ಹಿಂದುತ್ವ ಉಳಿಸಲು ಸಂಸ್ಕೃತಿ ಅರಿವು ಅತ್ಯಗತ್ಯ
Team Udayavani, Dec 6, 2022, 4:48 PM IST
ಸಕಲೇಶಪುರ: ಹಿಂದೂ ಹೆಣ್ಣು ಮಕ್ಕಳಿಗೆ ಪೋಷ ಕರು ಹಿಂದೂ ಸಂಸ್ಕೃತಿ ಕುರಿತು ಹೆಚ್ಚಿನ ಅರಿವು ಮೂಡಿಸಿದಲ್ಲಿ ಮಾತ್ರ ಹಿಂದೂಗಳು ಉಳಿಯು ವುದು ಸಾಧ್ಯ ಎಂದು ಅರಕಲಗೂಡು ತಾಲೂಕು ಬಸವಪಟ್ಟಣದ ತೋಂಟದಾರ್ಯ ಸಂಸ್ಥಾನ ಮಠದ ಶ್ರೀ ಸ್ವತಂತ್ರ್ಯ ಬಸವಲಿಂಗ ಹೇಳಿದರು.
ಭಾನುವಾರ ರಾತ್ರಿ ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದ ಆವರಣದಲ್ಲಿ ಭಜರಂಗದಳ ಹಾಗೂ ವಿಎಚ್‌ಪಿ ವತಿಯಿಂದ ದತ್ತಜಯಂತಿ ಪ್ರಯುಕ್ತ ಆಯೋಜಿಸಲಾಗಿದ್ದ ಸಂಕೀ ರ್ತನ ಯಾತ್ರೆ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದು ಹಿಂದೂ ಸಂಸ್ಕೃತಿ, ಸಂಸ್ಕಾರ, ಹಿಂದೂ ಧರ್ಮಗ್ರಂಥಗಳಲ್ಲಿನ ಸಾರವನ್ನು ಮಕ್ಕಳಿಗೆ ಬೋಧಿಸುವ ತುರ್ತು ಅಗತ್ಯವಿದೆ. ಧರ್ಮದಲ್ಲಿನ ಸಾರವನ್ನು ಅರಿಯದ ಯುವ ಜನತೆಯಿಂದಾಗಿ ಸಮಾಜದಲ್ಲಿ ಸ್ವೇಚ್ಚಚಾರ ಅತಿಯಾಗಿದೆ. ಇದು ಅನ್ಯ ಧರ್ಮಿಯರು ನಮ್ಮ ಸಮಾಜದ ಮೇಲೆ ಅಕ್ರಮಣ ಮಾಡಲು ಕಾರಣವಾಗಿದೆ. ದುಶ್ಚಟ ಹಾಗೂ ದ್ವೇಷಮುಕ್ತ ಸಮಾಜ ನಿರ್ಮಾಣಕ್ಕಾಗಿ ಹಿಂದೂ ಸಂಸ್ಕೃತಿ ಎತ್ತಿ ಹಿಡಿಯುವ ಕೆಲಸವಾಗಬೇಕಿದೆ ಎಂದರು.
33 ಸಾವಿರ ದೇವಸ್ಥಾನ ನಾಶವಾಗಿದೆ: ವಿಶ್ವ ಹಿಂದೂಪರಿಷತ್ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಮಾತನಾಡಿ, ದತ್ತಪೀಠ ಹೋರಾಟಕ್ಕೆ ಮೂರು ದಶಕಗಳ ಇತಿಹಾಸವಿದೆ. ದತ್ತಪೀಠದಲ್ಲಿ ಮೂರು ಹೊತ್ತು ಹಿಂದೂಗಳು ಪೂಜೆ ಮಾಡಲು ಅರ್ಚಕರನ್ನು ನೇಮಿಸಲು ನ್ಯಾಯಾಲಯ ಅವಕಾಶ ಮಾಡಿಕೊಟ್ಟಿರುವುದು ಹೋರಾಟಕ್ಕೆ ಸಂದ ಜಯವಾಗಿದೆ. ಸುಮಾರು 33 ಸಾವಿರ ದೇವಸ್ಥಾನ ಗಳನ್ನು ಐದು ಶತಮಾನಗಳ ಕಾಲ ಮುಸ್ಲಿಂ ದೊರೆಗಳ ನಡೆಸಿದ ಆಳ್ವಿಕೆಯಲ್ಲಿ ಕಳೆದುಕೊಂಡಿದ್ದೇವೆ. ಸದ್ಯ ಈ ದೇವಸ್ಥಾನಗಳ ಜೀರ್ಣೋದ್ಧಾರ ನಡೆಸುವ ಸುವರ್ಣ ಯುಗ ಆರಂಭವಾಗಿದೆ ಎಂದರು.
ಹಿಂದೂ ಸಮಾಜಕ್ಕೆ ಸವಾಲುಗಳು: ಇಂದಿಗೂ ಹಿಂದೂ ಸಮಾಜವನ್ನು ಹತ್ತಿಕ್ಕಳು ಅನ್ಯಧರ್ಮ ದವರು ಲವ್ ಜಿಹಾದ್, ಗೋಹತ್ಯೆ, ಭಯೋತ್ಪದನೆಯಂತಯ ಸವಾಲನ್ನು ಎಸೆದಿದ್ದು ಇವುಗಳನ್ನು ಸಮರ್ಥವಾಗಿ ಮೆಟ್ಟಿ ನಿಲ್ಲಲ್ಲು ನಮ್ಮ ಧರ್ಮ, ಸಂಸ್ಕೃತಿಯನ್ನು ಯುವಜನರಿಗೆ ತಿಳಿಸುವ ಕೆಲಸವಾಗಬೇಕಿದೆ.
ಇಸ್ಲಾಮೀಕರಣ ಭ್ರಮೆಯಷ್ಟೇ: ಹಿಂದೂಗಳ ಒಳ್ಳೆಯತನವನ್ನು ದುರುಪಯೋಗ ಪಡಿಸಿಕೊಂಡು ಹಲವರು ಆಳ್ವಿಕೆ ನಡೆಸಿ ನಮ್ಮ ಸಂಸ್ಕೃತಿ, ಸಂಪತ್ತನ್ನು ದೋಚುವ ಕೆಲಸ ಹಲವು ಶತಮಾನಗಳಿಂದ ನಡೆದುಕೊಂಡು ಬಂದಿದ್ದರೂ ಕೂಡ ಇಂದಿಗೂ ಯಶಸ್ವಿಯಾಗಿಲ್ಲ. ಅದೇ ರೀತಿ ಹಿಂದೂ ಸಮಾಜವನ್ನು ಇಸ್ಲಾಮೀಕರಣ ನಡೆಸುವುದು ಅಸಾಧ್ಯ ಎಂದರು.
ಹೋರಾಟಕ್ಕೆ ಮುಂದಾಗಿ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆಸಗಾನಹಳ್ಳಿ ಹಿತೇಂದ್ರ ಮಾತನಾಡಿ, ದೇಶದಲ್ಲಿ ಬ್ರಿಟಿಷರ, ಒಡೆದು ಆಳುವ ನೀತಿಯಿಂದಾಗಿ ನಾವು ಇಂದಿಗೂ ಒಂದಾಗಿ ಹೋಗಲು ಸಾಧ್ಯವಾಗುತ್ತಿಲ್ಲ. ಹಿಂದೂಗಳಲ್ಲಿನ ಜಾತಿತಾರತಮ್ಯ ನೀತಿ ತೊಡೆದು ಒಂದಾಗಬೇಕು. ಹಿಂದೂ ಸಮಾಜ ಒಗ್ಗೂಡಿಸಲು ಹೋರಾಟ ನಡೆಸುತ್ತಿರುವ ವ್ಯಕ್ತಿಗಳ್ಯಾರು ಆರ್ಥಿಕವಾಗಿ ಶ್ರೀಮಂತರಲ್ಲ. ಅವರಿಗೆ ಆರ್ಥಿಕವಾಗಿ ಬಲಾಡ್ಯವಾಗಿರುವ ಹಿಂದೂ ಸಹೋದರರು ಸಹಕಾರ ನೀಡಬೇಕು ಎಂದರು.
ಕಾರ್ಯಕ್ರಮದ ಅಂಗವಾಗಿ ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಗುರುವೇಗೌಡ ಕಲ್ಯಾಣ ಮಂಟ ಪದವರೆಗೆ ದತ್ತಾಮಾಲಾದಾರಿಗಳಿಂದ ಬೃಹತ್ ಮೆರವಣಿಗೆ ನಡೆಯಿತು. ಮಹಿಳೆಯರು ಮಕ್ಕಳು ಸಹ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.
ಕಾರ್ಯಕ್ರಮದಲ್ಲಿ ಎಂ.ಎಸ್ ನಾಗೇಂದ್ರ ಸೇವಾ ಪ್ರತೀಷ್ಠಾನದ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ, ದಲಿತ ಮುಖಂಡ ಮಳಲಿ ಶಿವಣ್ಣ, ನಿವೃತ್ತ ಕೃಷಿ ಅಧಿಕಾರಿ ಶ್ರೀನಿವಾಸ್, ಉದ್ಯಮಿ ಮಂಜುನಾಥ್, ಟಿಎಪಿಸಿಎಂಎಸ್ ಅಧ್ಯಕ್ಷ ಶಶಿಕುಮಾರ್, ಹಿಂದೂ ಪರ ಸಂಘಟನೆಯ ಮುಖಂಡರಾದ ಕೌಶಿಕ್, ಶ್ರೀಜಿತ್,ಮಂಜು ಕಬ್ಬಿನಗದ್ದೆ,ಕಾರ್ತಿಕ್, ಧರ್ಮೇ ಶ್, ದುಷ್ಯಂತ್ , ಬಿಜೆಪಿ ಮುಖಂಡರಾದ ನಾರ್ವೆ ಸೋಮಶೇಖರ್, ಸಿಮೆಂಟ್ ಮಂಜುನಾಥ್, ಮಂಜುನಾಥ್ ಸಂ ಮುಂತಾದವರಿದ್ದರು.
ಭಯೋತ್ಪಾದನೆ ಮಟ್ಟ ಹಾಕಬೇಕು: ಪ್ರಪಂಚದಲ್ಲಿ ನೇಪಾಲ ಬಿಟ್ಟರೆ ಹಿಂದೂ ದೇಶವಿರೋದು ನಮ್ಮ ಭಾರತ ಮಾತ್ರ. ನಮ್ಮ ದೇಶದ ಏಕತೆಗೆ ಭಂಗ ಬಂದಾಗ ಒಂದಾಗಿ ಹೋರಾಟ ನಡೆಸದಿದ್ದರೆ ಉಳಿಗಾಲವಿಲ್ಲ. ಇತ್ತೀಚ್ಚಿನ ದಿನಗಳಲ್ಲಿ ಅನ್ಯ ಧರ್ಮಿಯರು ದಲಿತರನ್ನು ಎತ್ತಿ ಕಟ್ಟುವ ಮೂಲಕ ಹಿಂದೂ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಹಿಂದೂ ಧರ್ಮದಲ್ಲಿ ಎಂದಿಗೂ ಜಾತಿ ಪದ್ಧತಿ ಇಲ್ಲ. ದಲಿತರು ಇದಕ್ಕೆ ಕಿವಿ ಗೊಡಬಾರದು. ಭಯೋತ್ಪಾದನೆ ಮೂಲಕ ಹಿಂದೂ ಸಮಾಜವನ್ನು ಬೆದರಿಸುವ ಕೆಲಸವಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಕ್ಕರ್ ಬಾಂಬ್ ಸಿಡಿಸುವ ದೇಶದ್ರೋಹಿ ಕೆಲಸ ನಡೆಸಿದವರು ಹಾಗೂ ಅದಕ್ಕೆ ಸಹಕರಿಸಿದವರನ್ನು ಪತ್ತೆಮಾಡಿ ಶಿಕ್ಷೆ ವಿಧಿಸಬೇಕು. ಈ ಮೂಲಕ ಭಯೋತ್ಪಾದನೆ ಪರಿಣಾ ಮಕಾರಿಯಾಗಿ ಮಟ್ಟಹಾಕಲು ಸಾಧ್ಯ ಎಂದು ಸ್ವತಂತ್ರ್ಯ ಬಸವಲಿಂಗ ಶ್ರೀ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.