ಜಿಲ್ಲೆಯಲ್ಲಿ ನಿರಂತರ ಸರಗಳ್ಳತನ: ಆತಂಕ
ಮೂರು ಪ್ರತ್ಯೇಕ ಪ್ರಕರಣಗಳಲ್ಲಿ 4.10 ಲಕ್ಷ ರೂ. ಮೌಲ್ಯದ ಚಿನ್ನದ ಸರಗಳ ಕಳವು , ಮಹಿಳೆಯರೇ ಎಚ್ಚರವಾಗಿರಿ
Team Udayavani, Feb 27, 2021, 3:30 PM IST
ಸಾಂದರ್ಭಿಕ ಚಿತ್ರ
ಹಾಸನ: ಜಿಲ್ಲೆಯಲ್ಲಿ ಸರಗಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಕಳೆದೆರಡು ದಿನಗಳಲ್ಲಿ ಮೂರು ಪ್ರತ್ಯೇಕ ಸರಗಳವು ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ.
ಮಾಂಗಲ್ಯ ಸರ ಕಳವು: ಬಸ್ ಹತ್ತುತ್ತಿದ್ದಾಗ 1,50,000 ರೂ. ಬೆಲೆಯ 30 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಕಳವು ಮಾಡಿರುವ ಪ್ರಕರಣ ಬೇಲೂರು ಬಸ್ ನಿಲ್ದಾಣದಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲೂಕು, ಸಖರಾಯಪಟ್ಟಣ ಹೋಬಳಿ, ಮಾಚಗೋಡನಹಳ್ಳಿ ಗ್ರಾಮದ ವಿಮಲಾ ಎಂಬವರುಬುಧವಾರ ಬೇಲೂರಿನಲ್ಲಿರುವ ತನ್ನ ಅಕ್ಕನ ಮಗಳ ಮನೆಗೆ ಬಂದು ಊರಿಗೆ ಹೋಗಲು ಬೇಲೂರುಬಸ್ ನಿಲ್ದಾಣದಲ್ಲಿ ಬಸ್ಸಿಗೆ ಹತ್ತಿದಾಗ ಕೊರಳಿನಲ್ಲಿ ಮಾಂಗಲ್ಯ ಸರವಿರಲಿಲ್ಲ.
ಬಸ್ಸಿಗೆ ಹತ್ತುವಾಗ ನೂಕು ನುಗ್ಗಲಿನಲ್ಲಿ 1,50,000 ರೂ. ಬೆಲೆಯ 30 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಕಳವು ಮಾಡಲಾಗಿದೆ. ಈ ಸಂಬಂಧ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾಲಿಷ್ ನೆಪದಲ್ಲಿ ಸರ ಕಳವು: ಪಾಲಿಷ್ ಮಾಡುವ ನೆಪದಲ್ಲಿ 88,500 ರೂ. ಬೆಲೆಯ ಚಿನ್ನಾಭರಣಗಳನ್ನು ಕಳ್ಳರು ದೋಚಿಕೊಂಡು ಪರಾರಿಯಾಗಿರುವ ಪ್ರಕರಣ ಹಾಸನದ ಹೊರ ವಲಯದ ಮಣಚನಹಳ್ಳಿಯಲ್ಲಿ ನಡೆದಿದೆ. ಮಣಿಚನಹಳ್ಳಿ ಗ್ರಾಮದ ಜಯಮ್ಮ ಅವರ ಮಗಳು ಶಾರದಾ ಎಂಬವರು ಗುರುವಾರ ಮಧ್ಯಾಹ್ನ ಮನೆಯಲ್ಲಿದ್ದಾಗ ಇಬ್ಬರು ವ್ಯಕ್ತಿಗಳು ಬೈಕ್‌ನಲ್ಲಿ ಬಂದು ಹಿತ್ತಾಳೆ, ಚಿನ್ನ ಮತ್ತು ಬೆಳ್ಳಿ ಪದಾರ್ಥಗಳನ್ನು ಪಾಲಿಸ್ ಮಾಡಿಕೊಡುವುದಾಗಿ ನಂಬಿಸಿದರು. 30 ಗ್ರಾಂ ತೂಕದ ಮಾಂಗಲ್ಯ ಸರ, 5 ಗ್ರಾಂ ತೂಕದ ಕಿವಿಯ ಓಲೆ, ಜುಮುಕಿಯನ್ನು ಮನೆಯ ಬಾಗಿಲಿನಲ್ಲಿ ಪಾಲಿಷ್ ಮಾಡುವಾಗ ಅಪರಿಚಿತ ವ್ಯಕ್ತಿಗಳು ಕುಡಿಯಲು ನೀರು ಕೇಳಿದರು. ಜಯಮ್ಮ ಅವರು ನೀರು ತರಲು ಒಳಹೋದಾಗ 88,500 ರೂ. ಬೆಲೆಯ ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಂಗಲ್ಯ ಸರ ಅಪಹರಣ: ಅಂಗಡಿಗೆ ಹೋಗುತ್ತಿದ್ದ ಮಹಿಳೆಯ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿರುವ ಪ್ರಕರಣ ಹಾಸನ ನಗರದಲ್ಲಿ ನಡೆದಿದೆ. ಹಾಸನದ ರಂಗೋಲಿಹಳ್ಳ ಚರ್ಚ್ ಕ್ರಾಸ್‌ನ ವಾಸಿ ಪಾಪಮ್ಮ ಎಂಬವರು ಗುರುವಾರ ಬೆಳಗ್ಗೆ ಸಾಲಗಾಮೆ ರಸ್ತೆಯಲ್ಲಿರುವ ಅಂಗಡಿಗೆ ಹೋಗಿ ಎಣ್ಣೆ ಸಕ್ಕರೆ ತೆಗೆದುಕೊಂಡು ಸಾಲಗಾಮೆ ರಸ್ತೆ ದಾಟಿ ವಾಪಸ್ ಮನೆಗೆ ಬರುತ್ತಿದ್ದಾಗ ಬೈಕ್‌ನಲ್ಲಿ ಬಂದ ವ್ಯಕ್ತಿಗಳಿಬ್ಬರು ಪಾಪಮ್ಮ ಅವರ ಕೊರಳಿನಿಂದ 1,80,000 ರೂ.ಬೆಲೆಯ 45 ಗ್ರಾಂ ತೂಕದ ಚಿನ್ನ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲಸದ ಹುಡುಗರಿಂದ ನಗದು, ಚಿನ್ನಾಭರಣ ಕಳವು :
ಹಾಸನ: ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಇಬ್ಬರು ಹುಡುಗರು 2 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 25 ಸಾವಿರ ರೂ. ನಗದು ಮತ್ತು ಸೀರೆ ಕಳವು ಮಾಡಿರುವ ಪ್ರಕರಣ ಅರಕಲಗೂಡು ತಾಲೂಕು, ಕಸಬಾ ಹೋಬಳಿ, ರಂಗಾಪುರ ಗ್ರಾಮದಲ್ಲಿ ನಡೆದಿದೆ.
ರಂಗಾಪುರ ಗ್ರಾಮದ ಶಿವಲಿಂಗಯ್ಯ ಎಂಬುವರು 11 ಎಕರೆ ಜಮೀನು ಹೊಂದಿದ್ದು, ಜಮೀನಿನ ಕೆಲಸಕ್ಕೆ 15 ಸಾವಿರ ರೂ. ಸಂಬಳ ನಿಗದಿಪಡಿಸಿ ಹುಬ್ಬಳಿಯಿಂದ ಬಂದಿದ್ದ ರಘು ಮತ್ತು ಬಾಬು ಎಂಬ ಹುಡುಗರನ್ನು ಫೆ.7 ರಿಂದ ಇಟ್ಟುಕೊಂಡಿದ್ದರು. ಹುಡುಗರು ಪಕ್ಕದ ಮನೆಯ ಶೆಡ್‌ನಲ್ಲಿ ವಾಸವಿದ್ದರು. ಶಿವಲಿಂಗಯ್ಯ ಅವರು ಮಂಗಳವಾರ ಸಂಜೆ ತಮ್ಮ ಪತ್ನಿಯೊಂದಿಗೆ
ಕಾರಿನಲ್ಲಿ ಮದುವೆ ಆರತಕ್ಷತೆಗೆ ಕುಶಾಲನಗರಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಕೆಲಸದ ಹುಡುಗರು ಮನೆಯ ಹಿಂಬಾಗಿಲ ಬೀಗವನ್ನು ಮರಿದು ಒಳನುಗ್ಗಿ ಬೀರುವಿನಲ್ಲಿಟ್ಟಿದ್ದ 25,000 ರೂ.ನಗದು, 2 ಲಕ್ಷ ರೂ. ಬೆಲೆಯ ಚಿನ್ನಾಭರಣ, 20 ಸಾವಿರ ಬೆಲೆಯ 4 ರೇಷ್ಮೆ ಸೀರೆ ಮತ್ತು 30,000 ಸಾವಿರ ಬೆಲೆಯ ಬೈಕ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಈ ಸಂಬಂಧ ಶಿವಲಿಂಗಯ್ಯ ಅವರು ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
Shravanabelagola;ಅಹಿಂಸಾ ಮಾರ್ಗದಿಂದಷ್ಟೇ ಜಗದ ಶಾಂತಿ: ಪೇಜಾವರ ಶ್ರೀ
MUST WATCH
ಹೊಸ ಸೇರ್ಪಡೆ
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.