ಕೆಟ್ಟು ನಿಂತ ಶುದ್ಧ ನೀರಿನ ಘಟಕ: ಸರಿಪಡಿಸದ ಅಧಿಕಾರಿಗಳು
Team Udayavani, Jun 1, 2019, 4:01 PM IST
ಬೇಲೂರು: ಪುರಸಭೆ ಆವರಣದ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿ ಎರಡು ತಿಂಗಳು ಕಳೆದರೂ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ರಿಪೇರಿ ಮಾಡದೆ ಸಾರ್ವಜನಿಕರು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ
ಪಟ್ಟಣದ ಪುರಸಭೆ ಎದುರು ಶುದ್ಧ ಕುಡಿಯುವ ನೀರಿನ ಘಟಕ ರಿಪೇರಿ ಆಗದಿದ್ದರಿಂದ ಪಟ್ಟಣದ ಜನತೆ ಹಣ ನೀಡಿ ಖಾಸಗಿಯವರಿಂದ ಕುಡಿಯುವ ನೀರನ್ನು ಖರೀದಿಸುವ ದುಸ್ಥಿತಿ ನಿರ್ಮಾಣವಾಗಿದೆ.
ನೀರಿಗಾಗಿ ಪರದಾಟ: ಶುದ್ಧ ಕುಡಿ ಯುವ ನೀರಿನ ಘಟಕವನ್ನು ಪಟ್ಟಣದ ನೂರಾರು ನಾಗರಿಕರು ಅವಲಂಬಿಸಿ ದ್ದಾರೆ. ಪ್ರತಿ ದಿನ ಲೀಟರ್ 1 ರೂ.ನಂತೆ ನೀರು ಪಡೆಯುತ್ತಿದ್ದು ಘಟಕ ಕೆಟ್ಟು ಹೋಗಿರು ವುದರಿಂದ ಜನರು ನೀರಿಗಾಗಿ ಪರದಾಡುತ್ತಿದ್ದಾರೆ.
ಬೇಲೂರು ಪ್ರವಾಸಿ ತಾಣವಾಗಿದ್ದು ಪ್ರವಾಸಿಗರೂ ಶುದ್ಧ ಕುಡಿಯುವ ನೀರನ್ನು ಈ ಘಟಕ ದಿಂದಲೇ ಪಡೆಯು ತ್ತಿದ್ದಾರೆ. ಆದರೆ ಘಟಕ ಸ್ಥಗಿತ ಕೊಂಡಿರು ವುದರಿಂದ ಪ್ರವಾಸಿಗರು ತೊಂದರೆ ಅನುಭವಿಸುತ್ತಿದ್ದಾರೆ.
ಮಣ್ಣು ಮಿಶ್ರಿತ ನೀರು: ಪಟ್ಟಣದಲ್ಲಿ ಯಗಚಿ ಜಲಾಶಯದಿಂದ ಕುಡಿಯುವ ನೀರನ್ನು ಎರಡು ದಿನಕ್ಮೊಮ್ಮೆ ಪುರಸಭೆ ವ್ಯಾಪ್ತಿಯ ವಾರ್ಡ್‌ಗಳಿಗೆ ಪುರಸಭೆ ಸರಬರಾಜು ಮಾಡುತ್ತಿದೆ. ಕೆಲವೊಂದು ದಿನ ಸರಬರಾಜು ಮಾಡುವ ನೀರು ಮಣ್ಣು ಮಿಶ್ರಿತವಾಗಿ ಬರುವುದರಿಂದ ನಾಗರಿಕರು ಶುದ್ಧ ನೀರಿಗೆ ಮೋರೆ ಹೋಗಿದ್ದು ಏಕಾಏಕಿ ನೀರಿನ ಘಟಕ ಸ್ಥಗಿತಗೊಂಡಿರುವುದರಿಂದ ಜನರು ನೀರಿಲ್ಲದೆ ಪರಿತಪಿಸುವಂತಾಗಿದೆ.
ಬೇಸಿಗೆ ದಿನಗಳಲ್ಲಿ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡುವುದು ಪುರಸಭೆ ಹೊಣೆ. ಆದರೆ, ಘಟಕ ಎರಡು ತಿಂಗಳಿಂದ ಸ್ಥಗಿತ ಗೊಂಡಿ ದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದಾಗಿ ಪಟ್ಟಣದ ಜನತೆ ಘಟಕದ ಬಳಿಗೆ ಆಗಮಿಸಿ ನಿರುತ್ಸಾಹದಿಂದ ಹಿಂತಿ ರುಗುತ್ತಿದ್ದಾರೆ. ಈಗಾಗಲೇ ಪಟ್ಟಣದ ಹಲವೆಡೆ ಸ್ವಚ್ಛತೆ ಇಲ್ಲದೆ ಹಲವಾರು ಜನರಿಗೆ ಜ್ವರ ಕಾಣಿಸಿಕೊಂಡು ಆಸ್ಪತ್ರೆ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದ ಕೋಟೆ ನಿವಾಸಿ ಆರ್.ವೆಂಕಟೇಶ್ ಮಾತನಾಡಿ, ಪಟ್ಟಣದ ಬಹುತೇಕ ವಾರ್ಡ್ ಜನರು ಪುರಸಭೆ ಮುಂಭಾಗ ಇರುವ ಶುದ್ಧ ನೀರಿಗೆ ಅವ ಲಂಬಿತವಾಗಿದ್ದು ಕಳೆದ 2 ತಿಂಗಳಿಂದ ಘಟಕದಲ್ಲಿ ನೀರು ಬರುತ್ತಿಲ್ಲ. ಪುರಸಭೆಗೆ ಚುನಾಯಿತ ಪ್ರತಿನಿಧಿಗಳು ಇಲ್ಲವಾಗಿರುವುದರಿಂದ ಈ ಅವ್ಯವಸ್ಥೆ ಯಾಗಿದ್ದು ಅಧಿಕಾರಿಗಳು ಜನರ ಹಿತ ಕಾಪಾಡಲು ಮುಂದಾಗಬೇಕೆಂದು ಮನವಿ ಮಾಡಿದ್ದಾರೆ.
‘ಉದಯವಾಣಿ’ಗೆ ಮಾಹಿತಿ ನೀಡಿದ ಪುರಸಭೆ ಮುಖ್ಯಾಧಿಕಾರಿ ಉಮೇಶ್ ಶುದ್ಧ ನೀರಿನ ಘಟಕ ತಾಂತ್ರಿಕ ಕಾರಣದಿಂದ ಸ್ಥಗಿತಗೊಂಡಿದೆ. ರಿಪೇರಿ ಮಾಡಿಸಲು ಕೆಲವು ಸಾಮಗ್ರಿಗಳು ಸ್ಥಳೀಯ ವಾಗಿ ಸಿಗುವುದಿಲ್ಲ. ಘಟಕದ ರಿಪೇರಿಯನ್ನು ಬಳ್ಳಾರಿ ಹಾಗೂ ಹುಬ್ಬಳಿ ನಗರಗಳಿಂದ ನುರಿತ ಕೆಲಸಗಾರರನ್ನು ಕರೆಸಿ ಮಾಡಿಸ ಬೇಕಾಗಿದೆ. ಅಲ್ಲದೇ, ಶುದ್ಧ ನೀರಿನ ಘಟಕದಲ್ಲಿ ಮೇನೋರಿಯಂ ಹಾಗೂ ಸಿಲಿಂಡರ್‌ನಲ್ಲಿ ದೋಷ ಕಾಣಿಸಿದ್ದು ಈಗಾಗಲೇ ರಿಪೇರಿಗೆ ಕ್ರಮ ಕೈಗೊಳ್ಳ ಲಾಗಿದೆ. ನಾಗರಿಕರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಪುರಸಭೆ ಬದ್ಧವಾಗಿದೆ ಎಂದರು.
● ಡಿ.ಬಿ.ಮೋಹನ್‌ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.