಇನ್ನು ರಾಸುಗಳು ವಿಶ್ರಾಂತಿ ಪಡೆಯಲು ಮಲಗುವ ಸ್ಥಳದಲ್ಲಿ ರಾಗಿ ಹೊಟ್ಟನ್ನು ಹಾಸಿಗೆ ರೀತಿಯಲ್ಲಿ ಹಾಕಿದ್ದಾರೆ. ಬೆಳಗ್ಗೆ ರಾತ್ರಿ ಜೋಡೆತ್ತುಗಳನ್ನು ಭತ್ತದ ಹುಲ್ಲಿನಲ್ಲಿ ಮಸಾಜ್ ಮಾಡುವ ಮೂಲಕ ರಾಸುಗಳು ಸದಾ ಹೊಳೆಯುವಂತೆ ಮಾಡುತ್ತಿದ್ದಾರೆ. ಇಂತಹ ಜೋಡೆತ್ತುಗಳು ಜಾತ್ರೆಯ ಆಕರ್ಷಣೆಯಾಗಿವೆ.
ರಾಸುಗಳ ಮಾರಾಟ ಹಾಗೂ ಖರೀದಿ ಮಾಡಲು ಪ್ರತಿ ವರ್ಷವೂ ಜಾತ್ರೆಗೆ ಆಗಮಿಸುತ್ತೇನೆ ಉತ್ತಮ ತಳಿಯ ರಾಸುಗಳು ಸೇರುವುದರಿಂದ ಉತ್ತರ ಕರ್ನಾಟಕದ ರೈತರು ಈ ಜಾತ್ರೆಗೆ ಆಗಮಿಸುತ್ತಾರೆ. -ಶಿವಕುಮಾರ್, ಬಿಕ್ಷವರ್ತಿಮಠ, ಬಾದಾಮಿ.
ತಾಲೂಕು ಆಡಳಿತ ಜಾತ್ರೆ ಮಾಡದಂತೆ ಸಾಕಷ್ಟು ಒತ್ತಡ ಹಾಕಿತ್ತು ಆದರೆ ಸುಗ್ಗಿ ವೇಳೆ ಜಾತ್ರೆ ನಡೆಯುವುದರಿಂದ ಹೊರ ಜಿಲ್ಲೆಯ ರೈತರು ಕೃಷಿಗೆ ರಾಸುಗಳನ್ನು ಕೊಳ್ಳುತ್ತಾರೆ. ಇದನ್ನು ನಂಬಿ ವರ್ಷದಿಂದ ರಾಸುಗಳನ್ನು ಸಾಕಿ ಲಾಭ ನೋಡುವ ವೇಳೆ ಜಾತ್ರೆ ನಿಷೇಧಕ್ಕೆ ರೈತರು ಒಪ್ಪದೆ ಜಾತ್ರೆ ನಡೆ ಸು ತ್ತಿದ್ದು, ನೂರಾರು ರಾಸುಗಳು ಆಗಮಿಸಿದ್ದು ಲಕ್ಷಾಂತರ ರೂ.ಗೆ ಮಾರಾಟ ಆಗುತ್ತಿದೆ. -ಬಸವೇಗೌಡ ರೈತ
-ಶಾಮಸುಂದರ್ ಕೆ. ಅಣ್ಣೇನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.