ಕೋವಿಡ್ ಸೋಂಕು ಮುಕ್ತ ಗ್ರಾಪಂಗೆ ಸಂಕಲ್ಪ: ಪ್ರಿಯಾಂಕ
Team Udayavani, Jun 1, 2021, 2:16 PM IST
ಜಾವಗಲ್: ಜಾವಗಲ್ ಗ್ರಾಮ ಪಂಚಾಯಿತಿಯನ್ನು ಕೋವಿಡ್ ಮುಕ್ತ ಗ್ರಾಪಂ ಆಗಿ ಮಾಡಲು ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಯಿತು. ಗ್ರಾಪಂಸಾಮಾನ್ಯ ಸಭೆಯು ಅಧ್ಯಕ್ಷೆ ಪ್ರಿಯಾಂಕ ಚೇತನ್ ಅಧ್ಯಕ್ಷತೆಯಲ್ಲಿ ನಡೆಯಿತು.
ಕೋವಿಡ್ 2ನೇ ಅಲೆಯು ಗ್ರಾಮಾಂತರ ಪ್ರದೇಶಗಳಲ್ಲಿ ದಿನೇ ದಿನೆಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಪಂನ ಪ್ರತಿ ವಾರ್ಡ್ ಸದಸ್ಯರು ತಮ್ಮ ವಾರ್ಡ್‌ನ ಕಾರ್ಯ ಪಡೆಯ ಮುಖ್ಯಸ್ಥರಾಗಿ ಸೋಂಕು ಹರಡದಂತೆ ಅಗತ್ಯ ಕ್ರಮ ವಹಿಸುವುದು ಸಾರ್ವಜನಿಕರಲ್ಲಿ ಕೋವಿಡ್ -19ರ ಬಗ್ಗೆ ಅರಿವು ಮೂಡಿಸಿ ಸೋಂಕು ನಿಯಂತ್ರಿಸುವಲ್ಲಿ ಮುಂಜಾಗ್ರತೆಕ್ರಮಗಳನ್ನು ಕೈಗೊಳ್ಳುವಂತೆ ತೀರ್ಮಾನಿಸಲಾಯಿತು.
ಪ್ರತಿ ಮನೆಯ ಸುತ್ತಲು ಸ್ಯಾನಿಟೈಸ್ ಮಾಡಬೇಕು. ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಮತ್ತು ಅಂಗನ ವಾಡಿ ಕಾರ್ಯಕರ್ತೆಯರು, ಕಂದಾಯ ಇಲಾಖೆ ನೆರವಿನೊಂದಿಗೆ ಮನೆ ಮನೆಗೆ ಭೇಟಿ ನೀಡಿ ಸೋಂಕಿತರ ಪತ್ತೆ ಮಾಡುವ ಕ್ರಮ ಕೈಗೊಳ್ಳುವುದು, ಈ ಸ್ವತ್ತು, ಖಾತೆಬದಲಾವಣೆ ಮತ್ತಿತರ ಕೆಲಸ ಕಾರ್ಯಗಳಬಗ್ಗೆ ವಿನಃ ಕಾರಣ ಕಚೇರಿಗೆ ಬರುವುದನ್ನು ತಗ್ಗಿಸಬೇಕು. ಎಲ್ಲರು ಸಮನ್ವಯತೆಹಾಗೂಸೌಹಾರ್ದತೆಮನೋಭಾವದಿಂದ ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿಕೆಲಸ ಮಾಡುವಂತೆ ನಿರ್ಣಯಕ್ಕೆ ಬರಲಾಯಿತು ಎಂದು ಪಿಡಿಒ ರವಿ ಸುದ್ದಿಗಾರರಿಗೆ ತಿಳಿಸಿದರು.
ಗ್ರಾಪಂನಸುಗಮಕಾರ್ಯನಿರ್ವಹಣೆ ಸಲುವಾಗಿ ಸ್ಥಾಯಿ ಸಮಿತಿ ಸೇರಿದಂತೆ ಇದರ ಉಪ ಸಮಿತಿಗಳನ್ನು ರಚಿಸಲಾಯಿತು. ಗ್ರಾಪಂ ಸಿಬ್ಬಂದಿಯ 2 ತಿಂಗಳ ವೇತನ ಪಾವತಿ ಮಾಡಿದ್ದು, ಉಳಿದವೇತನ ತ್ವರಿತವಾಗಿ ಪಾವತಿ ಮಾಡುವುದಾಗಿ ತಿಳಿಸಿದರು. ಉಪಾಧ್ಯಕ್ಷೆ ಶೀಲಾ, ಸದಸ್ಯರು,ಕಾರ್ಯದರ್ಶಿ, ಲೆಕ್ಕಸಹಾಯಕ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
MUST WATCH
ಹೊಸ ಸೇರ್ಪಡೆ
B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ
Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ
November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ
Marriage registration ಪ್ರಮಾಣಪತ್ರ ನೀಡುವ ಅಧಿಕಾರ ವಕ್ಫ್ ಬೋರ್ಡ್‌ಗೆ ಎಲ್ಲಿದೆ?
Libya; 8 ವರ್ಷಗಳ ಬಳಿಕ ಲಿಬಿಯಾಕ್ಕೆ ತೆರಳಲು ಭಾರತೀಯರಿಗೆ ಅನುಮತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.