ಹಳೇಬೀಡಿಗೆ ಕೇಂದ್ರ ತಂಡ ಭೇಟಿ

Team Udayavani, Mar 9, 2022, 1:45 PM IST

ಹಳೇಬೀಡಿಗೆ ಕೇಂದ್ರ  ತಂಡ ಭೇಟಿ

ಹಳೇಬೀಡು: ಬೇಲೂರು-ಹಳೇಬೀಡು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸುವಂತೆ ಶಿಪಾರಸ್ಸು ಮಾಡಿದ ಹಿನ್ನೆಲೆ, ಕೇಂದ್ರದ ಪುರಾತತ್ವಇಲಾಖೆ ಅಧಿಕಾರಿಗಳ ತಂಡ ಹಳೇಬೀಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪುರಾತತ್ವ ಇಲಾಖೆ ಅಧಿಕಾರಿಗಳ ಜತೆಆಗಮಿಸಿದ ಸಕಲೇಶಪುರದ ಉಪ ಭಾಗಾಧಿಕಾರಿಪ್ರತೀಕ್‌ ಬಾಯಲ್‌ ಸುದ್ದಿಗಾರರೊಂದಿಗೆಮಾತನಾಡಿದರು. ಹಳೇಬೀಡು ಬೇಲೂರುಹಾಗೂ ಸೋಮನಾಥಪುರದಲ್ಲಿರುವ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿರುವ

ದೇವಾಲಯಗಳನ್ನು 2022 ಹಾಗೂ 2023 ನೇವರ್ಷದ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಲುಈಗಾಗಲೇ ತಾತ್ಕಾಲಿಕ ಪಟ್ಟಿ ಯಲ್ಲಿ ಶಿಪಾರಸ್ಸುಮಾಡಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆಇನ್ನು 3 ತಿಂಗಳಲ್ಲಿ ಅಮೆರಿಕದಿಂದ ಯುನೆಸ್ಕೋತಂಡ ಆಗಮಿಸಲಿದ್ದು, ಈ ಕಾರಣದಿಂದಲೇಭಾರತದ ಪುರಾತತ್ವ ಸಂರಕ್ಷಣಾ ಇಲಾಖೆ ಆದೇಶದಮೇರೆಗೆ ಅಧಿಕಾರಿಗಳ ತಂಡ ಮೊದಲುಹಳೇಬೀಡು ಮತ್ತು ಬೇಲೂರು ದೇವಾಲಯಗಳಿಗೆಭೇಟಿ ನೀಡಿದೆ. ಇಲ್ಲಿರುವ ಸಣ್ಣಪುಟ್ಟ ವ್ಯತ್ಯಾಸ ಸರಿಪಡಿದಸುವಂತೆ ಸಂಬಂಧಪಟ್ಟ ಇಲಾಖೆಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದುತಿಳಿಸಿದರು.

ಅಧಿಕಾರಿಗಳ ಕಾಟಾಚಾರದ ಭೇಟಿ: ಕೇಂದ್ರಪುರಾತತ್ವ ಇಲಾಖೆ ಮಹಾ ನಿರ್ದೇಶಕಿ ವಿ.ವಿದ್ಯಾವತಿ ಹಳೇಬೀಡಿ ಗೆ ಕಾಟಾಚಾರಕ್ಕೆ ಭೇಟಿಎಂಬಂತೆ ದೇವಾಲಯಕ್ಕೆ ಭೇಟಿ ನೀಡಿ, ಹೊಯ್ಸಳರ ಕಾಲದ ಶಿಲ್ಪಕಲಾ ಸೌಂದರ್ಯದ ದೇವಾಲಯವನ್ನು ವೀಕ್ಷಣೆ ಮಾಡಿದರು.

ತರಾತುರಿಯಲ್ಲಿ ಬೇಲೂರು ಕಡೆ ತೆರಳಿದರು.ಇದು ಸ್ಥಳೀಯ ಜನಪ್ರತಿನಿಧಿಗಳಿ ಗೆ ಹಾಗೂಜನಸಾಮಾನ್ಯರ ಆಕ್ರೋಶಕ್ಕೂ ಕಾರವಾಯಿತು.ಬಂದ ಪುಟ್ಟ, ಹೋದ ಪುಟ್ಟ ಎಂಬಂತೆದೇವಾಲಯಕ್ಕೆ ಭೇಟಿ ನೀಡಿ, ಪರಿಶೀಲನೆ ನೆಪದಲ್ಲಿವಾಪಸ್ಸು ಹೋಗಿದ್ದಾರೆ. ಇದರಿಂದ ಸ್ಥಳೀಯರಿಗೆಯಾವ ಮಾಹಿತಿ ಸಿಗುತ್ತದೆ?ಜತೆಗೆ ಯುನೆಸ್ಕೋ ಪಟ್ಟಿಗೆ ಹೊಯ್ಸಳೇಶ್ವರ ದೇವಾಲಯ ಸೇರಿದರೆ ಯಾವ ಕ್ರಮ ತೆಗೆದುಕೊಳ್ಳುತ್ತಾರೆ? ಎಷ್ಟು ಪ್ರದೇಶಆಕ್ರಮಿಸಿಕೊಳ್ಳುತ್ತಾರೆ? ಏನೆಲ್ಲ ಸೌಲಭ್ಯಹಳೇಬೀಡಿಗೆ ದೊರೆಯುತ್ತದೆ ಎಂಬುದರ ಬಗ್ಗೆಸ್ಥಳೀಯ ಜನತೆಗೆ ಆತಂಕ. ಇದರ ಬಗ್ಗೆ ಯಾವುದೇಮಾಹಿತಿ ನೀಡದೇ ತೆರಳಿದ ವಿದ್ಯಾವತಿಯವರಬಗ್ಗೆ ಸ್ಥಳೀಯರು ಬೇಸರ ಮತ್ತು ಆಕ್ರೋಶ ವ್ಯಕ್ತಪಡಿಸಿದರು.

ಮಾಧ್ಯಮದವರಿಗೆ ಮಾಹಿತಿ ನೀಡದ ಅಧಿಕಾರಿ: ಭಾರತ ಪುರಾತತ್ವ ಸಂರಕ್ಷಣಾ ಇಲಾಖೆ ಮಹಾ ನಿರ್ದೇಶಕಿ ವಿ.ವಿದ್ಯಾವತಿ ಸುದ್ದಿಗಾರರು ಕೇಳಿದಪ್ರಶ್ನೆಗೆ ಉತ್ತರಿಸದೇ, ಪೋಟೋ ತೆಗೆಯಬೇಡಿ ಎಂದರು.

ಅಲ್ಲದೇ ಭೇಟಿ ಉದ್ದೇಶದ ಮಾಹಿತಿ ನೀಡಲು ನಿರಾಕರಿಸಿದರು. ಜೊತೆಗೆಮಾಧ್ಯಮದವರ ಮೇಲೆ ಗರಂ ಆದ ಮೇಡಂತಮ್ಮ ತಂಡದೊಂದಿಗೆ ವಾಹನ ಏರಿ ಬೇಲೂರಿಗೆಹೊರಟರು. ಇದು ಮಾದ್ಯಮದವರಿಗೆ ಸರಿಯಾದ ಮಾಹಿತಿ ಸಿಗಲಿಲ್ಲ.

ಈ ಸಂದರ್ಭದಲ್ಲಿ ತಹಶೀಲ್ದಾರ್‌ ಮೋಹನ್‌ ಕುಮಾರ್‌, ಎಎಸ್‌ಐ ರಿಜನಲ್‌ ಡೈರಕ್ಟರ್‌ ಬಿಪಿನ್‌ಚಂದ್ರ, ಪುರಾತತ್ವ ಇಲಾಖೆಯ ಡೆಪ್ಯೂಟಿ ಡೈರಕ್ಟರ್‌ ಸಂಜಯ್‌, ಸ್ಟೇಟ್‌ ಆರ್ಕಾ ಲಜಿ ಕುಮಾರ್‌, ಗ್ರಾಪಂ ಪಿಡಿಒ ಅಧಿಕಾರಿ ರವಿಕುಮಾರ್‌ಅಧ್ಯಕ್ಷರಾದ ಗೀತಾ ಅರುಣ್‌, ಸದಸ್ಯರಾದ ಸುರೇಶ್‌, ಚಂದ್ರಶೇಖರ್‌, ರಮೇಶ್‌, ಮಧು, ರಘುನಾಥ್‌, ಅನಿಲ್‌ ಸೇರಿದಂತೆ ಹಲವರಿದ್ದರು.

ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿದ್ರೆ ಸ್ಥಳೀಯವಾಗಿ ಅಭಿವೃದ್ಧಿ :  ಹಳೇಬೀಡು ಮತ್ತು ಬೇಲೂರು ಪ್ರಸಿದ್ಧ ಪ್ರೇಕ್ಷಣೀಯ ಸ್ಥಳ. ಇಲ್ಲಿಗೆ ದೇಶವಿದೇಶಗಳಿಂದ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಹೊಯ್ಸಳರ ಕಾಲದ ಶಿಲ್ಪಕಲಾ ಸೌಂದರ್ಯ ಸವಿದು ಹಿಂದಿರುಗುತ್ತಾರೆ.ಇಂತಹ ಪ್ರೇಕ್ಷಣೀಯ ಸ್ಥಳ ವಿಶ್ವ ಪಾರಂಪರಿಕಪಟ್ಟಿಗೆ ಸೇರಿಸಿದರೆ ಸ್ಥಳೀಯವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ.

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

ದ್ವೇಷದ ರಾಜಕಾರಣ ಸುಡುವ ಕಾಲ ಸನ್ನಿಹಿತ: ಸೂರಜ್‌ ರೇವಣ್ಣ

ದ್ವೇಷದ ರಾಜಕಾರಣ ಸುಡುವ ಕಾಲ ಸನ್ನಿಹಿತ: ಸೂರಜ್‌ ರೇವಣ್ಣ

9-

ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ದಿಢೀರ್‌ ಕಾಣಿಸಿಕೊಂಡ ಬೆಂಕಿ; ತಪ್ಪಿದ ಭಾರಿ ಅನಾಹುತ

Hasana: ಕರೆಯನ್ನು ಸ್ವೀಕರಿಸದ ಪ್ರಿಯಕರಗೆ ಚಾಕು ಇರಿದು ಪ್ರಿಯತಮೆ ಪರಾರಿ

Hasana: ಕರೆಯನ್ನು ಸ್ವೀಕರಿಸದ ಪ್ರಿಯಕರಗೆ ಚಾಕು ಇರಿದು ಪ್ರಿಯತಮೆ ಪರಾರಿ

Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ

Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.