ಸುರಿವ ಮಳೆಗೆ ನೆಲಕಚ್ಚಿದ ಕಾಫಿ
Team Udayavani, Dec 13, 2021, 2:22 PM IST
ಆಲೂರು: ಮೊನ್ನೆ ರಾತ್ರಿ ಸುರಿದ ಬಾರಿ ಮಳೆಗೆ ಕೂಯ್ಲಿಗೆ ಬಂದ ಕಾಪಿ ಹಣ್ಣು ಸಂಪೂರ್ಣವಾಗಿ ನೆಲ ಕಚ್ಚಿದ್ದು ರೈತರು ಸಂಕಷ್ಟದಲ್ಲಿದ್ದಾರೆ ಸರ್ಕಾರ ಕಾಫಿ ಬೆಳೆಗಾರರ ನೆರವಿಗೆ ದಾವಿಸಬೇಕಾಗಿದೆ. ಆಲೂರು ತಾಲೂಕು ಅರೇ ಮಲೆನಾಡು ಪ್ರದೇಶದಿಂದ ಕೂಡಿದ್ದು ಕೆ.ಹೊಸಕೋಟೆ, ಕುಂದೂರು, ಹಾಗೂ ಪಾಳ್ಯ ಹೋಬಳಿ ಕೆಲವು ಭಾಗಗಳಲ್ಲಿ ಕಾಫಿ ಎಲಕ್ಕಿ ಹಾಗೂ ಮೆಣಸು ಬೆಳೆಗಳನ್ನು ಬೆಳೆಯುತ್ತಿದ್ದಾರೆ.
ಮುಂಗಾರು ಮುಗಿದು ಹಿಂಗಾರು ಮುಗಿಯುವ ಹಂತಕ್ಕೆ ಬಂದರೂ ಹವಾಮಾನ ವೈಪರೀತ್ಯದಿಂದ ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ತಾಲೂಕಿನ ಕಾಫಿ ಬೆಳೆಗಾರರ ವಲಯದಲ್ಲಿ ಆತಂಕ ಹುಟ್ಟಿದೆ. ಕಳೆದ 2 ವರ್ಷಗಳಿಂದ ಹವಮಾನ ವೈಪರೀತ್ಯದಿಂದ ಮಳೆ ಸುರಿಯುವುದರಲ್ಲಿ ವ್ಯತ್ಯಾಸವಾಗುತ್ತಿರುವುದು ಕಂಡು ಬಂದಿದ್ದರೂ ಸಹ ಈ ವರ್ಷದಷ್ಟು ಗಂಭೀರ ಪರಿಸ್ಥಿತಿ ಕಂಡು ಬಂದಿರಲಿಲ್ಲ.
ಸಾಮಾನ್ಯವಾಗಿ ಅಕ್ಟೋಬರ್ ಹಾಗೂ ನವೆಂಬರ್ ಮಾಹೆಯಲ್ಲಿ ಅರೇಬಿಕಾ ಕಾಫಿ ಕೊಯ್ಲಿಗೆ ಬರುವುದು ಸಾಮಾನ್ಯವಾಗಿದ್ದು, ಈ ಬಾರಿ ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಶೇ.25 ರಷ್ಟು ಅರೇಬಿಕಾ ಕಾಫಿ ಭೂಮಿ ಸೇರಿದೆ. ಬಾಕಿ ಉಳಿದ ಕಾμಯನ್ನು ಕೊಯ್ಲು ಮಾಡಲು ಬೆಳೆಗಾರರು ಆತಂಕ ಎದುರಿಸುತ್ತಿದ್ದಾರೆ.
ಮಳೆಯ ಹಿನ್ನೆಲೆಯಲ್ಲಿ ಕಾಫಿ ಒಣಗಿಸುವುದು ಅಸಾಧ್ಯವಾಗಿರುವುದರಿಂದ ಕಳೆದ 15 ದಿನಗಳಿಂದ ಕಾಫಿ ಕೊಯ್ಲು ಮಾಡುವುದನ್ನು ಮುಂದೂಡುತ್ತಿದ್ದು ಬೆಳೆಗಾರರು ಇದೀಗ ಮಳೆ ನಿಲ್ಲದ ಕಾರಣ ಇತ್ತ ಅರೇಬಿಕಾ ಹಣ್ಣನ್ನು ಗಿಡದಲ್ಲಿ ಬಿಡಲು ಆಗದೆ ಒಣಗಿಸಲು ಆಗದೆ ಆತಂಕಕ್ಕೆ ಸಿಲುಕಿಕೊಂಡಿದ್ದಾರೆ.
ಇದನ್ನೂ ಓದಿ:- ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ:ಗಂಗಾನದಿಯಲ್ಲಿ ಮಿಂದೆದ್ದ ಮೋದಿ, ಕಾಶಿ ವಿಶ್ವನಾಥನಿಗೆ ಪೂಜೆ
ಹಾಗೂ ಹೀಗೂ ಕಾಫಿಯನ್ನು ಕಷ್ಟಪಟ್ಟು ಒಣಗಿಸಿದರೆ ಕಾಫಿಯ ಗುಣಮಟ್ಟ ಸಂಪೂರ್ಣವಾಗಿ ಕುಸಿದು ಮಾರುಕಟ್ಟೆಯಲ್ಲಿ ಇಂತಹ ಕಾಫಿ ಬೇಡಿಕೆ ಕಳೆದುಕೊಳ್ಳುವುದರಿಂದ ಬೆಳೆಗಾರರ ನೋವು ಯಾರಿಗೂ ಹೇಳದಂತಾಗಿದೆ.
ಸುರಿಯುತ್ತಿರುವ ಮಳೆಯಿಂದ ಕಾಫಿಯ ರಕ್ಷಣೆಗಾಗಿ ಅರೇಬಿಕಾ ಕಾಫಿ ಬೆಳೆಗಾರರು ಕಟಾವು ಮಾಡಿದ ಕಾಫಿ ಯನ್ನು ಒಣಗಿಸಲು ವ್ಯಾಪಕ ಸರ್ಕಸ್ ಮಾಡುತ್ತಿದ್ದು ಗೋದಾಮು ಹಾಗೂ ಮನೆಯ ಒಳಗೂ ಸಹ ಕಾಫಿ ಯನ್ನು ಹರಡಿ ಒಣಗಿಸಲಾಗುತ್ತಿದೆ ಇನ್ನೂ ಕೆಲವರು ಇಟ್ಟಿಗೆ ಇಟ್ಟು ಸೌದೆ ಓಲೆಯ ಮೇಲೆ ದೊಡ್ಡ ತಗಡು ಇಟ್ಟು ಕಾಫಿ ಒಣಗಿಸಲಾಗುತ್ತಿದೆ.
“ಹವಾಮಾನ ವೈಪರೀತ್ಯದಿಂದ ಮಳೆ ನಿರಂತರವಾಗಿ ಸುರಿಯುತ್ತಿರುವ ಮಳೆ ಹಾಗೂ ಮೊನ್ನೆ ಸುರಿದ ಮಳೆಯಿಂದ ಕಾಫಿ, ಮೆಣಸು, ಎಲಕ್ಕಿ ಉದುರಿ ನೆಲಕಚ್ಚುತ್ತಿದ್ದು ಕಾಫಿ ಬೆಳೆಗಾರರು ಅತಂಕ ಪಡುವಂತಾಗಿದೆ ಅದ್ದರಿಂದ ಕೇಂದ್ರ, ರಾಜ್ಯ ಸರ್ಕಾರಗಳು ಪರಿಹಾರ ನೀಡುವುದರ ಬದಲು ಮಳೆಯಿಂದ ಆಗಿರುವ ನಷ್ಟವನ್ನು ಬರಿಸಬೇಕು.” ● ಪೂವಯ್ಯ,ಬೆಳೆಗಾರರು, ಕೆ.ಹೊಸಕೋಟೆ
“ಇತ್ತೀಚೆಗೆ ಸುರಿದ ಮಳೆಯಿಂದ ಕಾಪಿ ಹಣ್ಣು ನೆಲಕಚ್ಚುತದತಿರುವುದರಿಂದ ರೈತರು ಸಂಕಷ್ಟದಲ್ಲಿದ್ದಾರೆ ತಾಲ್ಲೂಕು ಆಡಳಿತ ಈ ಸಮಯದಲ್ಲಿ ನಿದ್ದೆ ಹೊಡೆಯಬಾರದು ವಸ್ತುಸ್ಥಿತಿ ವರದಿ ನೀಡಬೇಕು ತಹಶಿಲ್ದಾರ್ ಕೆಳ ಮಟ್ಟದ ಅಧಿಕಾರಿಗಳ ಸಭೆ ಕರೆದು ಹೆಚ್ಚು ಜವಾಬ್ದಾರಿ ನೀಡಬೇಕು.” ● ಶಶಿಧರ ಬಿಜೆಪಿ ಮುಖಂಡರು
- – ಟಿ.ಕೆ.ಕುಮಾರಸ್ವಾಮಿ ಟಿ.ತಿಮ್ಮನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದ್ವೇಷದ ರಾಜಕಾರಣ ಸುಡುವ ಕಾಲ ಸನ್ನಿಹಿತ: ಸೂರಜ್ ರೇವಣ್ಣ
ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ದಿಢೀರ್ ಕಾಣಿಸಿಕೊಂಡ ಬೆಂಕಿ; ತಪ್ಪಿದ ಭಾರಿ ಅನಾಹುತ
Hasana: ಕರೆಯನ್ನು ಸ್ವೀಕರಿಸದ ಪ್ರಿಯಕರಗೆ ಚಾಕು ಇರಿದು ಪ್ರಿಯತಮೆ ಪರಾರಿ
Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.