ಕೊವ್ಯಾಕ್ಸಿನ್ ಪಡೆಯಲು ಬಂದವರಿಗೆ ನಾಳೆ ಬನ್ನಿ ಎಂದರು
Team Udayavani, May 7, 2021, 5:19 PM IST
ಹಾಸನ: ಜಿಲ್ಲೆಗೆ ಬುಧವಾರಪೂರೈಕೆಯಾಗಿದ್ದ ಕೊವ್ಯಾ ಕ್ಸಿನ್ ಲಸಿಕೆಗುರುವಾರ ವಿತರಣೆ ಆಗದಿದ್ದರಿಂದ ಲಸಿಕೆ ಪಡೆಯಬೇಕಿದ್ದ ವರು ಪರದಾಡಿದರು.
ದೌಡಾಯಿಸಿದ್ದರು: ಬುಧವಾರ ಜಿಲ್ಲೆಗೆ3700 ಲಸಿಕೆ ಪೂರೈಕೆಯಾಗಿತ್ತು. ಆದರೆ,ಗುರುವಾರ ಬೆಳಗ್ಗೆ ವರೆಗೂ ಆಸ್ಪತ್ರೆಗಳಿಗೆ ಲಸಿಕೆ ಹಂಚಿಕೆಯಾಗಿರಲಿಲ್ಲ. ಹೀಗಾಗಿಗುರು ವಾರ ಕೊವ್ಯಾಕ್ಸಿನ್ ಲಸಿಕೆ ವಿತರಣೆ ಆಗಲಿಲ್ಲ. ಲಸಿಕೆ ಪೂರೈಕೆಯಾಗಿರುವ ವಿಷಯ ತಿಳಿದಈಗಾಗಲೇ ಒಂದನೇ ಡೋಸ್ ಪಡೆದು 2ನೇ ಡೋಸ್‌ಪಡೆಯುವ ಅವಧಿ ಮೀರುತ್ತಿರುವವರು ಲಸಿಕಾಕೇಂದ್ರಗಳಿಗೆ ದೌಡಾಯಿಸಿದ್ದರು.
ಆದರೆ, ಲಸಿಕೆವಿತರಣೆಯಾಗಿಲ್ಲ ಎಂಬ ಸಿಬ್ಬಂದಿ ವಿವರಣೆಯಿಂದಬೇಸತ್ತು ವಾಪಸ್ ತೆರಳಿದರು. ಹಾಸನದ ವೈದ್ಯಕೀಯ ಕಾಲೇಜು ಲಸಿಕಾ ಕೇಂದ್ರದಲ್ಲಿ ಲಸಿಕೆ ಪಡೆಯಲು ಆಗಮಿಸಿದವರ ದೂರವಾಣಿ ಸಂಖ್ಯೆ ಪಡೆದು ಲಸಿಕೆ ಬಂದ ನಂತರ ಕರೆ ಮಾಡಲಾಗುವುದು ಎಂದು ಸಮಾಧಾನ ಮಾಡಿ ಕಳುಹಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಾಳೆ ಬನ್ನಿ ಎಂದು ಲಸಿಕೆ ಪಡೆಯಬೇಕಿದ್ದವರನ್ನುಸಾಗ ಹಾಕಿದರು. ಗುರುವಾರ ಕೊವ್ಯಾಕ್ಸಿನ್ ಲಸಿಕೆ ಜಿಲ್ಲೆಗೆ ಪೂರೈಕೆಯಾಗಿಲ್ಲ. ಹೀಗಾಗಿ ಈಗದಾಸ್ತಾನಿರುವ 3700 ಲಸಿಕೆ ಪಡೆಯಲು ಶುಕ್ರವಾರ ಲಸಿಕಾ ಕೇಂದ್ರ ಗಳಲ್ಲಿ ನೂಕು ನುಗ್ಗಲು ಉಂಟಾಗುವ ಸಾಧ್ಯತೆ ಇದೆ. ಎಲ್ಲಾ ಲಸಿಕಾ ಕೇಂದ್ರಗಳಲ್ಲಿಯೂ ಕೋವಿಶೀಲ್ಡ್ ಲಸಿಕೆ ನೀಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.