ಹಾಸನ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 7,808ಕ್ಕೆ ಏರಿಕೆ
Team Udayavani, Aug 31, 2020, 2:12 PM IST
ಹಾಸನ: ಜಿಲ್ಲೆಯಲ್ಲಿ ಭಾನುವಾರ ಹೊಸದಾಗಿ 269 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಸೋಂಕಿಗೆ ನಾಲ್ವರು ಬಲಿಯಾಗಿದ್ದಾರೆ. ಕಳೆದ ಮೂರು ದಿನಗಳು ತ್ರಿಶತಕ ದಾಖಲಾಗಿದ್ದ ಸೋಂಕಿನ ಪ್ರಮಾಣಕ್ಕೆ ಹೋಲಿಸಿದರೆ ಭಾನುವಾರ ಸೋಂಕಿನ ಸಂಖ್ಯೆ ತುಸು ಕಡಿಮೆಯಾಗಿದೆ.
ಜಿಲ್ಲೆಯಲ್ಲಿ ಈಗ ಸೋಂಕಿನ ಒಟ್ಟು ಸಂಖ್ಯೆ 7808ಕ್ಕೆ ಏರಿಕೆಯಾಗಿ ದ್ದರೆ, ಸಾವಿನ ಸಂಖ್ಯೆ 187ಕ್ಕೆ ಏರಿಕೆ ಯಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿದ್ದವರ ಪೈಕಿ ಭಾನುವಾರ 190 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಯಾಗಿದ್ದು, ಈವರೆಗೆ ಒಟ್ಟು 5194 ಮಂದಿ ಗುಣಮುಖರಾಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದವರೂ ಸೇರಿ 2427 ಮಂದಿಗೆ ಚಿಕಿತ್ಸೆ ಮುಂದುವರಿದಿದೆ.
ಭಾನುವಾರ ಸೋಂಕು ದೃಢಪಟ್ಟ 269 ಜನರ ಪೈಕಿ 67 ಮಂದಿ ಹಾಸನ ತಾಲೂಕಿಗೆ ಸೇರಿದವರಾಗಿದ್ದರೆ, 60 ಮಂದಿ ಅರಸೀಕೆರೆ ತಾಲೂಕಿನವರು. ಚನ್ನರಾಯ ಪಟ್ಟಣ ತಾಲೂಕಿನ 42 ಮಂದಿ, ಅರಕಲಗೂಡು ತಾಲೂಕಿನ 40 ಮಂದಿ, ಬೇಲೂರು ತಾಲೂಕಿನ 25 ಮಂದಿ, ಹೊಳೆನರಸೀ ಪುರ ತಾಲೂಕಿನ 13 ಮಂದಿ, ಆಲೂರು ತಾಲೂಕಿನ 12 ಮಂದಿ, ಸಕಲೇಶಪುರ ತಾಲೂಕಿನ 9 ಮಂದಿ ಹಾಗೂ ಹೊರ ಜಿಲ್ಲೆಯ ಒಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಭಾನುವಾರ ಮೃತಪಟ್ಟಿರುವ ನಾಲ್ವರ ಪೈಕಿ ಹಾಸನ ತಾಲೂಕಿಗೆ ಮೂವರು ಸೇರಿದ್ದರೆ, ಬೇಲೂರು ತಾಲೂಕಿನ ಒಬ್ಬರು ಸಾವನ್ನಪ್ಪಿದ್ದಾರೆ.
6ಕ್ಕೆ ಕೋವಿಡ್ ವಾರಿಯರ್ಗೆ ಸನ್ಮಾನ : ಹಳೇಬೀಡು: ಕೋವಿಡ್ ಸೋಂಕು ಸಮುದಾಯಕ್ಕೂ ಹಬ್ಬುತ್ತಿರುವ ಪರಿಸ್ಥಿತಿಯಲ್ಲಿ ಜನರು ಭಯಪಡದೇ ಎಚ್ಚರಿಕೆಯಿಂದಿರುವುದು ಒಳ್ಳೆಯದು ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ದ್ಯಾವಪ್ಪನಹಳ್ಳಿ ಸೋಮಶೇಖರ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ ವಾರಿಯರ್ಗೆ ಹೋಬಳಿ ಲಯನ್ಸ್ ಕ್ಲಬ್ ವತಿಯಿಂದ ಭಾನುವಾರ ನಡೆಯಲಿರುವ ಅನು ಸ್ಥಾಪನಾ ಸಮಾ ರಂಭದಲ್ಲಿ ಸನ್ಮಾನಿಸಲಾಗುವುದು. ಕೋವಿಡ್ ಆರ್ಭಟದ ನಡುವೆ ತಮ್ಮ ಪ್ರಾಣ ವನ್ನು ಲೆಕ್ಕಸದೇ ಸಮಾಜಿಕ ಸೇವೆ ಸಲ್ಲಿಸುತ್ತಿರುವವರು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಮಹನೀಯರನ್ನು ಲಯನ್ಸ್ ಕ್ಲಬ್‌ನಿಂದ ಚನ್ನಮ್ಮ ನಂಜೇಗೌಡ ಸಭಾಂ ಗಣದಲ್ಲಿ ಸನ್ಮಾನಿಸಲು ತೀರ್ಮಾನಿಸಲಾಗಿದೆ.
ಜಿಲ್ಲಾ ಲಯನ್ಸ್ ಅಧ್ಯಕ್ಷ ಚಂದ್ರಶೇಖರ್, ಲಯನ್ಸ್ ಗೌರ್ವನರ್ ವಸಂತ್ ಕುಮಾರ್ ಶೆಟ್ಟಿ, ಅನುಸ್ಥಾಪ ನಾಧಿಕಾರಿ ಸನ್‌ಜಿತ್ ಶೆಟ್ಟಿ ಭಾಗವಹಿಸ ಲಿದ್ದಾರೆ ಎಂದು ತಿಳಿಸಿದರು. ಲಯನ್ಸ್ ಕ್ಲಬ್ ಸದಸ್ಯರಾದ ಶರತ್, ದರ್ಶನ್, ಜೈಕುಮಾರ್, ಪ್ರಕಾಶ್, ರವಿ, ಮೂರ್ತಿ, ಬಾಬಣ್ಣ, ಶಿವನಾಗ್, ಕುಮಾರ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
Shravanabelagola;ಅಹಿಂಸಾ ಮಾರ್ಗದಿಂದಷ್ಟೇ ಜಗದ ಶಾಂತಿ: ಪೇಜಾವರ ಶ್ರೀ
MUST WATCH
ಹೊಸ ಸೇರ್ಪಡೆ
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.