Hassan:”ಸಿಪಿವೈ ಕಾಂಗ್ರೆಸ್ ಸೇರ್ಪಡೆ: 3 ತಿಂಗಳ ಹಿಂದೆಯೇ ನಿರ್ಧಾರ’
Team Udayavani, Oct 28, 2024, 12:16 AM IST
ಹಾಸನ: ಜೆಡಿಎಸ್, ಬಿಜೆಪಿಯವರು ಟಿಕೆಟ್ ಕೊಟ್ಟಿಲ್ಲ ಎಂದು ಅನುಕಂಪ ಗಿಟ್ಟಿಸಿಕೊಳ್ಳಲು ಸಿ.ಪಿ. ಯೋಗೇಶ್ವರ್ ನಾಟಕವಾಡಿದರು. 3 ತಿಂಗಳ ಹಿಂದೆಯೇ ನಿರ್ಧಾರವಾದಂತೆ ಕಾಂಗ್ರೆಸ್ ಸೇರಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.
ಹಾಸನಾಂಬೆ ದರ್ಶನ ಪಡೆದು ಸುದ್ದಿಗಾರರ ಜತೆ ಮಾತನಾಡಿ, ಯೋಗೇಶ್ವರ್ ಅವರು ಪ್ರತೀ ಚುನಾವಣೆಗೂ ಪಕ್ಷಾಂತರ ಮಾಡಿದ್ದಾರೆ. ಈವರೆಗೆ 7 ಬಾರಿ ಪಕ್ಷ ಬದಲಿಸಿದ್ದಾರೆ. ಯಾವ ಪಾರ್ಟಿ ಆಡಳಿತದಲ್ಲಿ ಇರುತ್ತದೋ ಅದಕ್ಕೆ ಹೋಗುತ್ತಾರೆ. ಹಿಂದೆ ಬಿಜೆಪಿ ಆಡಳಿತದಲ್ಲಿ ಇತ್ತು. ಇಲ್ಲಿಗೆ ಬಂದರು ಅದಕ್ಕೂ ಹಿಂದೆ ಕಾಂಗ್ರೆಸ್ ಆಡಳಿತದಲ್ಲಿ ಇತ್ತು. ಅಲ್ಲಿಗೆ ಹೋಗಿದ್ದರು.
ಸಿಎಂ, ಡಿಸಿಎಂ ಜತೆ ನಿರಂತರ ಸಂಪರ್ಕದಲ್ಲಿ ಇದ್ದರು. ಡಿ.ಕೆ. ಸುರೇಶ್ ಕೂಡ ಅಚ್ಚರಿ ಅಭ್ಯರ್ಥಿ ಎಂದಿದ್ದರು. ಇದೇ ಆ ಅಚ್ಚರಿ ಅಭ್ಯರ್ಥಿ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.