ಗ್ರಾಮವಾಸ್ತವ್ಯದಲ್ಲಾದರೂ ಅಧಿಕಾರಿಗಳು ಸ್ಪಂಂದಿಸಲಿ

ಸಮಸ್ಯೆ ಪರಿಹಾರಕ್ಕೆ ಎದುರು ನೋಡುತ್ತಿರುವ ಗ್ರಾಮಸ್ಥರು ! ಮಣ್ಣು ಮಾರಾಟ ದಂಧೆಗೆ ಕಡಿವಾಣ ಬೀಳಲಿ ! ನಾಲೆ ಸೇರುವ ಚರಂಡಿ ನೀರಿಗೆ ಮುಕ್ತಿ ದೊರೆಯಲಿ

Team Udayavani, Feb 18, 2021, 4:21 PM IST

DC

ಚನ್ನರಾಯಪಟ್ಟಣ: ಗ್ರಾಮದಲ್ಲಿ ಹರಿಯುವ ನಾಲೆಗೆ ಚರಂಡಿ ನೀರು ಸೇರುತ್ತಿದ್ದು ಮುಕ್ತಿ ದೊರೆಯಬೇಕು, ಸರ್ಕಾರಿ ಭೂಮಿಯಲ್ಲಿನ ಮಣ್ಣನ್ನು ಪ್ರಭಾವಿಗಳು ಹಣಕ್ಕಾಗಿ ಮಾರಾಟ ಮಾಡುತ್ತಿದ್ದು ಕ್ರಮ ಕೈಗೊಳ್ಳಬೇಕು, ಸರ್ಕಾರಿ ಶಾಲೆಗೆ ಸುಣ್ಣ ಬಣ್ಣ ಹಾಗೂ ನೂತನ ಕಟ್ಟಡ ನಿರ್ಮಾಣ ಮಾಡಬೇಕು…

ಫೆ.20ರಂದು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಹಶೀಲ್ದಾರ್‌, ಉಪವಿಭಾಗಾಧಿಕಾರಿಗಳ ಗ್ರಾಮ ವಾಸ್ತವ್ಯ ಹಿನ್ನೆಲೆಯಲ್ಲಿ ದಡದ ಹಳ್ಳಿ ಗ್ರಾಮಸ್ಥರು ಈಗಾಗಲೇ ಸಮಸ್ಯೆಗಳ ಸರಮಾಲೆಯನ್ನೇ  ಸಿದ್ಧಪಡಿಸಿಟ್ಟು ಕೊಂಡಿದ್ದಾರೆ. ಫೆ.20 ರಂದು ತಹಶೀಲ್ದಾರ್‌ ಜೆ.ಬಿ.ಮಾರುತಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಗ್ರಾಮ ವಾಸ್ತವ್ಯ ಮಾಡಲಿದ್ದು ಈ ವೇಳೆ ಗ್ರಾಮದಲ್ಲಿನ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆಯೇ ಎಂದು ಗ್ರಾಮಸ್ಥರು ಎದುರು ನೋಡುತ್ತಿದ್ದಾರೆ. ಈಗಾಗಲೇ ಹಲವು ಬಾರಿ ಅಕ್ರಮ ಮಣ್ಣು ಸಾಗಣೆ ಬಗ್ಗೆ ತಹಶೀಲ್ದಾರ್‌ರ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ.

ಎಷ್ಟು ಎಕರೆ ಇದೆ?: ದಡದಹಳ್ಳಿ, ನಲ್ಲೂರು, ದೊಡ್ಡಗನ್ನಿ ಮೂರು ಗ್ರಾಮಕ್ಕೆ ಸೇರಿದ ಗೋಮಾಳ ಸರ್ವೆ ನಂ 31, 32, 33ರಲ್ಲಿ 90ರಿಂದ 100 ಎಕರೆ ಭೂಮಿ ಸರ್ಕಾರಕ್ಕೆ ಸೇರಿದೆ. ಆದರೆ, ಇಲ್ಲಿ ಕಳೆದ ಒಂದೆರಡು ತಿಂಗಳಿನಿಂದ ರಾಜಕೀಯ ಮುಖಂಡರ ಪ್ರಭಾವದಿಂದ ಅಕ್ರಮವಾಗಿ ಮಣ್ಣು ಮಾರಾಟ, ಸಾಗಣೆ ನಡೆಯುತ್ತಿದೆ. ಗ್ರಾಮ ವಾಸ್ತವ್ಯಕ್ಕೆ ಮೂರು ದಿನ ಇರುವಾಗ ದಂಧೆ ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ಎಲ್ಲೆಲ್ಲಿಗೆ ಮಾರಾಟ?: ಚನ್ನರಾಯಪಟ್ಟಣದಲ್ಲಿ ನಿರ್ಮಾಣ ಆಗುವ ನೂತನ ಮನೆಗಳ ಫೌಂಡೇಷನ್‌ ಗೆ,  ಮಾಳೇನಹಳ್ಳಿ, ಚೋಳೇನಹಳ್ಳಿ, ನಲ್ಲೂರು, ಅಡಗೂರು, ದೊಡ್ಡಗನ್ನಿ, ಚಿಕ್ಕಗನ್ನಿ, ಮಾದೇಗೌಡನಕೊಪ್ಪಲು, ಶ್ರೀನಿವಾಸಪುರ, ದಡದಹಳ್ಳಿ, ಸಾಸಲಪುರ ಇನ್ನು ಮಂಡ್ಯ ಜಿಲ್ಲೆ ಆನೆಗೋಳ, ಬೋಳಮಾರನಹಳ್ಳಿ, ಚಿಕ್ಕತರಹಳ್ಳಿಗೂ  ಕೆಲವರು ಸರ್ಕಾರಿ ಜಾಗದ ಮಣ್ಣನ್ನು ಮಾರಾಟ ಮಾಡಿ ಹಣ ಗಳಿಸುತ್ತಿದ್ದಾರೆ.

ಎಷ್ಟು ಹಣಕ್ಕೆ ಮಾರಾಟ?: ನಿತ್ಯವೂ 5ಕ್ಕೂ ಹೆಚ್ಚು ಜೆಸಿಬಿ ಯಂತ್ರ ಬಳಸಿ 40 ಟ್ರಾÂಕ್ಟರ್‌ನಲ್ಲಿ 20 ಲೋಡ್‌ ಮಣ್ಣು ತೆಗೆಯಲಾಗುತ್ತಿದೆ. ಟಿಪ್ಪರ್‌ನಲ್ಲಿ 20 ಲೋಡ್‌ ಮಣ್ಣು ಮಂಡ್ಯ ಜಿಲ್ಲೆಗೆ ಮಾರಾಟ ವಾಗುತ್ತಿದೆ. ಒಂದು ಟ್ರಾÂಕ್ಟರ್‌ ಮಣ್ಣಿಗೆ 400-700 ರೂ. ಪಡೆದರೆ ಟಿಪ್ಪರ್‌ಗೆ 3-5 ಸಾವಿರ ಹಣ ವಸೂಲಿ ಮಾಡಲಾಗುತ್ತಿದೆ.

ಸಮಸ್ಯೆ ಇದೆ: ಗ್ರಾಮದ ಚರಂಡಿ ನೀರು ನಾಲೆ ಸೇರುತ್ತಿದೆ. ಸರ್ಕಾರಿ ಶಾಲೆಯಲ್ಲಿ 40 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು ಕೊಠಡಿ ಶಿಥಿಲವಾಗಿದೆ. ಇದನ್ನು ತೆರವು ಮಾಡಿ ನೂತನ ಕೊಠಡಿ ನಿರ್ಮಾಣ ಮಾಡಬೇಕಿದೆ. ಇರುವ ಕೊಠಡಿಗೆ ಸುಣ್ಣ ಬಣ್ಣ, ಶೌಚಾಲಯವೂ ಶಾಲೆಗೆ ಬೇಕಿದೆ. ಆಶ್ರಯ ಮನೆಗೆ ಅರ್ಜಿ, ಹಲವು ಮಂದಿಯ ವೃದ್ಧಾಪ್ಯ ವೇತನ ಸ್ಥಗಿತವಾಗಿರುವ ಕುರಿತು ಅಧಿಕಾರಿಗಳ ಗಮನಕ್ಕೆ ತರಲಾಗುತ್ತದೆ. ಇದಲ್ಲದೆ ನಲ್ಲೂರಿನಲ್ಲಿ ಇರುವ ಪುರಸಭೆ ಕಸ ಸಂಸ್ಕರಣಾ ಘಟಕದ ಬಗ್ಗೆ ಅನೇಕ ಮಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.