ಮುಖ್ಯ ರಸೆ ಅಗಲೀಕರಣಕ್ಕೆ ಡೀಸಿ ಆದೇಶ

ಸಾರ್ವಜನಿಕರಿಗೆ ಸಂತೋಷ, ವರ್ತಕರಲ್ಲಿ ಆತಂಕ „ ನಿಯಮಾನುಸಾರ ರಸ್ತೆ ಅಗಲೀಕರಣಕ್ಕೆ ಕ್ರಮ ಕೈಗೊಳ್ಳಿ

Team Udayavani, Nov 10, 2021, 2:41 PM IST

Road reconstructon

ಕಲೇಶಪುರ: ಪಟ್ಟಣದ ಮುಖ್ಯರಸ್ತೆ ಅಗಲೀಕರಣಕ್ಕೆ ಜಿಲ್ಲಾಧಿಕಾರಿ ಆದೇಶ ನೀಡಿರುವುದು ಸಾರ್ವಜನಿಕ ವಲಯದಲ್ಲಿ ಸಂತೋಷ ತಂದರೆ, ವರ್ತಕರ ವಲಯ ದಲ್ಲಿ ಆತಂಕ ಉಂಟಾಗಿದ್ದು, ಮುಂದೇನಾಗತ್ತದೆ ಎಂದು ಕಾದು ನೋಡಬೇಕಾಗಿದೆ. ಪಟ್ಟಣದಲ್ಲಿ ಹಾದುಹೋಗಿರುವ ಬೆಂಗಳೂರು- ಮಂಗಳೂರು ಹೆದ್ದಾರಿ ಪಟ್ಟಣದ ವ್ಯಾಪ್ತಿಯಲ್ಲಿ ಅತಿಕಿರಿದಾಗಿದ್ದು, ನಿತ್ಯ ವಾಹನ ದಟ್ಟಣೆ, ಅಪಘಾತಗಳು ನಡೆಯುತ್ತಿವೆ ಎಂಬ ಕಾರಣ ನೀಡಿ, 2018ರಲ್ಲಿ ಉಪಭಾಗಾಧಿಕಾರಿಯಾಗಿದ್ದ ಲಕ್ಷ್ಮೀಕಾಂತ ರೆಡ್ಡಿ ಸುರಿಯುವ ಮಳೆಯ ನಡುವೆ ಮುಖ್ಯ ರಸ್ತೆಯಲ್ಲಿದ್ದ ಸರ್ಕಾರಿ ಕಟ್ಟಡಗಳನ್ನು ತೆರವುಗೊಳಿ ಸಿದ್ದರು. ಇದರಿಂದ ಬೆದರಿದ ಹಲವು ವರ್ತಕರು ತಮ್ಮ ಕಟ್ಟಡಗಳನ್ನು ಸ್ವಯಂ ಪ್ರೇರಿತರಾಗಿ ತೆರವುಗೊಳಿಸಿದ್ದರು.

ಆದರೆ, ಉಪ ವಿಭಾಗಾಧಿಕಾರಿ ಕಾರ್ಯಾ ಚರಣೆ ಖಂಡಿಸಿ ವರ್ತಕ ಷಾಪ್‌ ಲಿಂಗರಾಜ್‌ ನೇತೃತ್ವ ದಲ್ಲಿ ನ್ಯಾಯಾಲಯದ ಮೊರೆಹೋದ ವರ್ತಕರು, ಯಾವುದೆ ಮುಂಜಾಗ್ರತ ಕ್ರಮ ಕೈಗೊಳ್ಳದೆ ರಸ್ತೆ ಅಗಲೀಕರಣಕ್ಕೆ ಉಪಭಾಗಾಧಿಕಾರಿ ಮುಂದಾಗಿದ್ದಾರೆ. ಆದ್ದರಿಂದ, ನೆಲಸಮಗೊಂಡ ಕಟ್ಟಡದ ಒಂದು ಮೀಟರ್‌ ವಿಸ್ತೀರ್ಣಕ್ಕೆ 19300 ರೂ.ನಂತೆ ಅದರ ಹತ್ತುಪಟ್ಟು ಪರಿಹಾರ ಹಾಗೂ ಕಟ್ಟಡ ತೆರವುಗೊಳಿಸಿದ ವೇಳೆ ಕಟ್ಟಡಕ್ಕಾದ ಹಾನಿಯ ಪರಿಹಾರವಾಗಿ 10 ಲಕ್ಷ ರೂ., ಗಳನ್ನು ತಪ್ಪಿತಸ್ಥ ಅಧಿಕಾರಿಗಳು ಪ್ರತಿಯೊಬ್ಬ ವರ್ತಕರಿಗೂ ನೀಡ ಬೇಕು ಎಂದು ಮನವಿ ಸಲ್ಲಿಸಿದ್ದರು. 3 ವರ್ಷದ ನಂತರ ತೀರ್ಪು: ರಾಜ್ಯ ಉಚ್ಚನ್ಯಾಯಾ ಲಯ ವಾದ ಪ್ರತಿವಾದ ಆಲಿಸಿದ ನಂತರ ಜಿಲ್ಲಾಧಿ ಕಾರಿಗಳ ನ್ಯಾಯಾಲಯಕ್ಕೆ ಪ್ರಕರಣವನ್ನು ವರ್ಗಾ ಯಿಸಿತ್ತು. ಆದರೆ, ಕಳೆದ ಮೂರು ವರ್ಷದಲ್ಲಿ ಹಲವು ಜಿಲ್ಲಾಧಿಕಾರಿಗಳು ಬದಲಾದರು.

ರಸ್ತೆ ಅಗಲೀಕರಣದ ಸಂಭಂದ ಯಾವುದೇ ತೀರ್ಪು ನೀಡಿರಲಿಲ್ಲ. ಆದರೆ, ಇತ್ತೀಚೆಗೆ ನಡೆದ ಜಿಲ್ಲಾಧಿಕಾರಿಗಳ ನ್ಯಾಯಾಲಯ ಪ್ರಕರಣ ಮುಕ್ತಾಯಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದು, ನ್ಯಾಯಾಲಯ ಅಗಲೀಕರಣಕ್ಕೆ ಕೆಲ ಅಂಶಗಳನ್ನು ಪಟ್ಟಿಮಾಡಿದೆ.

ಅಗಲೀಕರಣಕ್ಕೆ ಪಟ್ಟಿಮಾಡಿದ ಅಂಶಗಳು: ರಸ್ತೆ ಅಗಲಿಕರಣಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಒತ್ತಡ ಕೇಳಿ ಬರುತ್ತಿದೆ. ಕಳೆದ ಹಲವು ವರ್ಷಗಳಿಂದ ಪಟ್ಟಣದ ಮುಖ್ಯರಸ್ತೆಯಲ್ಲಿ ನಡೆದಿರುವ ಅಪಘಾತ ಗಳಿಗೆ ರಸ್ತೆ ಕಿರಿದಾಗಿರುವುದೇ ಕಾರಣ. 2015ರಿಂದ 2018 ಒಟ್ಟು 3.5 ವರ್ಷದ ಅವಧಿಯಲ್ಲಿ ಬಿ.ಎಂ ರಸ್ತೆಯಲ್ಲಿ 180 ಅಪಘಾತಗಳು ಸುಮಾರು 14 ಮಂದಿ ಸಾವನ್ನಪ್ಪಿದ್ದಾರೆ. ಸಾಮಾನ್ಯವಾಗಿ ಹೆದ್ದಾರಿ ಗಳು 30ರಿಂದ 40 ಮೀಟರ್‌ ಅಗಲವಾಗಿರಬೇಕು. ಆದರೆ, ಪಟ್ಟಣದ ಮುಖ್ಯರಸ್ತೆ 10ರಿಂದ 12 ಮೀಟರ್‌ ಮಾತ್ರ ಅಗಲವಿದೆ.

ಸರ್ಕಾರಿ ನಿಯಮ ಉಲ್ಲಂಘನೆ: ಹೆದ್ದಾರಿಯಿಂದ 40 ಮೀಟರ್‌ ದೂರದಲ್ಲಿ ಕಟ್ಟಡಗಳನ್ನು ನಿರ್ಮಿಸಬೇಕು. ಆದರೆ, ಪಟ್ಟಣದಲ್ಲಿ 10ರಿಂದ 15 ಮೀಟರ್‌ ದೂರದಲ್ಲೇ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಸರ್ಕಾರದ ನಿಯಮಗಳನ್ನು ಉಲ್ಲಂ ಸಿ ಕಟ್ಟಡ ನಿರ್ಮಾಣ ಮಾಡಿರುವುದನ್ನು ತೆರವುಗೊಳಿ ಸಲು ಸರ್ಕಾರದ ಸುತ್ತೋಲೆಯಲ್ಲಿ ನಿರ್ದೇಶನ ವಿದ್ದು, 10ರಿಂದ 15 ಮೀಟರ್‌ ಅಂತರದಲ್ಲೇ ಕಟ್ಟಡ ನಿರ್ಮಾಣ ಮಾಡಿರುವುದು ಸರ್ಕಾರದ ನಿಯಮಗಳ ಸ್ವಷ್ಟ ಉಲ್ಲಂಘನೆಯಾಗಿದೆ. ಪಟ್ಟಣ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಿಂದ 21 ಅಪಘಾತಗಳು ನಡೆದಿದ್ದು, ಇದಕ್ಕೆಲ್ಲ ರಸ್ತೆ ಕಿರಿದಾಗಿರುವುದೆ ಕಾರಣ.

ಇದನ್ನೂ ಓದಿ:- ಬಿಜೆಪಿ ಒಂದು ಹೆಜ್ಜೆ ಮುಂದು

ಕರ್ನಾಟಕ ಪುರಸಭಾ ಅದಿನಿಯಮ 1964ರ ಪ್ರಕಾರ ಪಟ್ಟಣದ ಶೇ.90ರಷ್ಟು ಕಟ್ಟಡಗಳನು ನಿಯಮ ಬಾಹಿರವಾಗಿ ರಸ್ತೆ ಒತ್ತುವರಿ ಮಾಡಿಕೊಂಡು ನಿರ್ಮಿ ಸಿರುವುದು ಕಂಡುಬಂದಿದೆ. ಆದ್ದರಿಂದ, ಪುರಸಭೆ ವ್ಯಾಪ್ತಿಯ ಪರಿಮಿತಿಯೊಳಗೆ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯನ್ನು ಸರ್ಕಾರದ ಸುತ್ತೋಲೆಯನ್ವಯ ರಸ್ತೆಗಳ ಎರಡು ಬದಿಗಳಲ್ಲಿಯು 40 ಮೀಟರ್‌ ಅಗಲೀಕರಣಗೊಳಿಸ ಬೇಕು.

ಯೋಜನಾ ವರದಿ ಸಿದ್ಧಪಡಿಸಿ: ಈ ಹಿನ್ನಲೆಯಲ್ಲಿ ತಾಲೂಕು ಆಡಳಿತ ರಸ್ತೆಯ ಇಕ್ಕೆಲ್ಲಗಳಲಿರುವ ಎಲ್ಲ ಕಟ್ಟಡ ಮಾಲೀಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ, ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದು, ರಸ್ತೆ ಅಗಲೀಕರಣದ ಸರ್ವೆ ನಡೆಸಿ, ಭೂ ಮಾಲೀಕತ್ವದ ಬಗ್ಗೆ ಖಾತರಿಪಡಿಸಿಕೊಂಡು ನಿಯಮಾನುಸಾರ ರಸ್ತೆ ಅಗಲೀಕರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ತಾಲೂಕು ಆಡಳಿತಕ್ಕೆ ಸೂಚಿಸಲಾಗಿದೆ. ಅಗಲೀಕರಣಗೊಳ್ಳಬೇಕಿರುವ ಸಕಲೇಶಪುರ ಮುಖ್ಯರಸ್ತೆ.

“ವರ್ತಕರ ವಲಯದಿಂದ ಜಿಲ್ಲಾಧಿಕಾರಿಗಳಿಗೆ ಮತ್ತೂಂದು ಮನವಿ ಸಲ್ಲಿಸಲಾಗುವುದು. ನಿಯಮ ಅನುಸಾರವಾಗಿ ಸರ್ಕಾರ ಭೂಮಿಯನ್ನು ಪಡೆದು ಪರಿಹಾರ ನೀಡಿ ತೆರವುಗೊಳಿಸಿದರೆ ನಮ್ಮ ತಕರಾರಿಲ್ಲ.” – ಷಾಪ್‌ ಲಿಂಗರಾಜ್‌, ವರ್ತಕರು

 “ಜಿಲ್ಲಾಧಿಕಾರಿ ಆದೇಶ ಅತ್ಯಂತ ಸಾರ್ವಜನಿಕ ವಲಯಕ್ಕೆ ಸಂತೋಷ ತಂದಿದ್ದು, ಇನ್ನು ತಾಲೂಕು ಆಡಳಿತ ಹಾಗೂ ಜನಪ್ರತಿನಿಧಿಗಳು ವಿಳಂಬ ಮಾಡದೆ ರಸ್ತೆ ಅಗಲೀಕರಣಕ್ಕೆ ಸೂಕ್ತ ಕ್ರಮಕೈಗೊಳ್ಳಬೇಕು.” – ನಾರಾಯಣ ಆಳ್ವ, ಸಮಾಜಸೇವಕ

 “ವರ್ತಕರ ವಲಯದಿಂದ ಜಿಲ್ಲಾಧಿಕಾರಿಗಳಿಗೆ ಮತ್ತೂಂದು ಮನವಿ ಸಲ್ಲಿಸಲಾಗುವುದು. ನಿಯಮ ಅನುಸಾರವಾಗಿ ಸರ್ಕಾರ ಭೂಮಿಯನ್ನು ಪಡೆದು ಪರಿಹಾರ ನೀಡಿ ತೆರವುಗೊಳಿಸಿದರೆ ನಮ್ಮ ತಕರಾರಿಲ್ಲ.” – ಷಾಪ್‌ ಲಿಂಗರಾಜ್‌, ವರ್ತಕರು

 “ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಸೂಚಿರುವ ಎಲ್ಲ ಅಂಶಗಳನ್ನು ಪಾಲಿಸುವ ಮೂಲಕ ರಸ್ತೆ ಅಗಲೀಕರಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಶೀಘ್ರದಲ್ಲಿ ಸಭೆ ಕರೆಯಲಾಗುವುದು.” –ಪ್ರತೀಕ್‌ ಬಯಾಲ್‌, ಉಪವಿಭಾಗಾಧಿಕಾರಿ, ಸಕಲೇಶಪುರ ಉಪವಿಭಾಗ

 – ಸುಧೀರ್‌ ಎಸ್‌.ಎಲ್‌

ಟಾಪ್ ನ್ಯೂಸ್

Madhya Pradesh Education Minister’s substitute statement sparks political storm

Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ

ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ

National Mourning: Postponement of Mangaluru Beach Festival

National Mourning: ಮಂಗಳೂರಿನ ಬೀಚ್‌ ಉತ್ಸವ ಮುಂದೂಡಿಕೆ

Clown Kohli: ವಿರಾಟ್‌ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್‌ ಮಾಧ್ಯಮಗಳು!

Clown Kohli: ವಿರಾಟ್‌ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್‌ ಮಾಧ್ಯಮಗಳು!

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

ಮಾರ್ಗದರ್ಶಕರನ್ನು ಕಳೆದುಕೊಂಡುಕೊಂಡಿದ್ದೇವೆ… ಮನಮೋಹನ್ ಸಿಂಗ್ ನಿಧನಕ್ಕೆ ರಾಹುಲ್ ಸಂತಾಪ

ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

HD-Kumaraswmy

Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್‌.ಡಿ.ಕುಮಾರಸ್ವಾಮಿ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Kottigehara

Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು

15

Arseekere: ಈಡೇರದ ಹೈಟೆಕ್‌ ಬಸ್‌ ನಿಲ್ದಾಣದ ಕನಸು  

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Madhya Pradesh Education Minister’s substitute statement sparks political storm

Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ

ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ

National Mourning: Postponement of Mangaluru Beach Festival

National Mourning: ಮಂಗಳೂರಿನ ಬೀಚ್‌ ಉತ್ಸವ ಮುಂದೂಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.