ಸಮರೋಪಾದಿಯಲ್ಲಿ ಚಿಕಿತ್ಸೆ ಕಲ್ಪಿಸಿ
Team Udayavani, May 5, 2021, 5:46 PM IST
ಹಾಸನ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಚಿಕಿತ್ಸಾ ವ್ಯವಸ್ಥೆಯನ್ನು ಜಿಲ್ಲಾಡಳಿತ ಸಮರೋಪಾದಿಯಲ್ಲಿ ಕೈಗೊಳ್ಳಬೇಕು ಎಂದುಜೆಡಿಎಸ್ ಮುಖಂಡ, ಮಾಜಿ ಸಚಿವ ಎಚ್.ಡಿ.ರೇವಣ್ಣ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ23 ಕೊರೊನಾ ಸೋಂಕಿತರು ಮೃತಪಟ್ಟಂತಹಪರಿಸ್ಥಿತಿ ಯಾವ ಜಿಲ್ಲೆಯಲ್ಲೂ ಮರುಕಳಿಸಬಾರದು.
2 ರಿಂದ 3 ದಿನಕ್ಕೆ ಅಗತ್ಯವಿರುವಷ್ಟುಆಕ್ಸಿಜನ್ ದಾಸ್ತಾನಿರಿಸಿಕೊಳ್ಳಬೇಕು. ಹಾಸನಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಯವರು ಈಗಲೇ ಎಚ್ಚೆತ್ತುಕೊಂಡು ಕೆಲಸಮಾಡಬೇಕು ಎಂದು ಹೇಳಿದರು.
ಚಿಕಿತ್ಸೆ ನೀಡಿ: ಮುಖ್ಯಮಂತ್ರಿಯವರನ್ನುಸೋಮವಾರ ನಾನು ಭೇಟಿ ಮಾಡಿದಸಂದರ್ಭದಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗೆಸಕಲ ನೆರವು ನೀಡುವುದಾಗಿ ಹೇಳಿದ್ದಾರೆ. ತಕ್ಷಣವೇ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೂ ತಲಾ 25 ಲಕ್ಷ ರೂ. ಬಿಡುಗಡೆ ಮಾಡುವಂತೆಯೂ ಆದೇಶ ನೀಡಿದ್ದಾರೆ.
ಇಂತಹ ಸಂದರ್ಭದಲ್ಲಿಹಣಕಾಸಿನ ಬಗ್ಗೆ ಚಿಂತನೆ ಮಾಡದೆ ಅಗತ್ಯವಿರುವವೈದ್ಯಕೀಯ ಸಿಬ್ಬಂದಿಯನ್ನು ತಾತ್ಕಾಲಿಕವಾಗಿನೇಮಕ ಮಾಡಿಕೊಂಡು ಸೋಂಕಿತರಿಗೆ ಚಿಕಿತ್ಸೆನೀಡಬೇಕು ಎಂದು ಸಲಹೆ ನೀಡಿದರು.
ಮಾಹಿತಿ ನೀಡಿದ್ದಾರೆ: ರೆಮ್‌ಡೆಸಿವಿಯರ್‌ಚುಚ್ಚುಮದ್ದು ಕೊಡಿಸಲೂ ಪ್ರಯತ್ನ ನಡೆಸಿದ್ದು,ಸೋಮವಾರ 760 ಚುಚ್ಚುಮದ್ದು, ಮಂಗಳವಾರ 720 ರೆಮ್‌ಡೆಸಿವಿಯರ್ ಚುಚ್ಚುಮದ್ದುಬಂದಿದೆ. ಆದರೆ ಪ್ರತಿದಿನ 1000 ಚುಚ್ಚುಮದ್ದುಅವಶ್ಯಕತೆ ಇದೆ. ಮಂಗಳವಾರ 810 ಮಂದಿಗೆರೆಮ್‌ಡೆಸಿವಿಯರ್ ಚುಚ್ಚುಮದ್ದು ಅಗತ್ಯವಿತ್ತುಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆಎಂದು ತಿಳಿಸಿದರು.ಹಿಮ್ಸ್ ಆಸ್ಪತ್ರೆಯಲ್ಲಿ ಹಾಸಿಗೆಗಳುಭರ್ತಿಯಾಗಿವೆ.
ಕೊರೊನಾ ಸೋಂಕಿತರು ಬೀದಿಗೆಬೀಳುವ ಮೊದಲು ಚಿಕಿತ್ಸಾ ವ್ಯವಸ್ಥೆ ಕಲ್ಪಿಸಬೇಕು.ಬಿಸಿಎಂ ಇಲಾಖೆ ಹಾಸ್ಟೆಲ್‌ಗಳು, ಮೊರಾರ್ಜಿಶಾಲೆಯ ಹಾಸ್ಟೆಲ್‌ಗಳನ್ನು ಸೋಂಕಿತರ ಚಿಕಿತ್ಸೆಗೆಬಳಸಿಕೊಳ್ಳಬೇಕು ಎಂದು ಹೇಳಿದರು.ರಾಜಕೀಯ ಬಿಡಿ: ಆಯಾ ತಾಲೂಕುಗಳಲ್ಲಿಶಾಸಕರು ಮತ್ತು ತಹಶೀಲ್ದಾರರಿಗೆ ಜವಾಬ್ದಾರಿವಹಿಸಬೇಕು.
ಚಿಕಿತ್ಸೆಗೆ ಸಾರ್ವಜನಿಕರು ನೆರವುಕೊಡಲು ಮುಂದಾದರೆ ಪಡೆದುಕೊಂಡುಸೋಂಕಿತರಿಗೆ ಚಿಕಿತ್ಸೆ ನೀಡಬೇಕು ಎಂದ ರೇವಣ್ಣಅವರು, ಇಂತಹ ಸಂಕಷ್ಟದ ಸಮಯದಲ್ಲಿರಾಜಕೀಯ ಮಾಡುವುದಿಲ್ಲ. ಯಾರ ಬಗ್ಗೆಯೂಟೀಕೆ, ಟಿಪ್ಪಣಿ ಮಾಡುವುದಿಲ್ಲ. ಜನರ ಜೀವಉಳಿಸುವುದೊಂದೇ ಉದ್ಧೇಶ. ಅದಕ್ಕಾಗಿಸಾಧ್ಯವಾದ ಎಲ್ಲ ಹೋರಾಟ ಮಾಡುವೆಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
ಹಾಸನಾಂಬೆ ದರ್ಶನಕ್ಕೆ ವಿಧ್ಯುಕ್ತ ತೆರೆ; 9 ದಿನದಲ್ಲಿ 19 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ
Devi Temple: ಹಾಸನಾಂಬೆ ದೇವಿ ದರ್ಶನ ಅವ್ಯವಸ್ಥೆ, ಭಕ್ತರ ಆಕ್ರೋಶ: ವಿಶೇಷ ಪಾಸ್ ರದ್ದು
Hasanambe Temple: ಇಂಥ ಹಲವು ಡಿಸಿಗಳನ್ನು ನೋಡಿದ್ದೇನೆ: ಎಚ್.ಡಿ.ರೇವಣ್ಣ ಕಿಡಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.