ಕೋವಿಡ್: ಹೆಚ್ಚು ಸಾವು ಸಂಭವಿಸಿದ್ರೂ ಜನರ ನಿರ್ಲಕ್ಷ್ಯ
Team Udayavani, Apr 24, 2021, 6:09 PM IST
ಚನ್ನರಾಯಪಟ್ಟಣ: ಕೋವಿಡ್ ಎರಡನೇ ಅಲೆ ತೀವ್ರವಾಗಿ ಒಂದೆರಡು ವಾರಕ್ಕೆ ತಾಲೂಕಿನಲ್ಲಿ 30ಮಂದಿ ಮೃತರಾಗಿದ್ದಾರೆ. ಆದರೂ ತಾಲೂಕಿನ ಜನತೆ ಮಾತ್ರ ಮುಂಜಾಗ್ರತೆ ವಹಿಸದೆ ಮೈ ಮರೆಯುತ್ತಿರುವುದು ನೋಡಿದರೆ ಸಾವಿನ ಸಂಖ್ಯೆಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ.
ಈಗಾಗಲೆ ತಾಲೂಕು ಆಡಳಿತ ಸೆಮಿ ಲಾಕ್ ಡೌನ್ ಘೋಷಣೆ ಮಾಡಿ ಪ್ರತಿ ಗ್ರಾಮ ಪಂಚಾಯಿತಿ ಮೂಲಕ ಎಲ್ಲಾ ಗ್ರಾಮಕ್ಕೆ ಸಂದೇಶ ಕಳುಹಿದ್ದರೂ, ಶುಕ್ರವಾರ ಮುಂಜಾನೆ ಬೆಲಸಿಂದ ಶ್ರೀವನದ ಮುಂಭಾಗ ರಾಸುಗಳ ಸಂತೆ ಸೇರುವ ಮೂಲಕ ಕೋವಿಡ್ ನಿಯಮವನ್ನು ಗಾಳಿಗೆ ತೋರಿದ್ದು ಸಾವಿರಾರು ಮಂದಿ ಒಟ್ಟಿಗೆ ಸೇರಿದ್ದರು ಅವರಲ್ಲಿ ಸಾಕಷ್ಟು ಮಂದಿ ಮಾಸ್ಕ್ ಹಾಕಿರಲಿಲ್ಲ ಇನ್ನು ಸಾಮಾಜಿಕ ಅಂತವೂ ಇರಲಿಲ್ಲ.
ಎಪಿಎಂಸಿ ಅಧಿಕಾರಿಗಳು ಮೌನ: ಪ್ರತಿ ಶುಕ್ರವಾರ ಎಪಿಎಂಸಿ ಆವರಣದಲ್ಲಿ ರಾಸುಗಳ ಸಂತೆ ಸೇರುತ್ತಿತ್ತು ಆದರೆ ಪಟ್ಟಣದಲ್ಲಿ ಲಾಕ್‌ಡೌನ್ ಇರುವುದು ತಿಳಿದ ರಾಸುಗಳ ವ್ಯಾಪಾರಸ್ತರು ಎಪಿಎಂಎಸಿ ಆವರಣಕ್ಕೆ ಬರದೆ ಪಟ್ಟಣದಿಂದ ಒಂದು ಕಿ.ಮೀ. ದೂರದಲ್ಲಿನ ಬೆಲಸಿಂದ ಶ್ರೀವನದ ಬಳಿ ಬೆಳಗ್ಗೆ ಐದು ಗಂಟೆಗೆ ಜಮಾಯಿಸಿ ಹತ್ತು ಗಂಟೆ ವರೆಗೆ ಸುಮಾರು ಐದು ತಾಸು ಸಾವಿರಾರು ಮಂದಿ ರಾಸುಗಳೊಂದಿಗೆ ಒಟ್ಟಿಗೆ ಜಮಾಯಿ ಸಿದ್ದರು. ಎಪಿಎಂಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಇದು ನಮ್ಮ ವ್ಯಾಪ್ತಿಯಲ್ಲಿ ನಡೆಯುತ್ತಿಲ್ಲ ಎಂದು ಮೌನಕ್ಕೆ ಶರಣಾಗಿದ್ದರು.
ಗ್ರಾಮಸ್ಥರಿಗೆ ಮಾಹಿತಿ ಕೊರತೆ: ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮೂಲಕ ಗ್ರಾಮ ಪಂಚಾಯಿತಿಗೆ ಸಂದೇಶರವಾನೆ ಆಗಿದೆ. ಆದರೆ ಅಲ್ಲಿನ ಅಧಿಕಾರಿಗಳ ಸಿಬ್ಬಂದಿ ಬೇಜವಾಬ್ದಾರಿಯಿಂದ ಪ್ರತಿ ಗ್ರಾಮಕ್ಕೆ ಸಂದೇಶ ರವಾನೆ ಆಗದ ಪರಿಣಾಮ ರಾಸುಗಳ ಸಂತೆಗೆ ಜನರು ತಮ್ಮ ರಾಸುಗಳೊಂದಿಗೆ ಆಗಮಿಸಿದ್ದರು, ರಾಸುಗಳ ವ್ಯಾಪಾರ ಮಾಡುವ ವರ್ತಕರ ಆದೇಶದಂತೆ ಪಟ್ಟಣದಹೊರಭಾಗದಲ್ಲಿ ಸೇರಿ ವ್ಯಾಪಾರ ವಹಿವಾಟ ನಡೆಸಿದರು.
ಟೀಗಾಗಿ ನೂಕಾಟ: ಸಂತೆಗೆ ಆಗಮಿಸಿದ್ದ ಹೈನುಗಾರರು, ರೈತರು ಹಾಗೂ ವರ್ತಕರು ಬೆಳಗ್ಗೆತೆರದಿದ್ದ ಟೀ ಅಂಗಡಿ ಮುಂದೆ ಜಮಾಯಿಸಿ ನಾ ಮುಂದು ತಾ ಮುಂದು ಎಂದು ತಳ್ಳಾಟದಲ್ಲಿ ಟೀ. ಕಾಫಿ ಪಡೆದರು, ಈ ವೇಳೆ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಮರೆತಿದ್ದರು, ಇನ್ನು ಟೀ ಅಂಗಡಿ ಮಾಲೀಕ ತನ್ನ ವ್ಯಾಪಾರದಲ್ಲಿತಲ್ಲೀನರಾಗಿದ್ದ ಹೊರತು ಅವರು ಮಾಸ್ಕ್ ಮರೆತಿದ್ದರು.
ತಡವಾಗಿ ಬಂದ ಪೊಲೀಸ್: ಮುಂಜಾನೆ ಐದ ರಿಂದ ನಡೆಯುತ್ತಿರು ಸಂತೆಗೆ ಬೆಳಗ್ಗೆ 10ಗೆ ತೆರಳಿಒಟ್ಟಿಗೆ ಸೇರಿದ್ದ ಜನರನ್ನು ಚದುರಿಸಿ ಮುಂದಿನವಾರ ಸಂತೆ ಸೇರದಂತೆ ಆದೇಶಿಸಿದರು.
ನಮಗೆ ಮಾಹಿತಿ ನೀಡದ ಪರಿಣಾಮ ನಾವು ರಾಸುಗಳೊಂದಿಗೆ ಪಟ್ಟಣಕ್ಕೆ ಆಗಮಿಸಿದ್ದೆವು, ಇಲ್ಲಿಗೆ ಬಂದ ಮೇಲೆ ತಿಳಿಯಿತು ಲಾಕ್‌ಡೌನ್ ಎಂದು ಹಾಗಾಗಿ ಪಟ್ಟಣದ ಹೊರಗೆ ಸೇರಿರಾಸುಗಳ ಮಾರಾಟ ಮಾರಾಟ ಮಾಡುತ್ತಿದ್ದೇವೆ. –ಬೋರೇಗೌಡ. ಬಾಗೂರು ವಾಸಿ
ಪಟ್ಟಣದ ಹೊರಗೆಮುಂಜಾನೆಯಿಂದ ರಾಸುಗಳ ಸಂತೆ ಸೇರಿರುವ ವಿಷಯ ತಿಳಿದು ಸ್ಥಳಕ್ಕೆ ತೆರಳಿ ಜನರನ್ನು ಕಳುಹಿಸಲಾಯಿತು. ಮುಂದಿನ ವಾರ ಸಂತೆ ಸೇರದಂತೆ ತಿಳಿಸಲಾಗಿದೆ. –ಎಸ್.ಪಿ.ವಿನೋದರಾಜ್. ನಗರಠಾಣೆ ಪಿಎಸ್ಐ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.