ಕೊರೊನಾ ಸೋಂಕಿತರಿಗೆ ಪಕ್ಷಾತೀತ ನೆರವು


Team Udayavani, May 28, 2021, 6:51 PM IST

covid news

ಅರಸೀಕೆರೆ: ಕೊರೊನಾ ಸಾಂಕ್ರಾಮಿಕರೋಗವು ಜನರ ಜೀವ ಹಾಗೂ ಜೀವನವನ್ನುಸಂಕಷ್ಟಕ್ಕೆ ಸಿಲುಕಿಸಿದೆ. ಸೋಂಕಿತರು ಚಿಕಿತ್ಸೆಪಡೆಯಲೂ ಪರದಾಡುತ್ತಿದ್ದಾರೆ. ನೂರಾರುಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇಂತಹಸಂಕಷ್ಟದ ಸಮಯದಲ್ಲಿ ಸಂಘ -ಸಂಸ್ಥೆಗಳು,ರಾಜಕಾರಣಿಗಳು, ಜನಪ್ರತಿನಿಧಿಗಳು ಜನರನೆರವಿಗೆ ನಿಂತಿದ್ದಾರೆ.

ಕೆಲ ಜನಪ್ರತಿನಿಧಿಗಳುಸೋಂಕಿತರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿನೆರವು ನೀಡುತ್ತಿದ್ದಾರೆ. ನೇರ, ನಿಷ್ಠುರನುಡಿಗಳಿಂದ ರಾಜ್ಯ ರಾಜಕಾರಣದಲ್ಲಿ ವಿಶೇಷವಾಗಿ ಗುರ್ತಿಸಿಕೊಂಡಿರುವ ಅರಸೀಕೆರೆ ಕ್ಷೇತ್ರದಜೆಡಿಎಸ್‌ ಶಾಸಕ ಕೆ.ಎಂ.ಶಿವಲಿಂಗೇಗೌಡರುಕೊರೊನಾ ಪ್ರಕರಣವರದಿಯಾಗಲಾರಂಭಿಸಿದಒಂದು ವರ್ಷದಿಂದಲೂ ತಮ್ಮ ಕ್ಷೇತ್ರದ ಜನರಸಂಕಷ್ಟಗಳಿಗೆ ಸ್ಪಂದಿಸುತ್ತಾ ಬಂದಿದ್ದಾರೆ.

ಕೊರೊನಾ ಮೊದಲ ಅಲೆಯಲ್ಲಿ ಸಾಕಷ್ಟುನೆರವು ನೀಡಿದ್ದ ಅವರು 2ನೇ ಅಲೆಯಲ್ಲಿಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಸರ್ಕಾರದನೆರವು ಪಡೆಯಲು ನಿರಂತರ ಹೋರಾಟಮಾಡುತ್ತಾ ಬಂದಿರುವ ಅವರು,ವೈಯಕ್ತಿಕವಾಗಿ ಸೋಂಕಿತರ ಚಿಕಿತ್ಸೆಗಾಗಿ 5ಆ್ಯಂಬುಲೆನ್ಸ್‌ ಸೇರಿದಂತೆ ಸಾಕಷ್ಟು ಕೊಡುಗೆನೀಡಿದ್ದಾರೆ. ಸೋಂಕಿತರ ಸಂಕಷ್ಟ, ಚಿಕಿತ್ಸೆಯವ್ಯವಸ್ಥೆ, ಲಾಕ್‌ಡೌನ್‌ನಿಂದ ಜನರ ಪರದಾಟದಬಗ್ಗೆ ಉದಯವಾಣಿಗೆ ನೀಡಿರುವಸಂದರ್ಶನದಲ್ಲಿ ವಿವರಿಸಿದ್ದಾರೆ

 ಕೊರೊನಾ ವ್ಯಾಪಕವಾಗಿ ಹರಡಲುಕಾರಣವೇನು ?

ಕೊರೊನಾ ಸೋಂಕಿನ ಪ್ರಥಮ ಅಲೆಯಲ್ಲಿ ಅರಸೀಕೆರೆತಾಲೂಕು ಹಸಿರು ವಲಯವಾಗಿ ಬಹುತೇಕ ತಿಂಗಳುಗುರುತಿಸಿಕೊಂಡಿದ್ದು, ಆದರೆ ಬೆಂಗಳೂರಿನಿಂದಬಂದವರಿಂದ ಸೋಂಕು ಹರಡಲಾರಂಭಿಸಿತು. ಆದರೆತಾಲೂಕು ಆಡಳಿತದ ಸಕಾಲಿಕ ಕ್ರಮಗಳಿಂದ ಸೋಂಕನ್ನುನಿಯಂತ್ರಿಸಿದ್ದೆವು. ಆದರೆ ಕಳೆದ ಎರಡು ತಿಂಗಳ ಹಿಂದೆಆರಂಭವಾದ 2ನೇ ಅಲೆಯಲ್ಲಿಸಾವಿರಾರು ಮಂದಿಗೆ ಸೋಂಕುಹರಡಿದೆ. ನೂರಾರು ಮಂದಿ ಪ್ರಾಣಕಳೆದು ಕೊಳ್ಳುತ್ತಿರುವುದು ನೋವಿನಸಂಗತಿ. ಸೋಂಕು ವ್ಯಾಪಕವಾಗಿಹರಡಲು ಕಾರಣ- ಸರ್ಕಾರಪ್ರಥಮ ಅಲೆಯಲ್ಲಿ ತೆಗೆದುಕೊಂಡುಕಟ್ಟು ನಿಟ್ಟಿನ ನಿಯಮಗಳು ಸಡಿಲಗೊಳಿಸಿದ್ದೇ ಕಾರಣ. ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿಹೋಂ ಐಸೋಲೇಷನ್‌ಗೆ ಅವಕಾಶ ಕೊಟ್ಟಿದ್ದು ತಪ್ಪು. ಆಬಗ್ಗೆ ಪ್ರಪ್ರಥಮವಾಗಿ ದನಿ ಎತ್ತಿದ್ದು ನಾನೇ.

ಸೋಂಕಿತರಿಗೆ ಚಿಕಿತ್ಸೆ, ನಿಮ್ಮ ಸಹಕಾರಹೇಗಿದೆ?

ಅರಸೀಕೆರೆ ಕ್ಷೇತ್ರದಲ್ಲಿ ಹೋಬಳಿವಾರು 5 ಕೊರೊನಾಕೇರ್‌ ಕೇಂದ್ರ ಆರಂಭಿಸಿದ್ದೇವೆ. ಈಗಾಗಲೇ 800 ಮಂದಿಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೊತೆಗೆಅರಸೀಕೆರೆ ಜೆ.ಸಿ.ಆಸ್ಪತ್ರೆಯನ್ನು ನವೀಕರಿಸುವ ಮೂಲಕ150 ಹಾಸಿಗೆಯ ಹೈಟೆಕ್‌ ಆಸ್ಪತ್ರೆಯನ್ನಾಗಿಮೇಲ್ದರ್ಜೆಗೇರಿಸಲಾಗಿದೆ. 60 ಮಂದಿ ಸೋಂಕಿತರಿಗೆಹಾಸಿಗೆಗಳನ್ನು ಕಾಯ್ದಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಕೊರೊನಾ ರೋಗ ಲಕ್ಷಣಗಳಿರುವವರ ಪರೀಕ್ಷೆಗೆ ಪ್ರತ್ಯೇಕಕೇಂದ್ರ, ಲಸಿಕೆ ಪಡೆಯುವವರಿಗೆ ಪ್ರತ್ಯೇಕ ಕೇಂದ್ರದಮಾದರಿ ವ್ಯವಸ್ಥೆ ಮಾಡಲಾಗಿದೆ. ತುರ್ತು ಚಿಕಿತ್ಸೆಗಾಗಿ 6ವೆಂಟಿಲೇಟರ್‌ಗಳ ಹಾಸಿಗೆಯ ವ್ಯವಸ್ಥೆ ಮಾಡಲಾಗಿದೆ.

ಚಿಕಿತ್ಸಾ ವ್ಯವಸ್ಥೆಗೆ ಜಿಲ್ಲಾಡಳಿತ, ಸರ್ಕಾರದಸಹಕಾರ ಹೇಗಿದೆ ?

ಕೊರೊನಾದಿಂದ ಜನರು ಸಂಕಷ್ಟ ಅನುಭವಿಸುತ್ತಿರುವಈ ಸಂದರ್ಭದಲ್ಲಿ ರಾಜಕಾರಣ ಮಾಡಲು ನಾನುಬಯಸುವುದಿಲ್ಲ. ಪಕ್ಷಾತೀತವಾಗಿ ಜನರಿಗೆ ನೆರವುಸಿಗಬೇಕು. ಕ್ಷೇತ್ರದ ಜನತೆ ಜಾತಿ, ಮತ , ಧರ್ಮಗಳಭೇದ ಇಲ್ಲದೆ ಸತತ ಮೂರು ಬಾರಿಗೆ ಶಾಸಕನಾಗಿ ಆಯ್ಕೆಮಾಡಿದ್ದಾರೆ. ಅವರ ಋಣ ತೀರಿಸುವ ನಿಟ್ಟಿನಲ್ಲಿ ಹಗಲುರಾತ್ರಿ ಎನ್ನದೆ ಶ್ರಮಿಸುತ್ತಿದ್ದೇನೆ. ತಾಲೂಕು ಮತ್ತುಜಿಲ್ಲಾಡಳಿತದೊಂದಿಗೆ ಸಹಕರಿಸಿ ಸರ್ಕಾರದಿಂದಸಾಧ್ಯವಾದಷ್ಟೂ ನೆರವು ಪಡೆಯಲು ಪ್ರಯತ್ನನಡೆಸುತ್ತಿದ್ದೇನೆ. ಅದರ ಪರಿಣಾಮ ಅರಸೀಕೆರೆ ತಾಲೂಕುಆಸ್ಪತ್ರೆ ಮೇಲ್ದರ್ಜೆಗೇರಿದೆ. ನಿಮಿಷಕ್ಕೆ 393 ಲೀ. ಆಕ್ಸಿಜನ್‌ಉತ್ಪಾದನಾ ಪ್ಲಾಂಟ್‌ ಆಸ್ಪತ್ರೆ ಆವರಣದಲ್ಲಿನಿರ್ಮಾಣವಾಗುತ್ತಿದೆ. ನನ್ನ ಬೇಡಿಕೆಗಳಿಗೆ ಸ್ಪಂದಿಸುತ್ತಿರುವಮುಖ್ಯಮಂತ್ರಿವವರು, ಸಚಿವರು ಹಾಗೂ ಸಂಬಂಧಿಸಿದಅಧಿಕಾರ ವರ್ಗಕ್ಕೆ ಕೃತಜ್ಞತೆ ಸಲ್ಲಿಸುವೆ.

 ಸೋಂಕಿತರ ಸಂಕಷ್ಟಕ್ಕೆ ನಿಮ್ಮ ವೈಯಕ್ತಿಕಕೊಡುಗೆ ಏನು ?

ಜನರು ಸಂಕಷ್ಟಕ್ಕೆ ಸಿಲುಕಿದಾಗ ಜವಾಬ್ದಾರಿಯುತಶಾಸಕನಾಗಿ ಸ್ಪಂದಿಸುವ ಹೊಣೆಗಾರಿಕೆ ನನ್ನದು. ಅದನ್ನುಹೇಳಿಕೊಂಡು ಪ್ರಚಾರ ಪಡೆಯುವ ಉದ್ದೇಶ ನನ್ನದಲ್ಲ.ಆದರೆ ಚಿಕಿತ್ಸಾ ವ್ಯವಸ್ಥೆಯನ್ನು ಬಳಸಿಕೊಳ್ಳುಬೇಕು ಎಂಬದೃಷ್ಟಿಯಿಂದ ಕೆಲವು ವಿಚಾರಗಳನ್ನು ಪ್ರಸ್ತಾಪಿಸಬಯಸುತ್ತೇನೆ.ಕೊರೊ‌ನಾ ಸೋಂಕಿತರ ಅಗತ್ಯ ಸೇವೆಗಾಗಿ 5 ಉಚಿತಆ್ಯಂಬುಲೆನ್ಸ್‌ ಸೇವೆ ಒದಗಿಸಿದ್ದೇನೆ. ಖಾಸಗಿ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆದು ಹಣ ಕಟ್ಟಲು ಸಾದ್ಯವಾಗದೆ ಮೃತರ ಶವಪಡೆಯಲೂ ಸಾಧ್ಯವಾಗದೇ ಪರದಾಡುತ್ತಿದ್ದವರನೆರವಿಗೆ ಧಾವಿಸಿ ಖಾಸಗಿ ಆಸ್ಪತ್ರೆಯ ಶುಲ್ಕವನ್ನುವೈಯಕ್ತಿಕವಾಗಿ ಪಾವತಿಸಿ ಶವಗಳನ್ನು ಕೊಡಿಸುವ ಕೆಲಸಮಾಡಿದ್ದೇನೆ. ಆದರೆ ಎಡಗೈಲಿ ಕೊಟ್ಟಿದ್ದು ಬಲಗೈಗೆಗೊತ್ತಾಗಬಾರದು. ಹಾಗಾಗಿ ಹೆಚ್ಚು ಹೇಳಲುಇಚ್ಛಿಸುವುದಲ್ಲ. ಪ್ರಥಮ ಹಂತದ ಅಲೆಯಲ್ಲಿ ಬಡವರುಹಾಗೂ ಕೂಲಿ ಕಾರ್ಮಿಕರಿಗೆ 65 ಸಾವಿರ ಆಹಾರದ ಕಿಟ್‌ವಿತರಣೆ ಮಾಡಿದ್ದೆವು. ತೀವ್ರ ತೊಂದರೆಯಲ್ಲಿ ಸಿಲುಕಿರುವಕುಟುಂಬಗಳಿಗೆ ಆರ್ಥಿಕ ನೇರವು ನೀಡಲು ಬದ್ಧನಿದ್ದೇನೆ,ಇದು ಬೇರೆಯವರಿಗೂ ಪ್ರೇರಣೆಯಾಗಿ ಜನರ ಸಂಕಷ್ಟಕ್ಕೆಸ್ಪಂದಿಸಲು ಎಂದು ಸೂಕ್ಷ್ಮವಾಗಿ ಹೇಳುತ್ತಿದ್ದೇನೆ ಅಷ್ಟೇ.

 ಸೋಂಕು ತಡೆಗೆ ಸರ್ಕಾರಕ್ಕೆ ಏನು ಸಲಹೆಕೊಡ ಬಯಸುತ್ತೀರಿ ?

ನನಗೆ ಕೊರೊನಾ ಸೋಂಕಿತರ ನೋವು ಏನೆಂದುಗೊತ್ತಿದೆ. ನನಗೆ ಹಾಗೂ ತಮ್ಮ ಪತ್ನಿಗೂ ಸೋಂಕುತಗುಲಿತ್ತು. ಚಿಕಿತ್ಸೆ ಪಡೆದು ಗುಣಮುಖರಾಗಿದ್ದೇವೆ.ಇಂತಹ ಸಮಯದಲ್ಲಿ ಕೈ ಕಟ್ಟಿ ಮನೆಯಲ್ಲಿ ಕುಳಿತರೇಪರಮಾತ್ಮ ಮೆಚ್ಚುವುದಿಲ್ಲ ಎಂಬುವುದನ್ನು ಮನಗಂಡುಕಳೆದ 2 ತಿಂಗಳಿಂದ ಸಾರ್ವಜನಿಕರ ಸಮಸ್ಯೆಗಳಿಗೆ ಸೂಕ್ತಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತನಾಗಿದ್ದೇನೆ.ಈಗ ಕೊರೊನಾ ತಡೆಗೆ ಲಸಿಕೆಯೊಂದೇ ಪರಿಹಾರ. ಈಗನೀಡುತ್ತಿರುವ ಲಸಿಕೆಯ ವೇಗ ಸಾಲದು. ವೇಗವನ್ನುಹೆಚ್ಚಿಸಿ 3 ನೇ ಅಲೆ ಆರಂಭವಾಗುವುದರೊಳಗೆ ಎಲ್ಲರಿಗೂಲಸಿಕೆ ನೀಡಬೇಕು.. ಕೊರೊನಾ ಮುಕ್ತ ಸಮಾಜನಿರ್ಮಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಅಗತ್ಯವಾದಎಲ್ಲ ಕ್ರಮಗಳನ್ನೂ ಕೈಗೊಳ್ಳಲಿ ಎಂದು ಹೇಳಬಯಸುತ್ತೇನೆ. ಜನರೂ ಸಹಕಾರ ನೀಡಬೇಕು ಎಂದುಅಶಿಸುತ್ತೇನೆ.

ರಾಮಚಂದ್ರ

ಟಾಪ್ ನ್ಯೂಸ್

Bangladesh ಮತದಾನದ ಅರ್ಹ ವಯಸ್ಸು 17ಕ್ಕಿಳಿಸಲು ಚಿಂತನೆ

Bangladesh ಮತದಾನದ ಅರ್ಹ ವಯಸ್ಸು 17ಕ್ಕಿಳಿಸಲು ಚಿಂತನೆ

ಯಮುನಾ ನದಿಯಲ್ಲಿ ಡಾ| ಮನಮೋಹನ್‌ ಸಿಂಗ್‌ ಚಿತಾಭಸ್ಮ ವಿಸರ್ಜನೆ

Yamuna ನದಿಯಲ್ಲಿ ಡಾ| ಮನಮೋಹನ್‌ ಸಿಂಗ್‌ ಚಿತಾಭಸ್ಮ ವಿಸರ್ಜನೆ

1-astr

Shri Krishna Matha; ವಿಶ್ವಮಟ್ಟದಲ್ಲಿ ಭಗವದ್ಗೀತೆ ಜಾಗೃತಿ: ಪುತ್ತಿಗೆ ಶ್ರೀ

ICC Awards 2024: ಐಸಿಸಿ ಪ್ರಶಸ್ತಿಗೆ ಅರ್ಷದೀಪ್‌ ಸಿಂಗ್‌, ಸ್ಮೃತಿ ಮಂಧನಾ ನಾಮ ನಿರ್ದೇಶ

ICC Awards 2024: ಐಸಿಸಿ ಪ್ರಶಸ್ತಿಗೆ ಅರ್ಷದೀಪ್‌ ಸಿಂಗ್‌, ಸ್ಮೃತಿ ಮಂಧನಾ ನಾಮ ನಿರ್ದೇಶ

Bengaluru: ಕೀಪರ್‌ ಕಿರ್ಮಾನಿ ಆತ್ಮಚರಿತ್ರೆ “ಸ್ಟಂಪ್ಡ್ ’ ಬಿಡುಗಡೆ

Bengaluru: ಕೀಪರ್‌ ಕಿರ್ಮಾನಿ ಆತ್ಮಚರಿತ್ರೆ “ಸ್ಟಂಪ್ಡ್ ’ ಬಿಡುಗಡೆ

World Rapid Championships: ಕೊನೆರು ಹಂಪಿ ಚಾಂಪಿಯನ್‌; ಇರೆನ್‌ ವಿರುದ್ಧ ಜಯ

World Rapid Championships: ಕೊನೆರು ಹಂಪಿ ಚಾಂಪಿಯನ್‌; ಇರೆನ್‌ ವಿರುದ್ಧ ಜಯ

ವಿಶ್ವ ಟೆಸ್ಟ್‌  ಚಾಂಪಿಯನ್‌ಶಿಪ್‌: ದಕ್ಷಿಣ ಆಫ್ರಿಕಾ ಫೈನಲ್‌ ಪ್ರವೇಶ

World Test Championship: ದಕ್ಷಿಣ ಆಫ್ರಿಕಾ ಫೈನಲ್‌ ಪ್ರವೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

HD-Kumaraswmy

Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್‌.ಡಿ.ಕುಮಾರಸ್ವಾಮಿ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Kottigehara

Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು

15

Arseekere: ಈಡೇರದ ಹೈಟೆಕ್‌ ಬಸ್‌ ನಿಲ್ದಾಣದ ಕನಸು  

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Bangladesh ಮತದಾನದ ಅರ್ಹ ವಯಸ್ಸು 17ಕ್ಕಿಳಿಸಲು ಚಿಂತನೆ

Bangladesh ಮತದಾನದ ಅರ್ಹ ವಯಸ್ಸು 17ಕ್ಕಿಳಿಸಲು ಚಿಂತನೆ

ಯಮುನಾ ನದಿಯಲ್ಲಿ ಡಾ| ಮನಮೋಹನ್‌ ಸಿಂಗ್‌ ಚಿತಾಭಸ್ಮ ವಿಸರ್ಜನೆ

Yamuna ನದಿಯಲ್ಲಿ ಡಾ| ಮನಮೋಹನ್‌ ಸಿಂಗ್‌ ಚಿತಾಭಸ್ಮ ವಿಸರ್ಜನೆ

1-astr

Shri Krishna Matha; ವಿಶ್ವಮಟ್ಟದಲ್ಲಿ ಭಗವದ್ಗೀತೆ ಜಾಗೃತಿ: ಪುತ್ತಿಗೆ ಶ್ರೀ

ICC Awards 2024: ಐಸಿಸಿ ಪ್ರಶಸ್ತಿಗೆ ಅರ್ಷದೀಪ್‌ ಸಿಂಗ್‌, ಸ್ಮೃತಿ ಮಂಧನಾ ನಾಮ ನಿರ್ದೇಶ

ICC Awards 2024: ಐಸಿಸಿ ಪ್ರಶಸ್ತಿಗೆ ಅರ್ಷದೀಪ್‌ ಸಿಂಗ್‌, ಸ್ಮೃತಿ ಮಂಧನಾ ನಾಮ ನಿರ್ದೇಶ

accident

Padubidri: ಮೊಬೈಲ್‌ ಕೊಡಿಸದ ತಾಯಿ; ಸಾಯಲು ಹೆದ್ದಾರಿಗೋಡಿದ ಮಗ; ಲಾರಿ ಡಿಕ್ಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.