![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jan 10, 2022, 11:20 AM IST
ಸಾಂದರ್ಭಿಕ ಚಿತ್ರ.
ಸಕಲೇಶಪುರ: ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ರಸ್ತೆ ಕಾಮಗಾರಿಗಾಗಿ ರಾಷ್ಟ್ರೀಯ ಹೆದ್ದಾರಿ 75ನ್ನು ಸುಮಾರು 6 ತಿಂಗಳ ಕಾಲ ಮುಚ್ಚಲು ಅವಕಾಶ ನೀಡುವಂತೆ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿರುವ ರಾಜ್‌ಕಮಲ್ ಕಂಪೆನಿ ಮನವಿ ಮಾಡಿರುವುದು ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಹಾಸನ-ಸಕಲೇಶಪುರ-ಮಾರನಹಳ್ಳಿ ನಡುವಿನ ಸುಮಾರು 56 ಕಿ.ಮೀ. ದೂರದ ರಸ್ತೆಯನ್ನು ಮೊದಲಿಗೆ ಚತುಷ್ಪಥ ರಸ್ತೆ ಕಾಮ ಗಾರಿ ಮಾಡಲು ಐಸೋಲೆಕ್ಸ್ ಕಂಪೆನಿ ಗುತ್ತಿಗೆ ಪಡೆದಿತ್ತು. ಈ ಕಂಪೆನಿ ದಿವಾಳಿಯಾದ್ದರಿಂದ ಉಪ ಗುತ್ತಿಗೆ ಪಡೆದಿದ್ದ ರಾಜ್‌ಕಮಲ್ ಕಂಪೆನಿಯೇ ಕಾಮಗಾರಿ ಮುಂದು ವರಿಸಲು ಒಪ್ಪಿಕೊಂಡಿದೆ. ಈಗ ಕಾಮಗಾರಿ ಪ್ರಾರಂಭವಾಗಿ 4 ವರ್ಷ ಗಳಾಗುತ್ತ ಬಂದರೂ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಾಣದಿರುವುದು ಜನರಲ್ಲಿ ಅಸಮಾಧಾನ ಸೃಷ್ಟಿಸಿದೆ.
ಇದನ್ನೂ ಓದಿ:ಹಿಮವರ್ಷ : ರಾಜ್ಯದ 400ಕ್ಕೂ ಅಧಿಕ ಪ್ರಮುಖ ರಸ್ತೆಗಳು ಬಂದ್
ಆರು ತಿಂಗಳಲ್ಲಿ ರಸ್ತೆ ಕಾಮಗಾರಿ ಸಾಧ್ಯವೇ?
ಹಾಸನ-ಸಕಲೇಶಪುರ ನಡುವಿನ 40 ಕಿ.ಮೀ. ದೂರದ ನೇರ ರಸ್ತೆ ಶೇ.50-60ರಷ್ಟು ಮುಗಿಸಲು 4 ವರ್ಷ ತೆಗೆದುಕೊಳ್ಳಲಾಗಿದೆ. ಇನ್ನು ಈ ಮಾರ್ಗದಲ್ಲಿ ಕಾಮಗಾರಿ ಮುಗಿಸದೆ ಏಕಾಏಕಿ ಸಕಲೇಶಪುರ ಹಾಗೂ ಮಾರನಹಳ್ಳಿ ನಡುವಿನ ಪಶ್ಚಿಮಘಟ್ಟದ ಕಡಿದಾದ ತಿರುವಿನ ರಸ್ತೆಯ ಕಾಮಗಾರಿ ಮುಗಿಸಲು 6 ತಿಂಗಳು ಕಾಲಾವಕಾಶ ಕೇಳಿದ್ದು, ಹೆದ್ದಾರಿ ಮುಚ್ಚಲು ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಮುಖಂಡರು ಮೊದಲಿಗೆ ಹಾಸನ-ಸಕಲೇಶಪುರ ನಡುವಿನ ಕಾಮಗಾರಿ ಮುಗಿಸಿದ ಬಳಿಕ ಸಕಲೇಶಪುರ ಹಾಗೂ ಮಾರನಹಳ್ಳಿ ನಡುವಿನ ಕಾಮಗಾರಿಗೆ ರಸ್ತೆ ಬಂದ್ ಮಾಡಲಿ ಎಂದಿದ್ದಾರೆ. ಕಾಮಗಾರಿ ಮುಗಿಸದೆ ಏಕಾಏಕಿ ಸಕಲೇಶಪುರ ಮಾರನಹಳ್ಳಿ ನಡುವೆ ಹೆದ್ದಾರಿ ಬಂದ್ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಿದ್ದಾರೆ.
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
You seem to have an Ad Blocker on.
To continue reading, please turn it off or whitelist Udayavani.