ಆಹಾರೋತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಸಹಕರಿಸಿ
ಸಮಗ್ರ ಕೃಷಿ ಮಾಹಿತಿ ರಥ ಸಂಚಾರಕ್ಕೆ ಚಾಲನೆ ನೀಡಿದ ತಾಲೂಕು ಕೃಷಿ ಅಧಿಕಾರಿ ಮನವಿ
Team Udayavani, Jul 1, 2019, 11:15 AM IST
ಜಾವಗಲ್ ರೈತ ಸಂಪರ್ಕ ಕೇಂದ್ರದಲ್ಲಿ ಏರ್ಪಡಿಸಿದ್ದ ಕೃಷಿ ಮಾಹಿತಿ ರಥ ಸಂಚಾರ ಕಾರ್ಯಕ್ರಮಕ್ಕೆ ತಾಪಂ ಸದಸ್ಯರಾದ ವಿಜಯಕುಮಾರ್, ಪ್ರಭಾಕರ್ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಜಾವಗಲ್: ಆಹಾರೋತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ರೈತ ಬಾಂಧವರು ಸಹಕರಿಸಬೇಕೆಂದು ಅರಸೀಕೆರೆ ತಾಲೂಕು ಕೃಷಿ ಅಧಿಕಾರಿ ಕಾಂತರಾಜು ತಿಳಿಸಿದರು.
ಹಾಸನ ಜಿಲ್ಲಾ ಪಂಚಾಯಿತಿ, ಅರಸೀಕೆರೆ ತಾಲೂಕು ಆಡಳಿತ ಹಾಗೂ ಕೃಷಿ ಇಲಾಖೆ, ಜಾವಗಲ್ ಹೋಬಳಿ ರೈತ ಸಂಪರ್ಕ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮ 2019ರ ಅಂಗವಾಗಿ ಜಾವ ಗಲ್ ಹೋಬಳಿಯ ಜಾವಗಲ್ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಏರ್ಪಡಿಸಿದ್ದ ಸಮಗ್ರ ಕೃಷಿ ಮಾಹಿತಿ ರಥ ಸಂಚಾರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಹೊಸ ತಾಂತ್ರಿಕತೆ ಅಳವಡಿಸಿಕೊಳ್ಳಿ: ತಾಂತ್ರಿಕ ಬೇಸಾಯಪದ್ದತಿ, ತಾಂತ್ರಿಕ ಉಪಕರಣಗಳ ಬಳಕೆ, ಸಾವಯುವ ಗೊಬ್ಬರ ಮತ್ತು ಕೊಟ್ಟಿಗೆ ಗೊಬ್ಬರ ಬಳಕೆ, ಮಳೆಯ ಪ್ರಮಾಣಕ್ಕೆ ಅನು ಗುಣವಾದ ಸಿರಿಧಾನ್ಯಬೆಳೆಯುವುದು, ಮಾಗಿ ಉಳಿಮೆ, ಇಳಿಜಾರಿಗೆ ಅಡ್ಡಲಾಗಿ ಉಳಿಮೆ, ಲಘು ಪೋಷಕಾಂಶಗಳ ಬಳಕೆ , ಮಣ್ಣು ಪರೀಕ್ಷೆ ಮತ್ತಿತರ ತಾಂತ್ರಿಕ ವಿಧಾನಗಳನ್ನು ಕೃಷಿಕರು ಅಳವಡಿಸಿಕೊಂಡು ಇರುವ ಕೃಷಿ ಪ್ರದೇಶ ದಲ್ಲಿಯೇ ಅಧಿಕ ಇಳುವರಿ ಪಡೆಯ ಬಹುದೆಂದು ಕೃಷಿಕರಿಗೆ ಸಲಹೆ ನೀಡಿದರು.
ಸರ್ಕಾರದ ಸೌಲಭ್ಯ ಸದ್ಬಳಕೆಯಾಗಲಿ: ರಥ ಸಂಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತ ನಾಡಿದ ನೇರ್ಲಿಗೆ ತಾಪಂ ಸದಸ್ಯ ತಿಮ್ಮನಹಳ್ಳಿ ವಿಜಯಕುಮಾರ್ ಮಾತನಾಡಿ, ಸರ್ಕಾರವು ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ, ಹುದಿ-ಬದಿ, ಕೊಟ್ಟಿಗೆ ನಿರ್ಮಾಣ, ಪಾಲಿಹೌಸ್ ನಿರ್ಮಾಣ, ರಿಯಾಯಿತಿ ದರದಲ್ಲಿ ಬೀಜ, ಗೊಬ್ಬರ, ಕೃಷಿ ಉಪಕರಣಗಳನ್ನು ನೀಡುತ್ತಿದೆ. ಕೃಷಿಕರು ಸರ್ಕಾರದ ಸೌಲಭ‌್ಯಗಳನ್ನು ಪಡೆದು ಕೊಂಡು ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಬೇಕೆಂದರು.
ತಾಪಂ ಸದಸ್ಯ ಜೆ.ಕೆ.ಪ್ರಭಾಕರ್ ಮಾತನಾಡಿ, ಕಡಿಮೆ ನೀರಿನಲ್ಲಿ ಬೆಳೆಯುವ ಬೆಳೆಗಳಿಗೆ ಆದ್ಯತೆ ನೀಡಬೇಕು ಎಂದರು. ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸುಬ್ರಹ್ಮಣ್ಯ ಇಲಾಖೆ ವತಿಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಸಹಾಯಕ ಕೃಷಿ ಅಧಿಕಾರಿ ವೀರಭದ್ರಪ್ಪ, ಪಿಡಿಒ ಮಂಜುನಾಥ್, ತಾಲೂಕು ಆತ್ಮ ತಾಂತ್ರಿಕ ವ್ಯವಸ್ಥಾಪಕ ಗೋಮಟೇಶ ನಾಯ್ಕ, ರಂಜಿತಾ, ಲೆಕ್ಕ ಸಹಾಯಕ ಮಲ್ಲೇಶ್, ರೈತ ಅನುವುಗಾರಾದ ಹನುಮಂತೇಗೌಡ, ಜಗದೀಶ್, ಬಸವ ರಾಜು, ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.