ಚಿರತೆ ಕಾಟ: ರೈತರಲ್ಲಿ ಹೆಚ್ಚಿದ ಆತಂಕ
Team Udayavani, Feb 24, 2020, 3:00 AM IST
ಚನ್ನರಾಯಪಟ್ಟಣ: ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಚಿರತೆ ಹಾವಳಿ ಹೆಚ್ಚಾಗುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಪಕ್ಕದ ಗ್ರಾಮಗಳಲ್ಲಿಯೂ ಚಿರತೆ ಸಂಚಾರ ರಾತ್ರಿ ವೇಳೆ ನಡೆಯುತ್ತಿರುವುದರಿಂದ ಗ್ರಾಮಸ್ಥರು ಭಯದಲ್ಲಿ ಕಾಲ ಕಳೆಯುವಂತಾಗಿದೆ. ಕಾಡಿಂದ ನಾಡಿಗೆ ಬಂದಿರುವ ಚಿರತೆಗಳು ಅನೇಕ ಗ್ರಾಮದಲ್ಲಿನ ನಾಯಿ, ಕುರಿ ಹಾಗೂ ಜಾನುವಾರುಗಳನ್ನು ಬೇಟೆಯಾಡಿ ಪರಾರಿಯಾಗುತ್ತಿವೆ.
ಇದಕ್ಕೆ ಸಾಕ್ಷಿಯಾಗಿ ನುಗ್ಗೇಹಳ್ಳಿ ಹೋಬಳಿ ಗೌಡಗೆರೆ ಸಮೀಪದಲ್ಲಿ ಹಾದು ಹೋಗಿರುವ ರಾಷ್ಟ್ರೀಯದ್ದಾರಿಯಲ್ಲಿ ಚಿರತೆಗಳು ವಾಹನಕ್ಕೆ ಸಿಕ್ಕಿ ಮೃತಪಟ್ಟಿರುವುದು. ಗೌಡಗೆರೆ ಗ್ರಾಮದ ಸುತ್ತಮುತ್ತಲಿನ ಅನೇಕ ಹಳ್ಳಿಯಲ್ಲಿ ಬೀದಿನಾಯಿಗಳು ನಾಪತ್ತೆಯಾಗಿರುವುದು. ಕೆಲವು ಮನೆಗಳಲ್ಲಿ ಕುರಿ, ರಾಸುಗಳ ಕರುಗಳು ರಾತ್ರಿ ಕಳೆದು ಬೆಳಗಾಗುವುದರೊಳಗೆ ಮಾಯವಾಗುತ್ತಿವೆ ಇದರಿಂದ ಚಿರತೆ ಹಾವಳಿ ಇದೆ ಎನ್ನುವುದಕ್ಕೆ ಮತ್ತಷ್ಟು ಪುಷ್ಟಿ ನೀಡಿದಂತಾಗುತ್ತಿದೆ.
ಮುಂಜಾಗ್ರತೆ ವಹಿಸದ ಅರಣ್ಯ ಇಲಾಖೆ: ಒಂದೆರಡು ತಿಂಗಳಿನಿಂದ ಚಿರತೆಗಳು ಶ್ರವಣಬೆಳಗೊಳದ ವಿಂದ್ಯಗಿರಿ ಮತ್ತು ಚಂದ್ರಗಿರಿಯಲ್ಲಿ ಬೀಡು ಬಿಟ್ಟಿದ್ದು, ಸ್ಥಳಿಯ ನಿದ್ದೆಗೆಡಿಸಿತ್ತು. ಆದರೆ ಈಗ ಹಿರೀಸಾವೆ ಹೋಬಳಿ, ನುಗ್ಗೇಹಳ್ಳಿ, ಬಾಗೂರು ಹಾಗೂ ದಂಡಿಗನಹಳ್ಳಿಯಲ್ಲಿ ಹಲವು ಕೆರೆಯಲ್ಲಿ ದಟ್ಟವಾಗಿ ಬೆಳೆದಿರುವ ಗಿಡಗಳ ತಪ್ಪಲಿನಲ್ಲಿ ಚಿರತೆ ವಾಸವಾಗಿವೆ. ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಕೆರೆಯಲ್ಲಿ ಚಿರತೆಗಳು ಸಾರ್ವಜನಿಕರಿಗೆ ದರ್ಶನ ನೀಡುವ ಮೂಲಕ ಗ್ರಾಮದಲ್ಲಿ ಹಗಲು-ರಾತ್ರಿ ಸಂಚರಿಸುತ್ತಿದ್ದು, ಈಗಾಗಲೇ ಹಲವು ಬಾರಿ ರೈತರ ಮೇಲೆ, ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸಿ ಚಿರತೆಗಳು ಬಲಿ ತೆಗೆದುಕೊಂಡಿದ್ದರೂ ಈ ಭಾಗದಲ್ಲಿ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ.
ರೈತರ ಮನವಿಗೆ ಸ್ಪಂದನೆ ಇಲ್ಲ: ಚಿರತೆ ಹಾವಳಿಯಿಂದ ಬೇಸತ್ತಿರುವ ರೈತರು ಅರಣ್ಯ ಇಲಾಖೆ ಆಗಮಿಸಿ ತಮ್ಮ ಗ್ರಾಮಕ್ಕೆ ಬೋನು ನೀಡುವಂತೆ ಮನವಿ ಮಾಡುತ್ತಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ. ರೈತರು ತಮ್ಮ ಸಾಕು ಪ್ರಾಣಿಯನ್ನು ಹೊಲ ತೋಟಗಳಿಗೆ ಮನೆಗಳಿಗೆ ಕರೆದುಕೊಂಡು ಹೋಗಲು ಭಯಪಡುತ್ತಿದ್ದಾರೆ. ಮಕ್ಕಳು, ಮಹಿಳೆಯರು ಸಂಜೆಯಾಗುತ್ತಿದ್ದಂತೆ ಮನೆಯಿಂದ ಹೊರಬರಲು ಭಯಪಡುವ ಪರಿಸ್ಥಿತಿ ತಾಲೂಕಿನ ಅನೇಕ ಗ್ರಾಮಗಳಲ್ಲಿ ನಿರ್ಮಾಣ ಆಗಿದೆ.
ಕೇವಲ ಭರವಸೆ: ಪ್ರತಿ ಬಾರಿ ಗ್ರಾಮದ ರಾಸುಗಳ ಮೇಲೆ ಚಿರತೆ ದಾಳಿ ನಡೆದಾಗಲೂ ಕಾಟಾಚಾರಕ್ಕಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡುತ್ತಾರೆ. ರಾಸುಗಳು ಮೃತ ಪಟ್ಟರೆ ಪಶುಪಾಲನ ಇಲಾಖೆಗೆ ತಿಳಿಸಿ ಮೃತ ರಾಸು ಅಥವಾ ಕುರಿಯ ದೇಹ ಪಂಚನಾಮೆ ಮಾಡಿಸುವಂತೆ ತಿಳಿಸುವುದಲ್ಲದೇ ಪರಿಹಾರ ನೀಡುವ ಭರವಸೆ ನೀಡಿ ಗ್ರಾಮದಿಂದ ತೆರಳುತ್ತಿದ್ದಾರೆ ಹೊರತು ಈ ವರೆಗೆ ಪರಿಹಾರ ನೀಡಿಲ್ಲ. ಚಿರತೆ ಹಿಡಿಯಲು ಕ್ರಮ ಕೈಗೊಂಡಿಲ್ಲ ಎಂಬುದು ರಾಸು ಹಾಗೂ ಕುರಿ ಕಳೆದುಕೊಂಡವರ ಅಳಲಾಗಿದೆ.
ಕೋಳಿಶೆಡ್‌ನತ್ತ ಚಿರತೆ ಹೆಜ್ಜೆ: ಬೆಟ್ಟ ಗುಡ್ಡ ಹಾಗೂ ಹೆಚ್ಚು ಮರಗಿಡಗಳು ಬೆಳೆದಿರುವ ಜಾಗದಲ್ಲಿ ವಾಸವಾಗಿರುವ ಚಿರತೆಗಳು ರಾತ್ರಿಯಾಗುತ್ತಿದಂತೆ ಗ್ರಾಮಕ್ಕೆ ಪ್ರವೇಶ ಮಾಡುತ್ತಿವೆ. ನಾಯಿ, ಕುರಿ, ರಾಸುಗಳನ್ನು ಹೊಂಚುಹಾಕಿ ರಕ್ತ ಹೀರುತ್ತಿದ್ದ ಚಿರತೆಗಳು ಇದೀಗ ಕೋಳಿ ಫಾರಂಗಳತ್ತ ಗುರಿ ಇಟ್ಟಿವೆ. ಕೋಳಿಶೆಡ್‌ನಲ್ಲಿ ಚಿರತೆ ದಾಳಿಮಾಡಿ ಹತ್ತಾರು ನಾಟಿ ಕೋಳಿ ಹಾಗೂ ಫಾರಂ ಕೋಳಿಗಳ ಪ್ರಾಣತೆಗೆಯುತ್ತಿವೆ. ಇದರಿಂದ ಶೆಡ್ ಮಾಲೀಕರಿಗೆ ಸಾವಿರಾರು ರೂ. ನಷ್ಟವಾಗುತ್ತಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಇಡುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.
ಶ್ರವಣಬೆಳಗೊಳದ ವಿಂದ್ಯಗಿರಿ ಮತ್ತು ಚಂದ್ರಗಿರಿಯಲ್ಲಿ ಬೆಟ್ಟದಲ್ಲಿ ಬೋನು ಇಡಲಾಗಿದೆ. ಇನ್ನು ಹಲವು ಗ್ರಾಮಸ್ಥರು ಬೋನಿಗೆ ಬೇಡಿಕೆ ಇಟ್ಟಿದ್ದಾರೆ. ಬೇಡಿಕೆ ಇರುವಷ್ಟು ಬೋನ್ ಲಭ್ಯವಿಲ್ಲದೇ ತೊಂದರೆಯಾಗುತ್ತಿದೆ. ಯಾವ ಗ್ರಾಮದಲ್ಲಿ ಹೆಚ್ಚು ಚಿರತೆ ಕಾಣಿಸಿಕೊಳ್ಳುತ್ತದೋ ಅಲ್ಲಿಗೆ ಕೂಡಲೆ ಸಿಬ್ಬಂದಿ ಕಳುಹಿಸಿ ಚಿರತೆ ಹಿಡಿಯಲು ಕ್ರಮ ಕೈಗೊಳ್ಳುತ್ತಿದ್ದೇವೆ.
-ಹೇಮಂತ ಕುಮಾರ, ವಲಯ ಅರಣ್ಯ ಅಧಿಕಾರಿ
ಚಿರತೆ ಒಂದು ಕುರಿ ತಿಂದಿರುವುದಲ್ಲದೇ ಕರುವಿನ ಮೇಲೂ ದಾಳಿ ಮಾಡಿ ಅದನ್ನು ಕೊಂದು ಹಾಕಿದೆ ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದೇನೆ ಅವರು ಪಶುಆಸ್ಪತ್ರೆಯಲ್ಲಿ ಸತ್ತ ಕುರುವಿನ ದೇಹ ಪರೀಕ್ಷಿಸಿ ಪ್ರಮಾಣ ಪತ್ರ ನೀಡಿ ನಂತರ ಪರಿಹಾರ ನೀಡುತ್ತೇನೆ ಎಂದು ಹೇಳಿದ್ದರು. ಅಗತ್ಯ ದಾಖಲೆ ನೀಡಿ ತಿಂಗಳು ಕಳೆದರೂ ಬಿಡಿಗಾಸು ಪರಿಹಾರ ನೀಡಿಲ್ಲ.
-ಗುರು, ಅಣ್ಣೇನಹಳ್ಳಿ ರೈತ
* ಶಾಮಸುಂದರ್ ಕೆ ಅಣ್ಣೇನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು
Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.