ಶ್ರವಣಬೆಳಗೊಳ: ಕೈ ಸ್ಪರ್ಧಿ ಇನ್ನೂ ನಿಗೂಢ


Team Udayavani, Apr 16, 2023, 5:42 PM IST

ಶ್ರವಣಬೆಳಗೊಳ: ಕೈ ಸ್ಪರ್ಧಿ ಇನ್ನೂ ನಿಗೂಢ

ಚನ್ನರಾಯಪಟ್ಟಣ: ಶ್ರವಣಬೆಳಗೊಳದ ವಿಧಾನಸಭಾ ಕ್ಷೇತ್ರ ಜೆಡಿಎಸ್‌ ಪಕ್ಷದ ಭದ್ರಕೋಟೆ ಜೆಡಿಎಸ್‌ ಪಕ್ಷದಿಂದ ಯಾರೇ ನಿಂತರು ಅವರ ಗೆಲುವು ಶತಸಿದ್ಧ ಎನ್ನುವ ಮಾತುಗಳಿವೆ. ಆದರೂ, ಜೆಡಿಎಸ್‌ನ ಪ್ರತಿಸ್ಪರ್ಧಿ ಕಾಂಗ್ರೆಸ್‌ ತಮ್ಮ ಪಕ್ಷದಿಂದ ಯಾರನ್ನು ಕಣಕ್ಕೆ ಇಳಿಸುತ್ತಾರೆ ಎನ್ನುವ ಗುಟ್ಟು ಬಿಟ್ಟುಕೊಟ್ಟಿಲ್ಲ.

ಕಳೆದ ಬಾರಿ ಚುನಾವಣೆಯಲ್ಲಿ ರಾಜ್ಯದಲ್ಲೇ ಅತೀ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದವರಲ್ಲಿ ಒಬ್ಬರಾಗಿದ್ದ ಶ್ರವಣ ಬೆಳಗೊಳ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಶಾಸಕ ಸಿ.ಎನ್‌.ಬಾಲಕೃಷ್ಣ ಅವರಿಗೆ ಈ ಬಾರಿ ಪ್ರತಿಸ್ಪರ್ಧಿ ಯಾರೆಂಬುದು ಇದುವರೆಗೂ ಅಂತಿಮವಾಗಿಲ್ಲ, ನಿಗೂಡವಾಗಿಯೇ ಉಳಿದಿರುವುದು ಕ್ಷೇತ್ರದ ಮತದಾರರಲ್ಲಿ ಸಾಕಷ್ಟು ಗೊಂದಲ ಮೂಡಿದೆ.

ಸಮರ್ಥ ಪ್ರತಿಸ್ಪರ್ಧಿಯೇ ಇಲ್ಲ: ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಎರಡು ಬಾರಿಯೂ ಹೆಚ್ಚು ಮತಗಳೊಂದಿಗೆ ಗೆಲವು ಸಾಧಿಸಿರುವ ಶಾಸಕ ಬಾಲಕೃಷ್ಣ, ಈ ಬಾರಿ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಆದರೆ, ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಪ್ರಬಲ ಪೈಪೋಟಿ ನೀಡುವ ಯಾವೊಬ್ಬ ಪ್ರತಿಸ್ಪರ್ಧಿಯೂ ಅಖಾಡದಲ್ಲಿ ಕಾಣಿಸಿಕೊಳ್ಳುತ್ತಿಲ್ಲ.

ಪ್ರಬಲ ಎದುರಾಳಿಯಾಗಿದ್ದ ಅಣತಿ ಆನಂದ್‌: ಬಿಜೆಪಿ ಈಗಾಗಲೆ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಹಾಸನ ತಾಲೂಕಿನ ಸಿ.ಆರ್‌.ಚಿದನಂದ್‌ಗೆ ಟಿಕೆಟ್‌ ಮಣೆ ಹಾಕಿರು ವುದಿರಂದ ಬಾಲಕೃಷ್ಣಗೆ ಪ್ರತಿ ಸ್ಪರ್ಧಿಯಾಗುತ್ತಿಲ್ಲ, ಚಿದಾನಂದ್‌ ಒಂದು ವರ್ಷದಿಂದ ಪಕ್ಷ ಸಂಘಟಿಸಿದ್ದಾರೆ. ಚುನಾವಣೆ ವೇಳೆ ಜೆಡಿಎಸ್‌ ಕಾರ್ಯಕರ್ತರನ್ನು ತಮ್ಮತ್ತ ಸೆಳೆಯುವ ಚಾಕಚಕ್ಯತೆ ಹೊಂದಿಲ್ಲ, ಶಾಸಕರ ಪತ್ನಿ ಕುಸುಮಾರಾಣಿಯನ್ನು ಜಿಪಂನಲ್ಲಿ ಸೋಲಿಸಿದ್ದ ಅಣತಿ ಆನಂದ್‌ಗೆ ಒಂದು ವೇಳೆ ಬಿಜೆಪಿ ಟಿಕೆಟ್‌ ನೀಡಿದಿದ್ದರೆ ಶಾಸಕರ ನಿದ್ದೆಗೆಡಿಸುತ್ತಿದ್ದರು ಎಂಬ ಮಾತುಗಳು ಕೇಳಿ ಬರುತ್ತಿವೆ.

ಕೈ ಸ್ಪರ್ಧಿ ಇನ್ನೂ ನಿಗೂಢ: ಕಾಂಗ್ರೆಸ್‌ ಪಕ್ಷದಿಂದ ಈಗಾಗಲೆ ಮೂರನೇ ಪಟ್ಟಿ ರಿಲೀಸ್‌ ಮಾಡಿದೆಯಾದರೂ, ಇದರಲ್ಲಿಯೂ ಶ್ರವಣಬೆಳಗೊಳ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಹೆಸರು ಘೋಷಣೆ ಮಾಡಿಲ್ಲ, ಇದರಿಂದ ಜೆಡಿಎಸ್‌ ಪಕ್ಷದ ಅಭ್ಯರ್ಥಿ ಬಾಲಕೃಷ್ಣ ತಮ್ಮ ಸಂಘಟನೆ ಚತುರತೆಯಿಂದ ಗ್ರಾಮೀಣ ಭಾಗದ ಮತದರರನ್ನು ತನ್ನತ್ತ ಸೆಳೆಯುತ್ತಿದ್ದಾರೆ, ಕಾಂಗ್ರೆಸ್‌ ಮುಖಂಡರು ಅಂತಿಮ ಗಳಿಗೆಯಲ್ಲಿ ಮತದಾರರ ತಲುಪು ವುದು ಕಷ್ಟವಾಗಲಿದೆ.

ಭಾರೀ ಅಂತರದ ಗೆಲುವು: 2004 ಮತ್ತು 2008ರ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದಿಂದ ಆಯ್ಕೆಯಾಗಿದ್ದ ಸಿ.ಎಸ್‌.ಪುಟ್ಟೇಗೌಡ ಬದಲಾದ ಕಾಲಘಟ್ಟದಲ್ಲಿ ಜೆಡಿಎಸ್‌ ತೊರೆದು 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧೆ ಮಾಡಿದರು. ಜೆಡಿಎಸ್‌ ನಿಂದ ಸ್ಪರ್ಧೆಗಿಳಿದ ಬಾಲಕೃಷ್ಣ ಕಾಂಗ್ರೆಸ್‌ ಪಕ್ಷದ ಅಂದಿನ ಅಭ್ಯರ್ಥಿ ಪುಟ್ಟೇಗೌಡರ ವಿರುದ್ಧ 24 ಸಾವಿರ ಮತಗಳ ಅಂತರದಿಂದ ಗೆಲವು ಸಾಧಿಸಿದರು.

ನಾಳೆ ನಾಮಪತ್ರ ಸಲ್ಲಿಕೆ: 2018ರ ಚುನಾವಣೆ ಯಲ್ಲಿಯೂ ಬಾಲಕೃಷ್ಣ ಹಾಗೂ ಪುಟ್ಟೇಗೌಡರ ಪುನಃ ಮುಖಾಮುಖೀಯಾದರು. ಈ ವೇಳೆ 53 ಸಾವಿರ ಮತಗಳ ಭಾರೀ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ, ಎರಡನೇ ಸಲ ವಿಧಾನಸೌಧ ಪ್ರವೇಶ ಮಾಡಿದರು. 2023ರ ಚುನಾ ವಣೆಯಲ್ಲಿ ಜೆಡಿಎಸ್‌ ಪಕ್ಷದಿಂದ ಪುನಃ ಬಾಲಕೃಷ್ಣ ಕಣಕ್ಕೆ ಇಳಿದಿದ್ದು ಏ.17 ರಂದು ನಾಮಪತ್ರ ಸಲ್ಲಿಸಲು ಸಕಲ ತಯಾರಿ ಮಾಡಿಕೊಂಡಿದ್ದಾರೆ.

ಕೈ ಅಭ್ಯರ್ಥಿ ಯಾರು?: ಕಾಂಗ್ರೆಸ್‌ ಪಕ್ಷದಿಂದ ಅಭ್ಯರ್ಥಿ ಯಾರು.? ಎನ್ನುವುದು ಕ್ಷೇತ್ರದಲ್ಲಿ ಪ್ರಶ್ನೆಯಾಗಿ ಉಳಿದಿದೆ, ಪುಟ್ಟೇಗೌಡರಿಗೆ ಆರೋಗ್ಯ ಸರಿಯಿಲ್ಲ ಮತ್ತು ವಯೋಸಹಜವಾಗಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ವಿಧಾನಪರಿಷತ್‌ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜೆ.ಎಂ.ರಾಮಚಂದ್ರ, ಮಾಜಿ ಮತ್ರಿ ದಿ. ಎಚ್‌.ಸಿಶ್ರೀಕಂಠಯ್ಯರ ಸೊಸೆ ರಾಜೇಶ್ವರಿ ಹಾಗೂ ಮೊಮ್ಮಗ ಎಚ್‌.ಸಿ.ಲಲಿತ್‌ ರಾಘವ್‌ (ದೀಪು) ಟಿಕೆಟಾYಗಿ ಪೈಪೋಟಿ ನಡೆಸುತ್ತಿದ್ದಾರೆ.

4 ಬಾರಿ ಗೆಲುವು ಸಾಧಿಸಿದ್ದ ಶ್ರೀಕಂಠಯ್ಯ: ಹಿರೀಸಾವೆ ಅಣ್ಣಯ್ಯ ಎಂದೇ ಖ್ಯಾತರಾಗಿದ್ದ ಮಾಜಿ ಸಚಿವ ದಿ.ಎಚ್‌.ಸಿ.ಶ್ರೀಕಂಠಯ್ಯ 1972ರಲ್ಲಿ ಪ್ರಜಾ ಸೋಸಿ ಯಲ್‌ ಪಾರ್ಟಿ (ಪಿಎಸ್ಪಿ) ಮೊದಲ ಬಾರಿಗೆ ಆಯ್ಕೆ ಯಾದರು. 1978ರಲ್ಲಿ ಕಾಂಗ್ರೆಸ್‌ ಸೇರ್ಪಡೆಗೊಂಡು ಸತತವಾಗಿ ಎರಡು ಬಾರಿ ವಿಧಾನಸಭೆ ಪ್ರವೇಶ ಮಾಡಿದರು. 1994ರ ಚುನಾವಣೆಯಲ್ಲಿ ಜೆಡಿಎಸ್‌ ನಿಂದ ಸ್ಪರ್ಧಿಸಿದ್ದ ಸಿ.ಎಸ್‌.ಪುಟ್ಟೇಗೌಡರ ವಿರುದ್ಧ ಸೋಲು ಅನುಭವಿಸಿ, 1999ರಲ್ಲಿ ಪುಟ್ಟೇಗೌಡರ ವಿರುದ್ಧವೇ ಗೆಲವು ಸಾಧಿಸುವ ಮೂಲಕ ಒಟ್ಟು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

ಎರಡು ದಶಕಗಳಿಂದಲೂ ಜೆಡಿಎಸ್‌ ಜಯಭೇರಿ: 1999ರ ಬಳಿಕ ಕಾಂಗ್ರೆಸ್‌ ಕ್ಷೇತ್ರದಲ್ಲಿ ಖಾತೆ ತೆರೆಯಲು ಸಾಧ್ಯವಾಗಿಲ್ಲ. 2004 ರಿಂದಲೂ ಸತತ ನಾಲ್ಕು ಬಾರಿಯ ಚುನಾವಣೆಯಲ್ಲಿ ಯೂ ಜೆಡಿಎಸ್‌ ಅಭ್ಯರ್ಥಿಗಳೇ ಜಯ ಸಾಧಿಸುತ್ತಿದ್ದಾರೆ. ಅಂದಿನಿಂದ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರವನ್ನು ಮರಳಿ ಕಾಂಗ್ರೆಸ್‌ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದರೂ ಸಾಧ್ಯವಾಗಿಲ್ಲ. ಆರು ತಿಂಗಳು ಮುಂಚಿತವಾಗಿ ಟಿಕೆಟ್‌ ಘೋಷಣೆ ಮಾಡಿದರೆ ಒಂದು ಹಂತದಲ್ಲಿ ಕ್ಷೇತ್ರವನ್ನು ಪುನರ್‌ ತೆಕ್ಕೆಗೆ ತೆಗೆದುಕೊಳ್ಳಲ್ಲು ಅನುಕೂಲ ಆಗಬಹುದು.

ಶಾಮಸುಂದರ್‌ ಕೆ. ಅಣ್ಣೇನಹಳ್ಳಿ

ಟಾಪ್ ನ್ಯೂಸ್

Missile Strike: ಉಕ್ರೇನ್‌ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು

Missile Strike: ಉಕ್ರೇನ್‌ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು

Gaviyappa-MLA

Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್‌ ಶಾಸಕ

Chennai: ತೆರಿಗೆಯಲ್ಲಿ ಶೇ.50 ಪಾಲಿಗೆ ತಮಿಳ್ನಾಡು ಮತ್ತೆ ಆಗ್ರಹ

Chennai: ತೆರಿಗೆಯಲ್ಲಿ ಶೇ.50 ಪಾಲಿಗೆ ತಮಿಳ್ನಾಡು ಮತ್ತೆ ಆಗ್ರಹ

Punjab Farmers: ಡಿ.6ರಂದು ರೈತ ಸಂಘಟನೆಗಳಿಂದ ದೆಹಲಿ ಚಲೋ

Punjab Farmers: ಡಿ.6ರಂದು ರೈತ ಸಂಘಟನೆಗಳಿಂದ ದೆಹಲಿ ಚಲೋ

Education Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತEducation Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತ

Education Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತ

Snake

Vitla: ಹಾವು ಕಡಿದು ಪೆರುವಾಯಿ ಯುವಕ ಮೃತ್ಯು

ಆ್ಯಂಬುಲೆನ್ಸ್‌ ಓಡಾಟಕ್ಕೆ ಅಡ್ಡಿ: ಕಾರು ಮಾಲೀಕನ ಲೈಸೆನ್ಸ್‌ ರದ್ದು!

Kerala: ಆ್ಯಂಬುಲೆನ್ಸ್‌ ಓಡಾಟಕ್ಕೆ ಅಡ್ಡಿ: ಕಾರು ಮಾಲೀಕನ ಲೈಸೆನ್ಸ್‌ ರದ್ದು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-hale-beed

Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ

Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ

Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ

Hasana-College

Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್‌ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

Hasanmbe

Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

2

Mulki: ವ್ಯಕ್ತಿ ನಾಪತ್ತೆ; ಸೂಚನೆ; ದೂರು ದಾಖಲು

Missile Strike: ಉಕ್ರೇನ್‌ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು

Missile Strike: ಉಕ್ರೇನ್‌ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು

Belthangady: ಅಡಿಕೆ ವ್ಯಾಪಾರಿಯ ಬ್ಯಾಗಿನಲ್ಲಿದ್ದ 2 ಲಕ್ಷ ರೂ. ಕಳವು

Gaviyappa-MLA

Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್‌ ಶಾಸಕ

missing

Mangaluru: ಎಂಜಿನಿಯರಿಂಗ್‌ ವಿದ್ಯಾರ್ಥಿನಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.