ಜನ ಸಂಚಾರ ನಿಯಂತ್ರಣಕ್ಕೆ ರಸ್ತೆಗಿಳಿದ ಡೀಸಿ
Team Udayavani, May 2, 2021, 6:43 PM IST
ಹಾಸನ: ಜನತಾ ಲಾಕ್‌ಡೌನ್‌ಜಾರಿಯಾದ 3ದಿನಗಳ ನಂತರ ಜನರಸಂಚಾರ ನಿಯಂತ್ರಿಸಲು ಜಿಲ್ಲಾಧಿಕಾರಿಆರ್.ಗಿರೀಶ್ ಅವರೇ ಖುದ್ದು ರಸ್ತೆಗಿಳಿದುಅನಗತ್ಯವಾಗಿ ತಿರುಗುತ್ತಿದ್ದವರಿಗೆ ಬಿಸಿಮುಟ್ಟಿಸಿದರು.
ಅಗತ್ಯ ವಸ್ತುಗಳ ಖರೀದಿಗೆ ಮುಂಜಾನೆ6 ಗಂಟೆಯಿಂದ 10 ಗಂಟೆವರೆಗೆ ಅವಕಾಶನೀಡಲಾಗಿದೆ. ಪ್ರಮುಖ ರಸ್ತೆಗಳ ಹೊರತಾಗಿ ನಗರದಲ್ಲಿ ಪೊಲೀಸರ ಸುಳಿವೇಇರುವುದಿಲ್ಲ. ಹಾಗಾಗಿ ಜನ ನಿರ್ಭಯವಾಗಿ 10 ಗಂಟೆ ನಂತರವೂ ಸಂಚರಿಸುತ್ತಿದ್ದು, ಲಾಕ್‌ಡೌನ್‌ನ್ನು ಅಣಕಿಸುವಂತಿದೆ.ಲಾಕ್‌ಡೌನ್‌ನಲ್ಲಿ ಜನರ ಸಂಚಾರಕ್ಕೆನಿಯಂತ್ರಣವೇ ಇಲ್ಲ ಎಂಬ ದೂರಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆರ್.ಗಿರೀಶ್‌ನಗರದ ಎನ್.ಆರ್.ವೃತ್ತದಲ್ಲಿ ಕೆಲಕಾಲಹಾಜರಿದ್ದು, ರಸ್ತೆಯಲ್ಲಿ ಸಂಚರಿಸುತ್ತಿದ್ದವಾಹನಗಳನ್ನು ತಡೆದು ತರಾಟೆಗೆ ತೆಗೆದುಕೊಂಡರು.
ಕೆಲವು ವಾಹನಗಳಚಾಲಕರಿಗೆ ಸ್ಥಳದಲ್ಲಿದ್ದ ಪೊಲೀಸರಿಂದದಂಡ ಹಾಕಿಸಿ ಬಿಸಿ ಮುಟ್ಟಿಸಿದರು.ನಗರದ ಕಟ್ಟಿನಕೆರೆ ಆವರಣದಲ್ಲಿ ಜನಗುಂಪು, ಗುಂಪಾಗಿ ಅಂಗಡಿಗಳ ಮುಂದೆನಿಂತು ತರಕಾರಿ, ದಿನಸಿ ಖರೀದಿಸುತ್ತಿದ್ದರಿಂದ ನಗರಸಭೆ ಅಧಿಕಾರಿಗಳು,ಮಾರ್ಷಲ್ಸ್, ಪೊಲೀಸರು, ಬೆಳಗ್ಗೆ8ಗಂಟೆಗೆ ಅಂಡಿಗಳನ್ನು ಮುಚ್ಚಿಸಿದರು.ನಂತರ ವ್ಯಾಪಾರಿಗಳು ಸಾಮಾಜಿಕ ಅಂತರಕಾಯ್ದುಕೊಂಡು ವ್ಯಾಪಾರ ಮಾಡುವುದಾಗಿ ಮನವಿ ಮಾಡಿಕೊಂಡಿದ್ದರಿಂದ 10ಗಂಟೆವರೆಗೂ ವ್ಯಾಪಾರಕ್ಕೆ ಅವವಕಾಶ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
ಹಾಸನಾಂಬೆ ದರ್ಶನಕ್ಕೆ ವಿಧ್ಯುಕ್ತ ತೆರೆ; 9 ದಿನದಲ್ಲಿ 19 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ
Devi Temple: ಹಾಸನಾಂಬೆ ದೇವಿ ದರ್ಶನ ಅವ್ಯವಸ್ಥೆ, ಭಕ್ತರ ಆಕ್ರೋಶ: ವಿಶೇಷ ಪಾಸ್ ರದ್ದು
Hasanambe Temple: ಇಂಥ ಹಲವು ಡಿಸಿಗಳನ್ನು ನೋಡಿದ್ದೇನೆ: ಎಚ್.ಡಿ.ರೇವಣ್ಣ ಕಿಡಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.