ತಾಲೂಕಾದ್ಯಂತ ದಸರಾ ಬೊಂಬೆ ದರ್ಬಾರ್
Team Udayavani, Oct 4, 2019, 4:54 PM IST
ಚನ್ನರಾಯಪಟ್ಟಣ: ತಾಲೂಕಿನ ವಿವಿಧ ಹೋಬಳಿಯಲ್ಲಿರುವ ಮಹಾಲಕ್ಷ್ಮೀ ಹಾಗೂ ದುರ್ಗಿ ದೇವಾಲಯ ಸೇರಿದಂತೆ ಪಟ್ಟಣದಲ್ಲಿ ನೂರಾರು ಮನೆಗಳಲ್ಲಿ ದಸರಾ ಬೊಂಬೆಯನ್ನು ಕೂರಿಸುವ ಮೂಲಕ ಸನಾತನ ಸಂಪ್ರದಾಯವನ್ನು ಪಾಲಿಸಲಾಗುತ್ತಿದೆ. ಮೈಸೂರು ದಸರಾ ಉತ್ಸವಕ್ಕೆ ಚಾಲನೆ ದೊರೆತ ಬೆನ್ನಲ್ಲೇ ಚನ್ನರಾಯಪಟ್ಟಣದ ನೂರಾರು ಮನೆಗಳಲ್ಲಿ ದಸರಾ ಬೊಂಬೆಯ ದರ್ಬಾರ್ ಆರಂಭಗೊಂಡಿದೆ.
ಪ್ರತಿದಿನ ಸಂಜೆಯಾಗುತ್ತಿದ್ದಂತೆ ಬೊಂಬೆ ಕೂರಿಸಿರುವ ಮನೆಗಳಿಗೆ ಚಿಣ್ಣರು ತೆರಳಿ ಬೊಂಬೆ ಸಂಭ್ರಮ ಕಣ್ತುಂಬಿಕೊಳ್ಳುತ್ತಿರುವುದು ನಗರದಲ್ಲಿ ಮಾಮೂಲಾಗಿದೆ. ಶತಮಾನದ ಹಿಂದೆ ಮೇಲ್ವರ್ಗದ ಮನೆಯವರು ಮಾತ್ರ ದಸರಾ ಬೊಂಬೆ ಕೂರಿಸುತ್ತಿದ್ದಾರೆ. ಆಧುನಿಕತೆ ಬಳೆದಂತೆ ಸನಾತ ಸಂಪ್ರದಾಯವೂ ಬೃಹದಾಕಾರವಾಗಿ ಬೆಳೆಯುತ್ತಿದೆ. ನವರಾತ್ರಿ ಹಬ್ಬದಲ್ಲಿ ಎಲ್ಲಾ ವರ್ಗದವರ ಮನೆಯಲ್ಲಿ ಬೊಂಬೆ ಕೂರಿಸುವುದು ಎಂದರೆ ತಪ್ಪಾಗಲಾರದು.
ನಿಯಮವೇನಿಲ್ಲ: ನವರಾತ್ರಿಗೆ ಬೊಂಬೆಯನ್ನು ಹೀಗೆ ಕೂರಿಸಬೇಕೆಂಬ ನಿಯಮಗಳೇನು ಇಲ್ಲ. ಆದರೆ ಬೊಂಬೆಗಳನ್ನು ಕೂರಿಸುವಾಗ ಒಂದು ಥೀಮ ಇಟ್ಟುಕೊಂಡು ಕೂರಿಸುವುದು ವಾಡಿಕೆ. ಬೊಂಬೆಯನ್ನು ಕೂರಿಸಲು ಹಂತ-ಹಂತವಾಗಿ ಹಲಗೆಯನ್ನು ಮೆಟ್ಟಿಲಿನ ರೀತಿಯಲ್ಲಿ ಜೋಡಿಸಿ ಅವುಗಳಲ್ಲಿ ಬೊಂಬೆ ಕೂರಿಸಲಾಗುವುದು. ಒಂದೊಂದೇ ಮೆಟ್ಟಿಲಿನಲ್ಲಿ ಕೂರಿಸುವ ಬೊಂಬೆಗಳು ಒಂದೊಂದು ಕಥೆಯನ್ನು ಆಧರಿಸಿರುತ್ತವೆ.
ಸಾಮಾನ್ಯವಾಗಿ ಬೊಂಬೆ ಕೂರಿಸುವಾಗ ಮೇಲಿನ ಮೂರು ಮೆಟ್ಟಿಲುಗಳಲ್ಲಿ ದೇವ-ದೇವತೆಯನ್ನು ಕೂರಿಸಲಾಗುವುದು. ನಂತರ ಮೂರು ಮೆಟ್ಟಿಲುಗಳನ್ನು ನರದೇವತೆ, ಋಷಿ ಮುನಿಗಳು, ಸಾಧು ಸಂತರು ಹಾಗೂ ರಾಜ-ರಾಣಿಯರಿಗೆ ಮೀಸಲಿಡುತ್ತಾರೆ. ಮೈಸೂರು ರಾಜ-ರಾಣಿಯರ ಬೊಂಬೆಯನ್ನು ಕೂರಿಸಲಾಗುವುದು. 7ನೇ ಮೆಟ್ಟಿಲಿನಲ್ಲಿ ಹಬ್ಬದ ಸಡಗರವನ್ನು ಬಿಂಬಿಸುವ ಬೊಂಬೆಗಳನ್ನು ಇಡಲಾಗುವುದು. 8ನೇ ಮೆಟ್ಟಿಲಿನಲ್ಲಿ ನಾವು ನೋಡೋ ಸನ್ನಿವೇಶ, ನಡೆದ ಘಟನೆಗಳು, ದಿನ ನಿತ್ಯ ಜೀವನವನ್ನು ಬಿಂಬಿಸುವ ಬೊಂಬೆ ಇಟ್ಟಿರುತ್ತಾರೆ, 9ನೇ ಮೆಟ್ಟಿಲಿನಲ್ಲಿ ಪ್ರಾಣಿ-ಪಕ್ಷಿಗಳ ಬೊಂಬೆಯನ್ನು ಇಡಲಾಗುವುದು. ಈ ರೀತಿಯಾಗಿ ನವರಾತ್ರಿಗೆ ಗೊಂಬೆಯನ್ನು ಕೂರಿಸುವ ಕ್ರಮವನ್ನು ರೂಡಿಸಿಕೊಂಡು ಬರಲಾಗಿದೆ.
ಹಲವು ದಿವಸ ಆಚರಣೆ ಹಬ್ಬ: ನವರಾತ್ರಿಯು ಹಿಂದೂ ಹಬ್ಬವಾಗಿದ್ದು ಅದು 9 ರಾತ್ರಿ ಮತ್ತು ವಿಜಯ ದಶಮಿ ಸೇರಿಂದಂತೆ ಹತ್ತು ದಿನ ವಿಶೇಷ ಕಾರ್ಯಕ್ರಮ ನಡೆಯುತ್ತದೆ. ಇದನ್ನು ವಿಭಿನ್ನ ಕಾರಣಕ್ಕಾಗಿ ಆಚರಿಸಲಾಗುವುದು ಮತ್ತು ಭಾರತೀಯ ಉಪಖಂಡದ ವಿವಿಧ ಭಾಗಗಳಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ. ದುರ್ಗಾ ಪೂಜೆಯು ನವರಾತ್ರಿಯ ಸಮಾನಾರ್ಥಕವಾಗಿದೆ. ದುರ್ಗಾದೇವಿ ರಾಕ್ಷಸರ ವಿರುದ್ಧ ಸಾಧಿಸಿದ ವಿಜಯವನ್ನು ವಿಜಯದಶಮಿ ಆಚರಣೆ ಮಾಡುವ ಮೂಲಕ ನವರಾತ್ರಿ ಹಬ್ಬವನ್ನು ಮುಕ್ತಾಯ ಮಾಡಲಾಗುತ್ತದೆ.
ಶತಮಾನಗಳಿಂದಲೂ ಜಾರಿಯಲ್ಲಿದೆ: ಬೊಂಬೆ ಕೂರಿಸುವುದು ಇಂದು ನೆನ್ನೆಯದಲ್ಲ ಹಲವು ಮನೆಗಳಲ್ಲಿ ತಲೆ ತಲಾತರದಿಂದ ಬೊಂಬೆ ಕೂರಿಸಲಾಗುತ್ತಿದೆ. ಕೆಲವು ಮನೆಯವರು ಹತ್ತಾರು ವರ್ಷದಿಂದ ಬೊಂಬೆ ಕೂರಿಸುವುದನ್ನು ರೂಡಿಸಿಕೊಂಡಿದ್ದಾರೆ. ಇತ್ತೀಚಿನ ದಿವಸಗಳಲ್ಲಿ ಕೆಲವು ಮಹಿಳೆಯರು ತಾವು ಪ್ರವಾಸಕ್ಕೆ ಹೋದಾಗ ತಂದ ಬೊಂಬೆಗಳನ್ನು ಪ್ರದರ್ಶನ ಮಾಡಲಿಕ್ಕಾಗಿ ನವರಾತ್ರಿಯ ಬೊಂಬೆ ಹಬ್ಬದ ದಿವಸ ಅದ್ಧೂರಿಯಾಗಿ ಅಲಂಕಾರ ಮಾಡಿದ ಮಂಟಪದಲ್ಲಿ ಬೊಂಬೆ ಕೂರಿಸುತ್ತಿದ್ದಾರೆ. ಸಂಪ್ರದಾಯದ ಬೊಂಬೆಗಳೊಂದಿಗೆ ಕ್ರಿಕೆಟ್, ಕಬಡ್ಡಿ , ಶಾಲೆಯಲ್ಲಿ ಶಿಕ್ಷಕ ಹಾಗೂ ವಿದ್ಯಾರ್ಥಿ ಸೇರಿದಂತೆ ಆಧುನಿಕತೆಯ ಬೊಂಬೆಗಳನ್ನೂ ಕೂರಿಸಲಾಗುತ್ತಿದೆ.
ಬೊಂಬೆ ಹಬ್ಬದ ಹಿನ್ನೆಲೆ : ಮೈಸೂರು ದಸರಾ ಹಾಗೂ ಬೊಂಬೆ ಹಬ್ಬಕ್ಕೂ ಐತಿಹಾಸಿಕ ನಂಟಿದೆ. ಬೊಂಬೆಗಳ ಸಂಪ್ರದಾಯ ಹಿಂದೂ ನಾಗರಿಕತೆಯ ಅರಂಭದಿಂದ ಬಂದುದಾದರೂ ನವರಾತ್ರಿ ಬೊಂಬೆ ಉತ್ಸವ ಮಾತ್ರ ರಾಜವಂಶಸ್ಥರಿಂದ ಆರಂಭವಾಗಿ ನಂತರ ಅದು ಅವರ ನಿಕಟವರ್ತಿಗಳಿಂದ ಆಚರಿಸಲ್ಪಟ್ಟು ಸಾರ್ವತ್ರಿಕವಾಗಿದೆ. ಹೆಣ್ಣು ಮಕ್ಕಳು ರಾಜ ಮಂತ್ರಿ ಆಸ್ಥಾನದವರ ಪ್ರತೀಕವಾಗಿ ಬೊಂಬೆ ಕೂರಿಸಿ ಅದಕ್ಕೆ ಕಲಾತ್ಮಕ ಅಲಂಕಾರ ಮಾಡುತ್ತಿದ್ದರು. ರಾಜ ಪರಿವಾರದವರ ವೈಭವದ ಆಟಿಕೆಗಳ ಪ್ರದರ್ಶ ಮಕ್ಕಳಿಗೆ ಮನರಂಜನೆ ನೀಡುವ ಸಲುವಾಗಿ ಆರಂಭಗೊಂಡ ಬೊಂಬೆ ಕೂರಿಸುವುದು ನಂತರದ ದಿವಸಗಳಲ್ಲಿ ಸಂಪ್ರದಾಯವಾಗಿ ರೂಪ ಪಡೆಯಿತು.
-ಶಾಮಸುಂದರ್ ಕೆ. ಅಣ್ಣೇನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Out of Syllabus Review; ಪ್ರೇಮಿಗಳಿಗೆ ಹೊಸ ಸಿಲೆಬಸ್
INDvAUS; ಇತಿಹಾಸದಲ್ಲೇ ಮೊದಲ ಬಾರಿಗೆ…: 200 ವಿಕೆಟ್ ನೊಂದಿಗೆ ಹೊಸ ದಾಖಲೆ ಬರೆದ ಬುಮ್ರಾ
Aranthodu: ಉಡುಪಿಗೆ ಭತ್ತದ ಲೋಡ್ ಸಾಗಿಸುತ್ತಿದ್ದ ವೇಳೆ ಲಾರಿಗೆ ಆಕಸ್ಮಿಕ ಬೆಂಕಿ
Anandapura: ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು
Liquor Sale; ರಾಜ್ಯದಲ್ಲಿ ಒಂದೇ ದಿನ 408 ಕೋಟಿ ರೂ ಮೌಲ್ಯದ ಮದ್ಯ ಮಾರಾಟ ದಾಖಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.