ಅಧಿಕ ಮಳೆಗೆ ಕೊಳೆಯುತ್ತಿದೆ ಕಾಫಿ ಬೆಳೆ
Team Udayavani, Oct 17, 2020, 4:38 PM IST
ಸಕಲೇಶಪುರ: ಕಾಫಿ ಹಾಗೂ ಏಲಕ್ಕಿ ನಾಡೆಂದೇ ಗುರುತಿಸಿಕೊಂಡಿರುವ ತಾಲೂಕಿನಲ್ಲಿ ಈ ಬಾರಿ ಮೂರು ನಾಲ್ಕು ತಿಂಗಳಿನಿಂದ ಮಳೆ ನಿರಂತರವಾಗಿ ಸುರಿಯುತ್ತಿದೆ. ಇದರಿಂದ ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಆಗಸ್ಟ್ ಹಾಗೂ ಸೆಪ್ಟೆಂಬರ್‌ನಲ್ಲಿ ಸುರಿದ ಅತಿವೃಷ್ಟಿ ಮಳೆಗೆಕಾಫಿ, ಮೆಣಸು, ಭತ್ತದ ಬೆಳೆಗೆ ವ್ಯಾಪಕ ಹಾನಿಯುಂಟಾಗಿತ್ತು.ಸಾಮಾನ್ಯವಾಗಿ ಈ ವೇಳೆಗೆ ತಾಲೂಕಿನ ಮಲೆನಾಡು ಭಾಗ ದಲ್ಲಿಮಳೆ ಪ್ರಮಾಣ ತೀರಾ ಇಳಿಮುಖವಾಗಿರುತ್ತದೆ. ಆದರೆ, ಈ ಬಾರಿ ಅಕ್ಟೋಬರ್ ಪ್ರಾರಂಭವಾಗಿ 16 ದಿನ ಕಳೆದರೂ ಮಳೆಬಿಡುವು ನೀಡುವ ಲಕ್ಷಣಗಳು ಕಾಣುತ್ತಿಲ್ಲ. ಇದರಿಂದ ಕೃಷಿಕರು ತತ್ತರಿಸಿಹೋಗಿದ್ದಾರೆ.
ಒಣಗಿಸುವುದಕ್ಕೂ ಕಷ್ಟವಾಗಿದೆ: ಸಾಮಾನ್ಯವಾಗಿ ನವೆಂಬರ್‌ನಲ್ಲಿ ಅರೇಬಿಕಾ ಕಾಫಿ ಕೊಯ್ಲಿಗೆ ಬರುತ್ತದೆ. ಆದರೆ, ಈ ಬಾರಿ ಸುರಿದ ಭಾರೀ ಮಳೆಯಿಂದ ತೇವಾಂಶ ಹೆಚ್ಚಾಗಿ ಬೇಗನೆ ಕಾಫಿಹಣ್ಣಾಗಿದೆ. ಸದ್ಯ ಹಣ್ಣಾಗಿರುವ ಕಾಫಿ ಬೀಜವನ್ನಾದ್ರೂ ಕೊಯ್ಲುಮಾಡೋಣ ಅಂದರೆ ಮಳೆ ಅವಕಾಶ ನೀಡುತ್ತಿಲ್ಲ. ಕೊಯ್ಲು ಮಾಡಿರುವ ಅರೇಬಿಕಾ ಕಾಫಿ ಹಣ್ಣನ್ನು ಹೇಗೆ ಒಣಗಿಸುವುದು ಎಂಬ ಚಿಂತೆ ಬೆಳೆಗಾರರನ್ನುಕಾಡುತ್ತಿದೆ.
ಕೊಳೆಯುತ್ತಿರುವ ಹಣ್ಣು: ಈಗಾಗಲೇ ಮಳೆಯಿಂದ ಶೇ.50 ಕಾಫಿ ಹಣ್ಣು ಗಿಡದಲ್ಲೇ ಉದುರಿ ಹೋಗಿದೆ. ಉಳಿದಿರುವ ಫಸಲನ್ನು ಕೊಯ್ಲು ಮಾಡಲು ಕೂಲಿ ಆಳುಗಳು ಸಿಗುತ್ತಿಲ್ಲ, ಇತ್ತಮಳೆಯೂ ಎಡೆಬಿಡದ ಕಾರಣ ಹಣ್ಣು ಗಿಡದಲ್ಲೇ ಕೊಳೆ ಯುತ್ತಿದೆ. ಇದು ಅರೇಬಿಕಾ ಕಾಫಿ ಬೆಳೆಗಾರರ ಗೋಳಾದರೆ, ಇನ್ನು ರೋಬಾಸ್ಟ ಬೆಳೆಗಾರರ ಸ್ಥಿತಿ ಇನ್ನೂ ಶೋಚನೀಯ ವಾಗಿದೆ. ಮಳೆಯಿಂದ ಕಾಫಿ ಹಣ್ಣಿನ ಜೊತೆ ಎಲೆಯೂಕೊಳೆಯಲಾರಂಭಿಸಿದೆ.
ಡಿಸೆಂಬರ್‌ನಲ್ಲಿ ಕೊಯ್ಲಿಗೆ ಬರುತ್ತಿತ್ತು: ಮಳೆ ನೀರು ನಿಂತುಹಣ್ಣು, ಎಲೆಕೊಳೆಯುತ್ತಿದೆ. ಇದು ರೈತರನ್ನು ಆತಂಕಕ್ಕೆ ದೂಡಿದೆ.ಸಾಮಾನ್ಯವಾಗಿ ಡಿಸೆಂಬರ್ ಅಂತ್ಯಕ್ಕೆ ರೋಬಾಸ್ಟ ಕಾಫಿ ಫಸಲಿಗೆಬರುತ್ತದೆ. ಆದರೆ, ಈ ಬಾರಿ ಸುರಿಯುತ್ತಿರುವಮಳೆಯಿಂದಾಗಿ ಕೆಲವು ತೋಟಗಳಲ್ಲಿ ರೋಬಾಸ್ಟ ಹಣ್ಣಾಗು ತ್ತಿದೆ. ಇದುಬೆಳೆಗಾರರನ್ನು ಚಿಂತೆಗೀಡು ಮಾಡಿದೆ.
ರೋಗಕ್ಕೆ ತುತ್ತಾಗುವ ಸಾಧ್ಯತೆ: ಧಾರಣೆ ಕುಸಿತ, ಇಳುವರಿ ಕುಂಟಿತ, ರೋಗ, ಸಾಲಬಾಧೆಯಿಂದ ಕಂಗೆಟ್ಟಿರುವ ಬೆಳೆಗಾರರಿಗೆ, ಇದೀಗ ಮತ್ತೂಮ್ಮೆ ಸುರಿಯುತ್ತಿರುವ ಮಳೆ ಗಾಯದಮೇಲೆ ಬರೆ ಎಳೆದಿದೆ. ಒಂದೆಡೆಕಾಫಿ ನೆಲಕಚ್ಚಿದ್ದು, ಮತ್ತೂಂ ದೆಡೆಕಾಳು ಮೆಣಸಿನ ಬಳ್ಳಿಕೊಳೆತು ಹೋಗುತ್ತಿದೆ. ಇನ್ನು ಉಳಿದಿರುವ ಗಿಡ ಗಳು ಬಿಸಿಲು ಬಂದ ನಂತರ ಹಳದಿ ರೋಗಕ್ಕೆ ತುತ್ತಾಗುವಸಾಧ್ಯತೆಯಿದೆ. ಮಳೆಯಿಂದಾಗಿ ಹಲವು ಕಾಫಿ ತೋಟಗಳಲ್ಲಿ ಬದುಗಳು ಒಡೆದು ಹೋಗಿದ್ದು, ಪುನರ್ ನಿರ್ಮಾಣ ಮಾಡ ಬೇಕಾಗಿದೆ. ತಾಲೂಕಿನಲ್ಲಿ ಬೆಳೆಯಲಾಗಿದ್ದ ಅಡಕೆ ಬೆಳೆ ಬಹುತೇಕವಾಗಿ ನಾಶವಾಗಿದೆ. ಕಾಫಿ ಬೆಳೆಗಾರರಿಗೆ ಕೂಲಿ ಕಾರ್ಮಿಕರಿಗೆಕೊಡಲು ಹಣವಿಲ್ಲದಂತಾಗಿದೆ.
ಒಟ್ಟಾರೆಯಾಗಿ ತಾಲೂಕಿನಲ್ಲಿ ಬೆಳೆಗಾರರ ಪರಿಸ್ಥಿತಿ ಚಿಂತಾಜನಕ ವಾಗಿದ್ದು, ಇದು ರೀತಿ ಮಳೆ ಮುಂದುವರಿದಲ್ಲಿ ಅರೇಬಿಕಾ ಬೆಳೆಗಾರರಿಗೆ ತೀವ್ರಪೆಟ್ಟುಬೀಳುವ ಸಾಧ್ಯತೆಯಿದೆ.2 ದಿನಗಳಿಂದ ಮಳೆ ಬಿಡುವು ಕೊಟ್ಟಿದ್ದು, 15 ದಿನಗಳ ನಂತರ ತಾಲೂಕಿನ ಜನ ಬಿಸಲುಕಾಣುವಂತಾಗಿದೆ.
ತಾಲೂಕಿನಲ್ಲಿ ಅತಿವೃಷ್ಟಿಯಿಂದಾಗಿ ಕಾಫಿ, ಮೆಣಸು, ಅಡಕೆ ಶೇ.50ಕ್ಕೂ ಹೆಚ್ಚು ನಾಶವಾಗಿದೆ.ಕಾಫಿ, ಮೆಣಸು ದರಮಾರುಕಟ್ಟೆಯಲ್ಲಿ ಸಂಪೂರ್ಣವಾಗಿ ಕುಸಿದಿದೆ. ಈಹಿನ್ನೆಲೆಯಲ್ಲಿ ಸರ್ಕಾರಕಾಫಿ ಬೆಳೆಗಾರರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು. –ಮೋಹನ್‌ಕುಮಾರ್, ಅಧ್ಯಕ್ಷ, ಕರ್ನಾಟಕ ಬೆಳೆಗಾರರ ಒಕ್ಕೂಟ
ವಾರದಿಂದ ವಾಡಿಕೆಗೂ ಹೆಚ್ಚು ಮಳೆಯಾಗಿದೆ.ಕಾಫಿ,ಮೆಣಸು ಉದುರಿ ಹೋಗುತ್ತಿದೆ. ಸರ್ಕಾರಕೂಡಲೇ ರೈತರ ನೆರವಿಗೆ ಧಾವಿಸಬೇಕು. – ಚಿದನ್, ಕಾಫಿ ಬೆಳೆಗಾರ, ಹೊಂಗಡಹಳ್ಳ
ಸುಧೀರ್ ಎಸ್.ಎಲ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
ಹಾಸನಾಂಬೆ ದರ್ಶನಕ್ಕೆ ವಿಧ್ಯುಕ್ತ ತೆರೆ; 9 ದಿನದಲ್ಲಿ 19 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ
Devi Temple: ಹಾಸನಾಂಬೆ ದೇವಿ ದರ್ಶನ ಅವ್ಯವಸ್ಥೆ, ಭಕ್ತರ ಆಕ್ರೋಶ: ವಿಶೇಷ ಪಾಸ್ ರದ್ದು
Hasanambe Temple: ಇಂಥ ಹಲವು ಡಿಸಿಗಳನ್ನು ನೋಡಿದ್ದೇನೆ: ಎಚ್.ಡಿ.ರೇವಣ್ಣ ಕಿಡಿ
MUST WATCH
ಹೊಸ ಸೇರ್ಪಡೆ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.