ನನ್ನ ಪರ ಕಾಂಗ್ರೆಸ್ ಕಾರ್ಯಕರ್ತರು ಚುನಾವಣೆಯಲ್ಲಿ ಕೆಲಸ ಮಾಡಿದ್ರು : ಮಂಜು
Team Udayavani, Apr 20, 2019, 10:33 AM IST
ಹಾಸನ: ಶಾಸಕ ಪ್ರೀತಂ ಜೆ.ಗೌಡ ಅವರು ನನ್ನ ವಿರುದ್ಧ ಮಾತನಾಡಿದ್ದು ನಿಜ. ಅದು ಚುನಾವಣೆಗೆ ಮೊದಲು. ಇದನ್ನು ಪ್ರೀತಂ ಜೆ.ಗೌಡ ಅವರೇ ಖಚಿತಪಡಿಸಿದರು ಎಂದು ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ,
ಮಾಜಿ ಸಚಿವ ಎ.ಮಂಜು ಸ್ಪಷ್ಟಪಡಿಸಿದರು.
ಎ.ಮಂಜು ಅವರನ್ನು ಸೋಲಿಸುವ ಸಂಬಂಧ ಪಕ್ಷದ ಕಾರ್ಯಕರ್ತ ರೊಬ್ಬರೊಂದಿಗೆ ಪ್ರೀತಂ ಜೆ.ಗೌಡ ಅವರು ನಡೆಸಿದ ಫೋನ್ ಸಂಭಾಷಣೆಯ ಆಡಿಯೋ ಕಳೆದ ವಾರ ವೈರಲ್ ಆಗಿತ್ತು. ಎ.ಮಂಜು ಗೆದ್ದರೆ ಅವರೇ ನಾಯಕರಾಗಿ ಮೆರೀತಾರೆ ಎಂದು ಪ್ರೀತಂ ಜೆ. ಗೌಡ ಅವರು ಎ.ಮಂಜು ಅವರ ವಿರುದ್ಧ ಮಾತನಾಡಿದ್ದರು.
ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಎ.ಮಂಜು ಅವರು, ನಾನು
ಬಿಜೆಪಿ ಅಭ್ಯರ್ಥಿಯಾಗುವ ಮೊದಲು ಪ್ರೀತಂ ಜೆ.ಗೌಡ ಮಾತನಾಡಿದ್ದ ಆಡಿಯೋ ವೈರಲ್ ಆಗಿತ್ತು. ಆನಂತರ ಪ್ರೀತಂ ಜೆ.ಗೌಡ ಅವರೇ ನನ್ನ ಬಳಿ ಬಂದು ಅದು ಹಳೆಯ ಸಂಭಾಷಣೆ ಎಂದು ಹೇಳಿದ್ದರು. ಆನಂತರ ಪ್ರೀತಂ ಜೆ.ಗೌಡ ಅವರು ನನ್ನ ಪರವಾಗಿ ಕೆಲಸ ಮಾಡಿದ್ದಾರೆ. ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಪ್ರೀತಂಗೌಡ ಶಾಸಕ. ವಿಧಾನ ಸಭಾ ಚುನಾವಣೆ ಬಂದರೂ ನಾನು ಅರಕಲ ಗೂಡು ಕ್ಷೇತ್ರದವನು. ಪ್ರೀತಂ ಜೆ.ಗೌಡ ಹಾಸನ ಕ್ಷೇತ್ರದವರು. ನಾನು ಅವರಿಗೆ ಪ್ರತಿಸ್ಪರ್ಧಿಯಲ್ಲ. ಹಾಗಾಗಿ ಅವರು
ನನ್ನ ವಿರುದ್ಧ ಮಾತ ನಾಡೋಲ್ಲ ಎಂದರು.
ಕಾಂಗ್ರೆಸ್ ಕಾರ್ಯಕರ್ತರ ನೆರವು: ಈ ಚುನಾವಣೆಯಲ್ಲಿ ನನ್ನ ಪರವಾಗಿ ಬಹುಪಾಲು ಕಾಂಗ್ರೆಸ್ ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ವಿಶೇಷವಾಗಿ ಪರಿಶಿಷ್ಟ ಸಮುದಾಯದವರು ನನಗೆ ಬೆಂಬಲ ನೀಡಿದ್ದಾರೆ. ಬಿಜೆಪಿಯವರು
ಹಗಲಿರಳು ಕೆಲಸ ಮಾಡಿದ್ದಾರೆ. ಹಾಗಾಗಿ ನನಗೆ ಈ ಚುನಾವಣೆಯಲ್ಲಿ ಬಹುದೊಡ್ಡ ಶಕ್ತಿ ಬಂದಿತು. ನನ್ನ ಪರವಾಗಿ ಕೆಲಸ ಮಾಡಿದ ಎಲ್ಲರಿಗೂ ಧನ್ಯವಾದ. ಬಿಜೆಪಿ ಮತ್ತು ಕಾಂಗ್ರೆಸ್ ಸೇರಿ ಕುಟುಂಬ ರಾಜಕಾರಣದ ವಿರುದ್ಧ
ಹೋರಾಟ ನಡೆಸಿದ್ದು, ಜೆಡಿಎಸ್‌ನ್ನು ಮಣಿಸಿ ನಾನು ಸಂಸತ್ ಪ್ರವೇಶ ಮಾಡುವ ವಿಶ್ವಾಸವಿದೆ ಎಂದು ಎ.ಮಂಜು ಅವರು ಹೇಳಿದರು.
ಕಡೂರಿನಲ್ಲಿ ಕಡಿಮೆ ಮತದಾನ: 2014 ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ವಿರುದ್ಧ ಸ್ಪರ್ಧಿಸಿದ್ದ ನನಗೆ ಕಡೂರು ವಿಧಾನಸಭಾ ಚುನಾವಣೆ ಯಲ್ಲಿ ಸುಮಾರು 17 ಸಾವಿರ ಬಹುಮತ
ಬಂದಿತ್ತು. ಈ ಬಾರಿ ಆ ಕ್ಷೇತ್ರದಲ್ಲಿ ಮತದಾನ ಞಕಡಿಮೆ ಯಾಗಿದೆ. ಅದಕ್ಕೆ ಕಾರಣ ಅಲ್ಲಿ ನನ್ನ ಪರವಾಗಿ ಹೋರಾಟ ಮಾಡುತ್ತಿದ್ದ ಲಿಂಗಾಯತ ಸಮುದಾಯದ ಮುಖಂಡ ಶಿವಕುಮಾರ್ ಅವರು ಚುನಾವಣೆಗೆ 2 ದಿನ ಮೊದಲು ನಿಧನರಾದರು. ಆದರೂ ಆ ಕ್ಷೇತ್ರದಲ್ಲಿ ನನಗೆ ಈ ಬಾರಿಯೂ ಬಹುಮತ ಬರಲಿದೆ ಎಂದರು
ಗೌಡ್ರು ಹಾಸನದಿಂದ ಸ್ಪರ್ಧಿಸಬೇಕಿತ್ತು: ಮಾಜಿ ಪ್ರಧಾನಿ ದೇವೇಗೌಡರು ಹಾಸನ ಜಿಲ್ಲೆ ಯಲ್ಲಿ ರಾಜಕಾರಣ ಮಾಡಿ ಉನ್ನತ ಸ್ಥಾನಕ್ಕೇರಿರುವ ದೇವೇಗೌಡರು ಹಾಸನ ಲೋಕಸಭಾ ಕ್ಷೇತ್ರ ದಿಂದ 5 ಬಾರಿ ಗೆದ್ದಿದ್ದರು. ಅವರ ವಯೋಮಾನದ ದೃಷ್ಟಿಯಿಂದ ಅವರಿಗೆ ಇದು ಕೊನೆಯ ಚುನಾವಣೆ. ಹಾಗಾಗಿ ಈ ಬಾರಿ ಹಾಸನ ಲೋಕಸಭಾ ಕ್ಷೇತ್ರದಿಂದಲೇ ಅವರು ನಿಂತು ಗೆಲ್ಲಬೇಕಾಗಿತ್ತು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Devi Temple: ಹಾಸನಾಂಬೆ ದೇವಿ ದರ್ಶನ ಅವ್ಯವಸ್ಥೆ, ಭಕ್ತರ ಆಕ್ರೋಶ: ವಿಶೇಷ ಪಾಸ್ ರದ್ದು
Hasanambe Temple: ಇಂಥ ಹಲವು ಡಿಸಿಗಳನ್ನು ನೋಡಿದ್ದೇನೆ: ಎಚ್.ಡಿ.ರೇವಣ್ಣ ಕಿಡಿ
Party Clean: ಹೊಂದಾಣಿಕೆ ರಾಜಕಾರಣ ಮಾಡೋರಿಗೆ ಬಿಜೆಪಿಯಿಂದ ಗೇಟ್ಪಾಸ್: ಬಿ.ವೈ.ವಿಜಯೇಂದ್ರ
Hasan; ಹಾಸನಾಂಬೆಗೆ 4 ದಿನದಲ್ಲಿ 3 ಕೋಟಿ ರೂ. ಆದಾಯ
H. D. Kumaraswamy: ನಿಖಿಲ್ಗೆ ಅಭಿಮನ್ಯು ಪಾತ್ರ ಬೇಡ ಅರ್ಜುನನ ಪಾತ್ರ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.