ಕೋವಿಡ್ ಹುತಾತ್ಮರಿಗೆ ಬಾರದ ಪರಿಹಾರ
ಜಿಲ್ಲೆಯಲ್ಲಿ ಐವರು ವೈದ್ಯರು, ಶಿಕ್ಷಕರ ಸಾವು
Team Udayavani, Oct 19, 2020, 4:38 PM IST
ಸಾಂದರ್ಭಿಕ ಚಿತ್ರ
ಹಾಸನ: ವೈದ್ಯರು, ಶುಶ್ರೂಷಕರು, ಪೊಲೀಸರು, ಚಾಲಕರು, ಶಿಕ್ಷಕರನ್ನು ಕೊರೊನಾ ವಾರಿಯರ್ ಎಂದು ಸರ್ಕಾರ ಪರಿಗಣಿಸಿದೆ. ಸೇವೆಯಲ್ಲಿದ್ದಾಗ ಕೋವಿಡ್ ದೃಢಪಟ್ಟು ಮೃತಪಟ್ಟರೆ ಅವರ ಕುಟುಂಬಕ್ಕೆ 30 ರಿಂದ 50 ಲಕ್ಷ ರೂ. ಪರಿಹಾರ ನೀಡುವುದಾಗಿ ಸರ್ಕಾರ ಘೋಷಿಸಿದೆ. ಆದರೆ, ಹಾಸನ ಜಿಲ್ಲೆಯಲ್ಲಿ ಮೃತ ಕೋವಿಡ್ ವಾರಿಯರ್ಸ್ ಗೆ ಪರಿಹಾರ ಘೋಷಣೆಯಾಗಿಲ್ಲ.
ಕೋವಿಡ್ ವಾರಿಯರ್ ಸೇವೆ ವೇಳೆಯಲ್ಲಿ ಮೃತಪಟ್ಟರೆ ಅವರನ್ನು ಹುತಾತ್ಮರೆಂದು ಘೋಷಿಸಿ ಅವರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದುಒತ್ತಾಯವಿದೆ. ಆದರೆ, ಜಿಲ್ಲೆಯಲ್ಲಿ ಇದುವರೆಗೂ ಅಂತಹ ಘೋಷಣೆ ಆಥವಾ ಕೋವಿಡ್ ದಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಘೋಷಣೆ ಆಗಿಲ್ಲ. ವೈದ್ಯಕೀಯ ಇಲಾಖೆಯಲ್ಲಿ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ) 275 ರಿಂದ 300 ಮಂದಿಗೆ ಕೋವಿಡ್ ಸೋಂಕು ಹರಡಿದ್ದು, ಅವರಲ್ಲಿ 5 ಮಂದಿ ಸಿಬ್ಬಂದಿ ( ಶುಶ್ರೂಷಕರು, ಆ್ಯಂಬುಲೆನ್ಸ್ ಚಾಲಕರು ಮತ್ತಿತರೆ ಸಿಬ್ಬಂದಿ) ಮೃತಪಟ್ಟಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯ ಆಲೂರಿನ ಡಾ.ಶಿವಕಿರಣ್ ಅವರು ಸೇವೆಯಲ್ಲಿದ್ದಾಗ ಮೃತಪಟ್ಟರು. ಆದರೆ, ಅವರುಕೊರೊನಾದಿಂದ ಮೃತಪಟ್ಟ ಬಗ್ಗೆ ಇಲಾಖೆದೃಢಪಡಿಸಿಲ್ಲ. ಖಾಸಗಿ ವೈದ್ಯರಾದ ಡಾ.ರತ್ನಾಕರ ಶೆಟ್ಟಿ ಮತ್ತು ಡಾ.ವಿ.ರಾಜೀವ್ ಅವರೂ ಕೋವಿಡ್ ಗೆ ಬಲಿಯಾದರು. ಆದರೆ, ಅವರನ್ನು ಇಲಾಖೆ ಇದುವರೆಗೂ ಕೊರೊನಾ ವಾರಿಯರ್ ಎಂದು ಪರಿಗಣಿಸಿಲ್ಲ. ಪೊಲೀಸ್ ಮತ್ತು ಶಿಕ್ಷಣ ಇಲಾಖೆಯಲ್ಲಿ ಮಾತ್ರ ಕೋವಿಡ್ ಸೋಂಕು ದೃಢಪಟ್ಟಹಾಗೂ ಮೃತಪಟ್ಟವರ ದಾಖಲೆ ಸಂಗ್ರಹ ನಡೆಯುತ್ತಿದೆ. ಜಿಲ್ಲೆಯ 296 ಪೊಲೀಸರಿಗೆ ಕೋವಿಡ್ ಸೋಂಕು ತಗುಲಿದ್ದು, 252 ಮಂದಿ ಗುಣಮುಖರಾಗಿದ್ದಾರೆ. ಅದೃಷ್ಟವಶಾತ್ ಪೊಲೀಸ್ ಸಿಬ್ಬಂದಿಯ ಸಾವು ಸಂಭವಿಸಿಲ್ಲ. ಶಿಕ್ಷಣ ಇಲಾಖೆಯಲ್ಲಿ161 ಶಿಕ್ಷಕರಿಗೆ ಕೋವಿಡ್ ಸೋಂಕು ಹರಡಿದ್ದು, ಆ ಪೈಕಿ ಐವರು ಶಿಕ್ಷಕರು ಮೃತಪಟ್ಟಿದ್ದಾರೆ. ಹಾಸನ ತಾಲೂಕಿನಲ್ಲಿ ಇಬ್ಬರು, ಅರಸೀಕೆರೆ, ಬೇಲೂರು ಮತ್ತು ಹೊಳೆ ನರಸೀಪುರ ತಾಲೂಕಿನ ಒಬ್ಬ ಶಿಕ್ಷಕರು ಕೋವಿಡ್ ಗೆ ಬಲಿಯಾಗಿದ್ದಾರೆ. ಆದರೆ ಇವರು ಕರ್ತವ್ಯದಲ್ಲಿದ್ದಾಗ ಅಂದರೆ ವಿದ್ಯಾಗಮ ಅಥವಾ ಕೋವಿಡ್ ಸಂಬಂಧ ಮನೆ, ಮನೆ ಸಮೀಕ್ಷೆ ವೇಳೆ ಕೊರೊನಾ ತಗುಲಿದೆ ಎಂದು ಇಲಾಖೆ ದೃಢಪಡಿಸಿಲ್ಲ.
ಸರ್ಕಾರದ ಮಟ್ಟದಲ್ಲಿ ನಿರ್ಧಾರ: ಕೋವಿಡ್ ಸೇವೆಯಲ್ಲಿರುವ ವೈದ್ಯ ಸಿಬ್ಬಂದಿಯನ್ನು ಕೋವಿಡ್ ವಾರಿಯರ್ ಎಂದು ಪರಿಗಣಿಸಲಾಗುತ್ತಿದೆ. ಕೋವಿಡ್ ವಾರಿಯರ್ ಸೇವೆಯಲ್ಲಿದ್ದಾಗ ಮೃತಪಟ್ಟರೆ ಅವರ ಕುಟುಂಬಕ್ಕೆ ಪರಿಹಾರವನ್ನು ಸರ್ಕಾರ ಘೋಷಣೆ ಮಾಡಿದೆ. ಜಿಲ್ಲೆಯಲ್ಲಿ ಮೃತಪಟ್ಟಿರುವ ಕೋವಿಡ್ ವಾರಿಯರ್ಗೆ ಇನ್ನು ಪರಿಹಾರ ಬಂದಿಲ್ಲ. ಪ್ರಕ್ರಿಯೆ ಸರ್ಕಾರದ ಮಟ್ಟದಲ್ಲಿ ನಡೆದು ತೀರ್ಮಾನವಾಗ ಬೇಕಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ ಸೋಂಕು ಇಳಿಮುಖ! :
ಹಾಸನ: ಜಿಲ್ಲೆಯಲ್ಲಿ ತಿಂಗಳಿನ ಮೊದಲ ವಾರಕ್ಕೆ ಹೋಲಿಸಿದರೆ 2ನೇ ವಾರ ಕೋವಿಡ್ ಪ್ರಕರಣ ಇಳಿಮುಖವಾಗಿವೆ. ಸೋಂಕು ಪರೀಕ್ಷೆಯ ಪ್ರಮಾಣವೂ ಹೆಚ್ಚಿದ್ದು, ಪಾಸಿಟಿವ್ ಪ್ರಮಾಣ ಗಣನೀಯವಾಗಿ ಇಳಿದಿದೆ ಎಂದು ಜಿಲ್ಲಾ ಆರೋಗ್ಯ ಮತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಹಾಸನ ಜಿಲ್ಲೆಯಲ್ಲಷ್ಟೇ ಅಲ್ಲ. ರಾಜ್ಯದಲ್ಲಿಯೇ ಕೋವಿಡ್ ಪಾಸಿಟಿವ್ ಪ್ರಕರಣಗಳು ಇಳಿಮುಖವಾಗಿವೆ. ಕೊರೊನಾದ ಮೊದಲ ಆಲೆ ಮುಗಿಯುತ್ತಾ ಬಂದಿದೆ ಎಂದು ಭಾಸವಾಗುತ್ತಿದೆ. ತಿಂಗಳ ಮೊದಲ ವಾರದವರೆಗೆ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಶೇ.18 ರಿಂದ 21 ಇತ್ತು. 2ನೇ ವಾರ ಆ ಪ್ರಮಾಣ ಶೇ.7 ರಿಂದ 8 ರಷ್ಟಿದೆ.ಪ್ರತಿದಿನ 3500 ರಿಂದ 4000 ರೂ.ವರೆಗೂ ಪರೀಕ್ಷೆ ನಡೆಯುತ್ತಿದೆ. ಪಾಸಿಟಿವ್ ಪ್ರಕರಣ ಇಳಿಮುಖವಾಗಿರುವುದಕ್ಕೆ ಮುಖ್ಯವಾಗಿಜನರಲ್ಲಿ ಜಾಗೃತಿ ಮೂಡಿದೆ ಎಂದು ಅವರು ತಿಳಿಸಿದ್ದಾರೆ.
ಅಕ್ಟೋಬರ್ ಮೊದಲ ವಾರ400 ರಿಂದ500 ಕೋವಿಡ್ ಪಾಸಿಟಿವ್ ಪ್ರಕರಣಗಳುವರದಿಯಾಗುತ್ತಿದ್ದರೆ, 2ನೇ ವಾರ 200 ರಿಂದ 300ರ ಆಸುಪಾಸಿನಲ್ಲಿ ಪಾಸಿಟಿವ್ ಪ್ರಕರಣಗಳುವರದಿಯಾಗುತ್ತಿದ್ದು, ಸಾವಿನ ಪ್ರಮಾಣ ವೂ ಇಳಿಮುಖ ಆಗಿರುವುದು ತುಸು ಸಮಾಧಾನ ತಂದಿದೆ.ನಿನ್ನೆ(ಭಾನುವಾರ) 254 ಪಾಟಿಸಿವ್ ಪ್ರಕರಣಗಳುವರದಿಯಾಗಿದ್ದು, ಎರಡು ಸಾವು ಸಂಭವಿಸಿವೆ. ಹಿಂದಿನವಾರಗಳಲ್ಲಿ ಪ್ರತಿದಿನ 500 ಮೀರಿದ ಪಾಸಿಟಿವ್, ಸಾವಿನಪ್ರಕರಣ 10 ಮೀರಿತ್ತು. ಆದರೆ, ಈ ವಾರ ಇನ್ನೂ ಇಳಿಕೆಯಾಗುವ ಸಂಭವ ಹೆಚ್ಚಿದೆ.
-ನಂಜುಂಡೇಗೌಡ ಎನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.