ಡೀಸಿ ಕಿರುಕುಳ: ಸಚಿವರ ಎದುರೇ ತಹಶೀಲ್ದಾರ್ ಕಣ್ಣೀರು
Team Udayavani, Apr 6, 2017, 3:45 AM IST
ಹಾಸನ: ಜಿಲ್ಲಾಧಿಕಾರಿ ವಿ.ಚೈತ್ರಾ ಅವರು ಕಿರುಕುಳ ನೀಡುತ್ತಿದ್ದಾರೆ ಎಂದು ಸಭೆಯಲ್ಲಿ ಕಣ್ಣೀರು ಹಾಕಿದ ಚನ್ನರಾಯಪಟ್ಟಣ ತಾಲೂಕು ತಹಶೀಲ್ದಾರ್ ವಿದ್ಯಾವತಿ ಕಂದಾಯ ಸಚಿವರಿಗೆ ರಾಜೀನಾಮೆ ನೀಡಲು ಮುಂದಾದ ಪ್ರಸಂಗ ನಡೆಯಿತು.
ಬರಪರಿಹಾರ ಹಾಗೂ ಬಗರ್ ಹುಕುಂ ಸಾಗುವಳಿ ಸಕ್ರಮ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚನ್ನರಾಯಪಟ್ಟಣ ತಾಲೂಕಿನ ಪ್ರಗತಿ ವಿವರ ನೀಡುತ್ತಿದ್ದ ಸಂದರ್ಭದಲ್ಲಿ ತಹಶೀಲ್ದಾರ್ ವಿದ್ಯಾವತಿ ಅಳಲಾರಂಭಿಸಿದರು. ಕಂದಾಯ ಸಚಿವರು ಏಕೆ ಎಂದು ಕೇಳುತ್ತಿದ್ದಾಗಲೇ ಕಂದಾಯ ಸಚಿವರಿದ್ದ ವೇದಿಕೆಯತ್ತ ತೆರಳಿದ ಅವರು ಅಳುತ್ತಾ ಜಿಲ್ಲಾಧಿಕಾರಿಯವರು ನೀಡಿದ್ದ ನೊಟೀಸ್‌ನ್ನು ಕಂದಾಯ ಸಚಿವರಿಗೆ ನೀಡಲು ಮುಂದಾದರು.
ವಿದ್ಯಾವತಿ ನಿವೃತ್ತರಾಗಲು ಇನ್ನು ಎರಡೂವರೆ ತಿಂಗಳಿದೆ. ಆದರೆ ಜಿಲ್ಲಾಧಿಕಾರಿ ಚೈತ್ರಾ ಅವರು ನೀವು ಕರ್ತವ್ಯ ನಿರ್ವಹಿಸಲು ಅಸಮರ್ಥರು, ನೀವು ಕಡ್ಡಾಯವಾಗಿ ರಜೆ ಮೇಲೆ ಹೋಗಿ ಎಂದು ನೊಟೀಸ್ ಜಾರಿ ಮಾಡಿದ್ದಾರೆ. ಆದರೆ ಜಿಲ್ಲಾಧಿಕಾರಿಯವರು ನೀಡಿರುವ ನೊಟೀಸ್‌ನಿಂದ ನೊಂದ ವಿದ್ಯಾವತಿ ಅವರು, ಅಳುತ್ತಾ ತಮಗೆ ನೀಡಿರುವ ನೊಟೀಸ್‌ಅನ್ನು ಕಂದಾಯ ಸಚಿವರಿಗೇ ಸಲ್ಲಿಸಲು ಮುಂದಾಗಿ ನಾನು ರಾಜೀನಾಮೆ ನೀಡಲು ಸಿದ್ದಳಿದ್ದೇನೆ ಎಂದು ಕಣ್ಣೀರು ಹಾಕಿದರು. ವಿದ್ಯಾವತಿ ಅವರ ವರ್ತನೆಯನ್ನು ಖಂಡಿಸಿದ ಕಂದಾಯ ಸಚಿವರು, ಸಭೆಯಲ್ಲಿ ಈ ರೀತಿ ತಹಶೀಲ್ದಾರರು ಕಣ್ಣೀರು ಹಾಕುವುದನ್ನು ಸಹಿಸುವುದಿಲ್ಲ. ಸಮಸ್ಯೆ ಇದ್ದರೆ ವೈಯಕ್ತಿವಾಗಿ ಬಂದು ಅಹವಾಲು ಹೇಳಬೇಕೇ ಹೊರತು, ಸಭೆಯಲ್ಲಿ ಈ ರೀತಿ ವರ್ತಿಸುವುದು ಸಲ್ಲದು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಶಾಸಕ ರೇವಣ್ಣ ವಿದ್ಯಾವತಿಯವರ ಬೆಂಬಲಕ್ಕೆ ನಿಂತು ಜಿಲ್ಲಾಧಿಕಾರಿಯವರಿಗಿಂತ ತಹಶೀಲ್ದಾರ್ ಸಾವಿರ ಪಾಲು ಮೇಲು ಎಂದೂ ಸಮರ್ಥನೆ ಮಾಡಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ
Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ
ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.